ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ದೇವರಕೋಣೆಯ ಮಗ್‌ನ ಸ್ಟೀಲ್‌ ಮುಚ್ಚಳದ ಮೇಲೆ ಬಿದ್ದ ಸೂರ್ಯ ಪ್ರಕಾಶದ ಪ್ರತಿಬಿಂಬ ನವಿಲುಗರಿಯ ಆಕಾರದಂತೆ ಕಾಣಿಸುವುದರ ಅಧ್ಯಾತ್ಮಶಾಸ್ತ್ರ

(1) ಸ್ಟೀಲ್‌ ಮುಚ್ಚಳದ ಮೇಲೆ ಬಿದ್ದಿರುವ ಪ್ರಕಾಶದ ಪ್ರತಿಬಿಂಬ ಹಿಂಬದಿಯಲ್ಲಿ ಕಾಣುವ ನವಿಲುಗರಿಯಂತಹ ಸುಂದರ ಆಕಾರ(ಬಾಣದಿಂದ ತೋರಿಸಲಾಗಿದೆ)

೧೬.೧೨.೨೦೨೦ ರಂದು ಬೆಳಗ್ಗೆ ೭.೩೦ ರಿಂದ ೭.೪೦ ಈ ಅವಧಿಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ದೇವರಕೋಣೆಯಲ್ಲಿನ ಪಿಂಗಾಣಿಯ ‘ಮಗ್‌’(ಅಉಠಿ)ನ ಸ್ಟೀಲ್‌ನ ಮುಚ್ಚಳದ ಮೇಲೆ ಸೂರ್ಯ ಪ್ರಕಾಶ ಬೀಳುತ್ತಿದ್ದು ಅಲ್ಲಿಂದ ಆ ಸೂರ್ಯಪ್ರಕಾಶದ ಪ್ರತಿಬಿಂಬ ದೇವರ ಕೋಣೆಯ ಹಿಂದಿರುವ ಹಲಗೆಯ ಮೇಲೆ  ನವಿಲು ಗರಿಯಂತೆ ಕಾಣಿಸುತ್ತಿತ್ತು. ಇದರ ಹಿಂದಿನ ಅಧ್ಯಾತ್ಮಶಾಸ್ತ್ರ ಈ ಮುಂದಿನಂತೆ ಇದೆ.

ಕು. ಮಧುರಾ ಭೋಸಲೆ

೧. ಸದ್ಯ ನಡೆಯುತ್ತಿರುವ ಘೋರ ಕಲಿಯುಗದಲ್ಲಿನ ಆಪತ್ಕಾಲದಿಂದ ವಿಶ್ವದಾದ್ಯಂತದ ಎಲ್ಲ ಸಾಧಕರ ರಕ್ಷಣೆಯನ್ನು ಮಾಡಲು ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ಕಾರ್ಯನಿರತವಾಗಿರುವ ಶ್ರೀಕೃಷ್ಣಮಯ ಚೈತನ್ಯ ಲಹರಿಗಳ ಪೃಥ್ವಿ, ಆಪ, ತೇಜ, ವಾಯು ಹಾಗೂ ಆಕಾಶ ಈ ಪಂಚತತ್ತ್ವಗಳ ಸ್ತರದಲ್ಲಿ ಬೃಹತ್ಪ್ರಮಾಣದಲ್ಲಿ ಪ್ರಕ್ಷೇಪಣೆಯಾಗುವುದು

ಸದ್ಯ ಕಲಿಯುಗದಲ್ಲಿನ ತೀವ್ರ ಆಪತ್ಕಾಲ ನಡೆಯುತ್ತಿದೆ. ಈ ತೀವ್ರ ಆಪತ್ಕಾಲದಲ್ಲಿ ವಿಶ್ವದಾದ್ಯಂತದ ಎಲ್ಲ ಸಾಧಕರ ರಕ್ಷಣೆ ಮಾಡಲು ವಿಷ್ಣು ಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರಿಂದ ಸಂಪೂರ್ಣ ವಿಶ್ವದಲ್ಲಿ ಶ್ರೀಕೃಷ್ಣಮಯ ಚೈತನ್ಯ ಲಹರಿಗಳು ಪೃಥ್ವಿ, ಆಪ, ತೇಜ, ವಾಯು ಹಾಗೂ ಆಕಾಶ ಈ ಪಂಚತತ್ತ್ವಗಳು ಬೃಹತ್ಪ್ರಮಾಣದಲ್ಲಿ ಪ್ರಕ್ಷೇಪಣೆಯಾಗುತ್ತಿವೆ. ಈ ಪಂಚತತ್ತ್ವಗಳ ಸ್ತರದಲ್ಲಿ ಪ್ರಕ್ಷೇಪಣೆ ಯಾಗುವ ಚೈತನ್ಯದಾಯಕ ಶ್ರೀಕೃಷ್ಣಮಯ ಲಹರಿಗಳಿಂದ ಸಂಪೂರ್ಣ ಪೃಥ್ವಿಯ ಮೇಲಿನ ಸಾಧಕರಿಗೆ ವಿವಿಧ ಪ್ರಕಾರದ ದೈವೀ ಅನುಭೂತಿಗಳು ಬರುತ್ತಿವೆ.

೨. ಸನಾತನದ ಆಶ್ರಮ ಹಾಗೂ ಸಾಧಕರ ಮನೆಗಳಲ್ಲಿ ಪಂಚತತ್ತ್ವಗಳಿಗನುಸಾರ ಬರುವ ಅನುಭೂತಿಗಳು 

ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿನ ದೇವರ ಕೋಣೆಯಲ್ಲಿನ ದೇವತೆಗಳ ಚಿತ್ರಗಳು ಹಾಗೂ ಮೂರ್ತಿಗಳಲ್ಲಿ ಪರಾತ್ಪರ ಗುರು ಡಾ. ಆಠವಲೆಯವರಲ್ಲಿನ ಕೃಷ್ಣತತ್ತ್ವ ಸೂಕ್ಷ್ಮ ರೂಪದಲ್ಲಿ ತುಂಬಿಕೊಂಡಿದೆ. ಆದ್ದರಿಂದ ಅವರ ದೇವರ ಕೋಣೆಯಲ್ಲಿನ ದೇವತೆಗಳ ಚಿತ್ರ ಹಾಗೂ ಮೂರ್ತಿಗಳಿಗೆ ಸೂರ್ಯಪ್ರಕಾಶದ ರೂಪದಲ್ಲಿ ತೇಜತತ್ತ್ವದ ಚೈತನ್ಯಲಹರಿಗಳು ಸ್ಥೂಲ ಹಾಗೂ ಸೂಕ್ಷ್ಮ ಕಿರಣಗಳ ರೂಪದಲ್ಲಿ ಸ್ಪರ್ಶವಾಗುತ್ತವೆ. ಆಗ ದೇವತೆಗಳ ಚಿತ್ರಗಳು ಹಾಗೂ ಮೂರ್ತಿಗಳಲ್ಲಿ ಸುಪ್ತವಾಗಿರುವ ಕೃಷ್ಣತತ್ತ್ವವು ಜಾಗೃತವಾಗಿ ಅದು ನವಿಲುಗರಿಯ ಆಕಾರದ ಪ್ರತಿಬಿಂಬದ ರೂಪದಲ್ಲಿ ಸ್ಥೂಲದಿಂದ ಸಾಕಾರವಾಗುತ್ತದೆ. ‘ನವಿಲುಗರಿ’ ಕೃಷ್ಣತತ್ತ್ವ ಹಾಗೂ ಆನಂದದ ಪ್ರತೀಕವಾಗಿದೆ.

೩. ನವಿಲುಗರಿಯಂತೆ ಕಾಣಿಸುವ ಆಕಾರದ ಆಧ್ಯಾತ್ಮಿಕ ವೈಶಿಷ್ಟ್ಯಗಳು

ಅ. ತೇಜೋಮಯ ಚೈತನ್ಯಲಹರಿಗಳು ವಾಯುಮಂಡಲದಲ್ಲಿ ಪ್ರಕ್ಷೇಪಣೆಯಾಗಿ ವಾಯುಮಂಡಲ ಶುದ್ಧಿಯಾಗುತ್ತದೆ.

ಆ. ನವಿಲುಗರಿಯ ಆಕಾರದ ಕಿರಣಗಳಿಂದ ಶ್ರೀಕೃಷ್ಣನ ಪ್ರಕಟ ಅವಸ್ಥೆಯಲ್ಲಿನ ತೇಜೋಮಯ ಕಿರಣಗಳು ಪ್ರಕ್ಷೇಪಣೆಯಾಗುವುದರಿಂದ ಈ ಆಕಾರದಿಂದ ಬೃಹತ್ಪ್ರಮಾಣದಲ್ಲಿ ಆನಂದ ಲಹರಿಗಳು ಪ್ರಕ್ಷೇಪಣೆಯಾಗಿ ವಾತಾವರಣ ಆನಂದಮಯವಾಗುತ್ತದೆ.

ಇ. ನವಿಲುಗರಿಯ ಮಧ್ಯಭಾಗದಲ್ಲಿ ಶ್ರೀಕೃಷ್ಣತತ್ತ್ವ ಅಪ್ರಕಟ ಅವಸ್ಥೆಯಲ್ಲಿದೆ. ಆದ್ದರಿಂದ ಅದನ್ನು ನೋಡಿದಾಗ ಶಾಂತಿಯ ಅನುಭೂತಿ ಬರುತ್ತದೆ.

೪. ಕೃತಜ್ಞತೆ

ಶ್ರೀಗುರುಗಳ ಕೃಪೆಯಿಂದ ನವಿಲುಗರಿಯ ಆಕಾರದಲ್ಲಿ ಬಿದ್ದಿರುವ ಸೂರ್ಯಕಿರಣಗಳ ಪ್ರತಿಬಿಂಬದ ಹಿಂದಿನ ಅಧ್ಯಾತ್ಮಶಾಸ್ತ್ರ ತಿಳಿಯಿತು, ಅದಕ್ಕಾಗಿ ಶ್ರೀಕೃಷ್ಣನ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು.

– ಕು. ಮಧುರಾ ಭೋಸಲೆ (ಈಗಿನ ಆಧ್ಯಾತ್ಮಿಕ ಮಟ್ಟ ಶೇ. ೬೫, ಸೂಕ್ಷ್ಮದಿಂದ ಸಿಕ್ಕಿದ ಜ್ಞಾನ) ಸನಾತನ ಆಶ್ರಮ, ರಾಮನಾಥಿ ಗೋವಾ. (೭.೨.೨೦೨೨)

ಸಾಧಕನ ಪ್ರಕೃತಿಯನ್ನು ಅಂತರ್ಜ್ಞಾನದಿಂದ ಗುರುತಿಸಿ ಅದಕ್ಕನುಸಾರ ಅವನಿಗೆ ಮಾರ್ಗದರ್ಶನ ನೀಡುವ ಪರಾತ್ಪರ ಗುರು ಡಾ. ಆಠವಲೆ !

ಶ್ರೀ. ರಾಮ ಹೊನಪ

ಒಮ್ಮೆ ಸತ್ಸಂಗದಲ್ಲಿ ಒಬ್ಬ ಸಾಧಕನು ಪರಾತ್ಪರ ಗುರು ಡಾ. ಆಠವಲೆಯವರಿಗೆ ಒಂದು ಪ್ರಶ್ನೆ ಕೇಳಿದನು. ಅದಕ್ಕೆ ಪರಾತ್ಪರ ಗುರು ಡಾ. ಆಠವಲೆಯವರು ಉತ್ತರ ನೀಡುತ್ತಾ ಹೇಳಿದರು, ”ಈ ಉತ್ತರ ನಿನಗೆ ಮಾತ್ರ  ಸೀಮಿತವಾಗಿರಲಿ, ಈ ವಿಷಯ ಬೇರೆಯವರಿಗೆ ಹೇಳುವ ಅವಶ್ಯಕತೆಯಿಲ್ಲ.ಅದನ್ನು ಎಲ್ಲಿಯೂ ಹೇಳಬೇಡ.’’ ಆಗ ನನ್ನ ಮನಸ್ಸಿನಲ್ಲಿ ಪ್ರಶ್ನೆ ಉದ್ಭವಿಸಿತು, ‘ಪರಾತ್ಪರ ಗುರು ಡಾಕ್ಟರರು ಯಾವತ್ತೂ ಹೀಗೆ ಮಾತನಾಡುವುದಿಲ್ಲ. ಆ ಸಾಧಕನಿಗೆ ‘ಎಲ್ಲಿಯೂ ಹೇಳಬೇಡ’ ಎಂದು ಏಕೆ ಹೇಳಿರಬಹುದು ?’ ಸ್ವಲ್ಪ ಸಮಯದಲ್ಲಿ ನನ್ನ ಮನಸ್ಸಿನಲ್ಲಿ ತನ್ನಿಂತಾನೇ ಈ ಮುಂದಿನ ವಿಚಾರ ಬಂತು, ‘ಆ ಸಾಧಕನಿಗೆ ಯಾವುದೇ ವಿಷಯವನ್ನು ೭-೮ ಜನರಿಗೆ ಹೇಳುವ ಅಭ್ಯಾಸವಿದೆ. ಇದನ್ನು ಪರಾತ್ಪರ ಗುರುಗಳಿಗೆ ಸ್ಥೂಲದಲ್ಲಿ ಯಾರೂ ಹೇಳಿರಲಿಲ್ಲ. ಅವರು ಅಂತರ್ಜ್ಞಾನದಿಂದ ಅದನ್ನು ತಿಳಿದಿದ್ದರು; ಆದ್ದರಿಂದ ಅವರು ಆ ಸಾಧಕನಿಗೆ ಹಾಗೆ ಹೇಳಿದರು.’ ಇದರಿಂದ ‘ಪರಾತ್ಪರ ಗುರು ಡಾಕ್ಟರರ ಯಾವುದೇ ವಾಕ್ಯ ಅನಾವಶ್ಯಕ ಇರುವುದಿಲ್ಲ, ಅದರ ಹಿಂದೆ ಏನಾದರೂ ಕಾರಣ ಇರುತ್ತದೆ’, ಎಂಬುದು ತಿಳಿಯಿತು.’

– ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ ಗೋವಾ. (೬.೫.೨೦೨೩)

 

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.