AstraZeneca COVID-19 Vaccine : ತನ್ನ ಕರೋನಾ ಲಸಿಕೆಯನ್ನು ಹಿಂಪಡೆಯಲಿರುವ ಆಸ್ಟ್ರಾ ಜೆನಿಕಾ (AstraZeneca) !

ಲಸಿಕೆಯಿಂದ ಉಂಟಾಗುವ ಅಡ್ಡ ಪರಿಣಾಮಗಳಿಗೂ ಈ ನಿರ್ಧಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಂಸ್ಥೆಯ ಹೇಳಿಕೆ !

ಲಂಡನ್ (ಇಂಗ್ಲೆಂಡ್) – ಬ್ರಿಟಿಷ್ ಸಂಸ್ಥೆ ‘ಆಸ್ಟ್ರಾ ಜೆನಿಕಾ’ ತಾನು ಅಭಿವೃದ್ಧಿಪಡಿಸಿದ ಕರೋನಾ ತಡೆಗಟ್ಟುವ ಲಸಿಕೆಯನ್ನು ಪ್ರಪಂಚದಾದ್ಯಂತ ಹಿಂಪಡೆಯಲಿದೆ. ಇನ್ಮುಂದೆ ಲಸಿಕೆಗಳ ಖರೀದಿ ಮತ್ತು ಮಾರಾಟವನ್ನು ನಿಲ್ಲಿಸಲು ಸಂಸ್ಥೆ ನಿರ್ಧರಿಸಿದೆ. ‘ ದಿ ಟೆಲಿಗ್ರಾಫ್’ ಸುದ್ದಿ ವಾಹಿನಿ ಪ್ರಕಾರ, ಲಸಿಕೆ ಉತ್ಪಾದನೆಯನ್ನು ನಿಲ್ಲಿಸುವ ನಿರ್ಧಾರವನ್ನು ವಾಣಿಜ್ಯ ಕಾರಣಗಳಿಂದಾಗಿ ತೆಗೆದುಕೊಳ್ಳಲಾಗುತ್ತಿದೆ. ಏತನ್ಮಧ್ಯೆ, ಅದರ ಬಳಕೆಯಿಂದ ಉಂಟಾಗುವ ಅಡ್ಡಪರಿಣಾಮಗಳ ಆರೋಪಗಳು ಈ ನಿರ್ಧಾರದೊಂದಿಗೆ ಯಾವುದೇ ಸಂಬಂಧ ಇಲ್ಲವೆಂದು ಸಂಸ್ಥೆ ಹೇಳಿದೆ.

1. ಆಸ್ಟ್ರಾ ಜೆನಿಕಾ ತನ್ನ ಕರೋನಾ ಲಸಿಕೆ ಅಪಾಯಕಾರಿ ಅಡ್ಡ ಪರಿಣಾಮಗಳನ್ನು ಬೀರಬಹುದು ಎಂದು ಫೆಬ್ರವರಿ 2024 ರಲ್ಲಿ ಬ್ರಿಟಿಷ್ ಉಚ್ಚನ್ಯಾಯಾಲಯಕ್ಕೆ ಹೇಳಿತ್ತು. ಅದರ ಕರೋನಾ ಪ್ರತಿಬಂಧಕಾತ್ಮದ ಲಸಿಕೆಯಿಂದ ಅಪಾಯಕಾರಿ ದುಷ್ಪರಿಣಾಮಗಳಾಗಬಹುದು. ಇದರಿಂದ ಹೃದಯಾಘಾತ ಅಪಾಯಹೃದಯಾಘಾತ ಅಪಾಯದ ಸಾಧ್ಯತೆ ಹೆಚ್ಚಾಗಿರುವುದಾಗಿ ಸಂಸ್ಥೆ ಒಪ್ಪಿಕೊಂಡಿದೆ.

2. ಈ ಲಸಿಕೆಯಿಂದ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಆಗಬಹುದು ಮತ್ತು ‘ಪ್ಲೇಟ್‌ಲೆಟ್‌’ಗಳ (ರಕ್ತದಲ್ಲಿಯ ಒಂದು ರೀತಿಯ ಬಿಳಿರಕ್ತ ಕಣಗಳು) ಸಂಖ್ಯೆ ಕಡಿಮೆಯಾಗುತ್ತದೆ. ಆದಾಗ್ಯೂ, ಇದು ಬಹಳ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಸಂಭವಿಸುತ್ತದೆ.

3. ಆಸ್ಟ್ರಾ ಜೆನಿಕಾ ಉತ್ಪಾದಿಸಿದ ಲಸಿಕೆಯು ಅನೇಕ ಸಾವುಗಳಿಗೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ. ಸಂಸ್ಥೆಯ ವಿರುದ್ಧ ಬ್ರಿಟನ್ನಿನ ಉಚ್ಚನ್ಯಾಯಾಲಯದಲ್ಲಿ 51 ಪ್ರಕರಣಗಳು ಬಾಕಿ ಉಳಿದಿವೆ. ಸಂತ್ರಸ್ತರು ಆಸ್ಟ್ರಾ ಜೆನಿಕಾದಿಂದ ಅಂದಾಜು 1,000 ಕೋಟಿ ರೂಪಾಯಿ ಪರಿಹಾರವನ್ನು ಕೋರಿದ್ದಾರೆ.

4. ಲಸಿಕೆಯು ಮಾರುಕಟ್ಟೆಗೆ ಬಂದ ಕೆಲವೇ ತಿಂಗಳುಗಳಲ್ಲಿ ವಿಜ್ಞಾನಿಗಳಿಗೆ ಅದರ ಅಪಾಯ ಗಮನಕ್ಕೆ ಬಂದಿತ್ತು ಮತ್ತು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಬೇರೆ ಲಸಿಕೆಗಳನ್ನು ನೀಡಬೇಕೆಂದು ಸೂಚಿಸಲಾಗಿತ್ತು.

5. ಬ್ರಿಟನ್ ಸರ್ಕಾರವು ಫೆಬ್ರವರಿ 2024 ರಂದು 163 ಜನರಿಗೆ ಪರಿಹಾರವನ್ನು ನೀಡಿತ್ತು. ಇದರಲ್ಲಿ 158 ಜನರು ಆಸ್ಟ್ರಾ ಜೆನಿಕಾ ಲಸಿಕೆ ಪಡೆದಿದ್ದರು.