Protest in PoK: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆದಿರುವ ಪಾಕಿಸ್ತಾನ ವಿರೋಧಿ ಪ್ರತಿಭಟನೆಯಲ್ಲಿ ಭಾರತದ ರಾಷ್ಟ್ರಧ್ವಜ ಹಾರಾಡಿತು

ಪಾಕಿಸ್ತಾನಿ ಸೈನ್ಯದಿಂದ ಗುಂಡು ಹಾರಾಟ !

ಮುಜಾಫರಾಬಾದ್ (ಪಾಕ ಆಕ್ರಮಿತ ಕಾಶ್ಮೀರ) – ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸ್ಥಳಿಯರಿಂದ ಪಾಕಿಸ್ತಾನದ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಆರಂಭವಾಗಿದ್ದರಿಂದ ಅಲ್ಲಿ ಯುದ್ಧಜನ್ಯ ಸ್ಥಿತಿ ನಿರ್ಮಾಣವಾಗಿದೆ. ಮೇ ೧೦ ಮತ್ತು ೧೧ ರಂದು ದೊಡ್ಡ ಸಂಖ್ಯೆಯಲ್ಲಿ ನಾಗರಿಕರು ರಸ್ತೆಗೆ ಇಳಿದರು. ಈ ಸಮಯದಲ್ಲಿ ನಡೆದಿರುವ ಪ್ರತಿಭಟನೆಯಲ್ಲಿ ಭಾರತದ ರಾಷ್ಟ್ರಧ್ವಜ ಕೂಡ ಹಾರಾಡಿತು. ಪ್ರತಿಭಟನೆಯನ್ನು ಹಿಡಿತಕ್ಕೆ ತರುವುದಕ್ಕಾಗಿ ಪಾಕಿಸ್ತಾನಿ ರಕ್ಷಣಾ ಪಡೆಯು ಬಲಪ್ರಯೋಗ ಮಾಡಿತು. ಈ ಸಮಯದಲ್ಲಿ ಪಾಕಿಸ್ತಾನಿ ಸೈನ್ಯವು ಜನರ ಮೇಲೆ ಗುಂಡಿನ ದಾಳಿ ನಡೆಸಿರುವ ಸುದ್ಧಿ ಇದೆ.

೧. ಪಾಕಿಸ್ತಾನವು ಹೇರಿರುವ ತೆರಿಗೆ ಮತ್ತು ಹೆಚ್ಚಿತ್ತಿರುವ ಬೆಲೆ ಏರಿಕೆ ನಿಷೇಧಿಸಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಜನರು ಮೇ ೧೧ ರಂದು ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಸುವ ಯೋಜನೆ ರೂಪಿಸಿದ್ದರು; ಆದರೆ ಒಂದು ದಿನ ಮೊದಲೇ ಹೆಚ್ಚುವರಿ ಸೈನ್ಯ ಕರೆಸಿದ್ದರು ಮತ್ತು ಜನರನ್ನು ವಶಕ್ಕೆ ಪಡೆಯುವುದು ಮುಂದುವರೆಸಿದ್ದರು ಇದರಿಂದ ಜನಾಕ್ರೋಶ ಭುಗಿಲೆದ್ದಿತು.

೨. ಪಾಕಿಸ್ತಾನಿ ಸೈನ್ಯವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೀರಪುರ ಜಿಲ್ಲೆಯ ೭೦ ಕ್ಕಿಂತಲೂ ಹೆಚ್ಚಿನ ಕಾರ್ಯಕರ್ತರನ್ನು ಯಾವುದೇ ವಾರಂಟ್ ಇಲ್ಲದೆ ಪ್ರತಿಭಟನೆ ನಿಲ್ಲಿಸುವುದಕ್ಕಾಗಿ ಬಂಧಿಸಿದರು. ಬಳಿಕ ಆಕ್ರೋಶಗೊಂಡಿರುವ ಗುಂಪು ರಸ್ತೆಗೆ ಇಳಿಯಿತು. ಬಂಧನದ ವಿರುದ್ಧ ಸಾಮಾನ್ಯ ಜನರು ರಕ್ಷಣಾ ಪಡೆಯ ಮೇಲೆ ಕಲ್ಲು ತೂರಾಟ ನಡೆಸಿದರು ಮತ್ತು ಅನೇಕ ಸ್ಥಳಗಳಲ್ಲಿ ಚಕಮಕಿ ನಡೆದವು. ಬಳಿಕ ಪರಿಸರದಲ್ಲಿ ಕಲಂ ೧೪೪ ನಿಷೇಧಾಜ್ಞೆ ಜಾರಿ ಜಾರಿಗೊಳಿಸಿದರು.

೩. ಪಾಕಿಸ್ತಾನಿ ಸೈನ್ಯವು ಚಿಕ್ಕ ಮಕ್ಕಳನ್ನು ಕೂಡ ಬಿಡಲಿಲ್ಲ. ಪೊಲೀಸರು ಅಶ್ರುವಾಯು ಉಪಯೋಗಿಸಿದಾಗ ಅದು ಶಾಲೆಯ ಒಳಗೆ ಬಿದ್ದಿತು. ಇದರಿಂದ ಅನೇಕ ಹುಡುಗಿಯರು ಗಾಯಗೊಂಡಿರುವ ವರದಿಯಾಗಿದೆ.

೪. ಇದೇ ವರ್ಷದ ಫೆಬ್ರುವರಿಯಲ್ಲಿ ನಡೆದಿರುವ ಒಪ್ಪಂದ ಪಾಲಿಸುವುದಕ್ಕಾಗಿ ಪಾಕಿಸ್ತಾನ ಸರಕಾರದ ಮೇಲೆ ಒತ್ತಡ ತರುವುದಕ್ಕಾಗಿ ಜಮ್ಮು-ಕಾಶ್ಮೀರ ಸಂಯುಕ್ತ ಅವಾಮಿ ಕೃತಿ ಸಮಿತಿಯಿಂದ ಮೇ ೧೦ ರಂದು ಪ್ರತಿಭಟನೆ ಘೋಷಿಸಿತ್ತು. ಇದರಲ್ಲಿ ಸಾರಿಗೆ ಬಂದ ಕೂಡ ಒಳಗೊಂಡಿತ್ತು. ಇಸ್ಲಾಮಾಬಾದ್ ಸರಕಾರ ಆ ಒಪ್ಪಂದದ ಪೂರೈಕೆ ಮಾಡಿಲ್ಲ ಎಂದು ಸಮಿತಿ ಆರೋಪಿಸಿದೆ.

೫. ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗವು, ಅಲ್ಲಿ ನಿರಂತರ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಒಪ್ಪಿಕೊಂಡಿದೆ.

೬. ಕಳೆದ ತಿಂಗಳಲ್ಲಿ ಕೂಡ ಹೆಚ್ಚಿರುವ ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆ ನಡೆದಿದ್ದವು.

ಅನೇಕ ಸ್ಥಳಗಳಲ್ಲಿ ಜನರು ರಸ್ತೆಗೆ ಇಳಿದು ಪೊಲೀಸರ ವಿರುದ್ಧ ಘೋಷಣೆ ಕೂಗಿದ್ದರು. ಅಲ್ಲಿ ಒಂದು ಕೆಜಿ ಹಿಟ್ಟಿಗೆ ೮೦೦ ಪಾಕಿಸ್ತಾನಿ ರೂಪಾಯಿಗೆ ದೊರೆಯುತ್ತದೆ, ಅದು ಹಿಂದೆ ೨೩೦ ರೂಪಾಯಿಗೆ ದೊರೆಯುತ್ತಿತ್ತು.

ಸಂಪಾದಕೀಯ ನಿಲುವು

ಕಾಶ್ಮೀರ ಸಮಸ್ಯೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಸ್ತಾಪಿಸುವ ಮೂಲಕ ಭಾರತಕ್ಕೆ ಸಂದಿಗ್ಧತೆಯನ್ನು ಸೃಷ್ಟಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಈಗ ಭಾರತವೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರ ಶೋಚನೀಯ ಸ್ಥಿತಿಯ ಸೂತ್ರವನ್ನು ಜಾಗತಿಕ ಮಟ್ಟದಲ್ಲಿ ಮಂಡಿಸಿ ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸುವುದು ಆವಶ್ಯಕವಾಗಿದೆ !