ದುರಹಂಕಾರಿ ಮತ್ತು ಉದ್ಧಟ ಬಾಂಗ್ಲಾದೇಶದ ಹುರುಳಿಲ್ಲದ ಮಾತು !
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಆಗಸ್ಟ್ ತಿಂಗಳಲ್ಲಿ ಶೇಖ್ ಹಸೀನಾ ಅವರ ಸರಕಾರ ಪತನಗೊಂಡ ಬಳಿಕ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿವೆ. ಅವರ ದೇವಸ್ಥಾನಗಳು, ಮನೆಗಳನ್ನು ಗುರಿಯಾಗಿಸಿದ್ದಾರೆ. ಇದು ಇನ್ನೂವರೆಗೆ ನಿಂತಿಲ್ಲ. ಈ ಬಗ್ಗೆ ಭಾರತವು ಹಿಂದೂಗಳ ರಕ್ಷಣೆಗಾಗಿ ಬಾಂಗ್ಲಾದೇಶ ಸರಕಾರಕ್ಕೆ ಕರೆ ನೀಡಿದಾಗ, ಬಾಂಗ್ಲಾ ಸರಕಾರ ಭಾರತಕ್ಕೆ ಉದ್ಧಟತನದಿಂದ ಮೆರೆದಿದೆ. ಬಾಂಗ್ಲಾದೇಶದ ಮಧ್ಯಂತರ ಸರಕಾರದ ಕಾನೂನು ಸಲಹೆಗಾರ ಆಸಿಫ ನಜರೂಲ ಅವರು ಫೇಸ್ಬುಕ್ ಪೋಸ್ಟನಲ್ಲಿ, ‘ಭಾರತದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮೇಲೆ ಅನೇಕ ದೌರ್ಜನ್ಯದ ಘಟನೆಗಳು ನಡೆಯುತ್ತಿವೆ; ಆದರೆ ಅವರಿಗೆ ಈ ಬಗ್ಗೆ ಯಾವುದೇ ವಿಷಾದ ಅಥವಾ ನಾಚಿಕೆ ಇರುವುದಿಲ್ಲ. ಭಾರತದ ಈ ದ್ವಂದ್ವ ನೀತಿ ಖಂಡನೀಯ ಆಕ್ಷೇಪಾರ್ಹವಾಗಿದೆ. ಹೆಚ್ಚಿನ ಬಾಂಗ್ಲಾದೇಶೀಯರಿಗೆ, ಈ ಮಧ್ಯಂತರ ಸರಕಾರವು ಹಿಂದಿನ ಅವಾಮಿ ಲೀಗ್ ಸರಕಾರದಷ್ಟೇ ಉತ್ತಮವಾಗಿರಲಿದೆಯೆಂದು ವಿಶ್ವಾಸವಿದೆ. ಅದು ದೇಶದಲ್ಲಿರುವ ಅಲ್ಪಸಂಖ್ಯಾತ ಸಮುದಾಯದವರಿಗೆ ಉತ್ತಮ ಭದ್ರತೆ ನೀಡಲು ಸಕ್ಷಮವಿದೆ.’’ ಎಂದು ಹೇಳಿದ್ದಾರೆ.
ಮತ್ತೊಂದೆಡೆ, ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ ಯೂನೂಸ ಅವರ ಪ್ರಸಾರ ಮಾಧ್ಯಮ ಸಚಿವ ಶಫೀಕುಲ ಇಸ್ಲಾಮ ಇವರು ಮಾತನಾಡಿ, ‘ಬಾಂಗ್ಲಾದೇಶದಲ್ಲಿ ಹಿಂದೂಗಳು ಸುರಕ್ಷಿತರಾಗಿದ್ದಾರೆ. ಹಾಗೆಯೇ, ಇಸ್ಕಾನ್ ಮೇಲೆ ಯಾವುದೇ ನಿಷೇಧ ಹೇರುವ ಉದ್ದೇಶವಿಲ್ಲ. ಸರಕಾರ ಪ್ರತಿಯೊಂದು ಸಮುದಾಯದ ಹಕ್ಕುಗಳನ್ನು ರಕ್ಷಿಸಲು ವಚನಬದ್ಧವಾಗಿದೆ’. ಅಲ್ಪಸಂಖ್ಯಾತರ ರಕ್ಷಣೆಯಲ್ಲಿ ಭಾರತವು ದ್ವಂದ್ವ ನೀತಿಯನ್ನು ಅವಲಂಬಿಸಿದೆ. ಚಿನ್ಮಯ ಪ್ರಭು ಅವರಿಗೆ ನಿಷ್ಪಕ್ಷವಾಗಿ ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ದೊರೆಯಲಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದಾರೆ. ವದಂತಿಗಳಿಗೆ ಕಿವಿಗೊಡಬೇಡಿರಿ’ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು
|