ಚುನಾವಣೆಯಲ್ಲಿ ಜಮ್ಮು ಕಾಶ್ಮೀರದ ಬಗ್ಗೆ ಸುಳ್ಳು ದಾವೆ ಮಾಡುವುದನ್ನು ಭಾರತ ನಿಲ್ಲಿಸಬೇಕಂತೆ ! – ಪಾಕಿಸ್ತಾನದ ಹೊಟ್ಟೆ ಉರಿ

ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರೆ ಝಾಹರಾ ಬಲೋಚ್

ನವದೆಹಲಿ – ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವುದಕ್ಕಾಗಿ ಪಾಕಿಸ್ತಾನದ ಹೆಸರು ಹೇಳಬಾರದು. ಭಾರತೀಯ ನಾಯಕರು ಜಮ್ಮು ಕಾಶ್ಮೀರದ ಕುರಿತು ಸುಳ್ಳು ದಾವೆಗಳನ್ನು ಮಾಡುವುದನ್ನು ನಿಲ್ಲಿಸಬೇಕು, ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರೆ ಝಾಹರಾ ಬಲೋಚ್ ಅವರು ಹೇಳಿಕೆ ನೀಡಿದ್ದಾರೆ. ಏಪ್ರಿಲ್ ೨೬ ರಂದು ಅವರು ಪತ್ರಕರ್ತರ ಸಭೆಯಲ್ಲಿ ಮೇಲಿನ ದಾವೆ ಮಾಡುತ್ತ ಭಾರತೀಯ ನಾಯಕರು ತಮ್ಮ ಭಾಷಣದಲ್ಲಿ ಮತಕ್ಕಾಗಿ ಪಾಕಿಸ್ತಾನದ ಅಂಶಗಳನ್ನು ಎತ್ತುವುದನ್ನು ನಿಲ್ಲಿಸಬೇಕು ಎಂದು ಬಲೋಚ್ ಹೇಳಿದ್ದಾರೆ. ಅವರು ಜಮ್ಮು ಕಾಶ್ಮೀರದ ಬಗ್ಗೆ ಭಾರತೀಯ ನಾಯಕರ ಎಲ್ಲಾ ದಾವೆಗಳನ್ನು ತಳ್ಳಿ ಹಾಕಿದ್ದಾರೆ.

ಝಾಹರಾ ಬಲೋಜ್ ತಮ್ಮ ಮಾತನ್ನು ಮುಂದುವರೆಸುತ್ತಾ , ಜಮ್ಮು ಕಾಶ್ಮೀರದ ಬಗ್ಗೆ ಭಾರತೀಯ ನಾಯಕರ ಪ್ರಚೋದನಕಾರಿ ಭಾಷಣಗಳು ಕಳೆದ ಕೆಲವು ಸಮಯದಿಂದ ಹೆಚ್ಚಾಗಿವೆ. ಇದು ಅತ್ಯಂತ ಆಘಾತಕಾರಿ ಆಗಿದೆ. ಅವರ ಈ ಹೇಳಿಕೆಗಳು ರಾಷ್ಟ್ರವಾದದಿಂದ ಪ್ರೇರೇಪಿತವಾಗಿವೆ. ಆದ್ದರಿಂದ ಈ ಪ್ರದೇಶದಲ್ಲಿನ ಶಾಂತಿಗೆ ಅಪಾಯ ಉಂಟಾಗಬಹುದು. ಭಾರತದ ದಾವೆಗಳು ಐತಿಹಾಸಿಕ ಮತ್ತು ಕಾನೂನು ಸಂಗತಿಗಳಿಗೆ ವಿರುದ್ಧವಾಗಿವೆ ಎಂದವರು ಹೇಳಿದರು.

ಪಾಕ್ ವ್ಯಾಪ್ತ ಕಾಶ್ಮೀರ ನಮ್ಮ ಪ್ರದೇಶವಾಗಿದೆ, ಇದೇ ಮತ್ತು ಇರುವುದು ! – ರಾಜನಾಥ ಸಿಂಗ್

ರಕ್ಷಣಾ ಸಚಿವ ರಾಜನಾಥ ಸಿಂಗ್

ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಏಪ್ರಿಲ್ ೧೧ ರಂದು ಮಧ್ಯಪ್ರದೇಶದಲ್ಲಿನ ಸತನಾ ಜಿಲ್ಲೆಯಲ್ಲಿನ ಒಂದು ಸಭೆಯಲ್ಲಿ ಪಾಕಿಸ್ತಾನವನ್ನು ಉಲ್ಲೇಖಿಸುತ್ತಾ ಮಾತನಾಡಿ, ಜಮ್ಮು ಕಾಶ್ಮೀರದ ಅಭಿವೃದ್ಧಿ ಯಾವ ರೀತಿ ಆಗುತ್ತಿದೆ ಅಂದರೆ ಪಾಕ್ ವ್ಯಾಪಿತ ಕಾಶ್ಮೀರದ ಜನರಿಗೂ ಅನಿಸಲು ಶುರುವಾಗಿದೆ, ಅವರ ಅಭಿವೃದ್ಧಿ ಕೇವಲ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಂದಲೇ ಸಾಧ್ಯ ಎಂದು. ಪಾಕಿಸ್ತಾನ ವ್ಯಾಪಿತ ಕಾಶ್ಮೀರ ನಮ್ಮ ಪ್ರದೇಶವಾಗಿತ್ತು, ಆಗಿದೆ ಮತ್ತು ನಮ್ಮ ಪ್ರದೇಶವೇ ಆಗಿರಲಿದೆ ಎಂದು ಸಿಂಗ್ ಗಂಭೀರವಾಗಿ ಹೇಳಿದರು!

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈ ಶಂಕರ್ ಅವರು ಕೂಡ ಪತ್ರಕರ್ತರ ಸಭೆಯಲ್ಲಿ ಮಾತನಾಡಿ, ಪಾಕ್ ವ್ಯಾಪಿತ ಕಾಶ್ಮೀರವು ಪಾಕಿಸ್ತಾನದ ಭಾಗವಲ್ಲ, ಅದು ನಾವು ಎಂದಿಗೂ ಒಪ್ಪುವುದಿಲ್ಲ. ಅದು ಭಾರತದ ಪ್ರದೇಶವಾಗಿದೆ ಎಂದು ಭಾರತದಲ್ಲಿನ ಎಲ್ಲಾ ಪಕ್ಷದ ಒಂದೇ ನಿಲುವಾಗಿದೆ ಎಂದಿದ್ದರು.

ಸಂಪಾದಕೀಯ ನಿಲುವು

  • ತಾಲಿಬಾನದ ಉಪಟಳ ತಡೆಯಲಾಗದ ಪಾಕಿಸ್ತಾನಕ್ಕೆ, ಪಾಕ್ ವ್ಯಾಪಿತ ಕಾಶ್ಮೀರ ಕೈಜಾರಿ ಹೋಗುವ ಭಯ ನಿರ್ಮಾಣವಾಗಿರುವುದು ಸತ್ಯ, ಹಾಗಾಗಿಯೇ ಖಿನ್ನತೆಯಿಂದ ಈ ರೀತಿಯ ಹೇಳಿಕೆಗಳನ್ನು ನೀಡಿದರೆ ಆಶ್ಚರ್ಯವೇನಿದೆ ?
  • ಆಪಾದಿತ ಸುಳ್ಳು ದಾವೆಗಳನ್ನು ಸತ್ಯಗೊಳಿಸುವುದಕ್ಕಾಗಿ ಭಾರತೀಯ ರಕ್ಷಣಾ ಮತ್ತು ರಾಜತಾಂತ್ರಿಕ ವ್ಯವಸ್ಥೆಯು ಈಗಾಗಲೇ ರಚಿಸಿರುವ ವ್ಯೂಹದ ಪ್ರಕಾರ ಕೆಲಸ ಮಾಡುವುದು ಎಂಬುದನ್ನು ಪಾಕಿಸ್ತಾನ ಗಮನದಲ್ಲಿಟ್ಟುಕೊಳ್ಳಬೇಕು.