‘ಹಲಾಲ್ ಆರ್ಥಿಕವ್ಯವಸ್ಥೆ’ ಮತ್ತು ‘ಜಿಹಾದಿ ಭಯೋತ್ಪಾದನೆ’ ಇವುಗಳ ನಂಟು !

‘ಹಲಾಲ್ ಆರ್ಥಿಕವ್ಯವಸ್ಥೆ’ ಭಯೋತ್ಪಾದನೆಗೆ ಪೂರಕ

ಜಗತ್ತಿನೆಲ್ಲೆಡೆ ‘ಹಲಾಲ್ ಆರ್ಥಿಕವ್ಯವಸ್ಥೆ’ಯು ಸಂಪೂರ್ಣವಾಗಿ ಇಸ್ಲಾಮಿ ಧಾರ್ಮಿಕ ಸಂಸ್ಥೆಗಳಿಂದ ನಿರ್ವಹಿಸಲ್ಪಡುತ್ತಿದೆ. ಈ ವ್ಯವಸ್ಥೆಯಲ್ಲಿ ಯಾವುದೇ ದೇಶದ ಸರಕಾರದ ಯಾವುದೇ ರೀತಿಯ ನಿಯಂತ್ರಣವಿಲ್ಲ. ‘ಈ ವ್ಯವಸ್ಥೆಯಿಂದ ದೊರಕುವ ಹಣವನ್ನು ಯಾವುದಕ್ಕಾಗಿ ಉಪಯೋಗಿಸಲಾಗುತ್ತದೆ’ ಎಂಬುದು ಅನುಮಾನಾಸ್ಪದವಾಗಿದೆ. ಇತ್ತೀಚೆಗಿನ ಕಾಲದಲ್ಲಿ ಜಾಗತಿಕ ಸ್ತರದಲ್ಲಿ ‘ಹಲಾಲ್ ಆರ್ಥಿಕವ್ಯವಸ್ಥೆ’ ಮತ್ತು ‘ಜಿಹಾದಿ ಭಯೋತ್ಪಾದನೆ’ ಇವುಗಳ ನಂಟನ್ನು ಜೋಡಿಸಲಾಗುತ್ತಿದೆ. ಇದರ ಬಗೆಗಿನ ಕೆಲವು ವಾರ್ತೆಗಳನ್ನು ಮತ್ತು ವರದಿಗಳನ್ನು ಮುಂದೆ ಕೊಡಲಾಗಿದೆ.

ಅಮೇರಿಕಾದಲ್ಲಿನ ‘ಹಲಾಲ್ ಪ್ರಮಾಣಪತ್ರ’ ಕೊಡುವ ಸಂಸ್ಥೆಗಳಿಂದ ಭಯೋತ್ಪಾದನೆ, ಹಾಗೆಯೇ ಕಟ್ಟರಪಂಥೀಯ ಸಂಸ್ಥೆಗಳಿಗೆ ಆರ್ಥಿಕ ಸಹಾಯ !

‘ಮಿಡಲ್ ಈಸ್ಟ್ ಫೋರಮ್’ನ ತಪಾಸಣೆಯಲ್ಲಿ, ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ‘ಹಲಾಲ್ ಪ್ರಮಾಣಪತ್ರ’ ನೀಡುವ ಸಂಸ್ಥೆಯು ೨೦೧೨ ರಿಂದ ಇಸ್ಲಾಮಿಕ್ ಕಟ್ಟರ್ಪಂಥೀಯ ಗುಂಪುಗಳಿಗೆ ನಿಧಿಯನ್ನು ಪೂರೈಸುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ‘ಇಸ್ಲಾಮಿಸ್ಟ್ ವಾಚ್’ನ ಜೆ.ಎಮ್.ಫೆಲಪ್ಸ್ ಮತ್ತು ಸ್ಯಾಮ್ ವೆಸ್ಟ್ರಾಪ್ ಇವರು ತಯಾರಿಸಿದ ವರದಿಯನ್ನು ಮುಂದೆ ನೀಡಲಾಗಿದೆ.

೧. ‘ಇಸ್ಲಾಮಿಕ್ ಫುಡ್ ಯಾಂಡ್ ನ್ಯೂಟ್ರಿಶನ್ ಕೌನ್ಸಿಲ್ ಆಫ್ ಅಮೇರಿಕಾ (IFANCA)’ ಎಂಬುದು ಅಮೇರಿಕಾದಲ್ಲಿನ ‘ಹಲಾಲ್ ಪ್ರಮಾಣಪತ್ರ’ವನ್ನು ಕೊಡುವ ಒಂದು ಪ್ರಮುಖ ಸಂಸ್ಥೆಯಾಗಿದೆ, ಅದು ಭಯೋತ್ಪಾದಕ ಬಣದೊಂದಿಗೆ ಗುರುತಿಸಲ್ಪಡುವ ಪ್ರಮುಖ ಇಸ್ಲಾಮಿ ಸಂಘಟನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣವನ್ನು ಕೊಟ್ಟಿದೆ. ಅದರಲ್ಲಿ ‘ಜಮಾತ್-ಎ-ಇಸ್ಲಾಮಿಯಾ’, ‘ಹಮಾಸ್’ ಮತ್ತು ‘ಅಲ್-ಕಾಯದಾ’ ಎಂಬ ಸಂಘಟನೆಗಳು ಒಳಗೊಂಡಿವೆ.

೨. ‘IFANCA’ ಸಂಸ್ಥೆಗೆ ಇಂಡೋನೇಶಿಯಾ, ಮಲೇಷ್ಯಾ, ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ಈ ಮೂರು ಪ್ರಮುಖ ‘ಇಸ್ಲಾಮಿಕ್ ಆರ್ಥಿಕವ್ಯವಸ್ಥೆ’ಗಳ ಮಾನ್ಯತೆಯಿದೆ. ಈ ಸಂಸ್ಥೆಯು ೧೧ ಸಾವಿರಕ್ಕೂ ಹೆಚ್ಚು ಆಹಾರಪದಾರ್ಥಗಳು, ಪಾನೀಯ, ಔಷಧಿ ಮತ್ತು ವೈಯಕ್ತಿಕ ಸಂರಕ್ಷಕ ಉತ್ಪನ್ನಗಳನ್ನು (ಪರ್ಸನಲ್ ಕೇರ್ ಪ್ರಾಡಕ್ಟ್ಸ್) ದೃಢೀಕರಿಸಿರುವುದರ ಪ್ರತಿಪಾದನೆಯನ್ನು ಮಾಡುತ್ತದೆ ಹಾಗೂ ಇಸ್ಲಾಮಿಕ್ ಜೀವನಶೈಲಿಯ ಬಗ್ಗೆ ಜಾಗರೂಕತೆಯನ್ನು ಹೆಚ್ಚಿಸುವ ಕಾರ್ಯವನ್ನೂ ಮಾಡುತ್ತದೆ. ಇಂತಹ ಸೇವೆಗಳು ಮೇಲ್ನೋಟಕ್ಕೆ ಆಕರ್ಷಕವೆನಿಸಿದರೂ, ೨೦೧೯ ರಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ‘ಇಂಟರ್ನಲ್ ರೆವೆನ್ಯೂ ಸರ್ವಿಸ್ ಫಾರ್ಮ್ ೯೯೦’ ಇದಕ್ಕನುಸಾರ ‘IFANCA’ಯು ೨೫ ದಶಲಕ್ಷ ಡಾಲರ್ಸ್ಗಳಿಗಿಂತ ಹೆಚ್ಚು ಉತ್ಪನ್ನ ಮತ್ತು ಹೆಚ್ಚುಕಡಿಮೆ ೭೦ ದಶಲಕ್ಷ ಡಾಲರ್ಸ್ನ ಆಸ್ತಿಯ ನೊಂದಣಿಯನ್ನು ಮಾಡಿದೆ. ಒಂದು ಲಾಭರಹಿತ (Non-profit) ತತ್ತ್ವದ ಮೇಲೆ ಕೆಲಸ ಮಾಡುವ ಸಂಸ್ಥೆಯ ಆಸ್ತಿಯಲ್ಲಿ ಇಷ್ಟೊಂದು ಹೆಚ್ಚಳವಾಗುವುದು ಖಂಡಿತವಾಗಿಯೂ ಗಮನ ಸೆಳೆಯುವಂತಹದ್ದಾಗಿದೆ.

೩. ‘IFANCA’ದ ೨೦೧೯ ರಲ್ಲಿನ ಆದಾಯ ತೆರಿಗೆ ಪಾವತಿಯ ಆಧಾರದಲ್ಲಿ ಅವರ ೨೫ ದಶಲಕ್ಷ ಡಾಲರ್ಸ್ಗಳ ಉತ್ಪನ್ನದ ಪೈಕಿ ಕೇವಲ ೨.೭ ದಶಲಕ್ಷ ಡಾಲರ್ಸ್ಗಳ ಆದಾಯವು ಪ್ರತ್ಯಕ್ಷದಲ್ಲಿ ‘ಹಲಾಲ್ ಪ್ರಮಾಣಪತ್ರ’ಗಳ ವಿತರಣೆಯಿಂದ ಬಂದಿದೆ. ಉಳಿದ ಆದಾಯವು ಸಲಹಾ ಶುಲ್ಕ, ಮೇಲ್ವಿಚಾರಣೆ ಶುಲ್ಕ, ಯೋಜನಾ ಸಮ್ಮತಿ ಶುಲ್ಕ, ಪರಿಷತ್ತು ಮತ್ತು ಹೂಡಿಕೆಗಳಿಂದ ಸಿಗುತ್ತಿರುವುದಾಗಿ ಹೇಳಲಾಗುತ್ತದೆ, ಆದರೆ ಅದರ ಸ್ಪಷ್ಟ ವಿವರಣೆಯನ್ನು ಕೊಟ್ಟಿಲ್ಲ.

(ಆಧಾರ : ದಿ ಡೈಲಿ ಗಾರ್ಡಿಯನ್, ೨೧.೮.೨೦೨೧)

ಈ ಒಂದು ವರದಿಯಿಂದ ‘ಹಲಾಲ್ ಪ್ರಮಾಣಪತ್ರ’ದ ಹಣದಿಂದ ಭಯೋತ್ಪಾದಕ ಸಂಘಟನೆಗಳಿಗೆ ಹೇಗೆ ಆರ್ಥಿಕ ಸಹಾಯ ಮಾಡಲಾಗುತ್ತದೆ’ ಎಂಬುದು ಸ್ಪಷ್ಟವಾಗುತ್ತದೆ.

ಭಾರತದಲ್ಲಿಯೂ ‘ಜಮಿಯತ್ ಉಲೇಮಾ-ಎ-ಹಿಂದ್’ನ ಭಯೋತ್ಪಾದನಾ ಚಟುವಟಿಕೆಗಳಲ್ಲಿನ ಆರೋಪಿಗಳಿಗೆ ಕಾನೂನು ನೆರವು !

‘ಜಮಿಯತ್-ಉಲೇಮಾ-ಎ-ಹಿಂದ್ ಹಲಾಲ್ ಟ್ರಸ್ಟ್’ನ ಜಾಲತಾಣ ಭಾರತದಲ್ಲಿ ‘ಹಲಾಲ್ ಪ್ರಮಾಣಪತ್ರ’ವನ್ನು ನೀಡುವ ‘ಜಮಿಯತ್ ಉಲೇಮಾ-ಎ-ಹಿಂದ್ ಹಲಾಲ್ ಟ್ರಸ್ಟ್’ ಒಂದು ಮುಖ್ಯ ಸಂಘಟನೆಯಾಗಿದೆ. ಡಿಸೆಂಬರ್ ೨೦೧೯ ರಲ್ಲಿ ‘ಜಮಿಯತ್ ಉಲೇಮಾ-ಎ-ಹಿಂದ್’ನ ಬಂಗಾಳದ ರಾಜ್ಯಾಧ್ಯಕ್ಷ ಸಿದ್ಧಿಕುಲ್ಲಾ ಚೌಧರಿಯು ‘ಪೌರತ್ವ ತಿದ್ದುಪಡಿ ಕಾಯ್ದೆ’ಯನ್ನು ವಿರೋಧಿಸುವಾಗ ‘ಕೇಂದ್ರ ಗೃಹಮಂತ್ರಿ ಅಮಿತ್ ಶಾ ಇವರನ್ನು ಕೊಲಕತಾ ವಿಮಾನ ನಿಲ್ದಾಣದ ಹೊರಗೆ ಬರಲು ಬಿಡುವುದಿಲ್ಲ’ ಎಂಬ ಬೆದರಿಕೆಯನ್ನು ಹಾಕಿದ್ದನು. ಇದೇ ಸಂಘಟನೆಯು ಉತ್ತರಪ್ರದೇಶದ ಹಿಂದುತ್ವವಾದಿ ಮುಖಂಡ ಕಮಲೇಶ ತಿವಾರಿಯ ಹತ್ಯೆಯನ್ನು ಮಾಡಿದ ಆರೋಪಿ ಗಳಿಗೆ ಖಟ್ಲೆಯನ್ನು ಹೋರಾಡಲು ಕಾನೂನು ಸಹಾಯ ಮಾಡುತ್ತಿದೆ.

ಈ ಸಂಘಟನೆಯು ‘೭/೧೧’ರ ಮುಂಬೈ ರೈಲ್ವೇ ಬಾಂಬ್ಸ್ಫೋಟ, ೨೦೦೬ ರ ಮಾಲೆಗಾವ್ ಬಾಂಬ್ಸ್ಫೋಟ, ಪುಣೆಯ ಜರ್ಮನ್ ಬೇಕರಿ ಬಾಂಬ್ಸ್ಫೋಟ, ‘೨೬/೧೧’ರ ಮುಂಬೈ ಮೇಲಿನ ಭಯೋತ್ಪಾದನಾ ಆಕ್ರಮಣ, ಮುಂಬೈಯ ಝವೇರಿ ಮಾರುಕಟ್ಟೆಯ ಸರಣಿ ಬಾಂಬ್ಸ್ಫೋಟ, ದೆಹಲಿಯ ಜಾಮಾ ಮಸೀದಿ ಬಾಂಬ್ಸ್ಫೋಟ, ಕರ್ಣಾವತಿ (ಅಹಮದಾಬಾದ್) ಬಾಂಬ್
ಸ್ಫೋಟ ಇತ್ಯಾದಿ ಅನೇಕ ಭಯೋತ್ಪಾದನೆಯ ಪ್ರಕರಣಗಳ ಆರೋಪಿಗಳಿಗೆ ಕಾನೂನು ನೆರವು ದೊರಕಿಸಿಕೊಟ್ಟಿದೆ. ‘ಜಮಿಯತ್ ಉಲೇಮಾ-ಎ-ಹಿಂದ್’ ಸದ್ಯ ಇಂತಹ ರೀತಿಯ ‘ಲಷ್ಕರ್-ಎ-ತೊಯ್ಬಾ’ದಿಂದ ಹಿಡಿದು ‘ಇಂಡಿಯನ್ ಮುಜಾಹಿದಿನ್’, ‘ಇಸ್ಲಾಮಿಕ್ ಸ್ಟೇಟ್’ ಇಂತಹ ವಿವಿಧ ಭಯೋತ್ಪಾದನೆಯ ಸಂಘಟನೆಗಳಿಗೆ ಸಂಬಂಧಿಸಿದ ಸುಮಾರು ೭೦೦ ಶಂಕಿತ ಆರೋಪಿಗಳ ಖಟ್ಲೆಗಳನ್ನು ಹೋರಾಡುತ್ತಿದೆ. ಅದು ಈ ಖಟ್ಲೆಗಳಿಂದ ೧೯೨ ಆರೋಪಿ ಗಳನ್ನು ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದೆ.

ಯಾವುದಾದರೊಬ್ಬ ನಿರಪರಾಧಿ ವ್ಯಕ್ತಿಯ ಮೇಲೆ ಅನ್ಯಾಯವಾದಲ್ಲಿ ಅವನ ಖಟ್ಲೆ ನಡೆಸುವುದನ್ನು ನಾವು ಅರ್ಥಮಾಡಿಕೊಳ್ಳಬಹುದು, ಆದರೆ ‘ಪ್ರತಿಯೊಂದು ಜಿಹಾದಿ ಭಯೋತ್ಪಾದನೆಯ ಚಟುವಟಿಕೆಯಲ್ಲಿ ಪಾಲ್ಗೊಂಡಿರುವ ಮತ್ತು ಪೊಲೀಸ್ ತಪಾಸಣೆಯಲ್ಲಿ ಅಪರಾಧಿಯಾಗಿರುವ ಎಲ್ಲ ೭೦೦ ಮುಸಲ್ಮಾನರನ್ನು ನಿರಪರಾಧಿಯೆನ್ನುವುದು’ ಆಶ್ಚರ್ಯಕರ ಮತ್ತು ಸಂಶಯಾಸ್ಪದವಾಗಿದೆ !

(ಆಧಾರ : ಹಿಂದೂ ಜನಜಾಗೃತಿ ಸಮಿತಿ ಪುರಸ್ಕೃತ ಗ್ರಂಥ ‘ಹಲಾಲ್ ಜಿಹಾದ್’)