ಅಮೆರಿಕಾದಲ್ಲಿನ ಹಿಂದೂಗಳ ನೋವನ್ನು ಮಂಡಿಸುವ ಪೂರ್ಣಿಮ ನಾಥ ಇವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ !

ವಿಸ್ಕಾನಸಿನ್ ರಾಜ್ಯದಲ್ಲಿನ ಮಿಲವಾಕಿಯ ಅಭ್ಯರ್ಥಿ !

ಮಿಲವಾಕಿ (ಅಮೇರಿಕಾ) – ಇಲ್ಲಿಯ ಭಾರತೀಯ ಮೂಲದ ಪೂರ್ಣಿಮಾ ನಾಥ ಇವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಎಂದು ಅಮೆರಿಕಾ ಸಂಸತ್ತಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಬರುವ ಆಗಸ್ಟ್ ನಲ್ಲಿ ಅಮೆರಿಕದಲ್ಲಿ ‘ಪ್ರೈಮರಿ’ (ಮೊದಲ ಹಂತದಲ್ಲಿನ ಪಕ್ಷದ ಆಂತರಿಕ ಚುನಾವಣೆ) ನಡೆಯುತ್ತಿದ್ದು ನವಂಬರ್ ನಲ್ಲಿ ರಾಷ್ಟ್ರಾಧ್ಯಕ್ಷ ಸ್ಥಾನದ ಮುಖ್ಯ ಚುನಾವಣೆ ನಡೆಯುವುದು. ಇದರ ಅಂತರ್ಗತ ಮಿಸ್ಕಾನಸೀನ್ ರಾಜ್ಯದ ನಾಲ್ಕನೆಯ ಮತದಾರ ಕೇಂದ್ರದಲ್ಲಿ ಎಂದರೆ ಮಿಲವಾಕಿ ನಗರದಿಂದ ಪೂರ್ಣಿಮ ನಾಥ ಇವರು ಸಂಸದ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿದ್ದಾರೆ. ಅವರು ತಮ್ಮನ್ನು ‘ಅನ್ಅಪೋಲಜಿಟೀಕ್ ಹಿಂದೂ’ (ಹಿಂದೂ ಎಂದು ಹೇಳಿಕೊಳ್ಳುವಲ್ಲಿ ಯಾವುದೇ ಸಂಕೋಚ ಇಲ್ಲದಿರುವವರು) ಎಂದು ತಿಳಿದಿದ್ದಾರೆ, ಎಂದು ಅವರು ‘ಸನಾತನ ಪ್ರಭಾತ’ದ ಪ್ರತಿನಿಧಿಗಳ ಜೊತೆಗೆ ದೂರವಾಣಿಯ ಮೂಲಕ ಮಾತನಾಡುವಾಗ ಹೇಳಿದರು. ಅಮೇರಿಕಾದಲ್ಲಿನ ಹಿಂದುಗಳ ವ್ಯಥೆ ಜಗತ್ತಿನೆದುರು ಮಂಡಿಸುವುದಕ್ಕಾಗಿ ಅವರು ಹೋರಾಡುತ್ತಿದ್ದಾರೆ ಹಾಗೂ ಇಲ್ಲಿಯ ಹಿಂದೂ ಸಮಾಜದ ಹಿತಕ್ಕಾಗಿ ಅವರು ಕಾರ್ಯ ಮಾಡುವರು ಎಂದು ಅವರು ಈ ಸಮಯದಲ್ಲಿ ಹೇಳಿದರು.

ನಾಥ ಇವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಗಿರುವುದಾಗಿ ಅವರು ಪ್ರಸಿದ್ಧಿ ಪತ್ರಕದ ಮೂಲಕ ಘೋಷಿಸಿದ್ದಾರೆ ಎಂದು ಹೇಳಿದರು. ಅದರಲ್ಲಿ ಅವರು,

೧. ನಾಥ ಇವರು ರಾಷ್ಟ್ರೀಯ ಭದ್ರತೆ, ಭಯೋತ್ಪಾದನೆ, ಗಡಿರಕ್ಷಣೆ ಮುಂತಾದ ಸೂತ್ರಗಳ ಪ್ರಖರ ಬೆಂಬಲಿಗರಾಗಿದ್ದಾರೆ.

೨. ಅಧಿಕೃತ ನಿರಾಶ್ರಿತ ವ್ಯಕ್ತಿ ಆಗಿರುವುದರಿಂದ ಭೂ ರಾಜಕೀಯ ವಿಷಯದಲ್ಲಿ ಅವರಲ್ಲಿ ಸ್ಪಷ್ಟತೆ ಇದೆ. ಈ ವಿಷಯ ಸ್ಥಳೀಯರ ಜೀವನ, ಶಿಕ್ಷಣ ಮತ್ತು ಒಟ್ಟು ಸೌಲಭ್ಯ ಇದಕ್ಕಾಗಿ ಅವಶ್ಯಕ ಕಾರ್ಯ ನಿರ್ವಹಿಸುತ್ತಾರೆ ಎಂದು ಅವರು ನಂಬಿದ್ದಾರೆ.

೩. ಮೂಲ ಸಮಸ್ಯೆಯ ಕಡೆಗೆ ನಿರ್ಲಕ್ಷ ಮಾಡಿ ರಾಜಕೀಯ ದೃಷ್ಟಿಯಿಂದ ಅನುಕೂಲಕರ ನಿಲುವು ಮಂಡಿಸುವುದು (‘ಪೊಲಿಟಿಕಲ್ ಕರೆಕ್ಟ್’ ಇರುವುದು) ಇದು ಸಮಾಜದಲ್ಲಿನ ಪದ್ಧತಿ ಆಗಿದೆ. ಇದರಿಂದ ಸಮಾಜಕ್ಕೆ ತೊಂದರೆ ಆಗುತ್ತಿದೆ. ಬಿರುಕು ಮೂಡಿಸುವ ರಾಜಕಾರಣ ಇದು ಸಾಮಾನ್ಯ ನಾಗರಿಕರು ಮತ್ತು ಸಮಾಜಕ್ಕೆ ಘಾತಕವಾಗಿದೆ. ಇಲ್ಲಿಯ ಹಿಂದೂ ಸಮಾಜದ ವಿಕಾಸಕ್ಕಾಗಿ ಅವರು ಕಟಿಬದ್ಧರಾಗಿದ್ದಾರೆ.

ಅಮೇರಿಕಿ ರಾಜಕಾರಣದಲ್ಲಿ ಹಿಂದುಗಳ ಬಗ್ಗೆ ಯಾರಿಗೆ ಯಾವುದೆ ಅಕ್ಕರೆ ಇಲ್ಲ ! – ಪೂರ್ಣಿಮ ನಾಥ

‘ಸನಾತನ ಪ್ರಭಾತ’ದ ಜೊತೆಗೆ ಚರ್ಚಿಸುವಾಗ ನಾಥ ಇವರು, ನಾನು ಕಟ್ಟರ ಹಿಂದೂ ಎಂದೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ನನಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕಾದಲ್ಲಿನ ಹಿಂದುಗಳ ಸಮಸ್ಯೆಗಳನ್ನು ಮಂಡಿಸಬೇಕಾಗಿದೆ. ಇಲ್ಲಿ ಕೇವಲ ಬಿಳಿಯರು ಮತ್ತು ಕೃಷ್ಣ ವರ್ಣಿಯರ ಅಧಿಕಾರದ ಬಗ್ಗೆಯೇ ಮಾತನಾಡುತ್ತಾರೆ; ಆದರೆ ಬ್ರಾವೌನ್ ಜನರ ಬಗ್ಗೆ (ಹಿಂದುಗಳ ಬಗ್ಗೆ) ಯಾರಿಗೆ ಯಾವ ಅಕ್ಕರೆ ಇಲ್ಲ. ಹಿಂದೂ ಇಲ್ಲಿ ಬೆರಳೆಣಿಕೆಯ ಅಲ್ಪಸಂಖ್ಯಾತರೆಂದು ಬದುಕುತ್ತಿದ್ದಾರೆ.

ಪೂರ್ಣಿಮಾ ನಾಥ ಇವರ ಕುರಿತಾದ ಮಾಹಿತಿ !

ಪೂರ್ಣಿಮ ನಾಥ ಮೂಲತಃ ಇಂಜಿನಿಯರ್ ಆಗಿದ್ದು ಅವರು ಅಮೆರಿಕಾದ ಮೂರನೇಯ ಸ್ಥಾನದಲ್ಲಿರುವ ‘ನಾರ್ಥ ವೆಸ್ಟರ್ನ್ ಕಾಲೇಜ್’ದಿಂದ ‘ಕೆಲಾಗ್ ಸ್ಕೂಲ್ ಆಫ್ ಬಿಜಿನೆಸ್‌’ನಲ್ಲಿ ‘ಎಂ.ಬಿ.ಎ.’ ಶಿಕ್ಷಣ ಪಡೆದಿದ್ದಾರೆ. ಅವರು ಅನೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ವ್ಯವಸ್ಥೆಪಕಿಯ ಸಲಹೆಗಾರರೆಂದು ಕಾರ್ಯನಿರ್ವಹಿಸಿದ್ದಾರೆ. ಈಗ ಅವರು ‘ಪಿಂಡಲ್ ಇಂಡಿಯಾ’ ಹೆಸರಿನ ಪ್ರೈವೇಟ್ ಸಂಸ್ಥೆ ನಡೆಸುತ್ತಿದ್ದಾರೆ ಹಾಗೂ ‘ಇಂಡಿಯಾ ಫಸ್ಟ್ ವೀಕ್ಸಾಸ್ನಿನ್’ ಈ ಸಾಂಸ್ಕೃತಿಕ ಕಾರ್ಯಕ್ರಮದ ನಿರ್ಮಾಪಕರಾಗಿದ್ದಾರೆ. ಅವರನ್ನು ವಿವಿಧ ಭಾರತೀಯ ವಾರ್ತಾವಾಹಿನಿಯ ಚರ್ಚಾಕೂಟಗಳಲ್ಲಿ ‘ಅಂತರಾಷ್ಟ್ರೀಯ ರಾಜಕಾರಣ’ ಮತ್ತು ‘ಭೂ ರಾಜಕಾರಣ’ ಇದರ ಸಮೀಕ್ಷಕರೆಂದು ಆಮಂತ್ರಿಸಲಾಗುತ್ತದೆ. ಅವರು ಬಂಗಾಲದ ಇಪ್ಪತ್ತನೆಯ ಶತಮಾನದಲ್ಲಿನ ಪ್ರಸಿದ್ಧ ಸಂತ ‘ಶ್ರೀ ಶ್ರೀ ಕೈವಲ್ಯ ರಾಮ ಠಾಕೂರ್’ ಇವರನ್ನು ಗುರು ಎಂದು ನಂಬಿದ್ದಾರೆ.

ಸಂಪಾದಕೀಯ ನಿಲುವು

ಹಿಂದುಗಳ ಹಿತಕ್ಕಾಗಿ ಏಳು ಸಮುದ್ರದ ಆಚೆ ಕಾರ್ಯನಿರ್ವಹಿಸುವ ಪೂರ್ಣಿಮಾ ನಾಥ ಇವರಿಗೆ ಅಭಿನಂದನೆಗಳು ! ಇಂತಹ ಹಿಂದುಗಳೇ ಹಿಂದೂ ಧರ್ಮದ ನಿಜವಾದ ಶಕ್ತಿ ಆಗಿರುತ್ತಾರೆ !