ಅಥೆನ್ಸ್ (ಗ್ರೀಕ್) – ಸಹಾರಾ ಮರುಭೂಮಿಯಿಂದ ಬೀಸುವ ಧೂಳಿನ ಗಾಳಿಯಿಂದ ಗ್ರೀಸ್ ನಗರಗಳಲ್ಲಿ ಗಾಳಿಯ ಗುಣಮಟ್ಟವು ಹದಗೆಟ್ಟಿದ್ದು, ತಾಪಮಾನದಲ್ಲಿ ಹಠಾತ್ ಏರಿಕೆಗೆ ಕಾರಣವಾಗಿದೆ. ಈ ಗಾಳಿಯಿಂದ ಜನರು ಉಸಿರಾಡಲು ಕಷ್ಟವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಗಾಳಿಯಿಂದಾಗಿ ಅರಣ್ಯದಲ್ಲಿ ಅಕಾಲಿಕ ಕಾಡ್ಗಿಚ್ಚು ಹೊತ್ತಿಕೊಂಡಿದೆ. ಕಳೆದ 24 ಗಂಟೆಗಳಲ್ಲಿ ಗ್ರೀಸ್‌ನಲ್ಲಿ ಒಟ್ಟು 25 ಅರಣ್ಯಗಳು ಬೆಂಕಿಗೆ ಆಹುತಿಯಾಗಿವೆ. ಈ ಕಾರಣದಿಂದಾಗಿ ಗೋಚರತೆ ಕೂಡ ಸೀಮಿತವಾಗಿದೆ. ಮಾರ್ಚ್ 2018 ರಲ್ಲಿ ಇದೇ ರೀತಿಯ ಪರಿಸ್ಥಿತಿ ನಿರ್ಮಾಣ ಆಗಿತ್ತು. ಇದು ಆ ನಂತರದ ಅತ್ಯಂತ ಕೆಟ್ಟ ಘಟನೆಯಾಗಿದೆ ಎಂದು ಆಡಳಿತ ಹೇಳಿದೆ.