ಒಂದು ದಿನ ನಮಗೆ ಪಾಕಿಸ್ತಾನದಲ್ಲಿ ಹಿಂದೂಗಳ ಅಂತ್ಯವಾಗಿರುವುದನ್ನು ಕಂಡು ಬರಲಿದೆ ! – ಪಾಕಿಸ್ತಾನದ ಹಿಂದೂ ಸಂಸದ ದಾನೇಶ ಕುಮಾರ

ಪಾಕಿಸ್ತಾನದ ಸಂಸತ್ತಿನಲ್ಲಿ, ಹಿಂದೂ ಸಂಸದ ದಾನೇಶ ಕುಮಾರ ಇವರಿಂದ ಹತಾಶೆ ವ್ಯಕ್ತ !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಹಿಂದೂ ಹುಡುಗಿಯರನ್ನು ಅಪಹರಿಸಿ ಮತಾಂತರ ಮಾಡಲಾಗುತ್ತಿದೆ. ನೀವು (ಸಭಾಧ್ಯಕ್ಷರು) ಏನಾದರೂ ಮಾಡಿರಿ, ಇಲ್ಲವಾದರೆ ಮುಂದೊಂದು ದಿನ ಇಲ್ಲಿಂದ ಹಿಂದೂಗಳ ಅಂತ್ಯ ಕಾಣಿಸಲಿದೆ ಎಂದು ಪಾಕಿಸ್ತಾನದ ಹಿಂದೂ ಸಂಸದ ದಾನೇಶ ಕುಮಾರ ಪಾಕಿಸ್ತಾನ ಸಂಸತ್ತಿನಲ್ಲಿ ಕಳಕಳಿಯಿಂದ ಮನವಿ ಮಾಡಿದರು.

ದಾನೇಶ ಕುಮಾರ ಮಂಡಿಸಿದ ಅಂಶಗಳು

ಪವಿತ್ರ ಕುರಾನ, ‘ಧರ್ಮದಲ್ಲಿ ಯಾವುದೇ ಬಲವಂತವಿಲ್ಲ !’ ಎಂದು ಹೇಳುತ್ತದೆ.

ಸಿಂಧ್‌ನಲ್ಲಿ, ಮತಾಂಧ ಡಕಾಯಿತರು ನಮ್ಮ ಹಿಂದೂ ಹುಡುಗಿಯರನ್ನು ಇಸ್ಲಾಂ ಸ್ವೀಕರಿಸಲು ಒತ್ತಾಯಿಸುತ್ತಿದ್ದಾರೆ. ಸಾಧಾರಣ ಡಕಾಯಿತರು ಕೇವಲ ಅಪಹರಿಸುತ್ತಾರೆ. ‘ಯಾರನ್ನೂ ಬಲವಂತವಾಗಿ ಮತಾಂತರ ಮಾಡುವಂತಿಲ್ಲ’, ಎಂದು ಪಾಕಿಸ್ತಾನದ ಸಂವಿಧಾನದಲ್ಲಿ ಹೇಳಲಾಗಿದೆ. ಪವಿತ್ರ ಕುರಾನ್, ‘ಧರ್ಮದಲ್ಲಿ ಯಾವುದೇ ಬಲವಂತವಿಲ್ಲ. ನಿಮ್ಮ ಧರ್ಮ ನಿಮಗೆ, ನಮ್ಮ ಧರ್ಮ ನಮಗೆ’ ಎಂದು ಹೇಳುತ್ತದೆ. ಆದುದರಿಂದ ಈ ಕ್ರೂರ ಜನರಿಗೆ ಪಾಕಿಸ್ತಾನದ ಸಂವಿಧಾನದಲ್ಲಾಗಲೀ, ಕುರಾನ್‌ನಲ್ಲಾಗಲೀ ವಿಶ್ವಾಸವಿಲ್ಲ. ಅವರು ನಮ್ಮ ಹಿಂದೂ ಹುಡುಗಿಯರನ್ನು ಬಲವಂತವಾಗಿ ಮತಾಂತರಿಸುತ್ತಾರೆ.

6 ವರ್ಷದ ಹಿಂದೂ ಬಾಲಕಿಯ ಅಪಹರಣ

ಸೂಫಿ ಪಂಶಾದಲ್ಲಿನ ಪ್ರಮುಖ ವ್ಯಕ್ತಿಗಳು ಹಿಂದೂಗಳಾಗಿದ್ದರು, ಆದರೂ ಅವರು ಯಾವುದೇ ಶಕ್ತಿಯನ್ನು ಉಪಯೋಗಿಸಲಿಲ್ಲ. ಮೊಹರಂ ತಿಂಗಳಿನಲ್ಲಿ 6 ವರ್ಷದ ಪ್ರಿಯಾ ಕುಮಾರಿಯನ್ನು ಸಂಗರದಿಂದ ಅಪಹರಿಸಲಾಗಿತ್ತು. ಆಕೆಯ ಪೋಷಕರು ಜನರಿಗೆ ನೀರು ಕೊಡುತ್ತಿದ್ದರು. ಈ ಘಟನೆ ನಡೆದು ಈಗ 2 ವರ್ಷಗಳಾದವು; ಆದರೆ ಇನ್ನೂ ಪ್ರಿಯಾ ಪತ್ತೆಯಾಗಿಲ್ಲ. ಅಪಹರಣಕಾರನ ಹೆಸರು ಎಲ್ಲರಿಗೂ ತಿಳಿದಿದೆ. ಅವನೂ ಕಟ್ಟರ ಡಕಾಯಿತನಾಗಿದ್ದಾನೆ; ಆದರೆ ಸಿಂಧ ಸರಕಾರ ನಮಗೆ ಸಹಾಯ ಮಾಡುತ್ತಿಲ್ಲ. ಆ ವ್ಯಕ್ತಿಯನ್ನು ಬಂಧಿಸಬೇಕು, ಇದರಿಂದ ಪ್ರಿಯಾಳನ್ನು ಮುಕ್ತಗೊಳಿಸಬಹುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಹೇಳಲಾಗಿದೆ. ಪ್ರಿಯಾ ಕುಮಾರಿ ಅಪಹರಣಕಾರರನ್ನು ಹವಾನಿಯಂತ್ರಿತ ಕೊಠಡಿಯಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಇದು ಅನ್ಯಾಯವಾಗಿದೆ. ಈ ಪ್ರಕರಣಗಳಿಂದಾಗಿ ನಮ್ಮ ಶತ್ರು ದೇಶ ನನ್ನ ತಾಯ್ನಾಡಿನತ್ತ ಬೆರಳು ತೋರಿಸುತ್ತಿದೆ ಎಂದು ಹೇಳಿದರು.

ಮುಸಲ್ಮಾನೇತರರು ಯಾರ ಮೇಲೂ ಅತ್ಯಾಚಾರ ಮಾಡುವುದಿಲ್ಲ !

ಸಿಂಧ ಬಲೂಚಿಸ್ತಾನದಿಂದ ಕಲಿಯಬೇಕು. ಬಲೂಚಿಸ್ತಾನದಲ್ಲಿ ಯಾವುದೇ ಅತ್ಯಾಚಾರ ನಡೆಯುವುದಿಲ್ಲ. ಪಾಕಿಸ್ತಾನದ ಸಂವಿಧಾನವು ಇಲ್ಲಿ ವಾಸಿಸುವ ಯಾರಾದರೂ ಧರ್ಮವನ್ನು ಆಚರಿಸಲು ಅವಕಾಶ ನೀಡುತ್ತದೆ. ಇಲ್ಲಿ ಮುಸಲ್ಮಾನೇತರರು ಯಾರ ಮೇಲೂ ದಬ್ಬಾಳಿಕೆ ಮಾಡುವುದಿಲ್ಲ.

ಸಂಪಾದಕೀಯ ನಿಲುವು

ಭವಿಷ್ಯದಲ್ಲಿ ಏನು ನಡೆಯಲಿದೆಯೋ ಅದನ್ನೇ ಸಂಸದ ದಾನೇಶ ಕುಮಾರ ಹೇಳಿದ್ದಾರೆ. ಇದಕ್ಕೆ ಹಿಂದೂಗಳ ರಕ್ಷಣೆಗೆ ಪಾಕಿಸ್ತಾನಿ ಆಡಳಿತಗಾರರು ಏನನ್ನಾದರೂ ಮಾಡುವರು ಎನ್ನುವ ನಂಬಿಕೆ ಇಲ್ಲ !

ಎಲ್ಲಿಯವರೆಗೆ ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದಿಲ್ಲವೋ, ಅಲ್ಲಿಯವರೆಗೆ ಭಾರತ ಮತ್ತು ವಿದೇಶಗಳಲ್ಲಿ, ವಿಶೇಷವಾಗಿ ಇಸ್ಲಾಮಿಕ್ ದೇಶಗಳಲ್ಲಿ ಹಿಂದೂಗಳ ರಕ್ಷಣೆಯಾಗುವುದಿಲ್ಲ, ಇದು ವಾಸ್ತವ !