ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನಮ್ಮನ್ನು ಸಗುಣದಿಂದ ನಿರ್ಗುಣದ ಕಡೆಗೆ ಒಯ್ಯುತ್ತಿರುವುದರಿಂದ ಅವರ ದೇಹದಲ್ಲಿ ಸಿಲುಕಬಾರದು !

ಸಾಧನೆಯ ಬಗ್ಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ಅಮೂಲ್ಯ ಮಾರ್ಗದರ್ಶನ

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ಅನಾರೋಗ್ಯದಿಂದಾಗಿ ಸಾಧಕರನ್ನು ಭೇಟಿಯಾಗುತ್ತಿಲ್ಲ. ಅದಕ್ಕಾಗಿ ಸಾಧಕರು ಮುಂದಿನ ದೃಷ್ಟಿಕೋನವನ್ನು ಇಡಬೇಕು. ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸ್ಥೂಲದಲ್ಲಿ ಭೇಟಿಯಾಗದಿದ್ದರೂ, ಅವರು ನೀಡಿದ ಊರ್ಜೆ ನಮಗೆ ಸಿಗುತ್ತಲೇ ಇದೆ. ‘ಸೂಕ್ಷ್ಮದಿಂದ ಅವರು ನಮಗೆ ಎಷ್ಟು ಊರ್ಜೆ ನೀಡಿದ್ದಾರೆ ?’, ಎಂಬುದು ನಮ್ಮ ಗಮನಕ್ಕೆ ಬರುವುದಿಲ್ಲ. ಆಶ್ರಮಕ್ಕೆ ಇಂದಿನ ತನಕ ಭೇಟಿ ನೀಡಲಾಗದ ಸಾಧಕರಿಗೂ ಗುರುದೇವರು ಊರ್ಜೆ ನೀಡುತ್ತಿದ್ದಾರೆ. ಸಾಧಕರೆಂದರೆ ಗುರುಗಳಿಗೆ ಪ್ರಾಣ. ಸಗುಣತತ್ತ್ವ ಅವಶ್ಯಕವಿರುವಾಗ ಅದು ಸಿಗುತ್ತದೆ; ಹಾಗೆಯೇ ನಿರ್ಗುಣತತ್ತ್ವದ ಅವಶ್ಯಕವಿರುವಾಗ ಅದು ಸಿಗುತ್ತದೆ. ವೈಕುಂಠದಲ್ಲಿರುವ ಜೀವಕ್ಕೆ ಶ್ರೀವಿಷ್ಣು ಹಾಗೆಯೇ ಮರಳಿ ಕಳುಹಿಸುವನೇ ? ಸಗುಣಕ್ಕಿಂತ ನಿರ್ಗುಣ ಶ್ರೇಷ್ಠ. ಈಗ ಅವರು ನಮ್ಮನ್ನು ಸಗುಣದಿಂದ ನಿರ್ಗುಣದತ್ತ ಒಯ್ಯುತ್ತಿದ್ದಾರೆ. ಹಾಗಾಗಿ ಅವರ ದೇಹದಲ್ಲಿ ಸಿಲುಕುವುದು ಬೇಡ.’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೨೯.೯.೨೦೨೩)