ಭಾರತ ದೇಶದಲ್ಲಿ ಬದಲಾವಣೆಯಾಗುತ್ತಿದೆ. ದೇಶವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಜಗತ್ತಿನ ಮೂರನೇ ಆರ್ಥಿಕ ಮಹಾಶಕ್ತಿಯಾಗಲು ನೋಡುತ್ತಿದೆ. ಇದರಿಂದಾಗಿ ಭಾರತದ ಘನತೆ ಜಗತ್ತಿನಾದ್ಯಂತ ಎತ್ತರಕ್ಕೇರುತ್ತಿದೆ. ಇಂತಹುದರಲ್ಲಿಯೇ ಭಾರತವು ಈಗ ‘ಆಧ್ಯಾತ್ಮಿಕ ಪ್ರವಾಸೋದ್ಯಮ’ ಕ್ಷೇತ್ರದಲ್ಲಿಯೂ ನೆಲೆಯೂರಲು ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಅಮೃತಸರ, ಅಜ್ಮೇರ, ವಾರಾಣಸಿ, ಕತ್ರಾ, ಸೋಮನಾಥ, ಶಿರಡಿ, ಅಯೋಧ್ಯೆ, ಪುರಿ, ತಿರುಪತಿ, ಮಥುರಾ, ದ್ವಾರಕಾ, ಬೋಧಗಯಾ, ಗುರುವಾಯೂರ ಮತ್ತು ಮಧುರೈ ಮುಂತಾದ ಒಟ್ಟು ೧೪ ನಗರಗಳಲ್ಲಿ ಬೃಹತ ಉತ್ಪಾದನಾ ಸಂಸ್ಥೆಗಳು (ಬ್ರಾಂಡ್‌ಗಳು) ತಮ್ಮ ಕಾರ್ಯವನ್ನು ವಿಸ್ತರಿಸುತ್ತಿವೆ. ಈ ಸಂಸ್ಥೆಗಳಿಂದ ಯಾತ್ರಿಕರ ಅಗತ್ಯಗಳನ್ನು ಪೂರೈಸಲು ಮುಂದಾಳತ್ವವನ್ನು ವಹಿಸುತ್ತಿದೆ. ಗಣ್ಯರು, ರಿಲಾಯನ್ಸ್ ಟ್ರೆಂಡ್ಸ್, ರೇಮಂಡ್ಸ್, ಮಾರ್ಕೆಟ್ ೯೯, ಪಂಟಾಲೂನ್ಸ್, ಡೊಮಿನೋಸ್, ಪಿಜ್ಜಾ ಹಟ್, ರಿಲಾಯನ್ಸ್ ಸ್ಮಾರ್ಟ್, ಜುಡಿಯೋ, ಶಾಪರ್ಸ್ ಸ್ಟಾಪ್, ಬರ್ಗರ್ ಕಿಂಗ್, ಕ್ರೋಮಾ ಇತ್ಯಾದಿ ಕೆಲವು ಸಂಸ್ಥೆಗಳ ಹೆಸರುಗಳಿವೆ. ಈ ಪ್ರವಾಸೋದ್ಯಮವು ಭಾರತದ ಆರ್ಥಿಕತೆಯ ಮೇಲೆ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ. ಇಲ್ಲಿಯವರೆಗೆ, ಪ್ರವಾಸೋದ್ಯಮದ ಹೆಸರಿನಲ್ಲಿ ದೇಶ-ವಿದೇಶಗಳಲ್ಲಿ ಮೋಜು ಅಥವಾ ಮನೋರಂಜನೆ ಮಾಡುವ ಸ್ಥಳಗಳಿಗೆ ತಿರುಗಾಡಲು ಹೋಗುವುದು ಪ್ರವಾಸಿಗರ ಮನಃಸ್ಥಿತಿ ಯಾಗಿತ್ತು. ಇದರಿಂದ ಅಂತಹ ಸ್ಥಳಗಳಿಂದಲೇ ಭಾರತಕ್ಕೂ ಉತ್ಪನ್ನ ದೊರೆಯುತ್ತಿತ್ತು. ಆದರೆ ಈಗ ಈ ‘ಟ್ರೆಂಡ್’ ಬದಲಾಗುತ್ತಿದೆ. ಕೊರೊನಾ ಮಹಾಮಾರಿಯ ಕಾಲದಿಂದ ಜನರ ಮಾನಸಿಕತೆಯಲ್ಲಿ ಪರಿವರ್ತನೆಯಾಗಿದೆ. ಕೇವಲ ಸುಖ-ಹಣದ ಹಿಂದೆ ಧಾವಿಸುವ ಜನರು ಆದರ್ಶ ಜೀವನಶೈಲಿಯನ್ನು ಸ್ವೀಕರಿಸುವುದು, ಶಾಂತಿಯನ್ನು ಅನುಸರಿಸುವುದು, ಹಾಗೆಯೇ ಅಧ್ಯಾತ್ಮದೆಡೆಗೆ ಮರಳುವುದು ಮುಂತಾದ ವಿಷಯಗಳತ್ತ ಆಕರ್ಷಿತರಾದರು. ಆಧ್ಯಾತ್ಮಿಕ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳು ಅಥವಾ ತೀರ್ಥಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರ ಪ್ರಮಾಣ ಹೆಚ್ಚಾಯಿತು. ೨೨ ಜನವರಿ ೨೦೨೪ ರಂದು ಭಾರತೀಯರ ಅಲ್ಲ, ಜಗತ್ತಿನಾದ್ಯಂತವಿರುವ ಜನರ ದೃಷ್ಟಿಯಲ್ಲಿ ಭಾರತವು ವಿಶೇಷವಾಗಿ ಉಲ್ಲೇಖನೀಯವಾಯಿತು. ಈ ದಿನ, ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯಾಗಿದ್ದರಿಂದ ಎಲ್ಲೆಡೆ ಅಧ್ಯಾತ್ಮ, ಹಾಗೆಯೇ ಭಕ್ತಿಭಾವದ ಬೀಜವನ್ನು ಮತ್ತೊಮ್ಮೆ ಬಿತ್ತಲಾಯಿತು. ಜನರಲ್ಲಿ ಧರ್ಮ, ಸಂಸ್ಕ್ರತಿ, ಹಿಂದುತ್ವ, ಅಧ್ಯಾತ್ಮ, ಹಾಗೆಯೇ ಭಕ್ತಿ ಈ ವಿಷಯಗಳ ಬಗ್ಗೆ ಆಸಕ್ತಿ ನಿರ್ಮಾಣವಾಗುವುದು, ಈ ಅಭಿವೃದ್ಧಿಪಥದಲ್ಲಿ ಮುಂದುವರಿಯುತ್ತಿರುವ ಭಾರತಕ್ಕೆ ಗೌರವ ನೀಡುವಂತಹದ್ದಾಗಿದೆ. ‘ಅಧ್ಯಾತ್ಮ’ ಮತ್ತು ‘ಧರ್ಮ’ ಇದು ಸದ್ಯದ ಜನರ ದೈನಂದಿನ ಜೀವನದ ಮಹತ್ವದ ಭಾಗವಾಗಿದೆ. ಆಂತರಿಕ ಶಾಂತಿಯನ್ನು ಪಡೆಯಲು ಜನರು ಚಡಪಡಿಸುತ್ತಿದ್ದಾರೆ. ಭಾರತ ಭೂಮಿಯನ್ನು ಪ್ರಾಚೀನ ಕಾಲದಿಂದಲೂ ‘ಆಧ್ಯಾತ್ಮಿಕ’ ಎಂದೇ ಗುರುತಿಸಲಾಗುತ್ತದೆ. ಭಾರತಕ್ಕೆ ಲಭಿಸಿರುವ ಸಮೃದ್ಧ ಸಂಸ್ಕೃತಿ, ಪರಂಪರೆಯ ಅಭ್ಯಾಸ ಮಾಡಲು ಹಾಗೆಯೇ ಅದನ್ನು ತಿಳಿದುಕೊಳ್ಳಲು ಜಗತ್ತಿನಾದ್ಯಂತ ಜನರು ಭಾರತಕ್ಕೆ ಭೇಟಿ ನೀಡುತ್ತಾರೆ. ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಭಾರತದಲ್ಲಿ ಉಪಲಬ್ಧವಿರುವ ಆಧ್ಯಾತ್ಮಿಕ ಪ್ರವಾಸೋದ್ಯಮದ ನೆಲೆಯೆಡೆಗೆ ಪ್ರವಾಸಿಗರು ಆಕರ್ಷಿತರಾಗುತ್ತಿರುವುದು ಹಾಗೂ ಆ ವಿಷಯಗಳಲ್ಲಿ ಅವರು ಆಸಕ್ತಿಯನ್ನು ತೋರಿಸುವುದು ಶ್ಲಾಘನೀಯವಾಗಿದೆ. ಆಧ್ಯಾತ್ಮಿಕ ಸ್ಥಳಗಳಲ್ಲಿರುವ ದೊಡ್ಡ ದೊಡ್ಡ ಹೊಟೇಲಗಳಲ್ಲಿ ಪ್ರವಾಸಿಗರ ನೋಂದಣಿಯ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಪ್ರವಾಸೋದ್ಯಮದ ಅಭಿವೃದ್ಧಿಗೆ ಕಾರಣವಾಗುತ್ತಿದೆ. ಇದರಿಂದ ಆಧ್ಯಾತ್ಮಿಕ ಪ್ರವಾಸೋದ್ಯಮ ವಲಯ ವಿಸ್ತಾರವಾಗುತ್ತಿದೆ. ಈ ಪ್ರವಾಸೋದ್ಯಮ ಎಲ್ಲರಿಗೂ ಆನಂದದಾಯಕ ಮತ್ತು ಜ್ಞಾನವನ್ನು ಹೆಚ್ಚಿಸುವಂತಹದ್ದಾಗುತ್ತಿದೆ. ಈ ಮಾಧ್ಯಮದಿಂದ ಪ್ರತಿಯೊಬ್ಬರ ಕಲ್ಯಾಣದ ಮಾರ್ಗವನ್ನು ಕಂಡುಕೊಳ್ಳಬಹುದು. ಸಂಕ್ಷಿಪ್ತವಾಗಿ, ಆಧ್ಯಾತ್ಮಿಕ ಪ್ರವಾಸೋದ್ಯಮ ಭಾರತವನ್ನು ಬಲಪಡಿಸುತ್ತಿದೆ.
ಪ್ರವಾಸಿಗರು ಮತ್ತು ಪ್ರವಾಸೋದ್ಯಮ ಸಂಸ್ಥೆಗಳ ಜವಾಬ್ದಾರಿಗಳು !
ಪ್ರವಾಸಿಗರ ಆಧ್ಯಾತ್ಮಿಕ ಪ್ರವಾಸೋದ್ಯಮ ವಿಚಾರಧಾರೆಗೆ ಯೋಗ್ಯ ಮಾರ್ಗದರ್ಶನ ನೀಡುವುದು ಕೂಡ ಅಷ್ಟೇ ಆವಶ್ಯಕವಾಗಿದೆ, ಹಾಗೆ ಆದರೆ ಅದರ ಸಮರ್ಪಕ ಫಲನಿಷ್ಪತ್ತಿ ಸಿಗಲಿದೆ. ಪ್ರವಾಸಿಗರ ಆಸಕ್ತಿಯನ್ನು ಗಮನಿಸಿದರೆ, ಈಗ ಪ್ರವಾಸೋದ್ಯಮ ಸಂಸ್ಥೆಗಳು (ಟ್ರಾವೆಲ್ ಏಜೆನ್ಸಿಗಳು) ಆಧ್ಯಾತ್ಮಿಕ ಪ್ರವಾಸೋದ್ಯಮದ ದೃಷ್ಟಿಯಿಂದ ಇನ್ನೂ ಏನೇನು ಮಾಡಬಹುದು ? ಎಂದು ಪ್ರಯತ್ನಿಸುತ್ತಿದ್ದಾರೆ. ದೊಡ್ಡ ದೊಡ್ಡ ಪ್ರವಾಸೋದ್ಯಮ ಸಂಸ್ಥೆಗಳು ಭಾರತದಲ್ಲಿರುವ ಪ್ರವಾಸೋದ್ಯಮ ಉದ್ಯಮ ೨೦೨೪ ರ ವರೆಗೆ ಶೇ. ೧೦ ರಷ್ಟು ವೃದ್ಧಿಸಲಿದೆಯೆಂದು ವಿಶ್ವಾಸವನ್ನು ವ್ಯಕ್ತಪಡಿಸಿವೆ, ಆಧ್ಯಾತ್ಮಿಕ ಪ್ರವಾಸೋದ್ಯಮವನ್ನು ಉನ್ನತ ಮಟ್ಟಕ್ಕೆ ಒಯ್ಯುವಾಗ ಯಾವುದೇ ಅವ್ಯವಹಾರ ನಡೆಯದಂತೆ ಪ್ರವಾಸಿಗರು ಕಾಳಜಿ ವಹಿಸಬೇಕು. ಭಾರತೀಯರ ನಡವಳಿಕೆ, ಸಂಪ್ರದಾಯ ಮತ್ತು
ಸಂಸ್ಕೃತಿಗೆ ಅಗೌರವವಾಗದಂತೆ, ಧಾರ್ಮಿಕ ಸ್ಥಳಗಳ ಪಾವಿತ್ರ್ಯವನ್ನು ಮತ್ತು ಚೈತನ್ಯವನ್ನು ರಕ್ಷಿಸುವುದು ಪ್ರವಾಸಿಗರ ನೈತಿಕ ಜವಾಬ್ದಾರಿಯಾಗಿದೆ. ಪ್ರವಾಸೋದ್ಯಮ ಸಂಸ್ಥೆಗಳು ಕೂಡ ಆಧ್ಯಾತ್ಮಿಕ ಪ್ರವಾಸೋದ್ಯಮದಡಿಯಲ್ಲಿ ಸಂಬಂಧಿಸಿದ ಸ್ಥಳಗಳಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಜಾಗರೂಕತೆಯಿಂದ ಗಮನವಿಡಬೇಕು.
ಆಧ್ಯಾತ್ಮಿಕ ಪ್ರವಾಸೋದ್ಯಮದಿಂದ ಆಂತರಿಕ ಪರಿವರ್ತನೆ !
ಭಾರತವು ‘ವಿಶ್ವಗುರು’ ಆಗಿರುವುದರಿಂದ ಆಧ್ಯಾತ್ಮಿಕ ತಳಹದಿ ಭಾರತಕ್ಕೆ ಲಭಿಸಿದೆ. ಈಗ ಅದನ್ನು ಮತ್ತಷ್ಟು ಬಲಗೊಳಿಸುವುದು ಮತ್ತು ಅಭಿವೃದ್ಧಿ ಪಡಿಸುವ ಆವಶ್ಯಕತೆಯಿದೆ. ಪ್ರವಾಸೋದ್ಯಮ ಸಂಸ್ಥೆಗಳು ಆಧ್ಯಾತ್ಮಿಕ ಪ್ರವಾಸೋದ್ಯಮದೆಡೆಗೆ ಕೇವಲ ಆರ್ಥಿಕ ಬೆಳವಣಿಗೆಯ ಏಕಪಕ್ಷೀಯ ದೃಷ್ಟಿಕೋನದಿಂದ ನೋಡದೇ, ಅದರಿಂದ ರಾಷ್ಟ್ರದ ಪ್ರಗತಿ ಹೇಗೆ ಸಾಧಿಸಬಹುದು ಎಂಬುದನ್ನು ನೋಡಬೇಕಾಗಿದೆ. ‘ಅಭಿವೃದ್ಧಿ’ ಮತ್ತು ‘ಅಧ್ಯಾತ್ಮ’ ಕೈ-ಕೈ ಜೋಡಿಸಿ ಜೊತೆಯಾಗಿ ಸಾಗಿದರೆ ಮಾತ್ರ ದೇಶದ ಅಭಿವೃದ್ಧಿ ಯಾಗುತ್ತದೆ. ಆದುದರಿಂದ ಕೇವಲ ‘ಹಣ’ವನ್ನೇ ಗುರಿಯಾಗಿಸಿ ಕೊಳ್ಳದೇ, ಪ್ರವಾಸಿಗರಲ್ಲಿ ನಿಜವಾದ ಅರ್ಥದಿಂದ ಅಂತರಂಗದ ಪರಿವರ್ತನೆಯನ್ನು ಸಾಧಿಸಲು ಪ್ರಯತ್ನಿಸುವುದು ಆವಶ್ಯಕವಾಗಿದೆ. ಭಕ್ತಿಭಾವ ಹೆಚ್ಚಿಸುವುದು, ಆಚಾರಧರ್ಮ, ಹಾಗೆಯೇ ಅಧ್ಯಾತ್ಮದ ತಳಹದಿಯನ್ನು ರಕ್ಷಿಸಬೇಕು.
ಆಧ್ಯಾತ್ಮಿಕ ದೃಷ್ಟಿಯಿಂದ ಪ್ರವಾಸಿಗರ ಮನಃಸ್ಥಿತಿಯನ್ನು ಸಿದ್ಧಪಡಿಸುವುದು, ಧರ್ಮ-ಸಂಸ್ಕೃತಿಯನ್ನು ನಿರಂತರವಾಗಿರಿಸಲು, ಆಧ್ಯಾತ್ಮಿಕ ಪ್ರವಾಸೋದ್ಯಮವನ್ನು ಎಲ್ಲೆಡೆ ಪ್ರಸಾರ ಮಾಡುವುದು, ಹಾಗೆಯೇ ಆಧ್ಯಾತ್ಮಿಕ ಸ್ಥಳಗಳು, ತೀರ್ಥಕ್ಷೇತ್ರಗಳು ಇಂತಹ ಸ್ಥಳಗಳಲ್ಲಿ ಇರುವ ಧಾರ್ಮಿಕತೆಯ ಬೀಜವನ್ನು ಎಲ್ಲರ ಮನಸ್ಸಿ ನಲ್ಲಿ ಬಿತ್ತುವುದು, ಇತ್ಯಾದಿ ಎಲ್ಲ ಉದ್ದೇಶಗಳು ಆಧ್ಯಾತ್ಮಿಕ ಪ್ರವಾಸೋದ್ಯಮದ ಮಾಧ್ಯಮದಿಂದ ಸಾಧ್ಯವಾಗಬೇಕು. ಹಾಗಾದರೆ ಮಾತ್ರ ನಿಜವಾದ ಅರ್ಥದಿಂದ ಧರ್ಮಕ್ಕೆ, ಪರ್ಯಾಯವಾಗಿ ರಾಷ್ಟ್ರಕ್ಕೆ ಬಲ ಸಿಗುವುದು. ಆಧ್ಯಾತ್ಮಿಕ ಪ್ರವಾಸೋದ್ಯಮದ ವಿಷಯ ಶಿಕ್ಷಣಕ್ಷೇತ್ರದಲ್ಲಿಯೂ ಅಳವಡಿಸಿದರೆ, ಕಲಿಯುವ ವಯಸ್ಸಿನಿಂದ (ವಿದ್ಯಾರ್ಥಿ) ಮಕ್ಕಳಲ್ಲಿ ಅದರ ಬಗ್ಗೆ ಆಸಕ್ತಿ ಹುಟ್ಟುವುದು. ಕೇವಲ ಹಣವನ್ನು ವೆಚ್ಚ ಮಾಡುವುದರಲ್ಲಿ ಆಸಕ್ತಿ ಹೊಂದಿರುವ ಪೀಳಿಗೆ ರೂಪುಗೊಳ್ಳದೇ ಅದು ಆತ್ಮಶುದ್ಧಿಯಾಗಲು ಪ್ರಯತ್ನಿಸುವುದು. ಈ ರೀತಿ ಅಧ್ಯಾತ್ಮದ ಹಿನ್ನೆಲೆಯುಳ್ಳ ಪೀಳಿಗೆ ದೇಶದ ಭವಿಷ್ಯವನ್ನು ಉಜ್ವಲಗೊಳಿಸುವುದು.
ಪುರಾತನ ಮತ್ತು ಜಾಗೃತ ದೇವಸ್ಥಾನಗಳಿಗೆ ಭೇಟಿ ನೀಡು ವುದರಿಂದ ಪ್ರಾರ್ಥಿಸುವುದು, ದೇವತೆಯ ಕೃಪಾಶೀರ್ವಾದ ಸಂಪಾದಿಸುವುದು, ಈ ಸಂಸ್ಕಾರ ಜೀವನದ ಉದ್ಧಾರವನ್ನು ಮಾಡುತ್ತದೆ. ಪಾವನ ಸ್ಥಳಗಳ ವಿವಿಧ ನದಿಗಳಲ್ಲಿ ಮಾಡುವ ಪವಿತ್ರ ಸ್ನಾನ ಆಧ್ಯಾತ್ಮಿಕ ಶುದ್ಧೀಕರಣ ಮಾಡುತ್ತದೆ.
ಧ್ಯಾನಕ್ಕೆ ಸೂಕ್ತವಾದ ಆಧ್ಯಾತ್ಮಿಕ ಸ್ಥಳಗಳು ಆತ್ಮಕ್ಕೆ ಸಂತೋಷ ಮತ್ತು ಶಾಂತಿಯನ್ನು ನೀಡುತ್ತವೆ. ಇದೆಲ್ಲದರಿಂದ ಆಧ್ಯಾತ್ಮಿಕತೆಗೆ ಪ್ರೋತ್ಸಾಹ ಸಿಗುತ್ತದೆ. ಭಾರತಕ್ಕೆ ಲಭಿಸಿರುವ ಈ ಆಧ್ಯಾತ್ಮಿಕತೆಯ ಸಮೃದ್ಧ ಪರಂಪರೆಯನ್ನು ಭವಿಷ್ಯದ ಪೀಳಿಗೆಗಾಗಿ ರಕ್ಷಿಸುವುದು ಪ್ರತಿಯೊಬ್ಬರ ಧರ್ಮಕರ್ತವ್ಯವೇ ಆಗಿದೆ. ಸರಕಾರವೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಎಲ್ಲ ರೀತಿಯಲ್ಲಿ ಪ್ರೋತ್ಸಾಹಿಸಬೇಕು. ಆಧ್ಯಾತ್ಮಿಕತೆಯ ಅಂತರ್ದೃಷ್ಟಿಯನ್ನು ಸ್ವತಃ ನಿರ್ಮಾಣ ಮಾಡುವುದು, ಸ್ವಯಂಸ್ಪೂರ್ತಿಯಿಂದ ಇತರರನ್ನು ಪ್ರೇರೇಪಿಸುವುದೇ ಆಧ್ಯಾತ್ಮಿಕ ಪ್ರವಾಸೋದ್ಯಮದ ನಿಜವಾದ ಸಾರವಾಗಿದೆ.