‘ಆಪ್‌’ನ ಅರವಿಂದ ಕೇಜರಿವಾಲ ಮತ್ತು ಅಮೇರಿಕಾದ ಉದ್ಯಮಿ ಜಾರ್ಜ್ ಸೊರೊಸ ಇವರ ‘ಟೂಲಕಿಟ’ನ ದೊಡ್ಡ ಪಿತೂರಿ ಮತ್ತು ನಾವು (ಭಾರತೀಯರು) !

(ಟೂಲ್‌ಕಿಟ್‌ ಅಂದರೆ ದೇಶವಿರೋಧಕರ ತಂತ್ರ)

ಆಮ್‌ ಆದ್ಮಿ ಪಕ್ಷದ (ಆಪ್) ನಾಯಕ ಅರವಿಂದ ಕೇಜರಿವಾಲ

ದೆಹಲಿಯ ಮುಖ್ಯಮಂತ್ರಿ ಮತ್ತು ಆಮ್‌ ಆದ್ಮಿ ಪಕ್ಷದ (ಆಪ್) ನಾಯಕ ಅರವಿಂದ ಕೇಜರಿವಾಲ ಈ ಮನುಷ್ಯನಿಗಾಗಿ ಎಷ್ಟು ಜನರು ಯಾವ ಯಾವ ಹಂತದಲ್ಲಿ ಪ್ರಯತ್ನಿಸಿದ್ದಾರೆ ಮತ್ತು ಈಗಲೂ ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಇಲ್ಲಿಯವರೆಗೆ ಎಲ್ಲರಿಗೂ ತಿಳಿದಿರಬಹುದು. ಇದರೊಂದಿಗೆ ಇವರನ್ನು (ಕೇಜರಿವಾಲ) ಇನ್ನೂ ಮೊದಲೇ ಬಂಧಿಸಬೇಕಾಗಿತ್ತು ಎಂದು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿರುವ ಕೆಲವು ಬುದ್ಧಿವಂತ (?) ಮತ್ತು ತಜ್ಞ (?) ಗುಂಪಿನ ಜನರೂ ಇರುವುದು ಕಂಡು ಬಂದಿತು. (ಸ್ನೇಹಿತರ ಗುಂಪಿನಲ್ಲಿಯೂ ಇಂತಹ ಜನರಿದ್ದಾರೆ).

ಮೂಲದಲ್ಲಿ ಈ ಜನರು ‘ಈ ಆಸಾಮಿ ಸಾಮಾನ್ಯನೆಂದು ಕಾಣಿಸುತ್ತಿದ್ದರೂ, ಸಾಮಾನ್ಯನಲ್ಲ’ ಎಂಬುದನ್ನು ಗಮನಿಸುವುದಿಲ್ಲ ಅಥವಾ ಈ ವಿಷಯ ಅವರ ಗಮನಕ್ಕೆ ಬರುತ್ತಿಲ್ಲ? ಇದರಿಂದ ಈ ವ್ಯಕ್ತಿಯನ್ನು ಬಂಧಿಸಿದ ಬಳಿಕ ಆತ ಬಿಡುಗಡೆಯಾಗುವ ಸಾಧ್ಯತೆ ಕಿಂಚಿತ್ತೂ ಇಲ್ಲ. ಈ ರೀತಿ ಕೇಸ (ಪ್ರಕರಣವನ್ನು) ಸಿದ್ಧಪಡಿಸಿ ಬಳಿಕ ಬಂಧಿಸುವುದು ಅತ್ಯಂತ ಆವಶ್ಯಕವಾಗಿತ್ತು; ಏಕೆಂದರೆ ಇದು ಒಂದು ಅತಿ ಪ್ರಾಮುಖ್ಯತೆಯನ್ನು ಪಡೆದಿರುವ ಪ್ರಕರಣವಾಗಿದೆ. (It is highest profile case ever.)

…………………………………………..ಸಂಕಲ್ಪನೆ ಮತ್ತು ಲೇಖಕ: ಶ್ರೀ. ಪ್ರಸನ್ನ ಆಠವಲೆ, ಠಾಣೆ. …………………………………………………

೧.  ಕೇಜರಿವಾಲ ಅವರನ್ನು ಬಂಧಿಸಲು ಇದೇ ಸೂಕ್ತ ಸಮಯವಾಗಿತ್ತು

ಇಂದು ಈ ಮನುಷ್ಯನಿಗಾಗಿ (ಕೇಜರಿವಾಲ ಇವರಿಗಾಗಿ) ಎಷ್ಟು ಮೇಲಿನ ಸ್ತರದಿಂದ ಜೋರಾಗಿ ಕೋಲಾಹಲ ನಡೆದಿದೆ, ಅಂದರೆ ಇವತ್ತಿನ ವರೆಗೆ ಅಮೇರಿಕಾ ಮಾತ್ರವಲ್ಲ, ವಿಶ್ವ ಸಂಸ್ಥೆಯಲ್ಲಿಯೂ ಅವರ ಬಂಧನದ ಬಗ್ಗೆ ಪ್ರಶ್ನಿಸಲಾಯಿತು. ಇದರಿಂದ ಗಮನಿಸಬೇಕಾದ ಅಂಶವೆಂದರೆ, ಈ ಒಬ್ಬ ವ್ಯಕ್ತಿಗಾಗಿ, ಭಾರತದ ಸಾರ್ವಭೌಮ ಕಾನೂನು ಮತ್ತು ನ್ಯಾಯವ್ಯವಸ್ಥೆಯನ್ನು ವಿಶ್ವಸಂಸ್ಥೆಯವರೆಗೆ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಸ್ವಲ್ಪ ವಿಚಾರ ಮಾಡಿರಿ, ಸಾಮಾನ್ಯ ಪರಿಸ್ಥಿತಿಯಲ್ಲಿ ಕೆಲವು ಬುದ್ಧಿವಂತ ಜನರು ಹೇಳಿದಂತೆ ಮೊದಲು ಬಂಧಿಸಿದ್ದರೆ, ಭಾರತದಲ್ಲಿ ಅಭೂತಪೂರ್ವ ಅರಾಜಕತೆಯನ್ನು ಸೃಷ್ಟಿಸಲಾಗುತ್ತಿತ್ತು. ಇಂದು ಯಾವುದೇ ಮೋದಿವಿರೋಧಿ ಪಕ್ಷಗಳು ಇದರಲ್ಲಿ ಕೈಹಾಕುವ ಸ್ಥಿತಿಯಲ್ಲಿಲ್ಲ; ಏಕೆಂದರೆ ಈಗ ಚುನಾವಣೆ ಹೊಸ್ತಿಲಿನಲ್ಲಿದೆ. ಚುನಾವಣಾ ಆಯೋಗದ ಲಾಠಿ ಅವರೆಡೆಗೆ ತಿರುಗುವ ಸಾಧ್ಯತೆಯಿದೆ. ಚುನಾವಣೆಯಲ್ಲಿ ಎಲ್ಲರಿಗೂ ಭಾಗವಹಿಸುವುದಿದೆ. ಇದಲ್ಲದೇ ಪ್ರಧಾನಮಂತ್ರಿ ಮೋದಿಯವರಿಗೆ ಹೆಚ್ಚೇನೂ ವಿರೋಧ ವ್ಯಕ್ತವಾಗಲಿಲ್ಲ ಮತ್ತು ಅವರ ಗೆಲುವು ಸುಗಮವಾಗಿದೆ. ಯಾರಿಗೆ ಮೋದಿಯವರ ವಿಷಯದಲ್ಲಿ ಸಹಾನುಭೂತಿ ಮತ್ತು ವಿಶ್ವಾಸ ಇದೆಯೋ, ಅಂತಹ ಜನರಲ್ಲಿ ತಪ್ಪು ಸಂದೇಶ ಹೋಗಬಹುದು. ಅದೇ ರೀತಿ ಇತ್ತೀಚೆಗೆ ಚಳುವಳಿಯಲ್ಲಿ ನಿರತರಾಗಿರುವ ‘ಆಂದೋಲನಜೀವಿ’ ಗುಂಪಿನತ್ತ ನೋಡಲಿಕ್ಕೂ ಯಾರಿಗೂ ಸಮಯವಿಲ್ಲ. ಇದರಿಂದ ಭಾರತದಲ್ಲಿ ಕೇಜರಿವಾಲರಿಗೆ ಬೆಂಬಲ ಅತೀ ಕಡಿಮೆ, ನಗಣ್ಯವೆನಿಸುವಷ್ಟಿದೆ. ಅಂದರೆ ಇಷ್ಟು ಉನ್ನತ ಮಟ್ಟದ ಮತ್ತು ಮೇಲ್ಮಟ್ಟದ ರಾಜಕೀಯ ಬೆಂಬಲ ಹೊಂದಿದ್ದ ವ್ಯಕ್ತಿಯನ್ನು ಬಂಧಿಸಲು ಇದಕ್ಕಿಂತ ಸೂಕ್ತ ಸಮಯ ಮತ್ತಿನ್ಯಾವುದು ಇರಲು ಸಾಧ್ಯ ?

೨. ಮೋದಿ-ಶಾಹ ಮತ್ತು ತಟಸ್ಥ ನ್ಯಾಯವಾದಿಗಳ ಜಾಗರೂಕತೆಯಿಂದಾಗಿ, ದೇಶದೊಳಗಿನ ಪಿತೂರಿ ವಿಫಲಗೊಳ್ಳುತ್ತಿದೆ

ಎರಡನೇಯದಾಗಿ, ಅನೇಕ ತಥಾಕಥಿತ ಬುದ್ಧಿವಂತ ಜನರಿಗೆ ತಿಳಿಯುವುದಿಲ್ಲ; ಆದರೆ ಮೋದಿ, ಶಾಹ ಇವರೊಂದಿಗೆ ಅನೇಕ ಉಚ್ಚ ವ್ಯಕ್ತಿಗಳಿಗೆ ‘ಈ ಮನುಷ್ಯನ ಹಿಂದೆ (ಕೇಜರಿವಾಲರ ಹಿಂದೆ) ಯಾವ್ಯಾವ ಶಕ್ತಿಗಳಿವೆ ?’ ಎಂದು ತಿಳಿದಿತ್ತು. ಆ ಶಕ್ತಿಗಳಿಗೆ ಭಾರತದಲ್ಲಿ ಅತೀ ಕಡಿಮೆ ಸಕ್ರಿಯ ಬೆಂಬಲ ಸಿಗುವುದರಲ್ಲಿ ಇದಕ್ಕಿಂತ ಸೂಕ್ತ ಸಮಯ ಬೇರೆ ಇರಲಿಲ್ಲ ಎನ್ನುವುದನ್ನು ಪುಟ್ಟ ಮಕ್ಕಳು ಕೂಡ ಹೇಳಬಲ್ಲರು. ಅದೇ ರೀತಿ ಈ ವ್ಯಕ್ತಿಯನ್ನು ಮುಟ್ಟಿದರೆ ಯಾವ ಯಾವ ಮಟ್ಟದಲ್ಲಿ ಗಲಭೆ ಮತ್ತು ಗದ್ದಲ ನಡೆಯುವುದು ಎನ್ನುವುದು ಮೋದಿ-ಶಾಹ ಇವರಿಗೆ ತಿಳಿದಿತ್ತು. ಇಂದು ಗಮನಕ್ಕೆ ಬರುವುದೇನೆಂದರೆ, ದೇಶದಲ್ಲಿ ಚಳುವಳಿ ನಡೆಸುವ ಸ್ಥಿತಿ ಇಲ್ಲದಿರುವಾಗ ಮತ್ತು ಯಾವುದೇ ಪಕ್ಷವು ಚುನಾವಣೆಯ ಸಮಯದಲ್ಲಿ ತೇಜೋವಧೆಯ ಭೀತಿಯಿಂದ ಈ ವಿಷಯದಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲದಿರುವಾಗ ‘ಸೆಕ್ಯುಲರ’ವಾದಿ (ಜಾತ್ಯತೀತವಾದಿ) ಮತ್ತು ನ್ಯಾಯವಾದಿಗಳಿಗೆ ಇದರಲ್ಲಿ ತೊಡಗಿಸಿಕೊಂಡು ನ್ಯಾಯವ್ಯವಸ್ಥೆಯನ್ನು ಈ ಘಟನೆ ಯಲ್ಲಿ ಸೆಳೆಯಲು ಪ್ರಯತ್ನಿಸಲಾಯಿತು; ಆದರೆ ಹಿರಿಯ ನ್ಯಾಯವಾದಿ ಹರೀಶ ಸಾಳ್ವೆ ಸಹಿತ ಸರಿಸುಮಾರು ೬೦೦ ಪ್ರಮುಖ ನ್ಯಾಯವಾದಿಗಳು ಮುಖ್ಯ ನ್ಯಾಯಮೂರ್ತಿಗಳಿಗೆ ತಮ್ಮ ಹಸ್ತಾಕ್ಷರಗಳೊಂದಿಗೆ ಪತ್ರವನ್ನು ಬರೆದು ನ್ಯಾಯಾಂಗವನ್ನು ಇದರಲ್ಲಿ ಸೆಳೆಯುವ ಪ್ರಯತ್ನವನ್ನು ಯಶಸ್ವಿಯಾಗಿ ಮತ್ತು ತ್ವರಿತ ರೀತಿಯಲ್ಲಿ ವಿಫಲಗೊಳಿಸಿದರು. ಇದರಿಂದ ಗಮನಕ್ಕೆ ಬರುವುದೇನೆಂದರೆ, ಮುಂಬರುವ ಚುನಾವಣೆ, ದೆಹಲಿಯ ಜನರಿಂದ ಸಿಕ್ಕ ಶಾಂತ ಪ್ರತಿಕ್ರಿಯೆ ಮತ್ತು ತಟಸ್ಥ ನ್ಯಾಯವಾದಿಗಳ ಜಾಗರೂಕತೆಯಿಂದ ದೇಶದಿಂದ ಇದರ ಮೇಲೆ ಏನೂ ಮಾಡಲು ಸಾಧ್ಯವಿಲ್ಲ; ಎನ್ನುವುದು ಸೊರೊಸ, ಟೂಲಕಿಟ ಮತ್ತು ಆ ಗುಂಪಿನ ಗಮನಕ್ಕೆ ಬಂದಿತು. ಹಾಗಾಗಿ ಈ ಉಚ್ಚಮಟ್ಟದ ಪ್ರಕರಣದ ವ್ಯಕ್ತಿಗಾಗಿ ಅಮೇರಿಕಾ, ಯುರೋಪಿನ ದೊಡ್ಡ ದೊಡ್ಡ ಸುದ್ದಿ ಸಂಸ್ಥೆಗಳು ಕಾರ್ಯದಲ್ಲಿ ತೊಡಗಿದವು; ಅದರೊಂದಿಗೆ ವಿಶ್ವಸಂಸ್ಥೆಯ ವರೆಗೆ ಇದು ಪ್ರತಿಧ್ವನಿಸಿತು.

೩.  ಕೇಜರಿವಾಲರ ಬಂಧನದಿಂದ ಅಂತಾರಾಷ್ಟ್ರೀಯ ಸಂಚು ವಿಫಲ !

ಸಾಮಾನ್ಯವಾಗಿ, ಯಾವುದಾದರೊಂದು ದೇಶದಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ, ಅಮಾನವೀಯ ಕೃತ್ಯಗಳು, ನರಮೇಧ ಅಥವಾ ಅಂತಹುದೇ ಅರಾಜಕತೆಯ ಪರಿಸ್ಥಿತಿ ಇದ್ದರೆ ಮತ್ತು ಅಲ್ಲಿನ ಸರಕಾರವು ಅಸಮರ್ಥ ಅಥವಾ ಅನ್ಯಾಯವನ್ನು ಮಾಡುತ್ತಿದ್ದರೆ, ವಿಶ್ವಸಂಸ್ಥೆಯ ಮೂಲಕ ಇದಕ್ಕೆ ಉತ್ತರ ಕೇಳಲಾಗುತ್ತದೆ; ಆದರೆ ಯಾವುದೇ ವ್ಯಕ್ತಿಗಾಗಿ ಈ ರೀತಿ ಪ್ರಶ್ನಿಸುತ್ತಾರೆಂದರೆ ಆ ವ್ಯಕ್ತಿಗೆ ಎಷ್ಟು ದೊಡ್ಡ ಕಾರ್ಯವನ್ನು ಒಪ್ಪಿಸಲಾಗಿತ್ತು, ಎನ್ನುವುದು ಗಮನಕ್ಕೆ ಬರುತ್ತದೆ ಮತ್ತು ಬಂಧನದ ಬಳಿಕ ಅವರ ಆ ದಾಳ ವಿಫಲವಾಯಿತು ಎನ್ನುವ ಸುಳಿವು ಈ ಅಂತಾರಾಷ್ಟ್ರೀಯ ಘಟನೆಗಳಿಂದ ಕಂಡು ಬರುತ್ತದೆ.

ಮೂಲದಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ, ಈ ನಿಯೋಜಿಸಲ್ಪಟ್ಟಿದ್ದ ವ್ಯಕ್ತಿ (ಕೇಜರಿವಾಲ) ಯಾವ ಕಾರ್ಯ ಸೂಚಿಯೊಂದಿಗೆ ಕೆಲಸ ಮಾಡುತ್ತಿದ್ದನೋ, ಅದಕ್ಕಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು, ಅಮೇರಿಕಾದಂತಹ ಒಂದು ದೇಶ ಇದೆಲ್ಲವನ್ನು ವಿಶ್ವ ಸಂಸ್ಥೆಯ ವರೆಗೆ ತಲುಪಿಸುತ್ತದೆ. ಇದರ ಮತ್ತೊಂದು ಅರ್ಥವೆಂದರೆ ಈ ವ್ಯಕ್ತಿ ಅಧಿಕಾರದಲ್ಲಿರುವುದು, ದೇಶಕ್ಕೆ ಎಷ್ಟು ಅಪಾಯಕಾರಿಯಾಗಿತ್ತು. ಮೋದಿಯವರು ಇಂತಹ ವ್ಯಕ್ತಿಯನ್ನು ಸೂಕ್ತ ಸಮಯದಲ್ಲಿ ಬಂಧಿಸಿ ದೇಶವನ್ನು ದೊಡ್ಡ ಅರಾಜಕತೆಯ ಸ್ಥಿತಿಯಿಂದ ರಕ್ಷಿಸಿದರು ಎನ್ನುವುದು ಇಂದು ಗಮನಕ್ಕೆ ಬರುತ್ತದೆ. ಇಷ್ಟು ಮಾತ್ರವಲ್ಲ, ಅವರನ್ನು ಅಕಾಲಿಕ ಸಮಯದಲ್ಲಿ ಬಂಧಿಸದೇ ದೇಶವನ್ನು ಶಾಹೀನಬಾಗ, ಖಲಿಸ್ತಾನ ಬೆಂಬಲಿತ ಚಳುವಳಿಯಂತಹ ಒಂದು ದೊಡ್ಡ ಚಳುವಳಿಯಿಂದ ಕೂಡ ರಕ್ಷಿಸಿದೆ. ಅರ್ಥಾತ್‌ ಕಣ್ಣು ಮತ್ತು ಬುದ್ಧಿಯ ಮೇಲೆ ಮುಸುಕು ಹಾಕಿರುವವರಿಗೆ ಈ ವಿಷಯ ಎಂದಿಗೂ ತಿಳಿಯುವುದಿಲ್ಲ. ಎನ್ನುವುದು ದುರದೃದುಷ್ಟಕರವಾಗಿದೆ.

೪. ಒಬ್ಬ ವ್ಯಕ್ತಿಯ ಬಂಧನದ ಬಳಿಕ ಇಷ್ಟು ಗೊಂದಲವಾಗುವುದೇ ಸಂಶಯಕ್ಕೆ ಎಡೆ !

ಆಪ್‌ ಪಕ್ಷ ಮತ್ತು ಕೇಜರಿವಾಲರ ಕ್ಷೀಣಿಸುತ್ತಿರುವ ಬೆಂಬಲವನ್ನು ನೋಡಿದರೆ, ಹತ್ತಿರದ ಕಾಲಾವಧಿಯಲ್ಲಿ ದೆಹಲಿ ಮತ್ತು ಪಂಜಾಬ್‌ನಲ್ಲಿ ಸರಕಾರ ಬಿದ್ದರೂ ಆಶ್ಚರ್ಯ ಪಡಬಾರದು; ಏಕೆಂದರೆ ಈ ಕಾರ್ಯಕ್ಷಮತೆಯಿಲ್ಲದ ನಾಯಕನಿಂದ (ಕೇಜರಿ ವಾಲ), ಎರಡೂ ಸರಕಾರಗಳು ಜನರ ಬೆಂಬಲವನ್ನು ಕಳೆದು ಕೊಂಡಿವೆ. ಇಂದಿನವರೆಗೆ ಈ ದೇಶದಲ್ಲಿ, ವಿಶೇಷವಾಗಿ ಕಳೆದ ೧೦ ವರ್ಷಗಳಲ್ಲಿ, ಅನೇಕ ನಾಯಕರು, ಮಂತ್ರಿಗಳು, ರಾಜಕೀಯ ವ್ಯಕ್ತಿಗಳ ಬಂಧನ, ಕುಖ್ಯಾತ ಗೂಂಡಾಗಳನ್ನು ‘ಚಕಮಕಿಯಲ್ಲಿ ಹತ್ಯೆ’ ಮಾಡುವುದು ಇದೆಲ್ಲವೂ ನಡೆದಿದೆ; ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಷ್ಟು ಗದ್ದಲ ಒಬ್ಬ ವ್ಯಕ್ತಿಯ ಬಂಧನದ ಬಳಿಕ ಆಗುತ್ತದೆ ಅಂದರೆ ಏನೋ ದೋಷವಿದೆ ಎಂಬುದು ಕಂಡು ಬರುತ್ತದೆ. ಈ ಬಂಧನದ ವಿರುದ್ಧ ವಿರೋಧಿಗಳು ನಿಷೇಧದ ಕಾರಂಜಿಯನ್ನು ಹಾರಿಸಿ ನೋಡಿದರು; ಆದರೆ ಅನೇಕ ವಿಷಯಗಳು ಹೊರಗೆ ಬರಲು ಪ್ರಾರಂಭಿಸಿದ ಬಳಿಕ ಬಹಳ ಗದ್ದಲವಾಗಲಿಲ್ಲ. ಒಂದು ರೀತಿಯಲ್ಲಿ ‘ಆಪ್‌‘ನ ತಥಾಕಥಿತ ಆಂದೋಲನಕ್ಕೆ ಬಹಳ ದೊಡ್ಡ ಸಕ್ರಿಯ ಬೆಂಬಲ ಯಾರೂ ನೀಡಲಿಲ್ಲ ಮತ್ತು ಇದರಲ್ಲಿಯೇ ಈ ಪ್ರಕರಣದ ಗಂಭೀರತೆ ಗಮನಕ್ಕೆ ಬರುತ್ತದೆ. ಆದ್ದರಿಂದ ಈಗ ಜನರು ಸ್ವಂತ ಬುದ್ಧಿ ಮತ್ತು ರಾಷ್ಟ್ರನಿಷ್ಠೆಯನ್ನು ನೆನಪಿಸಿಕೊಂಡು ಯೋಗ್ಯ ವ್ಯಕ್ತಿಗೆ ಕೇಂದ್ರದಲ್ಲಿ ಆಡಳಿತಸ್ಥಾನಕ್ಕೆ ಬರಲು ಮತದಾನ ಮಾಡಬೇಕು. (೩೦.೩.೨೦೨೪)