Israel Benny Gantz Resign : ನೆತನ್ಯಾಹು ಅವರಿಂದಾಗಿ ನಾವು ಹಮಾಸ ಮುಗಿಸಲು ಸಾಧ್ಯವಿಲ್ಲ !

ಇಸ್ರೇಲಿ ಯುದ್ಧ ಮಂತ್ರಿ ಮಂಡಳದಿಂದ ಬೆನಿ ಗ್ಯಾಂಟ್ಜ್ ರಾಜೀನಾಮೆ

ಯುದ್ಧ ಕ್ಯಾಬಿನೆಟ್‌ನ ಮುಖ್ಯ ಸದಸ್ಯ ಬೆನ್ನಿ ಗ್ಯಾಂಟ್ಜ್

ಟೆಲ್ಅವಿವ್ (ಇಸ್ರೇಲ್) – ನೆತನ್ಯಾಹು ಅವರ ಕಾರಣದಿಂದಾಗಿ ನಾವು ಹಮಾಸನ್ನು ಮುಗಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾನು ತುರ್ತುಪರಿಸ್ಥಿತಿಯ ಸರಕಾರವನ್ನು ಭಾರವಾದ ಅಂತಃಕರಣದಿಂದ; ಆದರೆ ಆತ್ಮವಿಶ್ವಾಸದಿಂದ ತ್ಯಜಿಸುತ್ತಿದ್ದೇನೆ ಎಂದು ಹೇಳುತ್ತಾ, ಇಸ್ರೇಲ್‌ನ ಮೂರು ಸದಸ್ಯರ ಯುದ್ಧ ಕ್ಯಾಬಿನೆಟ್‌ನ ಮುಖ್ಯ ಸದಸ್ಯ ಬೆನ್ನಿ ಗ್ಯಾಂಟ್ಜ್ ರಾಜೀನಾಮೆ ನೀಡಿದ್ದಾರೆ. ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗ್ಯಾಂಟ್ಜ್ ಅವರನ್ನು ನಿರ್ಧಾರವನ್ನು ಹಿಂಪಡೆಯಲು ಕೇಳಿದ್ದಾರೆ. ‘ಇದು ಹೋರಾಟದಿಂದ ಹಿಂದೆ ಸರಿಯುವ ಸಮಯವಲ್ಲ, ಅದರಲ್ಲಿ ಭಾಗವಹಿಸುವ ಸಮಯವಾಗಿದೆ’ ಎಂದು ಅವರು ಹೇಳಿದರು. ಗ್ಯಾಂಟ್ಜ್ ಅವರ ರಾಜೀನಾಮೆ ಹಿಂದೆ ಗಾಜಾ ಯುದ್ಧದಲ್ಲಿ ಒತ್ತೆಯಾಳುಗಳ ಬಿಡುಗಡೆಯ ವಿಷಯದಲ್ಲಿ ನೇತನ್ಯಾಹು ಅವರ ಮಾನಸಿಕತೆ ಕಾರಣವಾಗಿದೆಯೆಂದು ನೀಡಲಾಗಿದೆ ಎಂದು ಹೇಳಲಾಗುತ್ತದೆ.

1. ಗ್ಯಾಂಟ್ಜ್ ಅವರು ನೇತನ್ಯಾಹುರಿಗೆ, ಜನರು ವಿಶ್ವಾಸ ಗಳಿಸಲು ಚುನಾವಣೆಗಳು ಸಾಮಾನ್ಯ ರೀತಿಯಲ್ಲಿ ಅಂಗೀಕರಿಸಲ್ಪಟ್ಟ ದಿನಾಂಕದಂದು ನಡೆಯಬೇಕು ಮತ್ತು ಸವಾಲುಗಳನ್ನು ಎದುರಿಸಬಹುದು, ಅಂತಹ ಸರಕಾರವನ್ನು ಸ್ಥಾಪಿಸಬಹುದು ಎಂದು ಹೇಳಿದ್ದಾರೆ. ನೀತಿಗಳ ನಿಷೇಧ ಮುಖ್ಯವಾಗಿದೆ; ಆದರೆ ಅದನ್ನು ಕಾನೂನುಬದ್ಧವಾಗಿ ಮಾಡುವುದು ಅವಶ್ಯಕವಾಗಿದೆ. ದ್ವೇಶಕ್ಕೆ ಪ್ರೋತ್ಸಾಹವನ್ನು ನೀಡಬಾರದು. ನಾವು ಪರಸ್ಪರ ಶತ್ರುಗಳಲ್ಲ. ನಮ್ಮ ಶತ್ರುಗಳು ನಮ್ಮ ಗಡಿಯ ಹೊರಗಿದ್ದಾರೆ.

2. ಇಸ್ರೇಲ್‌ನಲ್ಲಿ ಮಾಜಿ ಸೇನಾ ಮುಖ್ಯಸ್ಥ ಗ್ಯಾಂಟ್ಜ್ ಅವರನ್ನು ನೆತನ್ಯಾಹು ಅವರ ಪ್ರಮುಖ ರಾಜ್ಯ ಎದುರಾಳಿಯೆಂದು ಪರಿಗಣಿಸಲಾಗುತ್ತದೆ. ಯುದ್ಧ ಮಂತ್ರಿಮಂಡಳದಲ್ಲಿ ಸೇರುವ ಮೊದಲು, ಅವರು ವಿರೋಧ ಪಕ್ಷದ ಪ್ರಮುಖ ಸದಸ್ಯರಾಗಿದ್ದರು. ಅಕ್ಟೋಬರ್ 7, 2023 ರಂದು ಹಮಾಸ್ ದಾಳಿಯ ನಂತರ ಅವರು ನೆತನ್ಯಾಹು ಅವರ ಸರಕಾರವನ್ನು ಸೇರಿದರು.