|
ಲಂಡನ್ /ನವದೆಹಲಿ – ‘ವಿದೇಶಿ ಭೂಮಿಯಲ್ಲಿರುವ ಭಯೋತ್ಪಾದಕರನ್ನು ನಾಶ ಮಾಡುವ ರಣನೀತಿಯ ಭಾಗವಾಗಿ ಭಾರತ ಸರಕಾರವು ಪಾಕಿಸ್ತಾನದಲ್ಲಿನ ಅನೇಕ ಜನರ ಹತ್ಯೆ ಮಾಡಿದ್ದು, ಈ ಬಗ್ಗೆ ಭಾರತೀಯ ಮತ್ತು ಪಾಕಿಸ್ತಾನಿ ಗುಪ್ತಚರರು ಮಾಹಿತಿ ನೀಡಿದ್ದಾರೆ’ ಎಂದು ಬ್ರಿಟಿಷ್ ಸಮಾಚಾರ ಪತ್ರಿಕೆ ‘ ದ ಗಾರ್ಡಿಯನ್ ‘ ಪ್ರಸಿದ್ಧಿಗೊಳಿಸಿದೆ . ಇದರ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತ ಭಾರತದ ವಿದೇಶಾಂಗ ಸಚಿವ ಡಾ. ಎಸ್ ಜೈ ಶಂಕರ, ಈ ರೀತಿಯ ಹತ್ಯೆಗಳನ್ನು ನಡೆಸುವುದು ಭಾರತದ ವಿದೇಶಾಂಗ ನೀತಿಗೆ ವಿರುದ್ಧವಾಗಿದೆ, ಎಂದರು. ಈ ಆರೋಪ ಸುಳ್ಳಾಗಿದ್ದು ಭಾರತದ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಕೂಡ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
‘ದ ಗಾರ್ಡಿಯನ್’ ನ ಸಮಾಚಾರ ಬರೆದಿದ್ದು:
೧. ಎರಡು ದೇಶಗಳ ಗುಪ್ತಚರ ಅಧಿಕಾರಿಗಳ ಸಂದರ್ಶನ ಮತ್ತು ಪಾಕಿಸ್ತಾನಿ ಸಮೀಕ್ಷಾ ವ್ಯವಸ್ಥೆಯಿಂದ ದೊರೆತಿರುವ ದಾಖಲೆಗಳಿಂದ ಸ್ಪಷ್ಟವಾಗಿ ಕಂಡುಬರುವುದು ಏನೆಂದರೆ, ಭಾರತದ ವಿದೇಶಿ ಗುಪ್ತಚರ ಸಂಸ್ಥೆಯಿಂದ ೨೦೧೯ ನಂತರ ಕಥಿತ ರಾಷ್ಟ್ರೀಯ ಸುರಕ್ಷಾ ಕಾರ್ಯಾಚರಣೆ ನಡೆದಿದೆ. ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ ) ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಾಲಯದ ಹಿಡಿತದಲ್ಲಿದ್ದು, ಮೋದಿ ಈ ತಿಂಗಳಲ್ಲಿ ಮೂರನೆಯ ಅವಧಿಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ .
೨. ೨೦೧೯ ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ದಾಳಿಯ ಬಳಿಕ ಭಾರತೀಯ ಗುಪ್ತಚರ ಇಲಾಖೆ ರಾ ೨೦ ಹತ್ಯೆಗಳನ್ನು ನಡೆಸಿದೆ. ಈ ದಾಳಿ ನಡೆಸಿದವರನ್ನು ಭಾರತವು ಶತ್ರುಗಳೆಂದು ಪ್ರಕಟಿಸಿದೆ. ಇತ್ತೀಚೆಗೆ ಭಾರತದ ಮೇಲೆ ಕೆನಡಾ ಮತ್ತು ಅಮೆರಿಕ ಸಿಖ್ ರ ಹತ್ಯೆಯ ಆರೋಪ ಮಾಡಲಾಗಿತ್ತು. ಭಾರತೀಯ ಗುಪ್ತಚರ ಅಧಿಕಾರಿಗಳು ಪಾಕಿಸ್ತಾನದಲ್ಲಿ ನಡೆದ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದ ಇದು ಮೊದಲ ಘಟನೆಯಾಗಿದೆ .
೩. ಪಾಕಿಸ್ತಾನಿ ಗುಪ್ತಚರ ಇಲಾಖೆ ತಿಳಿಸಿದ ಮಾಹಿತಿ ಪ್ರಕಾರ, ಭಾರತೀಯ ಗುಪ್ತಚರರು ಸಂಯುಕ್ತ ಅರಬ್ ಸಂಸ್ಥಾನ(ಯುಎಇ)ದಲ್ಲಿ ಈ ಹತ್ಯೆಗಳನ್ನು ನಡೆಸಿದೆ. ೨೦೨೩ ರಲ್ಲಿ ಈ ಹೆಚ್ಚು ಹತ್ಯೆಗಳು ನಡೆದಿದ್ದವು. ಸ್ಥಳೀಯ ಅಪರಾಧಿಗಳ ಅಥವಾ ಬಡ ಪಾಕಿಸ್ತಾನಿ ಜನರ ಹತ್ಯೆ ಮಾಡಲು ಈ ಗುಪ್ತಚರರು ಲಕ್ಷಾಂತರ ರೂಪಾಯಿ ನೀಡುತ್ತಾರೆ. ೨೦೨೩ ರಲ್ಲಿ ೧೫ ಜನರ ಹತ್ಯೆ ಮಾಡಲಾಗಿತ್ತು, ಅವರೆಲ್ಲರನ್ನೂ ಅಜ್ಞಾತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.
೪ . ಭಾರತೀಯ ಗುಪ್ತಚರ ಇಲಾಖೆ ತಿಳಿಸಿದ ಮಾಹಿತಿ ಪ್ರಕಾರ, ಇಂತಹ ಕಾರ್ಯಾಚರಣೆ ನಡೆಸಲು ಸ್ಥಳೀಯ ಸರಕಾರದ ಅನುಮತಿ ಅಗತ್ಯವಿರುತ್ತದೆ. ಇದನ್ನು ಮಾಡುವುದಕ್ಕಾಗಿ ಭಾರತಕ್ಕೆ ಇಸ್ರೇಲ್ ಗುಪ್ತಚರ ಸಂಸ್ಥೆ ಮೋಸಾದ್ ಮತ್ತು ರಷ್ಯಾದ ಗುಪ್ತಚರ ಸಂಸ್ಥೆ ಕೆಜಿಬಿ ಇವರಿಂದ ಪ್ರೇರಣೆ ದೊರೆತಿದೆ. ಈ ಎರಡೂ ಸಂಸ್ಥೆಗಳಿಗೆ ವಿದೇಶಿ ಭೂಮಿಯಲ್ಲಿ ನಡೆಯುವ ಹತ್ಯೆಯ ನಂಟಿದೆ.
|
ನಮ್ಮ ದೇಶದ ಶಾಂತಿ ಕದಡಲು ಯಾರಾದರೂ ಪ್ರಯತ್ನಿಸಿದರೆ ನಾವು ಅವರಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ. ಭಾರತದಲ್ಲಿ ಯಾರಾದರೂ ಭಯೋತ್ಪಾದಕ ಚಟುವಟಿಕೆ ನಡೆಸಿ ಪಾಕಿಸ್ತಾನಕ್ಕೆ ಪರಾರಿಯಾದರೆ ನಾವು ಪಾಕಿಸ್ತಾನಕ್ಕೆ ನುಗ್ಗಿ ಹತ್ಯೆ ಮಾಡುತ್ತೇವೆ, ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತದ ಕುರಿತು ‘ದಿ ಗಾರ್ಡಿಯನ್’ ಪತ್ರಿಕೆಯಲ್ಲಿ ಬಂದಿರುವ ಲೇಖನದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಸಿಂಗ್ ತಮ್ಮ ಮಾತು ಮುಂದುವರೆಸಿ, ಇದೀಗ ಪಾಕಿಸ್ತಾನವೂ ಭಾರತದ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡಿದೆ. ಭಾರತವು ತನ್ನ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ನೀವು ಇತಿಹಾಸದ ಪುಟಗಳನ್ನು ನೋಡಿದರೆ, ಇಲ್ಲಿಯವರೆಗೆ ಭಾರತವು ಯಾವುದೇ ದೇಶದ ಮೇಲೆ ಆಕ್ರಮಣ ಮಾಡಿಲ್ಲ ಅಥವಾ ಹಾಗೆ ಮಾಡಲು ಪ್ರಯತ್ನಿಸಿಲ್ಲ ಎಂದು ನಿಮಗೆ ತಿಳಿಯುತ್ತದೆ. ಭಾರತವು ಪ್ರಪಂಚದ ಯಾವುದೇ ದೇಶದ ಒಂದು ಇಂಚು ಭೂಮಿಯನ್ನು ಸಹ ನಿಯಂತ್ರಿಸಲು ಪ್ರಯತ್ನಿಸಲಿಲ್ಲ; (ಭಾರತದ ಮೇಲೆ ಶತ್ರುಗಳು ಗಳಿಸಿದ ಹಿಡಿತವನ್ನು ತೆಗೆದುಹಾಕಲು ಮತ್ತು ಆ ಭೂಮಿಯನ್ನು ಹಿಂದಕ್ಕೆ ತೆಗೆದುಕೊಳ್ಳಲು ಭಾರತವು ಪ್ರಯತ್ನಿಸಲಿಲ್ಲ, ಇದು ಸಹ ವಾಸ್ತವದ ಸಂಗತಿಯಾಗಿದೆ ! – ಸಂಪಾದಕರು) ಆದರೆ ಯಾರಾದರೂ ಭಾರತದ ಮೇಲೆ ಕಣ್ಣಿಟ್ಟರೆ, ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಮಾಡಿದರೆ, ಅವರನ್ನು ಸುಮ್ಮನೆ ಬಿಡುವುದಿಲ್ಲ ! ಎಂದು ಹೇಳಿದರು.
ಸಂಪಾದಕೀಯ ನಿಲುವುಕೆನಡಾ, ಅಮೇರಿಕಾ ಮತ್ತು ಈಗ ಬ್ರಿಟನ್ ನಲ್ಲಿನ ಸಮಾಚಾರ ಪತ್ರಕೆಗಳ ಮೂಲಕ ಭಾರತವನ್ನು ಪ್ರಯತ್ನಪೂರ್ವಕವಾಗಿ ಈ ರೀತಿ ಗುರಿಯಾಗಿಸಲಾಗುತ್ತಿದೆ. ಈ ಮೂಲಕ ಈ ಪಾಶ್ಚಿಮಾತ್ಯ ದೇಶಗಳು ಭಾರತದ ಮೇಲೆ ಒತ್ತಡ ನಿರ್ಮಾಣ ಮಾಡುವ ಪ್ರಯತ್ನ ಮಾಡುತ್ತಿವೆ. ಜಿಹಾದಿ ಮತ್ತು ಖಲಿಸ್ತಾನಿ ಭಯೋತ್ಪಾದಕರಿಗೆ ಅವರು ಅಪ್ರತ್ಯಕ್ಷ ಸಮರ್ಥನೆ ನೀಡುತ್ತಿರುವುದನ್ನು ಗಮನಿಸಿ ಇಂತಹ ದೇಶಗಳ ವಿರುದ್ಧ ಭಾರತ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. |