ಹೆಲಿಕಾಪ್ಟರ್ ಅಪಘಾತದ ತನಿಖೆಗೆ ಇರಾನ್‌ಗೆ ಸಹಾಯ ಮಾಡಲು ಅಮೇರಿಕಾ ನಿರಾಕರಣೆ !
ವಾಷಿಂಗ್ಟನ್ (ಯುಎಸ್ಎ) – ಹೆಲಿಕಾಪ್ಟರ್ ಅಪಘಾತ ಪ್ರಕರಣದ ತನಿಖೆಗಾಗಿ ಇರಾನ್ ಸರ್ಕಾರವು ಅಮೇರಿಕಾದ ಸಹಾಯವನ್ನು ಕೇಳಿತ್ತು; ಆದರೆ ಸಹಾಯ ಮಾಡಲು ಅಮೇರಿಕ ನಿರಾಕರಿಸಿದೆ. ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಈ ಬಗ್ಗೆ ಮಾತನಾಡಿ, “ನಾನು ಸಂಪೂರ್ಣ ವಿವರಗಳನ್ನು ನೀಡುವುದಿಲ್ಲ; ಆದರೆ ಇರಾನ್ ಸರ್ಕಾರ ನಮ್ಮ ಸಹಾಯ ಕೇಳಿತ್ತು. ನಾವು ಸಹಾಯ ಮಾಡಲು ಸಾಧ್ಯವಿಲ್ಲ. ನ್ಯಾಯಾಧೀಶ ಹಾಗೂ ಇರಾನ್ ಅಧ್ಯಕ್ಷರಾಗಿ ರೈಸಿ ಅವರ ಕೈಗಳಿಗೆ ಜನರ ರಕ್ತ ಅಂಟಿತ್ತು ಎಂಬ ಸತ್ಯವನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ. ಇರಾನ್ ಬಗ್ಗೆ ನಮ್ಮ ಧೋರಣೆ ಬದಲಾಗುವುದಿಲ್ಲ. ಇರಾನ್ ಜನರ ಮಾನವ ಹಕ್ಕುಗಳನ್ನು ರಕ್ಷಿಸಲು ನಾವು ಅವರನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ ಎಂದು ಮಿಲ್ಲರ್ ಸ್ಪಷ್ಟಪಡಿಸಿದರು.
ಇರಾನ್ ಅಧ್ಯಕ್ಷ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ 1968 ರಲ್ಲಿ ಅಮೇರಿಕ ತಯಾರಿಸಿದ ‘ಬೆಲ್ 212’ ಹೆಲಿಕಾಪ್ಟರ್ ಆಗಿದೆ. ಇರಾನ್ ಈ ಹೆಲಿಕಾಪ್ಟರ್ ಅನ್ನು 2000 ರಲ್ಲಿ ಖರೀದಿಸಿತ್ತು. ಈ ಬಗ್ಗೆ ಮಿಲ್ಲರ್ ಮಾತನಾಡಿ, 45 ವರ್ಷ ಹಳೆಯ ಹೆಲಿಕಾಪ್ಟರ್ ಅನ್ನು ಕೆಟ್ಟ ಹವಾಮಾನವಿರುವಾಗ ಹಾರಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು. ಇದಕ್ಕೆ ಇರಾನ್ ಸರಕಾರವೇ ಹೊಣೆಯಾಗಿದೆ ಎಂದು ತಿಳಿಸಿದರು.