ವಾಷಿಂಗ್ಟನ್ – ಅಮೆರಿಕಾದ ಸಾರ್ವಜನಿಕ ಜೀವನದಲ್ಲಿ ಧರ್ಮದ ಪ್ರಭಾವವು ದಿನೇ-ದಿನೇ ಕಡಿಮೆಯಾಗುತ್ತಿದೆ. ಪ್ಯೂ ಸಂಶೋಧನಾ ಕೇಂದ್ರದ ವರದಿಯ ಪ್ರಕಾರ ಅಂದಾಜು 80 ಪ್ರತಿಶತ ಅಮೆರಿಕಾ ಜನರು ಇದರಲ್ಲಿ ವಿಶ್ವಾಸ ಇಡುತ್ತಾರೆ ಎಂದು ಹೇಳಿದೆ. ಅಮೆರಿಕಾದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನರು ಧರ್ವುದ ಪ್ರಭಾವ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಅದೇ ಸಂದರ್ಭದಲ್ಲಿ, ಅಮೆರಿಕದ ವಯಸ್ಕರಲ್ಲಿ ಕೇವಲ 8 ಪ್ರತಿಶತದಷ್ಟು ಜನರು ಮಾತ್ರ ಧರ್ಮದ ಪ್ರಭಾವವು ಹೆಚ್ಚುತ್ತಿದೆ ಮತ್ತು ಇದು ಒಳ್ಳೆಯ ವಿಷಯವಾಗಿದೆ ಎಂದು ನಂಬುತ್ತಾರೆ.
NEW: 8 in 10 Americans Say Religion Is Losing Influence in Public Life https://t.co/bWJxpedLQ2
— Pew Research Religion (@PewReligion) March 15, 2024
ಈ ಹಿಂದೆ ಅಂದರೆ ವರ್ಷ 2017ರಲ್ಲಿ ಅಮೆರಿಕದಲ್ಲಿ ಒಂದು ಸಮೀಕ್ಷೆ ನಡೆಸಲಾಗಿತ್ತು. ಅದರಲ್ಲಿ 23 ಪ್ರತಿಶತದಷ್ಟು ಅಮೆರಿಕನ್ ಮುಸಲ್ಮಾನರು ತಮ್ಮ ಧರ್ಮ ಸಂಬಂಧವನ್ನು ತ್ಯಜಿಸಿದ್ದಾರೆ ಎಂದು ಹೇಳಲಾಗಿದೆ; ಆದರೆ ಇತರ ಧರ್ಮಗಳಿಂದ ಇಸ್ಲಾಂಗೆ ಮತಾಂತರಗೊಂಡವರ ಸಂಖ್ಯೆಯೂ ಸುಮಾರು 23 ಪ್ರತಿಶತದಷ್ಟು ಇತ್ತು. ಹೀಗೆ ಇಸ್ಲಾಂ ತೊರೆದವರ ಮತ್ತು ಅದರಲ್ಲಿ ಸೇರಿದವರ ಸಂಖ್ಯೆ ಸಮಾನವಾಗಿತ್ತು. ಇದರ ಜೊತೆಗೆ ಶೇಕಡ 22ರಷ್ಟು ಕ್ರೈಸ್ತರು ತಮ್ಮ ಧಾರ್ಮಿಕ ಸಮೂಹದೊಂದಿಗೆ ಸಂಬಂಧ ಹೊಂದಲು ಬಯಸುತ್ತಿಲ್ಲ ಎಂಬುದು ಕೂಡ ಈ ಸಮೀಕ್ಷೆಯಿಂದ ತಿಳಿದುಬಂದಿದೆ.