೨೦೧೯ ರಲ್ಲಿ ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರು ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆ ಪ್ರಕ್ರಿಯೆಗಾಗಿ ಗೋವಾದ ರಾಮನಾಥಿಯ ಸನಾತನ ಆಶ್ರಮಕ್ಕೆ ಬಂದಿದ್ದರು. ಸೌ. ಸುಪ್ರಿಯಾ ಮಾಥೂರರು (ಆಧ್ಯಾತ್ಮಿಕ ಮಟ್ಟ ಶೇ. ೬೭) ಪೂರ್ಣವೇಳೆ ಸಾಧನೆ ಮಾಡುವವರಿಗೆ ಪ್ರಕ್ರಿಯೆಯನ್ನು ಮಾಡಿಸುತ್ತಾರೆ. ಈ ಪ್ರಕ್ರಿಯೆಯ ಸಂದರ್ಭದಲ್ಲಿ ಶ್ರೀಮತಿ ಅಶ್ವಿನಿ ಪ್ರಭು ಹಾಗೂ ಇತರ ಸಾಧಕರಿಂದಾದ ತಪ್ಪುಗಳು ಹಾಗೂ ಮನಸ್ಸಿನ ಪ್ರಕ್ರಿಯೆಯ ಪ್ರಸಂಗಗಳನ್ನು ಅವರು ಹೇಳಿದಾಗ ಸೌ. ಸುಪ್ರಿಯಾ ಮಾಥೂರರು ಸಾಧಕರಿಗೆ ಮುಂದಿನ ದೃಷ್ಟಿಕೋನವನ್ನು ನೀಡಿದರು. ಶ್ರೀಮತಿ ಅಶ್ವಿನಿ ಪ್ರಭು ಇವರಿಗೆ ಪ್ರಕ್ರಿಯೆಯಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ಮುಂದೆ ಕೊಡಲಾಗಿದೆ. ೨೫/೩೬ ನೇ ಸಂಚಿಕೆಯಲ್ಲಿ ಅದರ ಕೆಲವು ಭಾಗ ನೋಡಿದೆವು ಈ ವಾರ ಅದರ ಮುಂದಿನ ಭಾಗವನ್ನು ನೋಡೋಣ.
(ಭಾಗ ೭)
ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/115720.html |
೧೭ ಪ್ರಸಂಗ – ಸಾಧನೆಯಲ್ಲಿ ನಿರುತ್ಸಾಹವಿರುವುದು
೧೭ ಅ. ದೃಷ್ಟಿಕೋನ
೧. ಇಲ್ಲಿ ಸಾಧಕರಲ್ಲಿ ಪೂರ್ಣ ನಿರುತ್ಸಾಹವೇ ಕಂಡುಬರುತ್ತದೆ. ಯಾವುದಾದರೊಂದು ಅಭ್ಯಾಸವು ನಿಂತು ಹೋದರೆ ಅದನ್ನು ಪುನಃ ಪ್ರಾರಂಭಿಸಲು ಬಹಳ ಸಮಯ ತಗಲುತ್ತದೆ.
೨. ಪ್ರಕ್ರಿಯೆಯನ್ನು ಸಹ ಔಪಚಾರಿಕವೆಂದು ಮಾಡುವುದಾಗುತ್ತದೆ. ಇದು ‘ನನ್ನಲ್ಲಿ ಬದಲಾವಣೆ ಆಗಬೇಕು’, ಎಂಬ ಮನಸ್ಸಿನ ಪಾಲ್ಗೊಳ್ಳುವಿಕೆ ಇಲ್ಲವಾದಂತೆ ಆಗಿದೆ.
೩. ಮನೆಗೆ ಹೋದಾಗ ಸಾಧಕರಿಂದ ವ್ಯಷ್ಟಿ ಸಾಧನೆ ಆಗುವುದಿಲ್ಲ. ಪ್ರಗತಿಯು ಹಂತಹಂತವಾಗಿಯೇ ಆಗುತ್ತಿರುತ್ತದೆ. ಹಾಗಾಗಿ ಉದಾಸೀನತೆ ಬಂದಲ್ಲಿ ಗಾಂಭೀರ್ಯದಿಂದ ವಿಚಾರ ಮಾಡಬೇಕು ಇಲ್ಲವಾದರೆ ಮನಸ್ಸು ಮಾಯೆಯಲ್ಲಿ ಸಿಲುಕುತ್ತದೆ.
೪. ‘ಉತ್ಸಾಹ ಏಕೆ ಕಡಿಮೆಯಾಯಿತು ?’ ಇದರ ಚಿಂತನೆಯನ್ನು ಬರೆಯಬೇಕು. ನಮಗೆ ನಮ್ಮ ಸ್ಥಿತಿಯ ಬಗ್ಗೆ ಆಂತರಿಕ ಅರಿವು ಇದ್ದಲ್ಲಿ ಮಾತ್ರ ಬದಲಾವಣೆ ಆಗಲು ಸಾಧ್ಯ. ಅದಕ್ಕಾಗಿ ಸಾತತ್ಯವಿರಬೇಕು. ಸಾಧನೆಯ ಮೂಲಕ ಶೇ. ೫೦ ರಷ್ಟು ಅರಿವನ್ನು ಮೂಡಿಸಲಾಗಬೇಕು. ಉಳಿದ ಶೇ. ೫೦ ರಷ್ಟನ್ನು ಕೃತಿಯ ಸ್ತರದಲ್ಲಿ ಮಾಡಿದರೆ ಮಾತ್ರ ಪೂರ್ಣ ಲಾಭವಾಗುತ್ತದೆ. ಮನಸ್ಸಿನ ಸಹಭಾಗವಿದ್ದಲ್ಲಿ ಮಾತ್ರ ಅಡಚಣೆಗಳನ್ನು ಎದುರಿಸ ಬಹುದಾಗಿದೆ. ಇಲ್ಲವಾದರೆ ಎಲ್ಲ ಪ್ರಯತ್ನಗಳು ತೋರಿಕೆಯ ದ್ದಾಗಿರುತ್ತವೆ. ಹೇಗೇಗೋ ಮಾಡಿ ಮಾಡಲಾಗುತ್ತದೆ. ಮನಸ್ಸಿನ ಪ್ರಕ್ರಿಯೆ ಸತತ ಆಗುತ್ತಿರಬೇಕು. ಆಗಲೇ ಆಶ್ರಮದ ಚೈತನ್ಯ ಮತ್ತು ಮಾರ್ಗದರ್ಶನದ ಲಾಭವಾಗುತ್ತದೆ. ಅದಕ್ಕಾಗಿ ನಿರುತ್ಸಾಹದ ಕಾರಣವನ್ನು ಮತ್ತು ಮನಸ್ಸಿನ ಪ್ರಕ್ರಿಯೆ ಎಲ್ಲಿ ನಿಂತಿದೆ ?’ ಎಂದು ಮೊದಲು ಹೇಳಬೇಕು.
೧೮. ಪ್ರಸಂಗ – ನಕಾರಾತ್ಮಕ ವಿಚಾರಗಳಿಂದ ತೊಂದರೆಯಾಗುವುದು
೧೮ ಅ. ದೃಷ್ಟಿಕೋನ : ನಕಾರಾತ್ಮಕ ವಿಚಾರಗಳಿಂದ ಹೊರಬರುವ ಸಂಸ್ಕಾರವನ್ನು ಮನಸ್ಸಿಗೆ ಮಾಡಿಸಬೇಕು. ಕೂಡಲೇ ಆ ವಿಚಾರವನ್ನು ಯಾರಿಗಾದರೂ ಹೇಳಬೇಕು ಮತ್ತು ಉಪಾಯವನ್ನು ಕೇಳಿಕೊಳ್ಳಬೇಕು ಹಾಗೂ ಸ್ವಯಂಸೂಚನೆ ನೀಡುವುದು ಮುಂತಾದವುಗಳನ್ನು ಮಾಡಬೇಕು. ವಾಸ್ತವದಲ್ಲಿ ‘ಅದರಿಂದ ನಮ್ಮ ಮನಸ್ಸಿಗೆ ಎಷ್ಟು ಹಾನಿಯಾಗುತ್ತದೆ ? ವಿಚಾರಗಳಿಂದ ಏನು ಪರಿಣಾಮವಾಗುತ್ತದೆ ?’ ಎಂಬುದರ ಗಾಂಭೀರ್ಯವಿಲ್ಲದ ಕಾರಣ ನಾವು ಅದರಲ್ಲಿಯೇ ಸಿಲುಕಿಕೊಂಡು ಪರ್ಯಾಯವನ್ನು ಹುಡುಕುವುದನ್ನು ಮುಂದೂಡುತ್ತೇವೆ. ಅದಕ್ಕಾಗಿ ಪ್ರತಿ ಗಂಟೆಗೊಮ್ಮೆ ಮನಸ್ಸಿನ ವರದಿಯನ್ನು ತೆಗೆದುಕೊಳ್ಳಬೇಕು. ನಕಾರಾತ್ಮಕದ ಬದಲು ಪರಿಹಾರೋಪಾಯದ ಕಡೆಗೆ ನಮ್ಮ ಗಮನವಿರಬೇಕು. ಅದರ ಪ್ರಕ್ರಿಯೆಯನ್ನು ಸವಿಸ್ತಾರವಾಗಿ ಬರೆದು ತರಬೇಕು. ಆಗ ಪರಿಹಾರೋಪಾಯ ಸಿಗುತ್ತದೆ. ಮನಸ್ಸಿನ ಜಾಗರೂಕತೆ ಹೆಚ್ಚಾಗುತ್ತದೆ. ಪ್ರತಿಯೊಂದು ವಿಚಾರದ ಮುಂದೆ ಉಪಾಯವನ್ನು ಬರೆದರೆ ಅಂತರ್ಮುಖತೆ ಹೆಚ್ಚಾಗುತ್ತದೆ. ಆ ಸಮಯದಲ್ಲಿ ಸ್ವಯಂಸೂಚನೆ ನೀಡಲು ಆಗದಿದ್ದರೆ ಪ್ರಾರ್ಥನೆ, ಕೃತಜ್ಞತೆ ಮತ್ತು ಕೃತಿಯ ಸ್ತರದ ಪ್ರಯತ್ನಗಳನ್ನು ಮಾಡಬೇಕು
೧೯. ಪ್ರಸಂಗ – ಸ್ವೀಕಾರವೃತ್ತಿ ಇಲ್ಲದಿರುವುದು
೧೯ ಅ. ದೃಷ್ಟಿಕೋನ
೧. ನಮಗೆ ಗೊತ್ತಿಲ್ಲದ ವಿಷಯಗಳನ್ನು ಯಾರೋ ನಮಗೆ ಹೇಳುತ್ತಿದ್ದಾರೆ ಎಂದು ಆನಂದಿಸಬೇಕು; ಆದರೆ ‘ನಮ್ಮ ಪ್ರವಾಸವು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ’, ಎಂದು ದೇವರು ಗಮನಕ್ಕೆ ತಂದುಕೊಟ್ಟ ಬಗ್ಗೆ ಕೃತಜ್ಞತೆ ಅನಿಸಬೇಕು. ನಮ್ಮ ಅಹಂನ ಮೇಲೆ ಆಕ್ರಮಣವಾದಾಗ ನಕಾರಾತ್ಮಕತೆಯು ಹೆಚ್ಚಾಗುತ್ತದೆ. ಹಾಗಾಗಿ ಇನ್ನೂ ಸ್ಪಷ್ಟವಾಗಿ ವಿಚಾರಿಸುವುದಾಗುವುದಿಲ್ಲ
೨. ‘ಅಳು ಬರುತ್ತದೆ’, ಎಂದರೆ ಆ ಪ್ರಸಂಗದ ನಿರಾಶೆ ಇನ್ನೂ ಇದೆ’, ಎಂದು ಅರ್ಥ. ಅದರಿಂದ ಹೊರಬರಲು ಅದೇ ಕ್ಷಣ ಅದರ ಆಳ ಎಷ್ಟಿದೆ ಎಂದು ಗಮನಕ್ಕೆ ತಂದುಕೊಂಡು ಸಹಾಯವನ್ನು ಪಡೆದರೆ ಮುಂದಿನ ಪ್ರಕ್ರಿಯೆ ಆಗುತ್ತದೆ.’
– ಶ್ರೀಮತಿ ಅಶ್ವಿನಿ ಪ್ರಭು, ಮಂಗಳೂರು ಸೇವಾಕೇಂದ್ರ, ಮಂಗಳೂರು. (೨೪.೭.೨೦೧೯)