ಹೊಸ ಭಾರತವು ಇನ್ನೊಬ್ಬರ ಮನೆಗೆ ನುಗ್ಗಿ ಅವರನ್ನು ಕೊಲ್ಲುತ್ತಿದೆ ! – ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಮ

ಸಂಯುಕ್ತ ರಾಷ್ಟ್ರದಲ್ಲಿ ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಮ ಅವರ ಹೇಳಿಕೆ !

ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಮ

ನ್ಯೂಯಾರ್ಕ್ (ಅಮೇರಿಕಾ) – ಹೊಸ ಭಾರತವು ಅಪಾಯಕಾರಿಯಾಗಿದೆ, ಅದು ನಿಮ್ಮನ್ನು ಸುರಕ್ಷಿತವಾಗಿರುಸುವುದಿಲ್ಲ, ನಿಮ್ಮನ್ನು ಅಸುರಕ್ಷಿತಗೊಳಿಸುತ್ತದೆ. ಹೊಸ ಭಾರತವು ಇತರರ ಮನೆಗೆ ನುಗ್ಗಿ ನಿಮ್ಮನ್ನು ಕೊಲ್ಲುತ್ತಿದೆ ಎಂದು ಪಾಕಿಸ್ತಾನದ ವಿಶ್ವಸಂಸ್ಥೆಯ ರಾಯಭಾರಿ ಮುನೀರ್ ಅಕ್ರಮ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಮತ್ತು ಇತರ ದೇಶಗಳಲ್ಲಿ ಆಗುತ್ತಿರುವ ಭಾರತ ವಿರೋಧಿ ಭಯೋತ್ಪಾದಕರ ಹತ್ಯೆಗಳ ಬಗ್ಗೆ ಅಕ್ರಮ್ ಹೀಗೆ ಮಾತನಾಡಿದ್ದಾರೆ. ಅಕ್ರಮ್ ಅವರು ಅಮೇರಿಕೆಯ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿಯನ್ನು ಉಲ್ಲೇಖಿಸಿ ಈ ಹೇಳಿಕೆ ಕೊಟ್ಟಿದ್ದಾರೆ.

 ‘ಭಾರತವು ಪಾಕಿಸ್ತಾನದಲ್ಲಿ ಉದ್ದೇಶಿತ ಹತ್ಯೆ, (ಟಾರ್ಗೆಟೆಡ್ ಕಿಲ್ಲಿಂಗ್) ನಡೆಸಿದೆಯಂತೆ’

ಮುನೀರ್ ಅಕ್ರಮ್ ಮಾತನಾಡಿ, ಕೆನಡಾದ ಖಲಿಸ್ತಾನಿ ಹರದೀಪ ಸಿಂಗ ನಿಜ್ಜರ ಅವರ ಹತ್ಯೆಯ ಜೊತೆಗೆ, ಭಾರತ ಸರಕಾರವು ವಿದೇಶಗಳಲ್ಲಿ ವಾಸಿಸುವ ರಾಜಕೀಯ ವಿರೋಧಕರನ್ನು ಮುಗಿಸಲು ಪಾಕಿಸ್ತಾನದಲ್ಲಿ ಈ ರೀತಿಯ ಉದ್ದೇಶಿತ ಹತ್ಯೆ( ಟಾರ್ಗೆಟೆಡ್ ಕಿಲ್ಲಿಂಗ್’) ಘಟನೆಗಳನ್ನು ಆಯೋಜಿಸಿದೆ ಎಂದು ಆರೋಪಿಸಿದರು. ಪಾಕಿಸ್ತಾನದ ವಿದೇಶಾಂಗ ಸಚಿವರು, ಭದ್ರತಾ ಮಂಡಳಿಯ ಅಧ್ಯಕ್ಷರು ಮತ್ತು ಸಾಮಾನ್ಯ ಸಭೆಯ ಅಧ್ಯಕ್ಷರಿಗೆ ಪಾಕಿಸ್ತಾನದಲ್ಲಿ ನಡೆದ ಟಾರ್ಗೆಟೆಡ್ ಕಿಲ್ಲಿಂಗ್ ಘಟನೆಯ ವಿರೋಧಿಸಿ ಭಾರತದ ಈ ಅಭಿಯಾನದ ಬಗ್ಗೆ ಮಾಹಿತಿ ನೀಡಿದ್ದೇವೆ; ಆದರೆ ಇದು ಕೇವಲ ಪಾಕಿಸ್ತಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಕೆನಡಾದ ರಾಜಕೀಯ ವಿರೋಧಿಗಳ ಹತ್ಯೆಗಳೂ ಕೂಡ ಒಳಗೊಂಡಿದೆ. ಇತರ ದೇಶಗಳಲ್ಲಿಯೂ ಈ ಪ್ರಯತ್ನಗಳು ನಡೆದಿವೆ ಎಂದು ಆರೋಪಿಸಿದರು.

‘ಪಾಕಿಸ್ತಾನ ಬಳೆ ಹಾಕಿಕೊಂಡಿಲ್ಲ!’

ಅಕ್ರಮ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಉಲ್ಲೇಖಿಸಿ, ಮೋದಿಯವರು ಹೇಳಿದ್ದರು, ‘ಈ ಜನರು (ಭಾರತದ ವಿರೋಧ ಪಕ್ಷಗಳ ನಾಯಕರು) ಎಷ್ಟು ಹೆದರಿದ್ದಾರೆಂದರೆ, ಅವರಿಗೆ ಕನಸಿನಲ್ಲಿಯೂ ಸಹ ಪಾಕಿಸ್ತಾನದ ಪರಮಾಣು ಬಾಂಬುಗಳು ಕಾಣಿಸುತ್ತವೆ. ಇಂತಹವರು ದೇಶವನ್ನು ಮುನ್ನಡೆಸಬಹುದೇ?’ ಇದಕ್ಕೆ ಪ್ರತ್ಯುತ್ತರ ನೀಡುತ್ತಾ ಅಕ್ರಮ್, ‘ಪಾಕಿಸ್ತಾನವು ಬಳೆಗಳನ್ನು ತೊಟ್ಟುಕೊಂಡಿಲ್ಲ.ನಮ್ಮದು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ರಾಷ್ಟ್ರವಾಗಿದೆ’ ಎಂದರು. (ಕೆಲವು ದಿನಗಳ ಹಿಂದೆಯೇ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಕೂಡ ಇಂತಹ ಹೇಳಿಕೆ ನೀಡಿದ್ದರು. ಪಾಕಿಸ್ತಾನಿ ಭಾಷೆ ಮಾತನಾಡುವ ಇಂತಹ ನಾಯಕರನ್ನು ಪಾಕಿಸ್ತಾನಕ್ಕೇ ಕಳುಹಿಸಬೇಕು- ಸಂಪಾದಕರು)

ಬ್ರಿಟೀಷ್ ದಿನಪತ್ರಿಕೆ `ದಿ ಗಾರ್ಡಿಯನ್’ ಒಂದು ಸುದ್ದಿಯಲ್ಲಿ ಭಾರತ ಸರಕಾರವು ವಿದೇಶಗಳಲ್ಲಿರುವ ಭಯೋತ್ಪಾದಕರನ್ನು ಕೊಲ್ಲುವ ತನ್ನ ಕಾರ್ಯತಂತ್ರದ ಭಾಗವಾಗಿ ಪಾಕಿಸ್ತಾನದಲ್ಲಿ ಹತ್ಯೆಗಳನ್ನು ನಡೆಸುತ್ತಿದೆ ಎಂದು ದಾವೆ ಮಾಡಿತ್ತು.

ಸಂಪಾದಕೀಯ ನಿಲುವು

  • ಭಾರತವು ಇಂತಹ ಕೃತಿ ಮಾಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಯನ್ನು ಇದುವರೆಗೆ ಯಾವುದೇ ದೇಶವು ಕೊಟ್ಟಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಪಾಕಿಸ್ತಾನವು ಕಳೆದ 35 ವರ್ಷಗಳಿಂದ ಭಾರತದಲ್ಲಿ ಜಿಹಾದಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದೆ ಮತ್ತು ಅದರಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಭಾರತವು ಪ್ರಪಂಚಕ್ಕೆ ತಿಳಿಸಬೇಕು.
  • ಭಾರತವು ಹಾಗೆ ಮಾಡುವುದೇ ಇದ್ದರೆ, ಅದು ಸಣ್ಣ-ಪುಟ್ಟ ಭಯೋತ್ಪಾದಕರನ್ನು ಕೊಲ್ಲುವ ಬದಲು ದಾವೂದ್ ಇಬ್ರಾಹಿಂ, ಹಫೀಜೆ ಸಯೀದ, ಝಕೀವುರ್ ರೆಹಮಾನ್ ಲಖ್ವಿ ಮುಂತಾದ ಭಯೋತ್ಪಾದಕರ ನಾಯಕರನ್ನೇ ಕೊಲ್ಲುತ್ತಿರಲಿಲ್ಲವೇ ?