ಅಮೇರಿಕಾದಲ್ಲಿನ ಹೆಸರಾಂತ ‘ಪ್ರಿನ್ಸಟನ್’ ಕಾಲೇಜಿನಲ್ಲಿ ಕ್ರಮ !
ನ್ಯುಜರ್ಸಿ (ಅಮೆರಿಕಾ) – ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಅಮೇರಿಕಾದಲ್ಲಿ ಪ್ಯಾಲೇಸ್ಟೈನ್ ಗೆ ಬೆಂಬಲಿಸುವ ಘಟನೆಗಳು ಹೆಚ್ಚಿದೆ. ಪ್ಯಾಲೆಸ್ಟೈನ್ಅನ್ನು ನಿರಪರಾಧಿ ಎಂದು ಹೇಳುವ ಕಥೆಗಳನ್ನು ರಚಿಸಿದ್ದಾರೆ. ಇಂತಹದರಲ್ಲಿ ‘ಐವಿ ಲೀಗ್’ ಎಂಬ ಹೆಸರಿನ ಹೆಸರಾಂತ ೮ ಅಮೇರಿಕ ಕಾಲೇಜುಗಳನಲ್ಲಿ ಒಂದಾಗಿರುವ ಪ್ರಿನ್ಸಟನ್ ಕಾಲೇಜದಲ್ಲಿ ಕೂಡ ಪ್ಯಾಲೆಸ್ಟೈನ್ ಬೆಂಬಲದಲ್ಲಿ ಪ್ರತಿಭಟನೆಗಳು ನಡೆಯುತ್ತಿತ್ತು. ಇದರಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಅಚಿಂತ್ಯ ಶಿವಲಿಂಗಂ ಸಹಭಾಗಿ ಆಗಿದ್ದರಿಂದ ಆಕೆಯನ್ನು ಕಾಲೇಜಿನಿಂದ ಬಂಧಿಸಲಾಗಿದೆ. ‘ಆಕೆಯ ಮೇಲೆ ಶಿಸ್ತುಭಂಗದ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದೆ.
೧. ತಮಿಳುನಾಡಿನ ಕೊಯಿಮುತ್ತೂರು ನಲ್ಲಿ ಜನಿಸಿರುವ ಮತ್ತು ಓಹಾಯೋ ರಾಜ್ಯದಲ್ಲಿನ ಕೋಲಂಬಸ್ ಇಲ್ಲಿ ವಾಸಿಸುವ ಅಚಿಂತ್ಯಾಗೆ ಏಪ್ರಿಲ್ ೨೫ ರಂದು ಸಹಯೋಗಿ ವಿದ್ಯಾರ್ಥಿ ಹಸನ್ ಸಯ್ಯದ ಇವನ ಜೊತೆಗೆ ಬಂಧಿಸಿದ್ದಾರೆ.
೨. ಅವರು ಕಾಲೇಜಿನ ಮ್ಯಾಗ್ಕಾಶ್ ಪ್ರಾಂಗಣದಲ್ಲಿ ಟೆಂಟ್ ಹಾಕಿ ಪ್ರತಿಭಟನೆ ನಡೆಸುತ್ತಿದ್ದರು. ಆರಂಭದಲ್ಲಿ ಸುಮಾರು ೧೧೦ ಜನರ ಗುಂಪು ಇತ್ತು. ಸಮಯ ಕಳೆದ ಹಾಗೆ ಅದರ ಪ್ರತಿಕ್ರಿಯೆ ಹೆಚ್ಚಿತು ಮತ್ತು ಮಧ್ಯಾಹ್ನದವರೆಗೆ ೩೦೦ ಜನರು ಸೇರಿದರು.
೩. ‘ಸಾರ್ವಜನಿಕ ಸುರಕ್ಷಾ ಇಲಾಖೆಯಿಂದ ಪ್ರತಿಭಟನೆ ನಿಲ್ಲಿಸುವುದಕ್ಕಾಗಿ ಎಚ್ಚರಿಕೆ ನೀಡಿದ ನಂತರ ೨ ಪದವೀಧರ ವಿದ್ಯಾರ್ಥಿಗಳನ್ನು ಬಂಧಿಸಿದರು’, ಎಂದು ಕಾಲೇಜಿನಿಂದ ಹೇಳಲಾಗಿದೆ.
೪. ಕಳೆದ ವಾರದಲ್ಲಿ ನ್ಯೂಯಾರ್ಕ್ ದ ಕೊಲಂಬಿಯಾ ಕಾಲೇಜದಲ್ಲಿ ಕೂಡ ೧೦೦ ಕ್ಕಿಂತಲೂ ಹೆಚ್ಚಿನ ಜನರನ್ನು ಬಂಧಿಸಿದ ನಂತರ ಹಾರ್ವಾರ್ಡ್ ಮತ್ತು ಯೆಲ್ ಸಹಿತ ಸಂಪೂರ್ಣ ಅಮೆರಿಕದಲ್ಲಿನ ಪ್ರಮುಖ ಕಾಲೇಜುಗಳಲ್ಲಿ ಪ್ರತಿಭಟನೆ ತೀವ್ರ ಗೊಳಿಸಿದ್ದಾರೆ.
೫. ‘ರೈಟರ್ಸ್’ ಪ್ರಕಾರ ಕಳೆದ ಒಂದು ವಾರದಲ್ಲಿ ಸುಮಾರು ೫೫೦ ಜನರನ್ನು ಬಂಧಿಸಿದ್ದಾರೆ.
Indian-origin student Achinthya Sivalingan has been arrested, evicted, and permanently banned from Princeton University, USA, for unauthorised protest on campus in support of Palestine, preventing her from finishing her degree.
As her fellow Indian, I’m devastated. Are you too? pic.twitter.com/zAydFUBhK3
— THE SKIN DOCTOR (@theskindoctor13) April 26, 2024