ಪಾಕಿಸ್ತಾನದ ಮಜಿ ವಿದೇಶಾಂಗ ಸಚಿವ ಏಜಾಜ್ ಅಹ್ಮದ್ ಚೌಧರಿ ಅವರ ಹೇಳಿಕೆ !
ಇಸ್ಲಾಮಾಬಾದ್ (ಪಾಕಿಸ್ತಾನ) – ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾದರೆ, ಅವರಿಗೆ ಸಂವಿಧಾನವನ್ನು ಬದಲಾಯಿಸುವ ಅಧಿಕಾರ ಸಿಗುತ್ತದೆ ಹಾಗೆಯೇ ಭಾರತ ‘ಹಿಂದೂ ರಾಷ್ಟ್ರ’ ಆಗಲಿದೆ ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಏಜಾಜ್ ಅಹ್ಮದ್ ಚೌಧರಿಯವರು ಭಾರತದ ಲೋಕಸಭಾ ಚುನಾವಣೆಯ ತೀರ್ಪು ಬರುವ ಕೆಲವು ಗಂಟೆಗಳ ಮೊದಲು ಹೇಳಿದ್ದರು.
India will become a ‘Hindu Rashtra’ if Modi becomes Prime Minister again. – claims former Pakistani foreign secretary Ejaz Ahmad Chaudhary.
May as well invade #Pakistan, adds the minister.#LoksabhaElections2024 pic.twitter.com/loE6bWw0NK
— Sanatan Prabhat (@SanatanPrabhat) June 6, 2024
ಚೌಧರಿಯವರು ಮಂಡಿಸಿರುವ ಅಂಶಗಳು
ಸಂವಿಧಾನದಲ್ಲಿ ಸುಧಾರಣೆ ಮಾಡುವರು
ನರೇಂದ್ರ ಮೋದಿ ಭಾರಿ ಬಹುಮತದೊಂದಿಗೆ ಪ್ರಧಾನಿಯಾದರೆ ಭಾಜಪ ಒಕ್ಕೂಟ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಪಡೆದರೆ, ಭಾಜಪಕ್ಕೆ ಸಂವಿಧಾನವನ್ನು ಸರಿಪಡಿಸುವ ಅಧಿಕಾರ ಸಿಗುತ್ತದೆ. ಭಾಜಪಕ್ಕೆ ಈ ಬಲ ಸಿಕ್ಕರೆ ಅವರು ಭಾರತವನ್ನು ‘ಹಿಂದೂ ರಾಷ್ಟ್ರ’ ಮಾಡಲು ಪ್ರಾರಂಭಿಸುತ್ತಾರೆ.
ಮೋದಿ ಚುನಾವಣಾ ಭರವಸೆಗಳನ್ನು ಈಡೇರಿಸುತ್ತಾರೆ !
ಭಾಜಪ ಚುನಾವಣಾ ಪ್ರಚಾರದ ವೇಳೆ ಯಾವ ಆಶ್ವಾಸನೆ ನೀಡುತ್ತಾರೆಯೋ, ಅದನ್ನು ಅವರು ಅಧಿಕಾರಕ್ಕೆ ಬಂದ ಬಳಿಕ ಪೂರ್ಣಗೊಳಿಸುತ್ತಾರೆ. ಇಲ್ಲಿಯವರೆಗೆ ನಾವು ನೋಡಿದ್ದೇವೆ. ಮೋದಿಯವರು ಚುನಾವಣಾ ಪ್ರಚಾರದಲ್ಲಿ ಏನು ಮಾತನಾಡುತ್ತಾರೆಯೋ, ಅದನ್ನು ಅವರು ಅಧಿಕಾರಕ್ಕೆ ಬಂದ ಬಳಿಕ ಆದ್ಯತೆ ನೀಡಿ ಕ್ರಮ ಕೈಗೊಂಡಿದ್ದಾರೆ. 2019ರ ಚುನಾವಣೆಯಲ್ಲಿ ಅವರು 370 ರದ್ದುಗೊಳಿಸುವ ಬಗ್ಗೆ ಪ್ರಸ್ತಾಪಿಸಿದ್ದರು. ಅಧಿಕಾರಕ್ಕೆ ಬಂದ ತಕ್ಷಣ ಕ್ರಮ ಕೈಗೊಂಡಿದ್ದರು. ನನಗೆ ಅನಿಸುತ್ತದೆ, ಅವರ ಎಲ್ಲಕ್ಕಿಂತ ದೊಡ್ಡ ಪ್ರಾಮುಖ್ಯತೆ ಭಾರತವನ್ನು ‘ಹಿಂದೂ ರಾಷ್ಟ್ರ’ ಮಾಡುವುದು ಆಗಿದೆ. ಅದಕ್ಕಾಗಿ ಅವರು ಕಾರ್ಯವನ್ನು ಆರಂಭಿಸಿದ್ದಾರೆ ಎಂದು ಹೇಳಿದರು.
ಭಾರತವು ಹಿಂದೂ ರಾಷ್ಟ್ರವಾಗಲು ಪಾಕಿಸ್ತಾನಕ್ಕೆ ಆಕ್ಷೇಪವಿಲ್ಲ !
ಮೂಲತಃ ಭಾರತವು ಹಿಂದೂ ರಾಷ್ಟ್ರವಾಗಲು ಪಾಕಿಸ್ತಾನದಲ್ಲಿ ಯಾರದ್ದೂ ಆಕ್ಷೇಪವಿಲ್ಲ. ಅಲ್ಲಿ ಹಿಂದೂ ಬಹುಸಂಖ್ಯಾತರಾಗಿದ್ದರೆ, ಹಿಂದೂ ರಾಷ್ಟ್ರ ನಿರ್ಮಾಣ ಮಾಡಿರಿ. ಅದರಿಂದ ನಮಗೆ ವ್ಯತ್ಯಾಸ ಆಗುವುದಿಲ್ಲ ? ಆದರೆ ಭಾಜಪದವರು ಮೊದಲೇ ಮುಸಲ್ಮಾನ ಮತ್ತು ಇತರ ಧರ್ಮದ ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಹಿಂದೂ ರಾಷ್ಟ್ರವಾದ ಬಳಿಕ ಮತ್ತಷ್ಟು ಸಂಕಷ್ಟಗಳನ್ನು ನಿರ್ಮಾಣ ಮಾಡಬಹುದು ಎಂದು ಚೌಧರಿಯವರು ಹೇಳಿದರು.
ಭಾರತದ ಪಾಕಿಸ್ತಾನದಲ್ಲಿ ನುಗ್ಗಿ ಸದೆಬಡಿಯುವ ಧೈರ್ಯ ಹೆಚ್ಚಾಗಬಹುದು
ಭಾಜಪ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಭಾರತಕ್ಕೆ ಪಾಕಿಸ್ತಾನದಲ್ಲಿ ನುಗ್ಗಿ ಸದೆಬಡಿಯುವ ಧೈರ್ಯ ಹೆಚ್ಚಾಗುವುದು. ಪಾಕಿಸ್ತಾನಕ್ಕೆ ಇದು ಚಿಂತೆಯ ವಿಷಯವಾಗಿದೆ. ಇತರ ದೇಶಕ್ಕಾಗಿ ಇದು ಚಿಂತೆಯ ವಿಷಯವಾಗಿದೆಯೆಂದು ನನಗೆ ಅನಿಸುತ್ತದೆ. ಪಾಕಿಸ್ತಾನವು ಈಗಿನಿಂದಲೇ ಸಿದ್ಧತೆಯನ್ನು ಪ್ರಾರಂಭಿಸಬೇಕು ಎಂದು ಹೇಳಿದರು.