ಹಲಾಲ್‌ ಜಿಹಾದ್‌ಮುಕ್ತ ಭಾರತ ವಿಶೇಷಾಂಕದ ನಿಮಿತ್ತದಿಂದ… !

‘ಧಾರ್ಮಿಕತೆಯಿಂದ ಅರ್ಥವ್ಯವಸ್ಥೆಯ ಮೇಲಾಗುವ ಪರಿಣಾಮ’ ಈ ವಿಷಯದ ಸಂಶೋಧನೆ ಮತ್ತು ಅಭ್ಯಾಸವು ಜನರೆದುರು ಮಂಡಿಸಲ್ಪಡಬೇಕು, ಈ ಮೂಲಕ ದೇಶದ ಅರ್ಥವ್ಯವಸ್ಥೆ ಸುದೃಢವಾಗಬೇಕು, ಎಂಬುದು ಈ ವಿಶೇಷಾಂಕದ ಉದ್ದೇಶವಾಗಿದೆ. ಯಾರದ್ದಾದರೂ ಧಾರ್ಮಿಕ ಭಾವನೆ ನೋಯಿ ಸುವುದು ಅಥವಾ ಯಾರಲ್ಲಾದರೂ ದ್ವೇಷ ಮೂಡಿಸುವುದು ಎಂಬುದು ಇದರ ಹಿಂದಿನ ಉದ್ದೇಶವಲ್ಲ.

ಹಲಾಲ್’ ಎಂದರೇನು ?

ಇಸ್ಲಾಂನಲ್ಲಿ ‘ಹಲಾಲ್’ ಮತ್ತು ‘ಹರಾಮ್’ ಎಂಬ ಎರಡು ಮೂಲ ಅರಬಿ ಭಾಷೆಯಲ್ಲಿನ ಶಬ್ದಗಳು ಪ್ರಸಿದ್ಧವಾಗಿವೆ. ‘ಹಲಾಲ್’ ಶಬ್ದದ ಅರ್ಥ ಇಸ್ಲಾಂಗನುಸಾರ ನ್ಯಾಯಸಮ್ಮತ, ಅನುಮೋದಿಸಿದ, ಮಾನ್ಯತೆಯಿರುವ ಎಂದಾಗಿದೆ ಮತ್ತು ಅದರ ವಿರುದ್ಧಾರ್ಥಕ ಶಬ್ದವೆಂದರೆ ‘ಹರಾಮ್‌’, ಅಂದರೆ ಇಸ್ಲಾಮಿಗನುಸಾರ ಕಾನೂನುಬಾಹಿರ, ನಿಷಿದ್ಧ ಅಥವಾ ವರ್ಜಿಸಲಾದ ಎಂದರ್ಥ. ಇಸ್ಲಾಮ್‌ನಲ್ಲಿ ‘ಹಲಾಲ್’ ಎಂಬ ಶಬ್ದವನ್ನು ಮುಖ್ಯವಾಗಿ ಖಾದ್ಯ ಪದಾರ್ಥಗಳು ಮತ್ತು ದ್ರವ ಪದಾರ್ಥಗಳ ಸಂದರ್ಭದಲ್ಲಿ ಉಪಯೋಗಿಸಲಾಗುತ್ತದೆ.

ಶರೀಯತ್‌ ಆಧಾರಿತ ‘ಇಸ್ಲಾಮಿಕ್‌ ಬ್ಯಾಂಕ್‌’ಗಳಿಗೆ ಅನೇಕ ದೇಶಗಳಲ್ಲಿ ವಿರೋಧವಾದರೂ, ಗ್ರಾಹಕರ ಹಕ್ಕಿನಿಂದ, ಹಾಗೆಯೇ ಕಟ್ಟರ್‌ ಧರ್ಮಪಾಲನೆಯ ಆಗ್ರಹದಿಂದ ‘ಹಲಾಲ್‌ ಆರ್ಥಿಕ ವ್ಯವಸ್ಥೆ’ಯು ಇಂದು ಬಲಿಷ್ಠವಾಗುತ್ತಿರುವುದು ಕಂಡು ಬರುತ್ತಿದೆ. ಮುಸಲ್ಮಾನರು ಪ್ರತಿಯೊಂದು ಪದಾರ್ಥ ಮತ್ತು ವಸ್ತುಗಳು ಅಧಿಕೃತ, ಅಂದರೆ ‘ಹಲಾಲ್’ ಆಗಿರಬೇಕೆಂಬ ಬೇಡಿಕೆಯನ್ನು ಮಾಡುತ್ತಿದ್ದಾರೆ. ಆದುದರಿಂದ ‘ಹಲಾಲ್‌ ಸರ್ಟಿಫಿಕೇಟ್’ ಅನಿವಾರ್ಯವಾಗಿದೆ. ಆಶ್ಚರ್ಯವೆಂದರೆ ‘ಸೆಕ್ಯುಲರ್’ ಭಾರತದ ಸರಕಾರಿ ಕಂಪನಿಗಳಲ್ಲೂ ‘ಹಲಾಲ್‌ ಸರ್ಟಿಫಿಕೇಟ್‌’ನ್ನು ಕಡ್ಡಾಯ ಮಾಡಲಾಗಿದೆ. ದೇಶದಲ್ಲಿ ಕೇವಲ ೧೫ ಶೇಕಡಾದಷ್ಟಿರುವ ಅಲ್ಪಸಂಖ್ಯಾತ ಮುಸಲ್ಮಾನ ಸಮಾಜಕ್ಕೆ ಇಸ್ಲಾಂಗನುಸಾರ ‘ಹಲಾಲ್’ ಮಾಂಸ ಬೇಕೆಂದು ಉಳಿದ ಜನರ ಮೇಲೂ ಅದನ್ನು ಹೇರಲಾಗುತ್ತಿದೆ. ಈಗಂತೂ ಈ ‘ಹಲಾಲ್‌ ಸರ್ಟಿಫಿಕೇಟ್’ ಕೇವಲ ಮಾಂಸಕ್ಕಷ್ಟೇ ಸೀಮಿತವಾಗಿರದೇ ಖಾದ್ಯ ಪದಾರ್ಥಗಳು, ಸೌಂದರ್ಯವರ್ಧಕಗಳು, ಔಷಧ, ಆಸ್ಪತ್ರೆ, ಗೃಹನಿರ್ಮಾಣ, ಮಾಲ್, ಪ್ರವಾಸ ಮುಂತಾದ ಕ್ಷೇತ್ರಗಳಲ್ಲೂ ಪ್ರಾರಂಭ ವಾಗಿದೆ. ಇಸ್ಲಾಮಿಕ್‌ ದೇಶಗಳಿಗೆ ಕಳುಹಿಸುವ ಪ್ರತಿಯೊಂದು ವಸ್ತುವಿಗಂತೂ ‘ಹಲಾಲ್‌ ಸರ್ಟಿಫಿಕೇಟ್’ ಕಡ್ಡಾಯವಾಗಿದೆ. ಇಂದು ‘ಮ್ಯಾಕ್‌ಡೊನಾಲ್ಡ್‌’ ನಂತಹ ವಿದೇಶಿ ಕಂಪನಿಗಳು ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಶೇ. ೧೦೦ ರಷ್ಟು ‘ಹಲಾಲ್’ ಪದಾರ್ಥಗಳನ್ನು ಮಾರಾಟ ಮಾಡಿ ಹಿಂದೂ ಗ್ರಾಹಕರ ಧಾರ್ಮಿಕ ಹಕ್ಕನ್ನು ಅವಮಾನಿಸುತ್ತಿವೆ ! ಇದರಿಂದ ನಿರ್ಮಾಣವಾದ ‘ಹಲಾಲ್‌ ಆರ್ಥಿಕವ್ಯವಸ್ಥೆ’ಯು ವಿಶ್ವದೆಲ್ಲೆಡೆ ವರ್ಚಸ್ಸನ್ನು ಮೂಡಿಸಿ ಕಡಿಮೆ ಕಾಲಾವಧಿಯಲ್ಲಿಯೇ ೨ ಟ್ರಿಲಿಯನ್‌ ಅಮೇರಿಕನ್‌ ಡಾಲರ್ಸ್‌ಗಳನ್ನು ತಲುಪಿದೆ.

ಯಾವಾಗ ಪಂಥದ ಮೇಲಾಧಾರಿತ ಆರ್ಥಿಕವ್ಯವಸ್ಥೆ ನಿರ್ಮಾಣವಾಗುತ್ತದೆಯೋ, ಆಗ ದೇಶದ ವಿವಿಧ ವ್ಯವಸ್ಥೆಗಳ ಮೇಲೆ ಖಂಡಿತವಾಗಿಯೂ ಅದರ ಪರಿಣಾಮವಾಗುತ್ತದೆ. ಇಲ್ಲಂತೂ ‘ಶರೀಯತ್‌’ನ ಮೇಲಾಧಾರಿತ ಒಂದು ಆರ್ಥಿಕ ವ್ಯವಸ್ಥೆ ನಿರ್ಮಾಣವಾಗುತ್ತಿದೆ. ಇದರಿಂದ ‘ಸೆಕ್ಯುಲರ್’ ಭಾರತದ ಮೇಲೂ ಖಂಡಿತವಾಗಿ ಪರಿಣಾಮವಾಗುತ್ತದೆ. ಈ ದೃಷ್ಟಿಯಿಂದ ‘ಭವಿಷ್ಯದಲ್ಲಿ ಸ್ಥಳೀಯ ವ್ಯಾಪಾರಿಗಳಿಗೆ, ಪಾರಂಪರಿಕ ವ್ಯಾಪಾರಸ್ಥರಿಗೆ, ವಾಣಿಜ್ಯೋದ್ಯಮಿಗಳಿಗೆ ಹಾಗೆಯೇ ಕೊನೆಯಲ್ಲಿ ರಾಷ್ಟ್ರಕ್ಕೆ ಅಪಾಯವುಂಟಾಗುತ್ತದೆ’ ಎಂಬ ವಿಚಾರ ಮಾಡುವುದು ಆವಶ್ಯಕವಾಗಿದೆ. ಇಂತಹ ಸಮಯದಲ್ಲಿ ಭಾರತವು ಸಕಾಲದಲ್ಲಿ ಜಾಗೃತವಾಗಬೇಕು ! ಭಾರತ ಸರಕಾರ ‘ಹಲಾಲ್‌ ಸರ್ಟಿಫಿಕೇಟ್’ ಕೊಡುವ ಇಸ್ಲಾಮಿ ಸಂಸ್ಥೆಗಳು ‘ಸರ್ಟಿಫಿಕೇಟ್‌’ನ ಮಾಧ್ಯಮದಿಂದ ಸಂಗ್ರಹಿಸಿದ ಹಣವನ್ನು ಹೇಗೆ ಬಳಸುತ್ತವೆ’ ಎಂಬುದರ ಸಮಗ್ರ ತನಿಖೆ ನಡೆಸಬೇಕು. ‘ಸೆಕ್ಯುಲರ್’ ಭಾರತದಲ್ಲಿ ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ (FSSAI) ದಂತಹ ಸರಕಾರಿ ಸಂಸ್ಥೆಗಳಿರುವಾಗ ‘ಹಲಾಲ್‌ ಸರ್ಟಿಫಿಕೇಟ್’ ಕೊಡುವ ಇಸ್ಲಾಮಿ ಸಂಸ್ಥೆಗಳ ಆವಶ್ಯಕತೆ ಏನು ? ಈ ವಿಶೇಷಾಂಕದ ನಿಮಿತ್ತ ಈ ವಿಷಯದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ.