SC Stays Madrasa Closure: ಉತ್ತರ ಪ್ರದೇಶ ಮದರಸಾ ಬೋರ್ಡ್ ಕಾನೂನು ರದ್ದು ಪಡಿಸಲು ಉಚ್ಚ ನ್ಯಾಯಾಲಯದ ತೀರ್ಪನ್ನು ಸ್ಥಗಿತಗೊಳಿಸಿದ ಸರ್ವೋಚ್ಚ ನ್ಯಾಯಾಲಯ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಸರ್ವೋಚ್ಚ ನ್ಯಾಯಾಲಯವು ‘ಉತ್ತರಪ್ರದೇಶ ಬೋರ್ಡ್ ಆಫ್ ಮದರಸಾ ಎಜುಕೇಶನ್ ಆಕ್ಟ್ ೨೦0೪’ ಗೆ ಸಂವಿಧಾನ ವಿರೋಧಿ ಎಂದು ನಿಶ್ಚಯಿಸಿರುವ ಅಲಹಾಬಾದ್ ಉಚ್ಚ ನ್ಯಾಯಾಲಯದ ಲಖನೌ ವಿಭಾಗೀಯ ಪೀಠದ ನಿರ್ಣಯಕ್ಕೆ ತಡೆಆಜ್ಞೆ ನೀಡಿದೆ. ಹಾಗೂ ಇದರ ಸಂದರ್ಭದಲ್ಲಿ ಉತ್ತರಪ್ರದೇಶ ಸರಕಾರದಿಂದ ಉತ್ತರ ಕೇಳಲಾಗಿದೆ. ಮಾರ್ಚ್ ೨೨, ೨೦೨೪ ರಂದು ಉಚ್ಚ ನ್ಯಾಯಾಲಯವು ಈ ಕಾಯ್ದೆಗೆ ಸಂವಿಧಾನ ವಿರೋಧಿ ಎಂದು ನಿಶ್ಚಯಿಸಿತ್ತು. ಹಾಗೂ ರಾಜ್ಯದಲ್ಲಿನ ಮದರಸಾದಲ್ಲಿ ಕಲಿಯುವ ೧೭ ಲಕ್ಷ ವಿದ್ಯಾರ್ಥಿಗಳಿಗೆ ಸಾಮಾನ್ಯ ಶಾಲೆಗಳಲ್ಲಿ ಸೇರಿಸಲು ಹೇಳಲಾಗಿತ್ತು. ಈ ನಿರ್ಣಯಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.

(ಸೌಜನ್ಯ – TIMES NOW Navbharat)

ಸರ್ವೋಚ್ಚ ನ್ಯಾಯಾಲಯದಿಂದ ತಡೆಆಜ್ಞೆ ನೀಡುವಾಗ, ೧೭ ಲಕ್ಷ ವಿದ್ಯಾರ್ಥಿಗಳ ಮೇಲೆ ಉಚ್ಚ ನ್ಯಾಯಾಲಯದ ತೀರ್ಪಿನ ಪರಿಣಾಮ ಆಗುತ್ತಿದ್ದು, ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ಸೇರಿಸಲು ಆದೇಶ ನೀಡುವುದು ಯೋಗ್ಯವಲ್ಲ ಎಂದು ಹೇಳಿತು.

ಉತ್ತರ ಪ್ರದೇಶ ಮದರಸಾ ಬೋರ್ಡ್ ಕಾನೂನು ಯಾವುದು ?

‘ಉತ್ತರಪ್ರದೇಶ ಮದರಸಾ ಬೋರ್ಡ್ ಶಿಕ್ಷಣ ಕಾನೂನು ೨೦೦೪’ ಉತ್ತರಪ್ರದೇಶ ಸರಕಾರ ಅಂಗೀಕರಿಸಿದ್ದ ಕಾನೂನು ಆಗಿತ್ತು. ಈ ಕಾನೂನಿನ ನಿರ್ಮಾಣ ರಾಜ್ಯದಲ್ಲಿನ ಮದರಸಾ ಶಿಕ್ಷಣ ವ್ಯವಸ್ಥೆ ಸುಧಾರಣೆಗಾಗಿ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಉದ್ಯೋಗಕ್ಕಾಗಿ ಒಳ್ಳೆಯ ಅವಕಾಶ ನೀಡುವ ಉದ್ದೇಶವಾಗಿತ್ತು. ಈ ಕಾನೂನಿನ ಪ್ರಕಾರ ಮದರಸಾಗಳಿಗೆ ಕನಿಷ್ಠ ಮಾನದಂಡ ಪೂರ್ಣಗೊಳಿಸಿದರೆ ಅವರಿಗೆ ಬೋರ್ಡ್ ದಿಂದ ಮಾನ್ಯತೆ ದೊರೆಯುವುದು. ಈ ಕಾನೂನಿಗೆ ವಿರೋಧ ವ್ಯಕ್ತಪಡಿಸಿರುವವರ ಪ್ರಕಾರ, ಈ ಕಾನೂನು ಮದರಸಾಗಳಿಗೆ ಜಾತ್ಯತೀತ ಶಿಕ್ಷಣ ನೀಡುವುದನ್ನು ತಡೆಯುತ್ತದೆ ಎಂದು ಹೇಳಿದ್ದಾರೆ.

೮ ಸಾವಿರದ ೪೪೧ ಮದರಸಾಗಳಿಗೆ ಮಾನ್ಯತೆ ಇಲ್ಲ !

ಸಪ್ಟೆಂಬರ್ ೧೦, ೨೦೨೨ ರಿಂದ ನವೆಂಬರ್ ೧೫, ೨೦೨೨ ಈ ಸಮಯದಲ್ಲಿ ಮದರಸಾದ ಸಮೀಕ್ಷೆ ನಡೆಸಿದ್ದರು. ಈ ಅವಧಿ ನಂತರ ನವೆಂಬರ್ ೩೦ ವರೆಗೆ ಹೆಚ್ಚಿಸಲಾಗಿತ್ತು. ಈ ಸಮೀಕ್ಷೆಯಲ್ಲಿ ರಾಜ್ಯದ ಸುಮಾರು ೮ ಸಾವಿರದ ೪೪೧ ಮದರಸಾಗಳಿಗೆ ಮಾನ್ಯತೆ ಇಲ್ಲದಿರುವುದು ಕಂಡುಬಂದಿತು. ಸರಕಾರದ ಹೇಳಿಕೆಯ ಪ್ರಕಾರ, ಈಗ ರಾಜ್ಯದಲ್ಲಿ ೧೫ ಸಾವಿರದ ೬೧೩ ಮದರಸಾಗಳಿಗೆ ಮಾನ್ಯತೆ ಇದೆ. ಅಕ್ಟೋಬರ್ ೨೦೨೩ ರಲ್ಲಿ ಸರಕಾರದಿಂದ ಮದರಸಾಗಳ ವಿಚಾರಣೆ ನಡೆಸುವುದಕ್ಕಾಗಿ ವಿಶೇಷ ತನಿಖಾ ತಂಡ ಸ್ಥಾಪನೆ ಮಾಡಲಾಗಿತ್ತು. ಮದರಸಾಗಳಿಗೆ ದೊರೆಯುವ ವಿದೇಶಿ ನಿಧಿಯ ಕುರಿತು ವಿಶೇಷ ತನಿಖಾ ತಂಡದಿಂದ ವಿಚಾರಣೆ ನಡೆಯುತ್ತಿದೆ.