ಭಿಕ್ಷೆ ಬೇಡುವ ಬಗ್ಗೆ ಸಮರ್ಥ ರಾಮದಾಸ ಸ್ವಾಮಿಯವರ ನಿಯಮಗಳು

ಚೈತ್ರ ಶುಕ್ಲ ನವಮಿಯಂದು (೧೭ ಏಪ್ರಿಲ್‌ ೨೦೨೪) ಸಮರ್ಥ ರಾಮದಾಸ ಸ್ವಾಮಿಯವರ ಜಯಂತಿಯಿದೆ. ಆ ನಿಮಿತ್ತ ಅವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು !

‘ಭಿಕ್ಷೆ ಬೇಡುವುದು’ ಇದು ಸಮರ್ಥ ಸಂಪ್ರದಾಯದ ಆತ್ಮ ಆಗಿದೆ. ಮನುಷ್ಯರನ್ನು ಒಗ್ಗೂಡಿಸಲಿಕ್ಕಿದ್ದರೆ ಮಹಂತರು ಕಷ್ಟ ಪಡಬೇಕಾಗುತ್ತದೆ. ಸಂಘಟನೆಗಳಲ್ಲಿ ಹೊಸ ಹೊಸ ಜನರು ಸೇರಬೇಕು. ಸಮರ್ಥರು ಹೇಳುತ್ತಾರೆ, ಭಿಕ್ಷೆಯ ನೆಪದಿಂದ ಸತತ ತಿರುಗಾಡಬೇಕು ಮತ್ತು ಹೊಸ ಹೊಸ ಭಕ್ತರನ್ನು ಹುಡುಕಬೇಕು. ಅನೇಕರ ತಪ್ಪು ತಿಳುವಳಿಕೆಯೆಂದರೆ ಭಿಕ್ಷೆ ಎಂದರೆ ಆಲಸ್ಯ ಮತ್ತು ಹೊಟ್ಟೆ ತುಂಬಿಸಿಕೊಳ್ಳುವ ಜನರಿಗೆ ಧರ್ಮವು ಮಾಡಿರುವ ವ್ಯವಸ್ಥೆ; ಆದರೆ ‘ಭಿಕ್ಷೆ ‘ಮತ್ತು ‘ತಿರುಕ’ ಇದರಲ್ಲಿ ವ್ಯತ್ಯಾಸವಿದೆ.

ಸಮರ್ಥ ರಾಮದಾಸ ಸ್ವಾಮಿ ಇವರ ಜೋಳಿಗೆಯು ರಾಷ್ಟ್ರೀಯ ಜೋಳಿಗೆಯಾಗಿದ್ದು ಒಂದು ಸಮಾಜದ ಸಂಘಟನೆ ಮತ್ತು ಒಂದು ರಾಜ್ಯವನ್ನು ನಿರ್ಮಿಸುವ ಕ್ಷಮತೆ ಈ ಜೋಳಿಗೆಗೆ ಇತ್ತು. ಅದಕ್ಕಾಗಿ ಸಮರ್ಥರ ಭಿಕ್ಷೆಯ ನಿಯಮ ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಅವರು ಹೇಳುತ್ತಾರೆ …

೧. ಪರಿಚಿತ ವ್ಯಕ್ತಿಗಳ ಬಳಿ ಪುನಃ ಪುನಃ ಭಿಕ್ಷೆ ಕೇಳಬಾರದು.

೨. ಭಿಕ್ಷೆಗಾಗಿ ಒಂದು ಕುಟುಂಬದ ಮೇಲೆ ಅಥವಾ ಒಂದೇ ಗ್ರಾಮದ ಮೇಲೆ ಅವಲಂಬಿತವಾಗಬಾರದು.

೩. ಪ್ರತಿ ದಿನ ಒಂದೇ ಶ್ರೀಮಂತ ಕುಟುಂಬದಿಂದ ಬಹಳಷ್ಟು ಭಿಕ್ಷೆ ತರದೆ ಬೇರೆ ಬೇರೆ ೫ ಕುಟುಂಬಗಳಿಂದ ಸ್ವಲ್ಪ ಸ್ವಲ್ಪ ಭಿಕ್ಷೆ ತರಬೇಕು, ಇದರಿಂದ ಒಂದೇ ಕುಟುಂಬದ ಮೇಲೆ ಭಾರ ಬೀಳುವುದಿಲ್ಲ.

೪. ಯಾವುದಾದರೂ ಕುಟುಂಬದವರು ಬಹಳಷ್ಟು ಪದಾರ್ಥ ಭಿಕ್ಷೆ ನೀಡಲು ತಂದಿರುವಾಗ ಅದರಲ್ಲಿನ ಸ್ವಲ್ಪ ತೆಗೆದುಕೊಂಡು ಮಿಕ್ಕಿರುವುದನ್ನು ಹಿಂದಿರುಗಿಸಬೇಕು.

೫. ಮಹಂತರು ಅನ್ನಛತ್ರಗಳಲ್ಲಿ ಭೋಜನ ಸೇವಿಸಬಾರದು.

೬. ಒಂದು ವಾರವನ್ನು ನಿಶ್ಚಯಿಸಿ ಆಯ್ದ ಮನೆಗಳಲ್ಲಿಯೇ ಭೋಜನ ವ್ಯವಸ್ಥೆಯನ್ನು ಮಾಡಬಾರದು. ಸಂಕ್ಷಿಪ್ತವಾಗಿ ಸಮರ್ಥರ ಪ್ರಕಾರ ಭಿಕ್ಷೆ ಇದು ಹೊಟ್ಟೆ ತುಂಬಿಸುವ ಸಾಧನವಲ್ಲ; ಮನುಷ್ಯರನ್ನು ಒಟ್ಟು ಸೇರಿಸುವ ಮಾರ್ಗವಾಗಿದೆ.

೭. ಯಾವ ವ್ಯಕ್ತಿಗೆ ಪೂರ್ಣ ಸಮಯ ಸಮಾಜದ ಸೇವೆ ಮಾಡ ಬೇಕೆಂದಿದೆಯೋ ಅವರು ಹೊಟ್ಟೆಪಾಡಿಗಾಗಿ ನೌಕರಿ ಮಾಡದೆ ಸಮಾಜದ ಮೇಲೆ ಅವಲಂಬಿತವಾಗಬೇಕು. ಅವರ ಕಾರ್ಯ ತಿಳಿದುಕೊಂಡು ಸಮಾಜವು ಇಂತಹ ವ್ಯಕ್ತಿಗಳನ್ನು ಕಾಪಾಡಬೇಕು.

ಮ. ಗಾಂಧಿ ಬ್ಯಾರಿಸ್ಟರ್‌ ಆಗಿ ಭಾರತಕ್ಕೆ ಹಿಂತಿರುಗಿ ಬಂದ ನಂತರ ಅವರಿಗೆ ಗೋಪಾಲಕೃಷ್ಣ ಗೋಖಲೆ ಹೇಳಿದರು, ”ಉದರ ನಿರ್ವಾಹಕ್ಕಾಗಿ ನೀವು ವಕೀಲಿ ಮಾಡಬೇಡಿ. ನೀವು ಭಾರತದ ಸ್ವಾತಂತ್ರ್ಯಕ್ಕಾಗಿ ಸಮಾಜದ ವಕೀಲಿ ಮಾಡಿ. ಸಮಾಜ ನಿಮ್ಮ ಕುಟುಂಬದ ಕಾಳಜಿ ವಹಿಸಿಕೊಳ್ಳುವುದು”. ಇದೇ ಅರ್ಥದಲ್ಲಿ ಸಮರ್ಥರು ಭಿಕ್ಷೆಯ ಮೂಲಕ ಸಮುದಾಯ ಸಂಪತ್ತಿನ ಪರಿಕಲ್ಪನೆ ಪರಿಚಯಿಸಿದರು.

ಲೇಖಕರು : ಅಜಯ ಬೋಸರೇಕರ, ಸದಸ್ಯರು, ವಿದ್ಯುತ ಗ್ರಾಹಕರ ಕುಂದುಕೊರತೆ ವೇದಿಕೆ, ಪುಣೆ ವಿಭಾಗ)