ವೈಶಾಖ ಶುಕ್ಲ ತೃತೀಯಾ (ಮೇ ೧೦) ರಂದು ಇರುವ ಪರಶುರಾಮ ಜಯಂತಿಯ ನಿಮಿತ್ತ

ಭಗವಾನ ಪರಶುರಾಮರು ಮಾಡಿರುವ ಮಹೋನ್ನತ ಕಾರ್ಯ

ಭಗವಾನ ಪರಶುರಾಮರು ತಾವು ಪಾರಂಗತರಾಗಿದ್ದ ರಾಜನೀತಿಯನ್ನು ಸಮಾಜವನ್ನು ಶಿಸ್ತುಬದ್ಧಗೊಳಿಸಲು ಉಪಯೋಗಿಸಿದರು. ಅವರು ಪಡೆದ ಧನುರ್ವಿದ್ಯೆಯನ್ನು ಅನ್ಯಾಯವನ್ನು ನಷ್ಟಗೊಳಿಸಿ, ನ್ಯಾಯವನ್ನು ಸ್ಥಾಪಿಸಲು ಉಪಯೋಗಿಸಿದರು. ಸ್ವಪರಾಕ್ರಮದಿಂದ ಪೃಥ್ವಿಯ ಐಶ್ವರ್ಯವನ್ನು ಸಂಪಾದಿಸಿ, ಅದನ್ನು ಕಶ್ಯಪ ಮುನಿಯ ಚರಣಗಳಿಗೆ ಅರ್ಪಿಸಿದರು. ವೈದಿಕ ಸಂಸ್ಕ್ರತಿಯನ್ನು ಸ್ಥಾಪಿಸಲು ಅವಧೂತ ದತ್ತಾತ್ರೇಯರಿಂದ ಶ್ರೀವಿದ್ಯೆಯ ಸುಲಭೀಕರಣಗೊಳಿಸಿಕೊಂಡರು. ಆದ್ದರಿಂದಲೇ ಮಾನವನ ಕಲ್ಯಾಣಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯವನ್ನು ಮಾಡಿರುವ ಮತ್ತು ಬ್ರಾಹ್ಮತೇಜದಿಂದ ಹಾಗೂ ಕ್ಷಾತ್ರತೇಜದಿಂದ ಹೊಳೆಯುವ ಪರುಶುರಾಮರನ್ನು ರಾಜರಾಜೇಶ್ವರ ಎಂದು ಗೌರವಿಸಲಾಗುತ್ತದೆ.

– ಶ್ರೀ. ದುರ್ಗೇಶ ಜಯವಂತ ಪರುಳಕರ, ಡೊಂಬಿವಲಿ.