ಅನಂತ ಕೋಟಿ ಬ್ರಹ್ಮಾಂಡವನ್ನು ಸಂಭಾಳಿಸುವ ದೇವರಂತೆ ಸಾಧಕರೂ ಸಮಷ್ಟಿ ಸಾಧನೆಯೆಂದು ಆಶ್ರಮದ ಸೇವೆ ಅಥವಾ ಸಂಸ್ಥೆಯ ಕಾರ್ಯವನ್ನು ಹೆಚ್ಚು ಉತ್ತಮವಾಗಿ ಮಾಡಲು ಪ್ರಯತ್ನಿಸಬೇಕು ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಶ್ರೀ. ಪ್ರಶಾಂತ ಕೊಯಂಡೆ : ಆಶ್ರಮವನ್ನು ನೋಡುವಾಗ ಅಲ್ಲಿ ಕೆಲವೊಂದು ಚಿಕ್ಕಪುಟ್ಟ ತಪ್ಪುಗಳು ಗಮನಕ್ಕೆ ಬಂದರೆ ಅಥವಾ ಅಂಶಗಳು ಗಮನಕ್ಕೆ ಬಂದಿದ್ದರೆ, ಆ ಬಗ್ಗೆಯೇ ಹೆಚ್ಚು ವಿಚಾರವಿರುತ್ತದೆ. ನಾನು ನನ್ನ ವಿಚಾರವನ್ನು ಮಾಡುವುದ ಕ್ಕಿಂತ ಆ ವಿಚಾರ ಹೆಚ್ಚು ಮಾಡುತ್ತೇನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ತಪ್ಪುಗಳು ಗಮನಕ್ಕೆ ಬಂದಾಗ ಅದನ್ನು ಯಾರಿಗಾದರೂ ಹೇಳುತ್ತೀರಲ್ಲ ?

ಶ್ರೀ. ಪ್ರಶಾಂತ ಕೊಯಂಡೆ : ಹೌದು. ಸಂಬಂಧಪಟ್ಟ ಜವಾಬ್ದಾರ ಸಾಧಕನಿಗೆ ಹೇಳುತ್ತೇನೆ. ನನ್ನ ಮನಸ್ಸಿನಲ್ಲಿ ‘ನೀವು ನಮಗೆ ಕಲಿಸಿದ್ದನ್ನು, ಮುಂದಿನ ಪೀಳಿಗೆಗೆ ಹೇಳಬೇಕು’, ಎಂಬ ವಿಚಾರ ಹೆಚ್ಚಿರುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಹೌದು. ಇದು ಮಹತ್ವದ್ದಾಗಿದೆ; ಏಕೆಂದರೆ ಇದು ಸಮಷ್ಟಿ ಸಾಧನೆಯಾಗಿದೆ. ವ್ಯಷ್ಟಿ ಸಾಧನೆಯಲ್ಲಿ ಸಾಧಕನು ಕೇವಲ ತನ್ನ ವಿಚಾರವನ್ನು ಮಾಡುತ್ತಾನೆ. ದೇವರು ಅನಂತ ಕೋಟಿ ಬ್ರಹ್ಮಾಂಡದ ವಿಚಾರ ಮಾಡುತ್ತಾನಲ್ಲವೇ ? ನಾವೂ ಸಹ ವ್ಯಾಪಕ ವಿಚಾರವನ್ನು ಮಾಡಬೇಕು. ಚೆನ್ನಾಗಿದೆ !