Love Jihad Case: ಮುಸ್ಲಿಂ ಯುವಕ ಧರ್ಮ ಮರೆಮಾಚಿ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ !

  • ಮುಜಾಫ್ಫರ್ ನಗರದಲ್ಲಿನ (ಉತ್ತರ ಪ್ರದೇಶ) ಘಟನೆ

  • ಆಕೆಯನ್ನು ಒಂದು ವರ್ಷ ಮನೆಯಲ್ಲಿಟ್ಟು ಅತ್ಯಾಚಾರಗೈದು ಮತಾಂತರಕ್ಕೆ ಒತ್ತಡ ಹೇರಿದ !

ಮುಜಫ್ಫರ್‌ನಗರ (ಉತ್ತರ ಪ್ರದೇಶ) – ಇಲ್ಲಿ ಕಾಮಿಲ್ ಎಂಬ ಮುಸ್ಲಿಂ ಹುಡುಗ ತನ್ನ ಹೆಸರು ಮತ್ತು ಧರ್ಮವನ್ನು ಮರೆಮಾಚಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಹಿಂದೂ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದನು. ಬಳಿಕ ಯುವತಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದ. ಆಕೆಗೆ ಮನೆಯಲ್ಲಿದ್ದ ಆಭರಣಗಳು ಮತ್ತು ಹಣದೊಂದಿಗೆ ಮನೆಗೆ ಬರುವಂತೆ ಹೇಳಿದ್ದಾನೆ. ಈ ಯುವತಿ ಒಂದು ವರ್ಷ ಅವನ ಮನೆಯಲ್ಲಿಯೇ ಇದ್ದಳು. ಈ ವೇಳೆ ಕಾಮಿಲ್ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಇಸ್ಲಾಂಗೆ ಮತಾಂತರಗೊಳ್ಳುವಂತೆ, ನಮಾಜ್ ಮಾಡುವಂತೆ ಮತ್ತು ಗೋಮಾಂಸ ತಿನ್ನುವಂತೆ ಕಾಮಿಲ್ ಮತ್ತು ಆತನ ಕುಟುಂಬ ತನ್ನ ಮೇಲೆ ಒತ್ತಡ ಹೇರಲಾಯಿತು ಎಂದು ಯುವತಿ ಆರೋಪಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಈ ಯುವತಿ ಹರಿಯಾಣದ ಜಿಂದ್ ಜಿಲ್ಲೆಯ ನಿವಾಸಿಯಾಗಿದ್ದಾಳೆ.

ಕಾಮಿಲ್ ಯುವತಿಗೆ ಆಕೆಯ ಅಶ್ಲೀಲ ಚಿತ್ರಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವಂತೆ ಬೆದರಿಕೆ ಹಾಕಿದ್ದನು ಹಾಗೂ ಆಕೆಯ ಸಹೋದರನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು. ಈ ಯುವತಿಯು, ವರ್ಷದಲ್ಲಿ ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಅವನ ಮನೆಯವರು ಹೊಡೆದು ಶೋಷಿಸಿದರು. ಅವರು, ‘ಮುಸ್ಲಿಮನಾಗು, ಬುರ್ಖಾ ಧರಿಸು, ನಮಾಜ್ ಮಾಡು, ಉರ್ದು ಕಲಿ’ ಎಂದು ಹೇಳುತ್ತಿದ್ದರು. ನನಗೆ ಗೋಮಾಂಸ ತಿನ್ನಿಸಲು ಪ್ರಯತ್ನಿಸಿದರು. ಕಾಮಿಲ್ ಕೂಡ ನನಗೆ 2 ಬಾರಿ ಗರ್ಭಪಾತ ಮಾಡಿಸಿದ. ನಾನು ಅವರ ಮನೆಗೆ ಬಂದಾಗ, ಅವನು ಮುಸ್ಲಿಂ ಮತ್ತು ಅವನ ಹೆಸರು ಕಾಮಿಲ್ ಎಂದು ನನಗೆ ತಿಳಿಯಿತು. ಅವರ ಒಬ್ಬ ಸಹೋದರ ದುಬೈನಲ್ಲಿ ಕೆಲಸ ಮಾಡುತ್ತಿದ್ದರೆ, ಮತ್ತೊಬ್ಬ ಕೇರಳದಲ್ಲಿ ಕೆಲಸ ಮಾಡುತ್ತಿದ್ದಾನೆ. ಆತನನ್ನು ಶಿಕ್ಷಿಸಿ ಜೈಲಿಗೆ ಕಳುಹಿಸಬೇಕೆಂದು ನಾನು ಬಯಸುತ್ತೇನೆ. ಅದು ಎಂದಿಗೂ ಹೊರಬರಬಾರದು. ಅವನು ಹೊರಗೆ ಬಂದರೆ ನನ್ನಂತಹ ಎಷ್ಟು ಹುಡುಗಿಯರನ್ನು ಬಲೆಗೆ ಬೀಳಿಸಿ ಜೀವನ ಹಾಳು ಮಾಡುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದಳು.

ಆರೋಪಿಗಳ ಕಪಿಮುಷ್ಠಿಯಿಂದ ಬಿಡುಗಡೆಗೊಂಡ ಯುವತಿಯು ಹಿಂದೂ ಸಂಘಟನೆಗಳನ್ನು ಸಂಪರ್ಕಿಸಿ ಪ್ರಕರಣದ ಸಂಪೂರ್ಣ ಮಾಹಿತಿ ನೀಡಿದ್ದಾಳೆ. ಇದಾದ ನಂತರ ಹಿಂದುತ್ವನಿಷ್ಠ ಕಾರ್ಯಕರ್ತರು ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ. ಆ ಬಳಿಕ ಪ್ರಕರಣ ದಾಖಲಿಸಲಾಯಿತು.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವಿರೋಧಿ ಕಾಯ್ದೆ ಇದ್ದರೂ ಈ ಸ್ಥಿತಿ ಇದೆ. ಆದ್ದರಿಂದ ಕೇವಲ ಕಾನೂನು ರೂಪಿಸಿದರೆ ಇಂತಹ ಘಟನೆ ನಿಲ್ಲುವುದಿಲ್ಲ, ಬದಲಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನೂ ತೆಗೆದುಕೊಳ್ಳಬೇಕು !