Hindu Girls Are Kidnapped & Converted To Islam: ಪಾಕಿಸ್ತಾನದಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ; ಬಲವಂತದ ಮತಾಂತರ !

ಕಳೆದ ೧೩ ದಿನಗಳಲ್ಲಿ ನಡೆದ ಎರಡನೆಯ ಘಟನೆ 

ಕರಾಚಿ – ನಗರದ ಶಾಹದಾಬಕೋಟ ಟೌನ್ ಇಲ್ಲಿ ಸಮೀರ ಅಲಿ ಎಂಬ ಯುವಕನು ಸಂಗೀತಾ ಎಂಬ ೧೫ ವರ್ಷದ ಹಿಂದೂ ಹುಡುಗಿಯ ಅಪಹರಣ ಮಾಡಿ ಆಕೆಯನ್ನು ಬಲವಂತವಾಗಿ ಮತಾಂತರ ಮಾಡಿದ್ದಾನೆ. ಪಾಕಿಸ್ತಾನದಲ್ಲಿನ ಕ್ರೈಸ್ತ ಕಾರ್ಯಕರ್ತ ಫರಾಜ್ ಪರವೆಜ್ ಎಂಬವನು ಈ ಮಾಹಿತಿ ಬಹಿರಂಗಗೊಳಿಸಿದ್ದಾನೆ. ಮತಾಂತರದ ನಂತರ ಆಕೆಗೆ ಹಮೀದಾ ಎಂದು ನಾಮಕರಣ ಮಾಡಲಾಗಿದೆ. ಸಂಗೀತಾ ಅಪ್ರಾಪ್ತವಾಗಿದ್ದರೂ ಸಮೀರ ಆಕೆಯ ದಾಖಲೆಯಲ್ಲಿ ತಿದ್ದುಪಡಿ ಮಾಡಿ ಆಕೆಯ ವಯಸ್ಸು ೧೯ ವರ್ಷ ಎಂದು ತೋರಿಸಿದ್ದಾನೆ. ಅಲ್ಲದೇ ಆಕೆಯಿಂದ ಬಲವಂತವಾಗಿ ಪ್ರತಿಜ್ಞಾಪತ್ರ ಬರೆಸಿಕೊಂಡಿದ್ದಾನೆ. ಕಳೆದ ೧೩ ದಿನಗಳಲ್ಲಿ ಈ ರೀತಿಯ ಎರಡು ಅಪರಾಧಗಳು ದಾಖಲಾಗಿವೆ.

ಜೂನ್  ೨ ರಂದು ಸೋಹಾನಾ ಶರ್ಮ ಎಂಬ ೧೪ ವರ್ಷದ ಹುಡುಗಿಯನ್ನು ಆಕೆಯ ತಾಯಿಯ ಎದುರೇ ಶಿಕ್ಷಕನು ಅಪಹರಣ ಮಾಡಿ ಆಕೆಯನ್ನು ಬಲವಂತವಾಗಿ ಮತಾಂತರ ಮಾಡಿದ್ದನು. ಇದರ ನಂತರ  ಪಾಕಿಸ್ತಾನದ ಸಿಂಧಪ್ರಾಂತದಲ್ಲಿನ ಓರ್ವ ಮುಸಲ್ಮಾನ ಯುವಕನ ಜೊತೆಗೆ ಬಲವಂತವಾಗಿ ಆಕೆಯ ವಿವಾಹ ಮಾಡಿಸಲಾಗಿತ್ತು. ಸೋಹಾನಾ  ತಂದೆ ಪೊಲೀಸರಿಗೆ ದೂರು ನೀಡಿದ ನಂತರ ೫ ದಿನಗಳಲ್ಲಿ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ದುರಂತವೆಂದರೆ, ಸಂತ್ರಸ್ತ ಹುಡುಗಿಯು ನನ್ನ ಜೊತೆಗೆ ಬಲವಂತವಾಗಿ ಎಲ್ಲಾ ನಡೆದಿದೆ, ನಾನು ನನ್ನ ತಂದೆಯ ಜೊತೆಗೇ ಇರುತ್ತೇನೆ ಎಂದು ಹೇಳಿದ್ದರೂ ಕೂಡ ನ್ಯಾಯಾಲಯವು ಆಕೆಯನ್ನು ತಂದೆಯ ಜೊತೆಗೆ ಕಳುಹಿಸಲಿಲ್ಲ .

ಸಂಪಾದಕೀಯ ನಿಲುವು

ಈ ವಿಷಯದಲ್ಲಿ ಕೇಂದ್ರ ಸರ್ಕಾರವು ಪಾಕಿಸ್ತಾನವನ್ನು ಏಕೆ ಖಂಡಿಸುತ್ತಿಲ್ಲ? ಹಿಂದೂಗಳ ಈ ದುರವಸ್ಥೆಯನ್ನು ತಡೆಯಲು ಹಿಂದೂ ರಾಷ್ಟ್ರಕ್ಕೆ ಪರ್ಯಾಯವಿಲ್ಲ.