Land Agreement Between India & Bangladesh: 50 ವರ್ಷಗಳ ನಂತರ ಬಾಂಗ್ಲಾದೇಶಕ್ಕೆ 56 ಎಕರೆ ಭೂಮಿ ಕೊಟ್ಟ ಭಾರತ; ಮರಳಿ ಪಡೆದ 14 ಎಕರೆ ಭೂಮಿ !

ಢಾಕಾ (ಬಾಂಗ್ಲಾದೇಶ) – ಭಾರತವು ಬಾಂಗ್ಲಾದೇಶದ ಗಡಿಯಲ್ಲಿರುವ ಠಾಕೂರ್‌ ಊರಿನ ರಾಣಿಶಂಕೋಯಿ ಉಪಜಿಲ್ಲೆಯಲ್ಲಿನ 56.86 ಎಕರೆ ಭೂಮಿಯನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಿದೆ. ಇದಕ್ಕೆ ಪ್ರತಿಯಾಗಿ ಭಾರತಕ್ಕೆ ಬಾಂಗ್ಲಾದೇಶದ ಕಡೆಯಿಂದ 14.68 ಎಕರೆ ಭೂಮಿ ಸಿಕ್ಕಿದೆ. ಭಾರತದ ಗಡಿ ಭದ್ರತಾ ಪಡೆ ಮತ್ತು ಬಾಂಗ್ಲಾದೇಶದ ಗಡಿ ರಕ್ಷಣಾ ಪಡೆಗಳು ಧ್ವಜ ಸಭೆಯಲ್ಲಿ ಭೂಮಿಯ ವಿನಿಮಯ ಮಾಡಿಕೊಂಡವು. 1974 ರಲ್ಲಿ ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಭೂ ವಿನಿಮಯ ಒಪ್ಪಂದ ಆಗಿತ್ತು; ಆದರೆ ರಾಣಿಶಂಕೋಯಿ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಂಡಿರಲಿಲ್ಲ. ಭಾರತವು ಕೊಟ್ಟಿರುವ ಭೂಮಿಯಲ್ಲಿ 48.12 ಎಕರೆ ಕೃಷಿ, 6.87 ಎಕರೆ ಚಹಾ ತೋಟ ಮತ್ತು 1.87 ಎಕರೆ ಸಾಗುವಳಿ ಭೂಮಿಯಾಗಿದೆ.