೧. ಅಪ್ರಾಪ್ತ ಹುಡುಗನೊಂದಿಗೆ ಅಶ್ಲೀಲವಾಗಿ ವರ್ತಿಸಿದ ಮಹಿಳೆಯ ವಿರುದ್ಧ ಅಪರಾಧ ದಾಖಲು ಮತ್ತು ಆಕೆಯ ಪರವಾಗಿ ಮಾಡಿದ ಪ್ರತಿವಾದ
‘ಓರ್ವ ಮಹಿಳೆಯು ಅಪ್ರಾಪ್ತ ಹುಡುಗನನ್ನು ತನ್ನ ಬಳಿ ಇಟ್ಟುಕೊಂಡಳು. ಅವನನ್ನು ತಿರುಗಾಟಕ್ಕಾಗಿ ಹೊರಗೆ ಕರೆದುಕೊಂಡು ಹೋಗಿ ಅವನೊಡನೆ ಅಶ್ಲೀಲವಾಗಿ (ಗುಪ್ತಾಂಗವನ್ನು ಸ್ಪರ್ಶಿಸುವುದು) ವರ್ತಿಸಿದಳು ಹಾಗೂ ‘ಈ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಳು’, ಎಂದು ಅಪ್ರಾಪ್ತ ಹುಡುಗನ ಅಜ್ಜಿಯು ‘ಬದ್ದೀ’ ಪೊಲೀಸ್ ಠಾಣೆ (ಹಿಮಾಚಲ ಪ್ರದೇಶ) ಯಲ್ಲಿ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ದೂರಿನ ಪ್ರಕಾರ ಪೊಲೀಸರು ತನಿಖೆ ನಡೆಸಿ ಪ್ರಾಥಮಿಕ ಹಂತದಲ್ಲಿ ಅಪರಾಧದ ವಿವರವನ್ನು ತಾಲೂಕು ದಂಡಾಧಿಕಾರಿಗಳಿಗೆ ಕಳಿಸಿ ದರು. ಅದರಂತೆ ಆರೋಪಿಯ ವಿರುದ್ಧ ಆರೋಪವನ್ನು ಸಾಬೀತು ಪಡಿಸಲಾಯಿತು. ದಾಖಲಾದ ಅಪರಾಧವನ್ನು ರದ್ದು ಗೊಳಿಸುವಂತೆ ಆರೋಪಿ ಮಹಿಳೆಯು ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯದ ಮೊರೆ ಹೋದಳು.
ನ್ಯಾಯಾಲಯದಲ್ಲಿ ನಡೆದ ವಾದ-ಪ್ರತಿವಾದದಲ್ಲಿ ಅವಳ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂದು ಹೇಳಿಕೆಯನ್ನು ನೀಡಲಾಯಿತು. ಕೇವಲ ಸಂತ್ರಸ್ತ ಹುಡುಗ ನ್ಯಾಯ ದಂಡಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ ಮಾತ್ರಕ್ಕೆ ಅಪರಾಧ ಸಾಬೀತಾಗುವುದಿಲ್ಲ. ಇಲ್ಲಿ ಅಪ್ರಾಪ್ತ ಹುಡುಗನೊಂದಿಗೆ ಅಸಭ್ಯವಾಗಿ ವರ್ತಿಸುವ ಆಕೆಯ ಮನಸ್ಥಿತಿ ಎಲ್ಲಿಯೂ ಸ್ಪಷ್ಟವಾಗಿಲ್ಲ. ಜೊತೆಗೆ ‘ಪೋಕ್ಸೋ’ ಕಾಯಿದೆಯಲ್ಲಿ ‘ಸೆಕ್ಸುವಲ್ ಇಟೆಂಟ್’ (ಲೈಂಗಿಕ ಉದ್ದೇಶ) ಈ ಶಬ್ದದ ವ್ಯಾಖ್ಯೆ ಇಲ್ಲ ಹಾಗೂ ಆಕೆಯು ಲೈಂಗಿಕ ಕೃತಿಯ ಉದ್ದೇಶದಿಂದ ಆಕೆಯು ಸಂತ್ರಸ್ತ ಬಾಲಕನ ಗುಪ್ತಾಂಗವನ್ನು ಕೈಯಲ್ಲಿ ತೆಗೆದುಕೊಂಡಳು ಎಂಬುದು ಸಾಬೀತಾಗಲಿಲ್ಲ. ಆದ್ದರಿಂದ ಅವಳ ವಿರುದ್ಧ ದಾಖಲಾದ ಕ್ರಿಮಿನಲ್ ಅಪರಾಧವನ್ನು ರದ್ದುಗೊಳಿಸಬೇಕು.
೨. ಆರೋಪಿಯ ವಿಷಯದಲ್ಲಿ ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಉದ್ವೇಗಯುಕ್ತ ಉದ್ಗಾರ ಹಾಗೂ ಸ್ಪಷ್ಟೋಕ್ತಿ !
ಈ ವಾದ-ವಿವಾದದಲ್ಲಿ ಮಾನ್ಯ ನ್ಯಾಯಾಧೀಶರು ಉದ್ವೇಗವನ್ನು ವ್ಯಕ್ತಪಡಿಸುತ್ತಾ, ”ನಾವು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದೇವೆಯೇ ? ನಾವು ಪಾಶ್ಚಿಮಾತ್ಯ ದೇಶದಲ್ಲಿ ವಾಸಿಸುತ್ತಿದ್ದೇವೆಯೇ ? ಅಥವಾ ಇಂತಹ ಕೃತ್ಯವನ್ನು ಮಾಡಲು ನಾವು ಪಾಶ್ಚಿಮಾತ್ಯರೇ ? ಅಪ್ರಾಪ್ತ ಹುಡುಗರು ಮತ್ತು ಹುಡುಗಿಯರನ್ನು ಲೈಂಗಿಕ ದೌರ್ಜನ್ಯಗಳಿಂದ ರಕ್ಷಿಸಲು ‘ಪೊಕ್ಸೊ’ ಕಾನೂನನ್ನು ರಚಿಸಲಾಗಿದೆ. ಮೇಲಿನ ಹೇಳಿಕೆಯ ಸಾರಾಂಶವೇ ಅಪ್ರಾಪ್ತ ಮಕ್ಕಳ ದೇಹವನ್ನು ಅಥವಾ ವಿಶಿಷ್ಟ ಅಂಗವನ್ನು ಸ್ಪರ್ಶಿಸುವುದರ ಅರ್ಥವೇ ಅದು ಲೈಂಗಿಕ ಉದ್ದೇಶದಿಂದ ಅಪ್ರಾಪ್ತನ ಶರೀರವನ್ನು ಸ್ಪರ್ಶಿಸುವುದು ಅಥವಾ ಅಂತಹ ಕೃತಿ ಮಾಡುವುದು ಎಂದಾಗುತ್ತದೆ. ಇದು ದೋಷಿ ಮಾನಸಿಕತೆಯೇ ಆಗಿದೆ. ಇದರ ಬಗ್ಗೆ ಕಾನೂನಿನಲ್ಲಿ ಪ್ರತ್ಯೇಕ ಉಲ್ಲೇಖವಿಲ್ಲದಿರಬಹುದು ಆದರೆ ಈ ಕಾನೂನಿನ ಅರ್ಥ ಅಥವಾ ಉದ್ದೇಶ ಅದೇ ಆಗಿದೆ.
೩. ಆರೋಪಿಯ ಅರ್ಜಿ ತಿರಸ್ಕರಿಸಿದ ಉಚ್ಚನ್ಯಾಯಾಲಯ
ಆರೋಪವನ್ನು ಸಾಬೀತುಪಡಿಸುವ ವೇಳೆಗೆ ನ್ಯಾಯ ದಂಡಾಧಿಕಾರಿಯು ತನ್ನ ಮುಂದೆ ಇರಿಸಲಾದ ಸಾಕ್ಷ್ಯವನ್ನು ಗಣನೆಗೆ ತೆಗೆದುಕೊಂಡು ಅಪರಾಧವು ಪ್ರಾಥಮಿಕವಾಗಿ ಸಾಬೀತಾಗುತ್ತದೆಯೇ ? ಎನ್ನುವುದರ ವಿಚಾರವನ್ನು ಮಾಡುತ್ತದೆ ಹಾಗೂ ತದನಂತರ ಆರೋಪವನ್ನು ಸಾಬೀತುಪಡಿಸಲಾಗುತ್ತದೆ. ಈ ಸಮಯದಲ್ಲಿ ಆರೋಪಿಯು ಪುರಾವೆಯನ್ನು ನೀಡಲು ಸಾಧ್ಯವಿಲ್ಲ; ಆದರೆ ಪ್ರಸ್ತುತ ಪಡಿಸಿದ ಪುರಾವೆಗಳು ಆರೋಪ ವನ್ನು ಸಾಬೀತುಪಡಿಸಬಲ್ಲವೇ ? ಈ ವಿಷಯದಲ್ಲಿ ವಾದ-ವಿವಾದಗಳನ್ನು ಮಾಡಲಾಗುತ್ತದೆ. ಈ ಎಲ್ಲಾ ಅಂಶಗಳ ವಿಚಾರವನ್ನು ನಡೆಸಿ ‘ಪೋಕ್ಸೋ’ ಕಾಯಿದೆಯನ್ನು ರಚಿಸ ಲಾಯಿತು. ಆಕೆಯ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು, ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯವು ತನ್ನ ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಸಂಬಂಧಿತ ಮಹಿಳೆಯ ಅರ್ಜಿಯನ್ನು ತಿರಸ್ಕರಿಸಿತು.
೪. ಸಮಾಜ ಸುಧಾರಣೆಗೆ ಧರ್ಮಶಿಕ್ಷಣ ಅಗತ್ಯ !
ಈ ಪ್ರಕರಣದಲ್ಲಿ ನ್ಯಾಯಾಧೀಶರು, ಉದ್ವೇಗದಿಂದ ಉದ್ಗರಿಸ ಬೇಕಾದಂತಹ ಪರಿಸ್ಥಿತಿಯು ಭಾರತದಲ್ಲಿ ಉಂಟಾಗಿದೆ. ಈ ಹಿಂದೆ, ಲೈಂಗಿಕ ಅಪರಾಧಗಳ ಎಲ್ಲಾ ಪ್ರಕರಣಗಳಲ್ಲಿ, ಪುರುಷರನ್ನು ಮಾತ್ರ ಆರೋಪಿಗಳನ್ನಾಗಿಸುತ್ತಿದ್ದರು; ಆದರೆ ಇಂದು ಸಮಾಜದ ಪರಿಸ್ಥಿತಿ ಬದಲಾಗಿದೆ. ಅನೇಕ ಬಾರಿ ಮಹಿಳೆಯರು ಲೈಂಗಿಕ ಉದ್ದೇಶಗಳಿಗಾಗಿ ಅಪ್ರಾಪ್ತ ಮಕ್ಕಳ ಹತ್ತಿರವಾಗುತ್ತಾರೆ ಹಾಗೂ ಅವರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಇದು ಸಮಾಜವು ಅಧೋಗತಿಗೆ ತಲುಪುತ್ತಿರುವ ಸಂಕೇತವಾಗಿದೆ. ಸ್ವಾತಂತ್ರ್ಯವು ದೊರಕಿದ ದಿನದಿಂದ ಇಂದಿನವರೆಗೆ ಒಂದೇ ಒಂದು ಸರಕಾರವು ಮಕ್ಕಳಿಗೆ ಧರ್ಮಶಿಕ್ಷಣವನ್ನು ನೀಡಲಿಲ್ಲ; ಈ ಕಾರಣದಿಂದ ಈ ಪರಿಸ್ಥಿತಿಯು ಉತ್ಪನ್ನವಾಗಿದೆ. ದೂರದರ್ಶನ ಮತ್ತು ಮೊಬೈಲ್‌ನಲ್ಲಿ ತೋರಿಸುವ ಲೈಂಗಿಕ ದೃಶ್ಯಗಳು ಮಹಿಳೆಯರಲ್ಲಿ ಲೈಂಗಿಕ ಭಾವನೆಗಳನ್ನು ಪ್ರಚೋದಿಸುತ್ತವೆ. ಆದ್ದರಿಂದ ಅಯೋಧ್ಯೆಯಲ್ಲಿ ಕೇವಲ ಶ್ರೀರಾಮ ಮಂದಿರ ಸ್ಥಾಪನೆ ಮಾಡಿ ಸುಮ್ಮನಿರದೆ ರಾಮರಾಜ್ಯ ಬರುವವರೆಗೆ ಪ್ರಯತ್ನಿಸಬೇಕು. ಅದಕ್ಕಾಗಿ ಹೆಚ್ಚೆಚ್ಚು ಧರ್ಮಶಿಕ್ಷಣ ವರ್ಗಗಳನ್ನು ಆರಂಭಿಸುವುದು ಆವಶ್ಯಕವಾಗಿದೆ.’
ಶ್ರೀಕೃಷ್ಣಾರ್ಪಣಮಸ್ತು |
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬೈ ಉಚ್ಚ ನ್ಯಾಯಾಲಯ, (೩೧.೧.೨೦೨೪)