ಮತ್ತೆ ವಿಷಕಾರಿದ ಪರಾರಿಯಾಗಿದ್ದ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯಿಕ !
ನವ ದೆಹಲಿ – ಪರಾರಿಯಾಗಿದ್ದ ಇಸ್ಲಾಮಿಕ್ ಧರ್ಮಪ್ರಚಾರಕ ಜಾಕಿರ್ ನಾಯಿಕ್ ಮತ್ತೊಮ್ಮೆ ವಿಷ ಕಾರಿದ್ದಾನೆ. ಆತ, ದೇವಸ್ಥಾನ ಅಥವಾ ಚರ್ಚ್‌ಗೆ ಹೋಗುವುದಕ್ಕಿಂತ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕಾರ್ಖಾನೆಗೆ ಹೋಗುವುದು ಉತ್ತಮ ಎಂದು ಹೇಳಿದ್ದಾನೆ. ಅಂತಹ ಧಾರ್ಮಿಕ ಸ್ಥಳಗಳನ್ನು ನಿರ್ಮಿಸುವುದು ದೊಡ್ಡ ಪಾಪವಾಗಿದ್ದೂ ಅವುಗಳ ಉದ್ಘಾಟನೆಗೆ ಹಾಜರಾಗುವುದು ಸಹ ತಪ್ಪಾಗಿದೆ. ಕೆಲವು ದಿನಗಳ ಹಿಂದೆ ಮೊಹಮ್ಮದ್ ಝೀಶನ್ ಎಂಬ ಯುವಕ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ದೇವಾಲಯದ ಕಟ್ಟಡ ಸ್ಥಾಪನೆಯಲ್ಲಿ ಕೆಲಸ ಪಡೆಯುವ ಬಗ್ಗೆ ಜಾಕಿರ್ ನಾಯಿಕ್ ಗೆ ಪ್ರಶ್ನೆ ಕೇಳಿದ್ದನು. ಅದಕ್ಕೆ ಉತ್ತರಿಸಿದ ಜಾಕಿರ್ ನಾಯಿಕ್ ಮೇಲಿನ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ.
ಝಾಕಿರ್ ನಾಯಿಕ್ ಮಾತು ಮುಂದುವರೆಸುತ್ತಾ, ”ಮಂದಿರ ಕಟ್ಟುವ ಕೆಲಸ ಮಾಡುವುದು ಮಹಾಪಾಪವಾಗಿದೆ. ನಾವು ಇಸ್ಲಾಂ ಧರ್ಮದ ಹೊರತಾಗಿ ಯಾವುದೇ ಧಾರ್ಮಿಕ ಸ್ಥಳಕ್ಕಾಗಿ ಕೆಲಸ ಮಾಡಲು ಸಾಧ್ಯವಿಲ್ಲ, ಅದನ್ನು ‘ಹರಾಮ್’ (ನಿಷೇಧಿತ) ಎಂದು ಪರಿಗಣಿಸಲಾಗುವುದು ಎಂದು ಹೇಳಿದ.
ಜಾಕಿರ್ ನಾಯಿಕ್ ಯಾರು ?
ಜಾಕಿರ್ ನಾಯಿಕ್ ಮುಂಬಯಿನಲ್ಲಿ ಜನಿಸಿದ ವಿವಾದಾತ್ಮಕ ಇಸ್ಲಾಮಿಕ್ ಬೋಧಕನಾಗಿದ್ದಾನೆ. ಪ್ರಸ್ತುತ ಆತ ಮಲೇಷ್ಯಾದಲ್ಲಿ ವಾಸಿಸುತ್ತಿದ್ದಾನೆ. ಈತ ಭಾರತದ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. 2016 ರಲ್ಲಿ, ಅವನ ‘ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್’ಅನ್ನು ಭಾರತದಲ್ಲಿ ನಿಷೇಧಿಸಲಾಯಿತು. ಅಷ್ಟೇ ಅಲ್ಲ, ರಾಷ್ಟ್ರೀಯ ತನಿಖಾ ದಳವು ಜಾಕಿರ್ ನಾಯಿಕ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಪ್ರಕರಣವನ್ನೂ ದಾಖಲಿಸಿದೆ. ಆತನ ಮೇಲೆ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಆತನ ವಿರುದ್ಧ ಪ್ರಕರಣ ದಾಖಲಿಸಿದೆ. ಈ ಸಂಬಂಧ ಅವರು ಭಾರತದಿಂದ ಪರಾರಿಯಾಗಿದ್ದಾನೆ.
ಸಂಪಾದಕೀಯ ನಿಲುವುಇಂತಹ ದ್ವೇಷಪೂರಿತ ಹೇಳಿಕೆಗಳನ್ನು ಮುಸ್ಲಿಮರು ಎಂದಿಗೂ ವಿರೋಧಿಸುವುದಿಲ್ಲ ಎಂಬುದನ್ನು ಗಮನಿಸಿ ! |