ಸಾಧಕರು ಪರಸ್ಪರರಿಗೆ ಸಹಾಯ ಮಾಡುವುದು ಮತ್ತು ಇತರರ ಸಹಾಯ ಪಡೆಯುವುದು, ಹೀಗೆ ಮಾಡುತ್ತಲೇ ಮುಂದೆ ಹೋಗಲಿಕ್ಕಿದೆ

ಸಾಧನೆಗೆ ಸಂಬಂಧಿಸಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ಅಮೂಲ್ಯ ಮಾರ್ಗದರ್ಶನ  !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಓರ್ವ ಜವಾಬ್ದಾರ ಸಾಧಕ : ನಮ್ಮಲ್ಲಿ ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆ ಇರುವ ಮತ್ತು ವೃದ್ಧ ಸಾಧಕರ ಸಂಖ್ಯೆ ಹೆಚ್ಚಿರುವುದರಿಂದ ಅವರನ್ನು ಸಂಭಾಳಿಸಲು ಸಮಯ ನೀಡಬೇಕಾಗುತ್ತದೆ. ಸಾಧನೆಯೆಂದು ಹೇಗೆ ಮಾಡಬೇಕು ?

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ಕೆಲವು ಸಾಧಕರು ಪೂರ್ಣ ಕ್ಷಮತೆಯಿಂದ ಸೇವೆಯನ್ನು ಮಾಡಬಲ್ಲರು, ಕೆಲವರು ಮಧ್ಯಮ ಕ್ಷಮತೆಯಿಂದ, ಇನ್ನು ಕೆಲವರು ಕಡಿಮೆ ಕ್ಷಮತೆಯಿಂದ ಸೇವೆಯನ್ನು ಮಾಡಬಲ್ಲರು. ನಮ್ಮ ಆಶ್ರಮದ ಬಾಗಿಲು ಸಾಧನೆ ಮಾಡುವ ಮತ್ತು ಸಾಧನೆಯನ್ನು ಮಾಡಲಿಚ್ಛಿಸುವ ಪ್ರತಿಯೊಬ್ಬರಿಗೂ ತೆರೆದಿದೆ.

ಸೌ. ಸ್ವಾತಿ ಶಿಂದೆ

ಹೊರಗಿನ ಜಗತ್ತಿನಲ್ಲಿ ವ್ಯಕ್ತಿಯ ಯೋಗ್ಯತೆಯನ್ನು ನೋಡಲಾಗುತ್ತದೆ. ‘ವ್ಯಕ್ತಿಯ ವಯಸ್ಸು, ಕ್ಷಮತೆ ಮತ್ತು ಕೌಶಲ್ಯ’, ಹೀಗೆ ಎಲ್ಲ ರೀತಿಯಿಂದ ಅಭ್ಯಾಸ ಮಾಡಿ ಅವರನ್ನು ಆರಿಸಲಾಗುತ್ತದೆ, ಆಮೇಲೆ ಅವರಿಗೆ ಕೆಲಸ ಕೊಡಲಾಗುತ್ತದೆ; ಆದರೆ ನಾವು ಇವೆಲ್ಲವುಗಳನ್ನು ಸಾಧನೆ ಎಂದು ನೋಡುತ್ತೇವೆ. ನಮ್ಮೊಂದಿಗೆ ಜೋಡಣೆಯಾಗಿರುವ ಸಾಧಕರೆಲ್ಲರೂ ಸಾಧನೆ ಮಾಡಲು ಬಂದಿರುತ್ತಾರೆ. ‘ಸಾಧಕರಿಂದ ಎಷ್ಟು ಸೇವೆಯಾಗುತ್ತದೆ ? ಅಥವಾ ನಾವು ಅವರಿಗೆ ಎಷ್ಟು ಸಮಯವನ್ನು ಕೊಡಬೇಕಾಗುತ್ತದೆ’, ಎಂದು ವಿಚಾರ ಮಾಡುವ ಬದಲು ಆ ಸಾಧಕರಿಗೆ ಮಹತ್ವ ನೀಡಬೇಕಾಗುತ್ತದೆ; ಏಕೆಂದರೆ ನಮ್ಮ ಸಂಸ್ಥೆ ಸಾಧಕರಿಗಾಗಿಯೇ ಇದೆ. ಸಾಧಕರು ಪರಸ್ಪರರಿಗೆ ಸಹಾಯ ಮಾಡುವುದು ಮತ್ತು ಇತರರಿಂದ ಸಹಾಯ ಪಡೆಯುವುದು, ಹೀಗೆ ಮಾಡುತ್ತಲೇ ಮುಂದೆ ಹೋಗಲಿಕ್ಕಿದೆ. ಕೆಲವೊಮ್ಮೆ ಸಾಧಕರು ಮಾಡಿದ ಸೇವೆಯನ್ನು ತಪಾಸಣೆ ಮಾಡಲು, ಅವುಗಳಲ್ಲಿ ಸುಧಾರಣೆ ಮಾಡಲು ಇತರ ಸಾಧಕರು ಸಮಯವನ್ನು ನೀಡಬೇಕಾಗುತ್ತದೆ; ಆದರೆ ಇದರಲ್ಲಿ ಆ ಜೀವಕ್ಕೆ ‘ತನ್ನಿಂದ ಸ್ವಲ್ಪವಾದರೂ ಸೇವೆ ಆಯಿತು’, ಎನ್ನುವ ಸಮಾಧಾನ ಸಿಗುತ್ತದೆ. ಆದ್ದರಿಂದ ಇತರರು ಆ ಸಾಧಕನಿಗೆ ಸಮಯ ನೀಡಬೇಕಾದರೂ, ಅದು ಯೋಗ್ಯವೇ ಆಗಿದೆ.

ಸಂಗ್ರಹ

– ಸೌ. ಸ್ವಾತಿ ಶಿಂದೆ (ಆಧ್ಯಾತ್ಮಿಕ ಮಟ್ಟ ಶೇ. ೬೫, ೩೬ ವರ್ಷ), ಸನಾತನ ಆಶ್ರಮ, ರಾಮನಾಥಿ ಗೋವಾ. (೨೮.೩.೨೦೨೪)