Maulvi Killed by Students: ಮದರಸಾದಲ್ಲಿ ಲೈಂಗಿಕ ಶೋಷಣೆ ಮಾಡುತ್ತಿದ್ದ ಮೌಲ್ವಿಯ ಹತ್ಯೆ ಮಾಡಿದ ಅಪ್ರಾಪ್ತ ಮುಸಲ್ಮಾನ ಮಕ್ಕಳು

ಅಜಮೇರ್ (ರಾಜಸ್ಥಾನ) – ಅಜಮೇರ್ ಜಿಲ್ಲೆಯ ರಾಮಗಂಜ್ ಪ್ರದೇಶದಲ್ಲಿ ಒಂದು ಮಸೀದಿಯ ಮೊಹಮ್ಮದ್ ತಾಹಿರ್ (30 ವರ್ಷ) ಹೆಸರಿನ ಮೌಲ್ವಿಯ ಹತ್ಯೆಯ ಪ್ರಕರಣಕ್ಕೆ  ಸಂಬಂಧಿಸಿದಂತೆ ಆರು ಅಪ್ರಾಪ್ತ ಮಕ್ಕಳನ್ನು ಬಂಧಿಸಲಾಗಿದೆ. ಮೌಲ್ವಿಯು ಅವರಿಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದರಿಂದ ಈ ಮಕ್ಕಳು ಅವನ ಹತ್ಯೆ ಮಾಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಮಕ್ಕಳು ತಾಹೀರನು ತೆಗೆದುಕೊಳ್ಳುತ್ತಿದ್ದ ಮೊಸರಿನಲ್ಲಿ ನಿದ್ರೆ ಮಾತ್ರೆಯನ್ನು ಸೇರಿಸಿದರು. ಇದರಿಂದ ಅವನು ಗಾಢ ನಿದ್ರೆ ಹೋದ ಬಳಿಕ ಮಕ್ಕಳು ಅವನ ಮೇಲೆ ಹಲ್ಲೆ ಮಾಡಿದರು ಮತ್ತು ಕುತ್ತಿಗೆಯನ್ನು ಹಿಸುಕಿ ಅವನ ಹತ್ಯೆ ಮಾಡಿದರು. ಈ ಘಟನೆ ಎಪ್ರಿಲ್ 26 ರಾತ್ರಿ ನಡೆದಿದೆ.

ಪೊಲೀಸರು ಮಾತನಾಡಿ, ಅಪ್ರಾಪ್ತ ಮಕ್ಕಳು ತಾಹೀರನ ಹತ್ಯೆ ಮಾಡಿದ ಬಳಿಕ ನಮಗೆ ಮಾಹಿತಿ ನೀಡುವಾಗ, ಮಾಸ್ಕ ಧರಿಸಿದ್ದ 3 ಯುವಕರು ಮಸೀದಿಯನ್ನು ಪ್ರವೇಶಿಸಿ ಧರ್ಮಗುರುಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಮಗೆ ತಿಳಿಸಿದರು. ನಾವು ನೂರಾರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಮತ್ತು ಉತ್ತರ ಪ್ರದೇಶದ ತಾಹಿರ್‌ನ 8 ವರ್ಷಗಳ ಹಿನ್ನೆಲೆಯನ್ನು ಪರಿಶೀಲಿಸಿದ ಬಳಿಕವೂ ಈ ಪ್ರಕರಣದಲ್ಲಿ  ಏನೂ ಪತ್ತೆಯಾಗುತ್ತಿರಲಿಲ್ಲ. ತದನಂತರ ನಾವು  ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೆವು.  ಆನಂತರ ಮಕ್ಕಳು ಎಲ್ಲಾ ಘಟನೆಗಳನ್ನು ಬಹಿರಂಗಪಡಿಸಿದರು. ತಾಹಿರನು ಮದರಸಾದ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದನು. ಹಾಗೆಯೇ ಅವನು ಈ ವಿದ್ಯಾರ್ಥಿಗಳ ಶೋಷಣೆ ಮಾಡುತ್ತಿದ್ದನು. ಒಬ್ಬ ವಿದ್ಯಾರ್ಥಿಯು ಈ ಪ್ರಕರಣವನ್ನು ಬಹಿರಂಗಪಡಿಸುವ ಬೆದರಿಕೆಯನ್ನು ಹಾಕಿದಾಗ, ತಾಹಿರನು ಅವನಿಗೆ ಹಣದ ಆಮಿಷವನ್ನು ತೋರಿಸಿದನು.  ಮುಂದೆ, ತಾಹಿರನ ನಿರಂತರ ಪೀಡನೆಯಿಂದ ಬೇಸತ್ತು ವಿದ್ಯಾರ್ಥಿಗಳು ಅವನ ಹತ್ಯೆ ಮಾಡಲು ನಿರ್ಧರಿಸಿದರು. ಮೊದಲು ಆತನಿಗೆ ನಿದ್ರೆ ಮಾತ್ರೆ ನೀಡಿದರು. ಬಳಿಕ ಕೋಲಿನಿಂದ ಥಳಿಸಿದರು ಮತ್ತು ದಾರದಿಂದ ಕತ್ತು ಹಿಸುಕಿ ಹತ್ಯೆ ಮಾಡಿದರು.

ಸಂಪಾದಕೀಯ ನಿಲುವು

  • ಬಹುತೇಕ ಮದರಸಾಗಳ ಇತಿಹಾಸವನ್ನು ನೋಡಿದಾಗ ಪ್ರಮುಖವಾಗಿ ಎರಡು ಸಂಗತಿಗಳು ಅಲ್ಲಿ ನಡೆಯುತ್ತಿರುವುದು ಕಂಡುಬರುತ್ತದೆ.  ಒಂದು ಅಲ್ಲಿ ಮಕ್ಕಳ ಮೇಲೆ ಲೈಂಗಿಕ ಶೋಷಣೆ ನಡೆಯುತ್ತದೆ ಮತ್ತು ಇನ್ನೊಂದು ಅಲ್ಲಿ ಜಿಹಾದಿ ಭಯೋತ್ಪಾದಕರು ನಿರ್ಮಾಣವಾಗುತ್ತಿದ್ದಾರೆ. ಆದುದರಿಂದ ದೇಶದಲ್ಲಿರುವ ಎಲ್ಲಾ ಮದರಸಾಗಳನ್ನು ಮುಚ್ಚುವುದೇ ಇದಕ್ಕೆ ಸೂಕ್ತ ಪರಿಹಾರವಾಗಿದೆ.

  • ಮದರಸಾದಲ್ಲಿನ ಇಂತಹ ಘಟನೆಗಳ ಬಗ್ಗೆ ಮುಸಲ್ಮಾನರಾಗಲೀ, ಕಪಟ ನಿಧರ್ಮಿವಾದಿಗಳಾಗಲೀ ಏನೂ ಮಾತನಾಡುವುದಿಲ್ಲ.