ಸ್ಪ್ಯಾನಿಶ್‌ ಮಹಿಳೆಯ ಮೇಲೆ ಭಾರತದಲ್ಲಾದ ಬಲಾತ್ಕಾರಕ್ಕೆ ಪ್ರಸಾರ ಮಾಧ್ಯಮಗಳು ನೀಡಿದ ಅವಾಸ್ತವ ಪ್ರಸಿದ್ಧಿಯ ಒಂದು ಷಡ್ಯಂತ್ರ !

ಮಾರ್ಚ್ ೨೦೨೪ ರ ಮೊದಲ ವಾರದಲ್ಲಿ, ಭಾರತದ ಮೇಲೆ, ಎಲ್ಲ ಕಡೆಗಳಿಂದ ವಿಶೇಷವಾಗಿ ಹಿಂದೂಗಳ ಮೇಲೆ ದಾಳಿಯಾಯಿತು. ಅಂತಹದೇನು ಘಟಿಸಿತ್ತು ? ಈ ಸಂಬಂಧದ ಸುದ್ದಿಗಳ ಮಾಧ್ಯಮದಿಂದ ನಾನು ಸಂಗ್ರಹಿಸಿದ ಮಾಹಿತಿಯು ಮುಂದಿನಂತಿದೆ. ಝಾರ್ಖಂಡದಲ್ಲಿ ರಾಂಚಿಯಿಂದ ೩೦೦ ಕಿ.ಮೀ. ದೂರದಲ್ಲಿರುವ ದುಮಕಾ ಎಂಬಲ್ಲಿ ಓರ್ವ ೨೮ ವರ್ಷದ ಸ್ಪೇನ್‌ ಮಹಿಳೆ ಮತ್ತು ಆಕೆಯ ೬೪ ವರ್ಷದ ಪತಿ ಡೇರೆ ಹಾಕಿದ್ದರು. ಅವರು ಕೆಲವು ವರ್ಷಗಳ ಕಾಲ ಜಗತ್ತಿನಾದ್ಯಂತ ಪ್ರವಾಸ ಮಾಡಿ, ಬಾಂಗ್ಲಾದೇಶದಿಂದ ಎರಡು ಮೋಟರ್‌ ಸೈಕಲ್‌ಗಳಲ್ಲಿ ಭಾರತಕ್ಕೆ ಬಂದಿದ್ದರು.

೧ ಮಾರ್ಚ್ ೨೦೨೪ ರ ರಾತ್ರಿ ೧೧ ಗಂಟೆಗೆ, ಗಸ್ತಿನಲ್ಲಿದ್ದ ಒಬ್ಬ ಪೋಲೀಸ್‌ ಅವರನ್ನು ರಸ್ತೆ ಬದಿಯಲ್ಲಿ ನೋಡಿದನು. ಭಾಷೆ ಅರ್ಥವಾಗಲು ತೊಂದರೆಯಾಗಿದ್ದರಿಂದ ಅವರು ಏನು ಹೇಳುತ್ತಾರೆ ? ಎನ್ನುವುದು ಪೊಲೀಸನಿಗೆ ತಿಳಿಯುತ್ತಿರಲಿಲ್ಲ. ಆ ಪೊಲೀಸನು ಅಲ್ಲಿಂದ ೬೦ ಕಿ.ಮೀ ದೂರದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಅವರನ್ನು ಕರೆದೊಯ್ದನು. ‘ದಿ ವೀಕ್’ ಸುದ್ದಿ ಪತ್ರಿಕೆಯಲ್ಲಿ ‘ಅವರಿಬ್ಬರೂ ಅವರ ದ್ವಿಚಕ್ರ ವಾಹನದಲ್ಲಿ ೬೦ ಕಿಲೋಮೀಟರ್‌ ದೂರ ಪ್ರಯಾಣಿಸುವ ಸ್ಥಿತಿಯಲ್ಲಿದ್ದರು ಮತ್ತು ಪೊಲೀಸರು ಅವರೊಂದಿಗೆ ಹೋದರು. ಆ ಮಹಿಳೆಯು ‘ತನ್ನ ಮೇಲೆ ೭-೮ ಜನ ಸಾಮೂಹಿಕ ಬಲಾತ್ಕಾರ ಮಾಡಿದರು’ ಎಂದು ವೈದ್ಯರಲ್ಲಿ ಹೇಳಿದ್ದಾಳೆಂಬ ವಿಷಯ ಹೇಳಲಾಗಿದೆ.

ಅವಳು ಮಾತನಾಡಿ, ೭-೮ ಮಂದಿ ಸೇರಿ ಅವಳ ಗಂಡನನ್ನು ಕಟ್ಟಿ ಹಾಕಿದರು ಮತ್ತು ಅವಳ ಮೇಲೆ ಒಬ್ಬರಾದ ಬಳಿಕ ಒಬ್ಬರಂತೆ ಬಲಾತ್ಕಾರ ಮಾಡಿದರು ಎಂದಿದ್ದಾಳೆ. ಇಷ್ಟು ಅಲ್ಲದೇ ಅವರು ಅವಳ ಬೆಲೆಬಾಳುವ ಸಾಮಗ್ರಿಗಳೊಂದಿಗೆ ಸಹಿತ ಒಂದು ವಜ್ರದ ಉಂಗುರವನ್ನು ಕದ್ದೊಯ್ದರು ಎಂದು ಹೇಳಿದ್ದಾಳೆ. ಆದರೆ ಅವಳ ಹೇಳಿಕೆಯಂತೆ ಇದೆಲ್ಲದರ ಮುಖ್ಯ ಉದ್ದೇಶ ಬಲಾತ್ಕಾರ ಮಾಡುವುದಾಗಿತ್ತು. ಈ ಘಟನೆ ಸಾಯಂಕಾಲ ೭.೩೦ ರಿಂದ ರಾತ್ರಿ ೧೦ ಗಂಟೆಯ ಸಮಯದಲ್ಲಿ ನಡೆದಿದೆ ಮತ್ತು ತದನಂತರ ಆ ಸ್ಥಳಕ್ಕೆ ಪೊಲೀಸರು ತಲುಪಿದರು. ಅವಳು ತನ್ನ ಹೇಳಿಕೆಯನ್ನು ಆಸ್ಪತ್ರೆಯಲ್ಲಿ ಪೊಲೀಸರಿಗೆ ತಿಳಿಸಿದ್ದಾಳೆ ಮತ್ತು ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ‘ಇನ್‌ಸ್ಟಾಗ್ರಾಮ್’ ಸಾಮಾಜಿಕ ಮಾಧ್ಯಮದಿಂದ ಪ್ರಸಾರ ಮಾಡಿದಳು. ತದನಂತರ ಅವಳು ಈ ವಿಡಿಯೋವನ್ನು ತೆಗೆದುಹಾಕಿದಳು. ಮಾರ್ಚ್ ೨ ರಂದು ಆ ಮಹಿಳೆಯ ವಿಚಾರಣೆ ಮಾಡಿದ ನಂತರ, ಪೊಲೀಸರು ಶಂಕಿತರ ವಿಚಾರಣೆ ಮಾಡಲು ಪ್ರಾರಂಭಿಸಿದರು. ಅವರಲ್ಲಿ ಕೆಲವರನ್ನು ಮಾರ್ಚ್ ೨ ರಂದೇ ಪೊಲೀಸರು ವಶಕ್ಕೆ ಪಡೆದರು. ಅವರು ಇತರರ ಹೆಸರನ್ನು ಹೇಳಿದರು. ತದನಂತರ ಆ ಎಲ್ಲ ೮ ಜನರನ್ನು ಬಂಧಿಸಲಾಯಿತು.

ಮಾರಿಯಾ ವರ್ಥ

೧. ಸ್ವತಃ ಅರ್ಜಿಯನ್ನು ದಾಖಲಿಸಿ ಆ ದಂಪತಿಯನ್ನು ಪೂರ್ಣ ಸುರಕ್ಷಿತವಾಗಿ ನೇಪಾಳಕ್ಕೆ ಕಳುಹಿದ ಸ್ಥಳೀಯ ನ್ಯಾಯಾಲಯ

‘ಹಿಂದೂ’ ದಿನಪತ್ರಿಕೆಯ ವರದಿಯಂತೆ, ಸ್ಥಳೀಯ ನ್ಯಾಯಾಲಯವು ‘ಸುಮೋಟೋ’ ಅರ್ಜಿಯ ಮೂಲಕ (ನ್ಯಾಯಾಲಯ ಸ್ವತಃ ದಾಖಲಿಸಿದ ಅರ್ಜಿ) ಘಟನೆಯನ್ನು ದಾಖಲಿಸಿತು; ಏಕೆಂದರೆ ಈ ಘಟನೆಯು ಭಾರತದ ಪ್ರತಿಷ್ಠೆಗೆ ಕಳಂಕ ತರುತ್ತಿತ್ತು. ಒಬ್ಬ ಮಹಿಳಾ ನ್ಯಾಯಾಧೀಶೆ ಈ ಸ್ಪ್ಯಾನಿಶ್‌ ಮಹಿಳೆಯನ್ನು ಭೇಟಿಯಾದಾಗ, ‘ಆ ಸ್ಪ್ಯಾನಿಶ್‌ ಯುವತಿ ಮನಸ್ಸಿನಿಂದ ಘಾಸಿಗೊಂಡಿದ್ದಳು, ಆದರೆ ಶಾರೀರಿಕಸ್ಥಿತಿ ಉತ್ತಮವಾಗಿತ್ತು’, ಎಂದು ಆ ನ್ಯಾಯಾಧೀಶರು ತೀರ್ಮಾನಿಸಿದರು.

ಮಾರ್ಚ್ ೫ ರಂದು ಅವರಿಬ್ಬರಿಗೂ ೧೦ ಲಕ್ಷ ರೂಪಾಯಿ ಡಿ.ಡಿ. ನೀಡಲಾಯಿತು. ‘ಟೈಮ್ಸ್ ಆಫ್‌ ಇಂಡಿಯಾ’ ನೀಡಿರುವ ವರದಿಗನುಸಾರ ಅವರು ಸಂಪೂರ್ಣ ಸುರಕ್ಷಿತವಾಗಿ ನೇಪಾಳಕ್ಕೆ ಹೋದರು. ಈ ಘಟನೆ ನಡೆದ ದುಮಕಾ ಊರನ್ನು ಝಾರ್ಖಂಡ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಪ್ರತಿನಿಧಿಸುತ್ತಿದ್ದರು. ಆಗ ವಿಪಕ್ಷದಲ್ಲಿದ್ದ ಭಾಜಪವು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇಲ್ಲವೆಂದು ಝಾರ್ಖಂಡ ಸರಕಾರವನ್ನು ಟೀಕಿಸಿತ್ತು.

೨. ಭಾರತ ಮತ್ತು ಹಿಂದೂ ಸಂಸ್ಕ್ರತಿಯನ್ನು ಆರೋಪಿಸಲು ದೇಶವಿರೋಧಿ ವ್ಯವಸ್ಥೆ ಕಾರ್ಯನಿರತವಾಗಿರುವ ಸಾಧ್ಯತೆ

ನಾನು ಸಾಂಕೇತಿಕ ಛಾಯಾಚಿತ್ರವನ್ನು ವೀಡಿಯೋ ಜೊತೆಗೆ ಟ್ವೀಟ್‌ ನೋಡಿದಾಗ, ಆ ವೀಡಿಯೋದಲ್ಲಿ ಸ್ಪ್ಯಾನಿಶ್‌ ಮಹಿಳೆಯು ‘ತಾನು ಈ ಪರಿಸ್ಥಿತಿಯನ್ನು ಹೇಗೆ ಎದುರಿಸಿದೆನು ?’, ಎನ್ನುವ ವಿಷಯದಲ್ಲಿ ಮಾತನಾಡುತ್ತಿದ್ದಳು. ಈ ವೀಡಿಯೋವನ್ನು ಓರ್ವ ತುರ್ಕಿ ಮಹಿಳೆಯು ಪ್ರಸಾರ ಮಾಡಿದ್ದಳು. ಈ ವೀಡಿಯೋಗೆ ೪೯ ದಶಲಕ್ಷ ಪ್ರತಿಕ್ರಿಯೆಗಳು ವ್ಯಕ್ತವಾಗಿರುವುದು ನಿಜವಾಗಿಯೂ ಆಶ್ಚರ್ಯದ ವಿಷಯವಾಗಿದೆ ಮತ್ತು ಆ ವಿಷಯದಲ್ಲಿ ಸಂಶಯ ಉದ್ಭವಿಸುತ್ತದೆ. ನಾನು ಊಹಿಸಿರುವಂತೆಯೇ ನಡೆದಿತ್ತು, ಬಂಧಿಸಿರುವವರಲ್ಲಿ ಯಾವುದೇ ವ್ಯಕ್ತಿ ಮುಸಲ್ಮಾನನಾಗಿರಲಿಲ್ಲ, ಇದರಿಂದ ‘ಭಾರತದ ತೇಜೋವಧೆ ಮಾಡಲು ೨೦೧೨ ರ ‘ನಿರ್ಭಯಾ’ ಪ್ರಕರಣದಲ್ಲಿ ಮಾಡಿದಂತೆ ‘ಟೂಲ್‌ ಕಿಟ್’ (ರಾಷ್ಟ್ರವಿರೋಧಿ ವ್ಯವಸ್ಥೆ) ಕಾರ್ಯನಿರತಗೊಳಿಸಲಾಗಿತ್ತು’, ಎಂದು ಅನಿಸುತ್ತಿತ್ತು. ಆ ಸಮಯದಲ್ಲಿ ಕಾಡ್ಗಿಚ್ಚಿನಂತೆ ಆ ವರದಿ ಜಗತ್ತಿನಾದ್ಯಂತ ಹರಡಿತ್ತು. ವೈಯಕ್ತಿಕ ಶಂಕಿತರ ಬದಲಿಗೆ ಭಾರತ ಮತ್ತು ಹಿಂದೂ ಸಂಸ್ಕ್ರತಿಯ ಮೇಲೆ ಆರೋಪಗಳಾದವು. ಆ ಸಮಯದಲ್ಲಿ, ಭಾರತವನ್ನು ಪಾಕಿಸ್ತಾನದೊಂದಿಗೆ ಸರಿಸಮಾನ ಎಂದು ಹೋಲಿಸಲು ಪ್ರಯತ್ನಿಸಿರುವ ಸಾಧ್ಯತೆಯಿದೆ; ಏಕೆಂದರೆ, ಕೆಲವು ತಿಂಗಳುಗಳ ಹಿಂದೆ ರಾದೆರಹಮ್‌ ಸ್ಥಳದಲ್ಲಿ ಪಾಕಿಸ್ತಾನಿ ಮುಸಲ್ಮಾನರು ಬಲಾತ್ಕಾರ ಮಾಡಿದ್ದರು. ಆ ಸಮಯದಲ್ಲಿ ಭಾರತದ ವಿರುದ್ಧ ಬಲವಾಗಿ ಪ್ರಸಾರ ಮಾಡಲಾಯಿತು ಮತ್ತು ಅದು ಯಶಸ್ವಿಯಾಯಿತು. ಪಶ್ಚಿಮ ಕಡೆಯ ದೇಶಗಳ ಬಹುತೇಕ ಜನರಲ್ಲಿ ಯಾರಿಗೆ ಭಾರತದ ವಿಷಯದಲ್ಲಿ ಯಾವುದೇ ಮಾಹಿತಿ ಅನುಭವವಿಲ್ಲವೋ, ಅವರು ‘ಭಾರತದಲ್ಲಿ ಬಲಾತ್ಕಾರವು ದೊಡ್ಡ ಸಮಸ್ಯೆಯಾಗಿದೆ’, ಎಂದು ಭಾವಿಸಿದರು. ಸದ್ಯದ ದುಮಕಾ ಪ್ರಕರಣದ ಪ್ರಕರಣವೂ ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿತು. ತುರ್ಕಿ ಮಹಿಳೆಯ ಟ್ವೀಟ್‌ಗೆ ೧೦ ದಿನಗಳಲ್ಲಿ ೨೧೦ ದಶಲಕ್ಷ ಪ್ರತಿಕ್ರಿಯೆಗಳು ಬಂದಿವೆ. ಪ್ರತ್ಯಕ್ಷ ಮಾಹಿತಿಯಲ್ಲಿ ಬದಲಾವಣೆಯನ್ನು ಮಾಡದೇ ಹೀಗಾಗುವುದು ಕೇವಲ ಅಸಾಧ್ಯವೇ ಆಗಿದೆ. ಈ ಪ್ರಕರಣ ಕೇವಲ ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರವಲ್ಲ. ಬದಲಾಗಿ ಪ್ರಸಾರ ಮಾಧ್ಯಮಗಳ ಪ್ರವಾಹದಲ್ಲಿಯೂ ಅದಕ್ಕೆ ಪ್ರಚಾರ ನೀಡಲಾಯಿತು. ಈ ಭಯಾನಕ ಪ್ರಕರಣ ಮತ್ತೊಮ್ಮೆ ಭಾರತದಲ್ಲಾಗಿದೆÉ ಎನ್ನುವಾಗ ಸುದ್ದಿಪತ್ರಿಕೆಗಳು ‘ತಥಾಕಥಿತ ಮಾಹಿತಿ’ ಎಂದು ಪ್ರಸಾರ ಮಾಡಲಿಲ್ಲ.

೩. ಸ್ಪ್ಯಾನಿಶ್‌ ಮಹಿಳೆಯ ಮೇಲಿನ ಬಲಾತ್ಕಾರದ ಪ್ರಕರಣದಲ್ಲಿನ ಸಂದೇಹಗಳು

ಸ್ಪ್ಯಾನಿಶ್‌ ಮಹಿಳೆಯ ಮೇಲೆ ಸಾಮೂಹಿಕ ಬಲಾತ್ಕಾರ ಆಗಿರಲೂ ಬಹುದು; ಆದರೆ ಈಗಿನ ಕಾಲದಲ್ಲಿ ಆ ಘಟನೆ ನಿಜವಾಗಿಯೂ ನಡೆದಿದೆಯೆನ್ನುವ ಬಗ್ಗೆ ಎಲ್ಲಿಯವರೆಗೆ ಸಾಬೀತಾಗುವುದಿಲ್ಲವೋ ಅಲ್ಲಿಯವರೆಗೆ ಖಾತ್ರಿ ಇರುವುದಿಲ್ಲ, ಪುರುಷ ಅಥವಾ ಮಹಿಳೆ ಯಾರ ಹೇಳಿಕೆಯನ್ನೂ ನಿಜವೆಂದು ತಿಳಿಯಬಾರದು; ಏಕೆಂದರೆ ಭಾರತದಲ್ಲಿ ಸುಳ್ಳು ಪದ್ಧತಿಯಲ್ಲಿ ದೂರು ದಾಖಲಿಸುವ ಪ್ರಮಾಣ ಬಹಳಷ್ಟಿದೆ. ‘ಈ ಪ್ರಕರಣಕ್ಕೆ ಹೆಚ್ಚು ಒತ್ತು ನೀಡಬಾರದು’ ಎಂದು ನಾನು ‘ಟ್ವೀಟ್’ ಮಾಡಿದಾಗ ನನ್ನ ಮೇಲೆ ವೈಯಕ್ತಿಕವಾಗಿ ಅಪಮಾನಕರ ಟೀಕೆಗಳಾದವು. ನಾನು ಈ ಪ್ರಕರಣದಲ್ಲಿ ಕೆಲವು ವಿಷಯಗಳನ್ನು ಮಂಡಿಸಿದ್ದೇನೆ. ಆ ಅಂಶಗಳು ಮುಂದಿನಂತಿವೆ.

ಅ. ೭ ಅಥವಾ ೮ ಜನರು ಈ ರೀತಿ ಅಮಾನವೀಯವಾಗಿ ಬಲಾತ್ಕಾರ ಎಸಗಿದ ೧ ಗಂಟೆಯ ಬಳಿಕ ಆ ಮಹಿಳೆ ಮತ್ತು ಆಕೆಯ ಪತಿ ದ್ವಿಚಕ್ರ ವಾಹನದಲ್ಲಿ ೬೦ ಕಿಲೋಮೀಟರ್‌ ದೂರ ಪ್ರಯಾಣಿಸುವ ಸ್ಥಿತಿಯಲ್ಲಿದ್ದರೇ ?

ಆ. ಇದರಲ್ಲಿನ ಎರಡನೇಯ ದೋಷವೆಂದರೆ, ಅವರಿಗೆ ಧನಾದೇಶ ಸಿಕ್ಕಿದ ನಂತರ ನೇಪಾಳಕ್ಕೆ ಹೋಗುವ ಮೊದಲು ಅವರು ಪೊಲೀಸರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿದ್ದರೇ ? ಅವರು ಪೊಲೀಸರೊಂದಿಗೆ ‘ಸೆಲ್ಫಿ’ (ಸ್ವಂತದ ಛಾಯಾಚಿತ್ರ) ತೆಗೆದು ಕೊಂಡರು. ‘ಟ್ವೀಟ್’ ಮಾಡಿರುವ ಛಾಯಾಚಿತ್ರದಲ್ಲಿ ಆ ಮಹಿಳೆಯ ಮುಖದ ಮೇಲಿನ ಪರಚಿದ ಗುರುತು ಮಾಯವಾಗಿದ್ದವು.

ಇ. ಮತ್ತೊಂದು ದೋಷವೆಂದರೆ ‘ಎಕ್ಸ್‌’ (ಹಿಂದಿನ ‘ಟ್ವಿಟರ್‌’) ಈ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿನ ಒಬ್ಬರು ಈ ಮಹಿಳೆಯು ಜನವರಿ ೧೮ ರಂದು ಪ್ರಸಾರ ಮಾಡಿದ ಆಡಿಯೋ ಟೇಪ್ನ್ನು ಹುಡುಕಿ ತೆಗೆದರು. ಆ ವಿಡಿಯೋದಲ್ಲಿ ಇಬ್ಬರೂ ೪ ತಿಂಗಳ ನಂತರ ಮಾತನಾಡಿದ್ದರು, ‘ಪಾಕಿಸ್ತಾನದಿಂದ ಭಾರತಕ್ಕೆ ಬಂದ ನಂತರ ೧೪ ಸಾವಿರದ ೫೦೦ ಕಿಲೋಮೀಟರ್‌ ಪ್ರವಾಸ ಮಾಡಿ ಕನ್ಯಾಕುಮಾರಿಯನ್ನು ತಲುಪಿದ್ದು ಆಸ್ಟ್ರೇಲಿಯಾಗೆ ಹೋಗುವವರಿದ್ದಾರೆ’, ಎಂದು ಹೇಳಿದ್ದರು. ಹೀಗಿರುವಾಗ ಅವರು ತಮ್ಮ ನಿಯೋಜನೆಯನ್ನು ಬದಲಾಯಿಸಿ ಮತ್ತು ಇಷ್ಟು ಬೇಗ ಉತ್ತರಭಾರತಕ್ಕೆ ಹೇಗೆ ಬಂದರು ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.

ನನ್ನ ಚಿಂತೆಯ ವಿಷಯವೆಂದರೆ, ಕೆಲವು ಸ್ಥಳೀಯ ಜನರನ್ನು ಥಳಿಸಿ, ಸತ್ಯವಲ್ಲದ ವಿಷಯವನ್ನು ಅವರು ಒಪ್ಪಿಕೊಳ್ಳುವಂತೆ ಒತ್ತಡ ಹಾಕಿರಬೇಕು, ದುರ್ದೈವದಿಂದ ಇಂತಹ ಘಟನೆ ನಡೆದಿರುವ ಸಾಧ್ಯತೆಯಿದೆ; ಏಕೆಂದರೆ ಕಠುವಾ ಪ್ರಕರಣದಲ್ಲಿ ಆ ರೀತಿ ನಡೆದಿತ್ತು. ‘ದಿ ಗರ್ಲ್ ಫ್ರಮ್‌ ಕಠುವಾ’ ಎಂಬ ಸಂಶೋಧನೆ ಮಾಡಿ ಬರೆದ ಪುಸ್ತಕದಲ್ಲಿ ಮಧುಪೂರ್ಣಿಮಾ ಕಿಶ್ವರ ಇವರು ದುಃಖದಾಯಕ ಪ್ರಕರಣದ ವಿಷಯದಲ್ಲಿ ಅತ್ಯಮೂಲ್ಯ ಮಾಹಿತಿ ಯನ್ನು ನೀಡಿದ್ದರು. ಅದನ್ನು ಓದಿ ನನಗೆ ಆಘಾತವೇ ಆಗಿತ್ತು.

೪. ಭಾರತದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಪ್ರಮಾಣವು ಸಹ ಭಾರತ ವಿರುದ್ಧದ ಒಂದು ಷಡ್ಯಂತ್ರ !

ಈ ಸ್ಪ್ಯಾನಿಶ್‌ ದಂಪತಿಗಳು ಪ್ರಸಾರ ಮಾಡಿದ ‘ಪೋಸ್ಟ್‌’ ನಿಂದ (ಲೇಖನದಿಂದ) ಎರಡು ವಿಷಯಗಳು ಗಮನಕ್ಕೆ ಬರುತ್ತವೆ. ಮೊದಲನೆಯದಾಗಿ, ಮುಖ್ಯಪ್ರವಾಹದ ಸಾಮಾಜಿಕ ಮಾಧ್ಯಮ ಗಳು ‘ಅಪರಾಧಿಗಳು ಹಿಂದೂಗಳಾಗಿದ್ದಾರೆ’ ಎಂದು ದೃಢಪಡಿಸ ಲಿಲ್ಲ, ಆದರೂ ಭಾರತೀಯರ ಮೇಲೆ ಅಂದರೆ ಹಿಂದೂ ಸಂಸ್ಕ್ರತಿಯನ್ನು ಬಲವಾಗಿ ಟೀಕಿಸಿದವು. ಮತ್ತೊಂದೆಡೆ ಅನೇಕ ಹಿಂದೂಗಳಿಗೆ ಈ ವಿμÀಯದಲ್ಲಿ ನಾಚಿಕೆಯೆನಿಸಿತು ಮತ್ತು ಅವರು ಈ ಘಟನೆಯ ಬಗ್ಗೆ ಕ್ಷಮೆ ವ್ಯಕ್ತಪಡಿಸಿದರು. ‘ದಿ ಇಕಾನಾಮಿಕ ಟೈಮ್ಸ’ ದಿನಪತ್ರಿಕೆಯು ‘ಇಂತಹ ಘಟನೆ ನಡೆದಿರುವ ಬಗ್ಗೆ ಎಲ್ಲಾ ಭಾರತೀಯರಿಗೆ ನಾಚಿಕೆಯೆನಿಸಬೇಕು’, ಎಂದು ತಲೆಬರಹ ನೀಡಿತ್ತು. ಆದರೆ ಹೀಗೇಕೆ ? ಒಂದು ವೇಳೆ ಓರ್ವ ಜರ್ಮನ ಪ್ರಜೆ ಇಂತಹ ಅಪರಾಧ ಎಸಗಿದಾಗ, ಅವನ ದೋಷವನ್ನು ನಾನು ನನ್ನ ಮೇಲೆ ತೆಗೆದುಕೊಳ್ಳುವುದಿಲ್ಲ ಅಥವಾ ಕ್ರಿಶ್ಚಿಯನ ಅಥವಾ ಜರ್ಮನ ಸಂಸ್ಕ್ರತಿಗೆ ದೋಷ ನೀಡುವುದಿಲ್ಲ; ಆದರೆ ಭಾರತಕ್ಕೆ ಹೋಲಿಸಿದರೆ ಭಾರತದಲ್ಲಿ ಇಂತಹ ಘಟನೆಗಳು ನಡೆಯುವುದು ಅತ್ಯಲ್ಪ ಪ್ರಮಾಣದಲ್ಲಿದ್ದರೂ ಹಿಂದೂಗಳು ಆ ವಿಷಯದಲ್ಲಿ ಸ್ವತಃ ತಮ್ಮನ್ನು ದೋಷಿಯೆಂದು ತಿಳಿಯುತ್ತಾರೆ’  ಇದರಿಂದ ಇತರರಿಗೆ ಅವರ ಮೇಲೆ ಇನ್ನಷ್ಟು ಹೆಚ್ಚು ಪ್ರಮಾಣದಲ್ಲಿ ಆಕ್ರಮಣ ಮಾಡಲು ಸಾಧ್ಯವಾಗುತ್ತದೆ ಎನ್ನುವುದು ಅವರಿಗೆ ತಿಳಿಯುವುದಿಲ್ಲ. ಉದಾಹರಣೆಗೆ, ಡೇನಿಯಲ್‌ ಹ್ಯಾಕಿಕಟ್ಜು ಅವರು ”ದೇವರನ್ನು ಪೂಜಿಸುವ ಈ ಧರ್ಮದಲ್ಲಿ ಅಥವಾ ಪುರಾಣಕಥೆಗಳಲ್ಲಿ ವ್ಯಭಿಚಾರ ಮತ್ತು ಲೈಂಗಿಕ ಬಲಾತ್ಕಾರಗಳಿವೆ, ಇಂತಹ ಧರ್ಮದ ಮೇಲೆ ಈ ಸಮಾಜ ಆಧಾರಿತವಾಗಿದೆ ಎಂದು ಅನಿಸುತ್ತದೆ’ ಎಂದು ಟ್ವೀಟ್‌ ಮಾಡಿದ್ದಾರೆ, ಇದಕ್ಕೆ ನನ್ನ ಉತ್ತರ, ”ಹಿಂದೂ ಧರ್ಮವನ್ನು ಆಧರಿಸಿದ ಸಮಾಜ ಹೇಗಿದೆ ? ಎನ್ನುವುದನ್ನು ಅಬ್ರಾಹ್ಮಿಕ (ಏಕದೇವತಾವಾದಿ) ಧರ್ಮ ಆಧಾರಿತ ಸಮಾಜದೊಂದಿಗೆ ಹೋಲಿಕೆ ಮಾಡಿ ಕಂಡು ಹಿಡಿಯಬೇಕು. ಇದಕ್ಕಾಗಿ ನಡೆಯುವ ಅಪರಾಧಗಳು ಹಾಗೂ ಅಪರಾಧಿಗಳ ಧರ್ಮದ ವಿಷಯದಲ್ಲಿ ಮಾಹಿತಿ ಸಂಗ್ರಹಿಸಬೇಕು. ನನ್ನ ಊಹೆಯಂತೆ ಹಿಂದೂ ಸಮಾಜದಲ್ಲಿ ಅತ್ಯಂತ ಕಡಿಮೆ ಅಪರಾಧಗಳು ನಡೆಯುತ್ತವೆ. ಇದು ಜನರಿಗೆ ಮತ್ತು ನಿಮಗೂ ತಿಳಿದಿರುತ್ತದೆ. ತುಲನಾತ್ಮಕ ದೃಷ್ಟಿಯಿಂದ, ಭಾರತದಲ್ಲಿ ಅಪರಾಧಗಳ ಪ್ರಮಾಣ ಕಡಿಮೆಯಿದೆ. ಆದರೂ, ಭಾರತದ ದೊಡ್ಡ ಜನಸಂಖ್ಯೆಯ ಲಾಭವನ್ನು ಪಡೆದು, ಅವರು ಜನರನ್ನು ಗೊಂದಲದಲ್ಲಿ ಹಾಕುತ್ತಾರೆ. ಉದಾಹರಣೆಗೆ, ‘ಬಿಸಿನೆಸ್‌ ಸ್ಟ್ಯಾಂಡರ್ಡ್‌’ ದಿನಪತ್ರಿಕೆಯು ಬಲಾತ್ಕಾರ ನಡೆಯುವ ಪ್ರಮಾಣದ ವಿಷಯದಲ್ಲಿ ಬರೆಯುತ್ತದೆ, ‘೨೦೨೦ ರ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಅತ್ಯಾಚಾರದ ಘಟನೆಗಳು ನಡೆಯುವ ಪ್ರಮಾಣ ಪ್ರತಿ ಲಕ್ಷ ನಾಗರಿಕರಿಗೆ ೨೨ ಸಾವಿರದ ೧೭೨ ಆಗಿದೆ. ಆದ್ದರಿಂದ, ಅದರ ಶೇಕಡಾವಾರು ಪ್ರಮಾಣವು ೨೨.೧೭ ಆಗಿದೆ, ಅಂದರೆ ಪ್ರತಿದಿನ ೮೭ ಅತ್ಯಾಚಾರದ ಘಟನೆಗಳು ಸಂಭವಿಸುತ್ತವೆ. ಸ್ವೀಡನ್‌ ವಿಷಯದಲ್ಲಿ ಅವರು ಹೇಳುತ್ತಾರೆ ‘ಸ್ವೀಡನ್‌ನಲ್ಲಿ ಬಲಾತ್ಕಾರದ ಘಟನೆಗಳು ಶೇ. ೫.೯೬. ೧ ಲಕ್ಷ ಜನರಲ್ಲಿ ೫ ಸಾವಿರದ ೯೬೦ ಇಷ್ಟು ಪ್ರಮಾಣವಿದೆ.’’

ಸಾಮಾನ್ಯವಾಗಿ ಓದುವವರಿಗೆ ಮೇಲ್ನೋಟಕ್ಕೆ ಯಾವ ದೇಶ ಕೆಟ್ಟದ್ದಾಗಿದೆ ? ಎಂದು ಅನಿಸುತ್ತಿದ್ದರೆ, ಬಹುಶಃ ಅದು ಭಾರತ ದೇಶವಾಗಿರಬಹುದು; ಆದರೆ ಇದನ್ನು ನಾವು ವಿಶ್ಲೇಷಿಸಿದರೆ, ಭಾರತದ ೧೩೦ ಕೋಟಿ ಜನಸಂಖ್ಯೆಯನ್ನು ಸ್ವೀಡನನ ೧ ಕೋಟಿ ಜನಸಂಖ್ಯೆಯೊಂದಿಗೆ ಹೋಲಿಸಿದರೆ, ಭಾರತದ ಪ್ರಮಾಣ ೧೩೦ ಕೋಟಿಯಲ್ಲಿ ೭ ಲಕ್ಷ ೮೦ ಸಾವಿರವಾಗುತ್ತದೆ, ಅಂದರೆ ೧೩೦ ಕೋಟಿ ಜನಸಂಖ್ಯೆಯನ್ನು ಪರಿಗಣಿಸಿದರೆ ಭಾರತದಲ್ಲಿ ಬಲಾತ್ಕಾರದ ಪ್ರಮಾಣ ಕಡಿಮೆಯಿದೆ. ಅನೇಕ ಪಾಶ್ಚಿಮಾತ್ಯರು ಹೇಳಬಹುದು, ‘ನಾವು ಭಾರತದ ಸಂಖ್ಯೆಯ ಮೇಲೆ ವಿಶ್ವಾಸವಿಡುವುದಿಲ್ಲ’, ಇದಕ್ಕೆ ಯಾರೇನು ಮಾಡುವುದು ?

೫. ಹಿಂದೂ ಧರ್ಮವಿರೋಧಿಗಳು ವಾಸ್ತವವನ್ನು ಏಕೆ ತಿಳಿದುಕೊಳ್ಳುವುದಿಲ್ಲ ?

ಹಿಂದೂ ಧರ್ಮವನ್ನು ಆಧರಿಸಿದ ಜನರ ಮನಃಸ್ಥಿತಿಯನ್ನು ಗಮನಿಸಿದರೆ, ಆ ಧರ್ಮದಲ್ಲಿ ಅಪರಾಧದ ಪ್ರಮಾಣ ಕಡಿಮೆಯಿದೆ. ಇದು ತಿಳಿಯಲು ಹಿಂದೂ ಧರ್ಮವೆಂದರೆ ಏನು ? ಇದನ್ನು ತಿಳಿದುಕೊಳ್ಳಬೇಕು. ಇದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಯಾರ ಹೆಸರು ಇದೆಯೋ, ಅಂತಹ ಪಾಶ್ಚಿಮಾತ್ಯ ಸಮಾಜದ ಮುಖ್ಯವಾಹಿನಿಯ ಪ್ರಸಾರಮಾಧ್ಯಮಗಳು ಭಾರತವನ್ನು ಯಾವಾಗಲೂ ಕೀಳಾಗಿ ತೋರಿಸಲು ಏಕೆ ಪ್ರಯತ್ನಿಸುತ್ತಿವೆ ? ಅವರು ಸರಿಯಾದ ಮತ್ತು ವಾಸ್ತವವನ್ನು ಏಕೆ ತಿಳಿದುಕೊಳ್ಳುವುದಿಲ್ಲ ? ವಿನ್ಸಂಟ್‌ ಚರ್ಚಿಲ ಹೇಳಿದಂತೆ  ‘ಹಿಂದೂ ಧರ್ಮ ಕ್ರೂರವಾಗಿದೆ’ ಎಂದು ನಂಬುವ ಜನರು ಒಂದೋ ನಿಜವಾಗಿಯೂ ಅಜ್ಞಾನಿಗಳಾಗಿದ್ದಾರೆ ಅಥವಾ ಅವರಿಗೆ ಸತ್ಯ ತಿಳಿದಿದೆ’ ಹಿಂದೂ ಧರ್ಮ ಇತರ ಧರ್ಮಗಳ ವ್ಯವಹಾರವನ್ನೇ ಮುಚ್ಚಿ ಬಿಡಲಿದೆ, ಎಂದು ಅವರು ಹೆದರಿಕೆಯಾಗುತ್ತಿದೆಯೇ ? ಈ ವಿಚಾರದಲ್ಲಿ ಯೋಗ್ಯ ಸಂಶೋಧನೆ ನಡೆಯಬೇಕು.

ಲೇಖಕಿ : ಮಾರಿಯಾ ವರ್ಥ, ಹಿಂದೂ ಧರ್ಮದ ಅಧ್ಯಯನಕಾರರು, ಜರ್ಮನಿ.