ಹಿಂದಿನ ಕಾಲದ ರಾಜರು ಇಷ್ಟು ದೊಡ್ಡ ದೇವಸ್ಥಾನಗಳನ್ನು ಕಟ್ಟುವುದರ ಕಾರಣ !

(ಸದ್ಗುರು) ಡಾ. ಮುಕುಲ ಗಾಡಗೀಳ

ಪ್ರಾಚೀನ ದೇವಾಲಯಗಳಲ್ಲಿ ಅವುಗಳ ನಾಲ್ಕೂ ದಿಕ್ಕುಗಳ ಪ್ರವೇಶದ್ವಾರಗಳನ್ನು ಜೋಡಿಸುವ ಕಲ್ಲುಗಳ ದೊಡ್ಡ ದೊಡ್ಡ ರಕ್ಷಣಾ ಗೋಡೆಗಳನ್ನು ಕಟ್ಟಲಾಗಿದೆ. ಆ ಕಾಲದ ಚೋಳ ಮತ್ತು ಪಾಂಡ್ಯಾ ಈ ರಾಜಮನೆತನದವರು ಈ ಭವ್ಯ ದೇವಸ್ಥಾನಗಳನ್ನು ಕಟ್ಟಿದ್ದಾರೆ. ಕೆಲವು ದೇವಸ್ಥಾನಗಳ ಪರಿಸರ ೧೦ ರಿಂದ ೨೦ ಎಕ್ರೆ, ಕೆಲವು ದೇವಸ್ಥಾನಗಳ ಪರಿಸರ ೧೦೦ ಎಕ್ರೆಗಳಷ್ಟು ದೊಡ್ಡದಿದೆ. ದೇವಸ್ಥಾನಗಳಲ್ಲಿ ನಿವಾಸ, ನೀರಿನ ಎಲ್ಲ ವ್ಯವಸ್ಥೆ ಇದೆ. ದೇವಸ್ಥಾನಗಳಿಗೆ ರಕ್ಷಣಾ ಗೋಡೆ ಇರುವುದರ ಕಾರಣವೆಂದರೆ, ‘ಒಂದು ವೇಳೆ ಶತ್ರುಗಳಿಂದ ದಾಳಿಯಾದರೆ, ಆಗ ಊರಿನ ಜನರನ್ನು ದೇವಸ್ಥಾನದ ಒಳಗೆ ಕರೆದು ಅವರ ರಕ್ಷಣೆಯನ್ನು ಮಾಡಬಹುದು’, ಎನ್ನುವ ವಿಚಾರ ಆ ಕಾಲದ ರಾಜರಿಗಿತ್ತು !’ ಆ ಕಾಲದ ರಾಜರಿಗೆ ತಮ್ಮ ಪ್ರಜೆಗಳ ಬಗ್ಗೆ ಎಷ್ಟು ಕಾಳಜಿ ಇರುತ್ತಿತ್ತು ನೋಡಿ !’

– ಸದ್ಗುರು (ಡಾ.) ಮುಕುಲ ಗಾಡಗೀಳ, ಪಿ.ಎಚ್‌.ಡಿ. ಸನಾತನ ಆಶ್ರಮ, ರಾಮನಾಥಿ, ಗೋವಾ. (೧೨.೧೨.೨೦೨೧)