ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಮಧ್ಯಪ್ರದೇಶದಲ್ಲಿನ ಉಜ್ಜೈನಿಯ ಮಹಾಕಾಲ ದೇವಸ್ಥಾನ. ಪ್ರಾಚೀನ ಕಾಲದಲ್ಲಿ ಈ ದೇವಾಲಯದ ಸ್ಥಳದಿಂದ ಸಂಪೂರ್ಣ ಜಗತ್ತಿನ ಕಾಲವನ್ನು ನಿರ್ಧರಿಸಲಾಗುತ್ತಿತ್ತು. ಅದು ಸಮಯವನ್ನು ಅಳೆಯುವ ಜಗತ್ತಿನ ಕೇಂದ್ರಬಿಂದುವಾಗಿದೆ. ಅಂದರೆ ಈ ಸ್ಥಳದಿಂದ ಸಮಯವನ್ನು ಅಳೆಯಲು ಪ್ರಾರಂಭವಾಗುತ್ತದೆ. (ಅಂದರೆ ನಾವು ಯಾವಾಗ ಯಾವುದಾದರೊಂದು ದೇಶದ ಸಮಯವು ಭಾರತದ ಎಷ್ಟೊಂದು ಸಮಯದ ಹಿಂದೆ ಅಥವಾ ಮುಂದೆ ಇದೆ, ಎಂದು ಹೇಳುತ್ತೇವೆಯೋ, ಆಗ ಯಾರು ಯಾರ ಹಿಂದೆ ಇರುವುದು ಅದರ ಆರಂಭವನ್ನು ಎಲ್ಲಿಂದ ಮಾಡಬೇಕು ? ಅದಕ್ಕಾಗಿ ೦ ಈ ಸಮಯವನ್ನು ಎಲ್ಲಿಯಾದರೂ ಹಿಡಿಯಬೇಕು. ಅದನ್ನು ಭಾರತದ ಮಧ್ಯಪ್ರದೇಶದಲ್ಲಿನ ಉಜ್ಜೈನಿಯಿಂದ ಹಿಡಿಯಲಾಗುತ್ತದೆ.) ಇದು ಇತ್ತೀಚಿನ ಯುಗದಲ್ಲಿ ವಿಜ್ಞಾನದಿಂದ ಸಿದ್ಧವಾಗಿದೆ ; ಆದರೆ ಪ್ರಾಚೀನ ಕಾಲದಲ್ಲಿ ನಮ್ಮ ಋಷಿಮುನಿಗಳು ಇದನ್ನು ಮೊದಲೇ ಕಂಡುಹಿಡಿದಿದ್ದಾರೆ. ೧ ಮಾರ್ಚ್ ೨೦೨೪ ರಂದು ಇಲ್ಲಿ ವೈದಿಕ ಗಡಿಯಾರವನ್ನು ಸ್ಥಾಪಿಸಲಾಯಿತು. ವೈದಿಕ ಗಡಿಯಾರವನ್ನು ಇಲ್ಲಿ ಮೋದಿ ಸರಕಾರವು ಪುನರ್‌ನಿರ್ಮಿಸಿತು. ಸೃಷ್ಟಿ ಆರಂಭವಾದ ನಂತರ ಮೊಟ್ಟಮೊದಲು (ಉಜ್ಜೈನಿ) ಈ ಭೂಭಾಗದ ಸ್ಥಾಪನೆ ಆಯಿತು. ಈ ಸ್ಥಾನವು ಭೂಮಧ್ಯರೇಖೆಯ ಮೇಲೆ ಸ್ಥಿರವಾಗಿದೆ. ಮಹಾಕಾಲವು ಕೇವಲ ಧಾರ್ಮಿಕ ಚಿಹ್ನೆ ಮಾತ್ರವಲ್ಲ, ವೈಜ್ಞಾನಿಕ ಕಾಲಗಣನೆಯ ಮುಖ್ಯ ಕೇಂದ್ರವಾಗಿದೆ. ಮಹಾಕಾಲ ದೇವಸ್ಥಾನದ ಸ್ಥಳದಿಂದ ನವಗ್ರಹಗಳ ವೇಗ, ಚಲನೆ, ಪೃಥ್ವಿಯ ಮೇಲೆ ಬೀಳುವ ಪ್ರಭಾವ, ಹಾಗೆಯೇ ಆ ವಿಷಯಕ್ಕೆ ಸಂಬಂಧಿಸಿದ ಇತರ ವಿಷಯಗಳ ಅಧ್ಯಯನ ಮಾಡಬಹುದು. ‘ಕಾಲ’ಕ್ಕೆ ಈ ರೀತಿ ಈಶ್ವರತುಲ್ಯ ಭಾವಪ್ರಾಪ್ತವಾಗಿದೆ, ಆ ಸ್ಥಾನವೆಂದರೆ ಮಹಾಕಾಲೇಶ್ವರ ! ಈ ಸ್ಥಾನಕ್ಕೆ ಪೃಥ್ವಿಯ ಮಣಿಪುರಚಕ್ರ ಅಥವಾ ನಾಭಿ ಎಂದು ಹೇಳಲಾಗುತ್ತದೆ. ಅನೇಕ ಪ್ರಾಚೀನ ಋಷಿಗಳು ಮತ್ತು ರಾಜರು ಇಲ್ಲಿ ಸಾಧನೆಯನ್ನು ಮಾಡಿದ್ದಾರೆ.
ಇಲ್ಲಿ ೧೭೮೯ ರಲ್ಲಿ ಅಂದಿನ ರಾಜನು, ಎಂತಹ ದೂರದರ್ಶಕವನ್ನು ಕೂರಿಸಿದ್ದಾನೆ ಎಂದರೆ, ಅದರಿಂದ ಖಗೋಲದ ವಸ್ತುಸ್ಥಿತಿಯನ್ನು ಭೂಮಧ್ಯರೇಖೆಯಲ್ಲಿನ ಯಾವುದೇ ಕೋನದಿಂದ ಅಳತೆಯನ್ನು ತೆಗೆದುಕೊಳ್ಳಬಹುದು. ಭಾಸ್ಕರಾಚಾರ್ಯರು ಇಲ್ಲಿನ ವೇಧಶಾಲೆಯ ಸಂಚಾಲಕರು, ಗಣಿತತಜ್ಞರು, ಜ್ಯೋತಿಷತಜ್ಞರು, ಕಾಲಗಣನೆಯನ್ನು ಜಗತ್ತಿಗೆ ತಿಳಿಸಿ ಹೇಳುವವರಾಗಿದ್ದರು; ಅವರು ಅನೇಕ ಗಣಕೀಯ ಸಿದ್ಧಾಂತಗಳನ್ನು ಜಗತ್ತಿಗೆ ನೀಡಿದರು ! ಒಂದು ಕುಂಭಮೇಳವು ಈ ಪವಿತ್ರ ನಗರದಲ್ಲಿ ನಡೆಯುತ್ತದೆ. ಮಹಾಕಾಲನು ಸಂಪೂರ್ಣ ಜಗತ್ತಿನ ಚರಾಚರ ಜಗತ್ತು, ಕಾಲದ ದೃಷ್ಟಿ, ಕಾಲದ ಮಹತ್ವ, ಶುಭ ಮುಹೂರ್ತ, ಅಶುಭ ಘಟನೆಗಳ ಎಚ್ಚರಿಕೆ ಮುಂತಾದವುಗಳನ್ನು ನೀಡುವ ಆರಾಧ್ಯ ದೇವತೆಯಾಗಿದ್ದಾನೆ !
ಒಂದು ತ್ರೂಟಿ ಅಂದರೆ ಒಂದು ಸೆಕೆಂಡಿನ ೩೩ ಸಾವಿರ ೭೫೦ ನೇ ಭಾಗ. ಇಲ್ಲಿಂದ ಹಿಡಿದು ೧ ದಿನದ ವರೆಗಿನ ಕಾಲಗಣನೆ, ಏಳು ವಾರಗಳು, ಯುಗಗಳಿಂದ ಹಿಡಿದು ಸಮಯದ ಅತ್ಯಂತ ದೊಡ್ಡ ಭಾಗ, ಅಂದರೆ ೪೩೨ ಕೋಟಿ ವರ್ಷಗಳೆಂದರೆ ಒಂದು ಕಲ್ಪದವರೆಗೆ ಮುಂತಾದ ಎಲ್ಲ ವಿಷಯಗಳನ್ನು ಭಾಸ್ಕರಾಚಾರ್ಯರು ಜಗತ್ತಿಗೆ ಈ ಸ್ಥಳದಿಂದ ನೀಡಿದ್ದಾರೆ !
(ಆಧಾರ – ಪ್ರವೀಣ ಗುಗನಾನಿ, ವಿಶ್ವ ಸಂವಾದ ಕೇಂದ್ರ, ಝಾರಖಂಡ, ಆಜ ತಕ್ ಮತ್ತು ಇತರ ಜಾಲತಾಣಗಳು)
ದೇವಸ್ಥಾನಗಳು ಮತ್ತು ಪಂಚಮಹಾಭೂತಗಳು : ‘೭ ನೇ ಯಿಂದ ೧೧ ನೇ ಶತಮಾನದ ವರೆಗೆ ಭಾರತದಲ್ಲಿ ಮಂದಿರಗಳನ್ನು ನಿರ್ಮಾಣ ಮಾಡುತ್ತಿರುವಾಗ ಪಂಚಮಹಾಭೂತಗಳ ವಿಚಾರ ಮಾಡಲಾಗುತ್ತಿತ್ತು. ತಮಿಳುನಾಡುವಿನ ಕೆಲವು ಮಂದಿರಗಳಲ್ಲಿ ಶರೀರದಲ್ಲಿ ವಿಶಿಷ್ಟ ಮಹಾಭೂತ ಕಡಿಮೆಯಾದಾಗ ಆಗುವ ವ್ಯಾಧಿಗಳಿಗೆ ಉಪಚಾರವೆಂದು ವಿಶಿಷ್ಟ ಮಂದಿರಗಳಲ್ಲಿನ ತೀರ್ಥವನ್ನು ಉಪಯೋಗಿಸುವ ಪದ್ಧತಿ ಇಂದು ಕೂಡ ರೂಢಿಯಲ್ಲಿದೆ.’ – ಒಬ್ಬ ಧರ್ಮಾಭಿಮಾನಿ (೨೨.೬.೨೦೧೪) |