ನಾರ್ವೆಯಲ್ಲಿ ವೃತ್ತ ಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳು ನನ್ನ ಸಾವಿನ ಸುಳ್ಳು ಸುದ್ದಿಯನ್ನು ಪ್ರಕಟಿಸಿದ್ದವು! – ಸಾಲ್ವಾನ್ ಮೋಮಿಕಾ

ಕುರಾನ್ ಸುಡುವ ಸಾಲ್ವಾನ್ ಮೋಮಿಕಾ ಜೀವಂತ !

ಸಾಲ್ವಾನ್ ಮೋಮಿಕಾ

ಓಸ್ಲೋ (ನಾರ್ವೆ) – ನಾನು ಜೀವಂತವಾಗಿದ್ದೇನೆ. ನಾರ್ವೆಯಲ್ಲಿನ ಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳು ನನ್ನ ಸಾವಿನ ಸುಳ್ಳು ಸುದ್ದಿಯನ್ನು ಪ್ರಕಟಿಸಿವೆ ಎಂದು ಇಸ್ಲಾಂನ (ಕಟ್ಟರ್)ತೀವ್ರ ವಿಮರ್ಶಕ (ಟೀಕಾಕಾರ) ಮತ್ತು ಕುರಾನ್ ಸುಡುವ ಸಾಲ್ವಾನ ಮೊಮಿಕಾ ಹೇಳಿದ್ದಾರೆ.

ಅವರು ಮುಂದೆ ಮಾತನಾಡಿ, “ಇಸ್ಲಾಂ ಧರ್ಮವನ್ನು ಅನುಮಾನಿಸುವ ಅಥವಾ ಟೀಕೆ ಮಾಡುವ ಪ್ರತಿಯೊಬ್ಬರನ್ನೂ ಹೆದರಿಸುವುದು ಇಂತಹ ಮಾಧ್ಯಮಗಳ ಗುರಿಯಾಗಿದೆ. ಇಂತಹ ಸುದ್ದಿಗಳಿಗೆ ನಾನು ಹೆದರುವುದಿಲ್ಲ. ನಾರ್ವೆಯ ಅಧಿಕಾರಿಗಳು ನನಗೆ ಅನ್ಯಾಯ ಮಾಡಿದ್ದರೂ ಸಹ ನಾನು ಶರಣಾಗುವುದಿಲ್ಲ. ನಾನು ವಿಮಾನದಿಂದ ಇಳಿದ ತಕ್ಷಣ ಪೊಲೀಸರು ನನ್ನನ್ನು ಬಂಧಿಸಿ ನನ್ನ ಮೊಬೈಲ್ ಅನ್ನು ವಶಪಡಿಸಿಕೊಂಡರು. ಯಾರೊಂದಿಗೂ ಸಂವಾದ (ಸಂವಹನ) ನಡೆಸಲು ನನಗೆ ಅವಕಾಶ ನೀಡಲಿಲ್ಲ. ಪೊಲೀಸರು ನನ್ನನ್ನು ನೇರವಾಗಿ ನ್ಯಾಯಾಲಯಕ್ಕೆ ಕರೆದೊಯ್ದರು. ‘ನಾರ್ವೆಯ ರಾಷ್ಟ್ರೀಯ ಭದ್ರತೆಗೆ ಧಕ್ಕೆ ನಿರ್ಮಾಣ ಮಾಡಿರುವ ಕಾರಣ ನಿಮ್ಮನ್ನು ವಶಕ್ಕೆ (ಕಸ್ಟಡಿಗೆ) ತೆಗೆದುಕೊಳ್ಳಲಾಗಿದೆ’ ಎಂದು ನ್ಯಾಯಾಲಯ ಹೇಳಿದೆ. ನಿಮ್ಮ ಜೈಲುವಾಸ ಅಥವಾ ನಿಮ್ಮ ನ್ಯಾಯಾಲಯವು ನನ್ನನ್ನು ಹೆದರಿಸಲು ಸಾಧ್ಯವಿಲ್ಲ ಎಂದು ನಾನು ಅವರಿಗೆ ಹೇಳಿದೆ. ಇಸ್ಲಾಂ ಹಲವು ದೇಶಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿರುವುದರಿಂದ ಮತ್ತು ಅಲ್ಲಿನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗುತ್ತಿರುವ ಕಾರಣ ನೀವು ಸಂತೋಷವಾಗಿರುತ್ತೀರಿ ಎಂದು ಕಾಣಿಸುತ್ತಿದೆ. ಆನಂತರ ಪೊಲೀಸರು ನನ್ನನ್ನು ನ್ಯಾಯಾಲಯದಿಂದ ಹೊರಗೆ ಕರೆದೊಯ್ದರು. ಅವರು ನನ್ನನ್ನು ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಮಾಧ್ಯಮಗಳಿಂದ ದೂರವಿರುವ ರಹಸ್ಯ ಜೈಲಿನಲ್ಲಿ ಕೂಡಿಹಾಕಿದರು ಎಂದು ಮೋಮಿಕಾ ತಿಳಿಸಿದರು.