Swati Maliwal’s Assault Case: ಕೇಜ್ರಿವಾಲ್ ಇವರ ನಿವಾಸದಲ್ಲಿ ಆಪ್ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ; ದೂರು ದಾಖಲು

ನವ ದೆಹಲಿ – ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ  ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ದೆಹಲಿ ಪೊಲೀಸರಿಗೆ ದೂರು ನೀಡಿದ ನಂತರ ಅವರ ಹೇಳಿಕೆಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 164 ರ ಅಡಿಯಲ್ಲಿ ದಾಖಲಿದ ನಂತರ ಅವರನ್ನು ಇಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಲಾಯಿತು. ಪೊಲೀಸರು ಅಪರಾಧಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರ ಸಹಾಯಕ ವಿಭವ್ ಕುಮಾರ್‌ ಅವರನ್ನು ಆರೋಪಿ ಮಾಡಿದ್ದಾರೆ. ಶೀಘ್ರದಲ್ಲೇ ಅವರನ್ನು ಬಂಧಿಸುವ ಸಾಧ್ಯತೆ ಇದೆ.

ಪೊಲೀಸರು ಹಲ್ಲೆಯ ತನಿಖೆಗಾಗಿ ಮುಖ್ಯಮಂತ್ರಿ ನಿವಾಸದಲ್ಲಿರುವ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು ಅಲ್ಲಿನ ಸಿಬ್ಬಂದಿ ಮತ್ತು ಪೊಲೀಸರ ವಿಚಾರಣೆ ಮಾಡುತ್ತಿದ್ದಾರೆ.

ಕೇಜ್ರಿವಾಲ್ ಸ್ಮಶಾನ ಮೌನ !

ಉತ್ತರ ಪ್ರದೇಶದ ರಾಜಧಾನಿ ಲಕ್ಷ್ಮಣಪುರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ, ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಪತ್ರಕರ್ತರು ಮಲಿವಾಲ್ ಅವರನ್ನು ಥಳಿಸಿದ ಪ್ರಕರಣದಲ್ಲಿ ಪ್ರಶ್ನೆಯನ್ನು ಕೇಳಿದಾಗ, ಕೇಜ್ರಿವಾಲ್ ಉತ್ತರಿಸದೆ ಮೌನವಾಗಿರಲು ನಿರ್ಧರಿಸಿದರು. ಈ ವೇಳೆ ಉಪಸ್ಥಿತರಿದ್ದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಈ ಪ್ರಶ್ನೆಗಿಂತ ಮಹತ್ವದ ಮತ್ತು ದೊಡ್ಡ ಸಮಸ್ಯೆಗಳಿವೆ ಎಂದು ಉತ್ತರಿಸಿದರು.

ಸಂಪಾದಕೀಯ ನಿಲುವು

ಮುಖ್ಯಮಂತ್ರಿಯ ನಿವಾಸದಲ್ಲಿಯೇ ತಮ್ಮದೇ ಪಕ್ಷದ ಮಹಿಳಾ ಸಂಸದೆಯನ್ನು ಥಳಿಸಿರುವುದು ಆಮ್ ಆದ್ಮಿ ಪಕ್ಷಕ್ಕೆ ಲಜ್ಯಾಸ್ಪದ ! ಪೊಲೀಸರು ಸಮಗ್ರ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !