ಪ್ರಧಾನಮಂತ್ರಿ ಮೋದಿಯವರ ಚೀನಾ ಕುರಿತು ಸಕಾರಾತ್ಮಕ ಹೇಳಿಕೆಗೆ ಚೀನಾದ ಪ್ರತಿಕ್ರಿಯೆ !
ಬೀಜಿಂಗ್ (ಚೀನಾ) – ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚೀನಾ ಕುರಿತು ನೀಡಿರುವ ಹೇಳಿಕೆಗೆ ಚೀನಾ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಇವರು ”ಚೀನಾದ ಪ್ರಧಾನಮಂತ್ರಿ ಮೋದಿ ಅವರ ಹೇಳಿಕೆಯನ್ನು ಗಮನಿಸಿದೆ’ ಈ ಪ್ರದೇಶದಲ್ಲಿ ಮತ್ತು ಅದರಾಚೆಗೆ ಸಧೃಢ ಮತ್ತು ಸ್ಥಿರವಾಗಿರುವ ಚೀನಾ- ಭಾರತ ಸಂಬಂಧ ಶಾಂತಿ ಮತ್ತು ಅಭಿವೃದ್ಧಿಗೆ ಸಹಕಾರಿಯಾಗಿದೆ.’ ಎಂದು ಹೇಳಿದ್ದಾರೆ. ‘ರಾಜಕೀಯ ಮತ್ತು ಮಿಲಿಟರಿ ಮಟ್ಟದಲ್ಲಿ ಸಕಾರಾತ್ಮಕ ಮತ್ತು ರಚನಾತ್ಮಕ ದ್ವಿಪಕ್ಷೀಯ ಕೊಡುಗೆಗಳಿಂದ ಎರಡೂ ದೇಶಗಳು ತಮ್ಮ ತಮ್ಮ ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸುದೃಢವಾಗಲಿದೆ’, ಎಂದು ಅಮೇರಿಕಾದ ದಿನಪತ್ರಿಕೆ `ನ್ಯೂಸ್ ವೀಕ್’ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಮಂತ್ರಿ ಮೋದಿಯವರು ಹೇಳಿದ್ದರು.
1. ಗಡಿ ಸಂಘರ್ಷದ ಕುರಿತು ಮಾತನಾಡುವಾಗ ವಕ್ತಾರ ಮಾವೋ ಇವರು, ಕೇವಲ ಇದಿಷ್ಟೇ ಚೀನಾ-ಭಾರತ ಸಂಬಂಧಗಳ ಸತ್ಯವಾಗಿದೆ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ; ಏಕೆಂದರೆ ನಮ್ಮ ಸಂಬಂಧಗಳು ಬಹಳ ವ್ಯಾಪಕವಾಗಿವೆ. ಗಡಿ ವಿವಾದ ದ್ವಿಪಕ್ಷೀಯ ಸಂಬಂಧಗಳಲ್ಲಿ ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು ಮತ್ತು ಅದರ ಸೂಕ್ತ ನಿಯೋಜನೆಯಾಗಬೇಕಾಗಿದೆ.
2. ಚೀನಾದ ಅಧಿಕೃತ ಮಾಧ್ಯಮಗಳೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಸ್ವಾಗತಿಸಿದೆ. ಸರಕಾರಿ ಮಾಧ್ಯಮ ಸಂಸ್ಥೆ ‘ಚೀನಾ ಡೈಲಿ’ಯು ಇದು ಒಂದು ಸ್ವಾಗತಾರ್ಹ ಹೆಜ್ಜೆಯೆಂದು ಹೇಳಿದ್ದು, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2 ನೆರೆಯ ದೇಶಗಳು ತಮ್ಮ ದೀರ್ಘಕಾಲದ ಗಡಿ ವಿವಾದವನ್ನು ‘ಶೀಘ್ರವಾಗಿ’ ಪರಿಹರಿಸುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಇದರಿಂದ ಚೀನಾ ಮತ್ತು ಭಾರತದ ನಡುವಿನ ಶಾಂತಿಯುತ ಮತ್ತು ಸ್ಥಿರ ಸಂಬಂಧಗಳ ಅಭಿವೃದ್ಧಿಗೆ ಪ್ರಚೋದನೆ ಸಿಗಲಿದೆ. ಮೋದಿಯವರ ಇತ್ತೀಚಿನ ಹೊಸ ಟಿಪ್ಪಣೆಗಳನ್ನು ಸದ್ಭಾವನೆಯ ಸಂಕೇತವೆಂದು ಪರಿಗಣಿಸಬಹುದು; ಏಕೆಂದರೆ ಎರಡೂ ಕಡೆಯವರು ತಮ್ಮ ಗಡಿ ಸಮಸ್ಯೆಗಳಿಗೆ ಸೂಕ್ತವಾದ, ಸಮಂಜಸವಾದ ಮತ್ತು ಪರಸ್ಪರ ಸ್ವೀಕಾರಾರ್ಹ ಪರಿಹಾರವನ್ನು ಕಂಡುಕೊಳ್ಳಲು ಹಗಲಿರುಳು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವುಚೀನಾದ ಭಾರತದೊಂದಿಗಿನ ಇತಿಹಾಸವನ್ನು ನೋಡಿದರೆ, ಅದು ವಿಶ್ವಾಸದ್ರೋಹಿಯಾಗಿದೆಯೆಂದು ಕಂಡು ಬರುತ್ತದೆ. ಆದ್ದರಿಂದ ಭಾರತ ಚೀನಾದೊಂದಿಗೆ ಎಂದಿಗೂ ಸಕಾರಾತ್ಮಕ ವಿಚಾರವನ್ನು ಮಾಡಿ ಅಸಡ್ಡೆಯಿಂದ ಇರಲು ಸಾಧ್ಯವಿಲ್ಲ ! |