ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕೇಶ್ವರಾನಂದ ಸರಸ್ವತಿ ಅವರಿಂದ ಆತಂಕ ವ್ಯಕ್ತ
ಗೋರಖಪುರ (ಉತ್ತರಪ್ರದೇಶ) – ೭೫ ವರ್ಷಗಳ ಹಿಂದೆ ದೇಶದ ಜನಸಂಖ್ಯೆ ೩೦ ಕೋಟಿ ಮತ್ತು ೭೮ ಕೋಟಿ ಗೋವುಗಳು ಇದ್ದವು. ಈಗ ಜನಸಂಖ್ಯೆ ೧೪೦ ಕೋಟಿಗಿಂತಲೂ ಹೆಚ್ಚು ಇದೆ; ಆದರೆ ಕೇವಲ ೧೭ ಕೋಟಿ ಗೋವುಗಳು ಮಾತ್ರ ಬಾಕಿ ಉಳಿದಿವೆ. ಸದ್ಯ ನಡೆಯುತ್ತಿರುವ ಗೋ ಹತ್ಯೆ ನಿಲ್ಲದಿದ್ದರೆ, ಐದು ವರ್ಷದ ನಂತರ ನಾವು ಗೋವುಗಳನ್ನು ಕೇವಲ ಚಿತ್ರದಲ್ಲಿ ನೋಡಬೇಕಾಗುತ್ತದೆ, ಎಂದು ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕೇಶ್ವರಾನಂದ ಸರಸ್ವತಿ ಅವರು ಆತಂಕ ವ್ಯಕ್ತಪಡಿಸಿದರು. ಗೀತಾ ಪ್ರೆಸ್ಸಿನ ಚಿತ್ರಮಂದಿರದಲ್ಲಿ ‘ ಗೋರಕ್ಷಣೆ ಮತ್ತು ಧರ್ಮ ‘ಈ ವಿಷಯದ ಬಗ್ಗೆ ಅವರು ಮಾತನಾಡುತ್ತಿದ್ದರು .
(ಸೌಜನ್ಯ – India Speaks Daily)
ಗೋವುಗಳ ರಕ್ಷಣೆಗಾಗಿ ಗೋರಕನಾಥ ಮಂದಿರದಲ್ಲಿ ಬಾಬಾ ಗೋರಕನಾಥರಿಗೆ ನಾವು ಪ್ರಾರ್ಥನೆ ಮಾಡಿದೆವು. ದ್ವಾಪರ ಯುಗದಲ್ಲಿ ಭಗವಾನ್ ಶ್ರೀ ಕೃಷ್ಣನು ಗೋವರ್ಧನ ಪರ್ವತ ಎತ್ತಿ ಗೋವುಗಳು ಮತ್ತು ನಿಸರ್ಗದ ರಕ್ಷಣೆ ಮಾಡಿದನು. ನಾವು ಗೋ ರಕ್ಷಣೆಗಾಗಿ ಮಥುರಾ ಭಗವಾನ್ ಶ್ರೀ ಕೃಷ್ಣನ ನಗರದಿಂದ ಕಾಲ್ನಡಿಗೆಯ ಪ್ರವಾಸ ಮಾಡಿ ದೆಹಲಿಗೆ ತಲುಪಿದ ಬಳಿಕ ೧೯೬೬ ರಲ್ಲಿ ಗೋರಕ್ಷಣೆ ಆಂದೋಲನದಲ್ಲಿ ಗುಂಡೇಟಿಗೆ ತಮ್ಮ ಪ್ರಾಣಾರ್ಪಣೆ ಮಾಡಿದ್ದ ಗೋ ಭಕ್ತರಿಗೆ ನಮಸ್ಕಾರ ಮಾಡಿದೆವು. ಗೋ ರಕ್ಷಣೆಗಾಗಿ ದೇವರಿಗೆ ಪ್ರಾರ್ಥನೆ ಮಾಡಿದೆವು ಮತ್ತು ಹಿಂದುಗಳು ಈ ಕಾರ್ಯ ಮಾಡಬೇಕು ಎಂದು ಕರೆ ನೀಡಿದೆವು ಎಂದು ಶಂಕರಾಚಾರ್ಯರು ಹೇಳಿದರು.
ಗೋರಕ್ಷಣೆಗಾಗಿ ಯಾವುದೇ ದೊಡ್ಡ ಪಕ್ಷ ಮುಂದೆ ಬಂದಿಲ್ಲ !
ಶಂಕರಾಚಾರ್ಯರು ಮಾತು ಮುಂದುವರೆಸಿ, ದೇಶದಲ್ಲಿನ ೨ ಸಾವಿರದ ೬೧೫ ಪಕ್ಷಗಳಿಗೆ ಪತ್ರ ಬರೆದು ಗೋರಕ್ಷಣೆಗಾಗಿ ಪ್ರತಿಜ್ಞಾಪತ್ರ ನೀಡಲು ವಿನಂತಿಸಿದ್ದೆವು; ಆದರೆ ಯಾವುದೇ ಒಂದು ದೊಡ್ಡ ಪಕ್ಷ ಮುಂದೆ ಬರಲಿಲ್ಲ. ಇಲ್ಲಿಯವರೆಗೆ ೬೧ ಸಣ್ಣ ಮಟ್ಟದ ಪಕ್ಷಗಳು ನನ್ನನ್ನು ಸಂಪರ್ಕಿಸಿ ಗೋ ರಕ್ಷಣೆಗೆ ಬೆಂಬಲ ನೀಡಿವೆ. ಗೋ ರಕ್ಷಣೆಗಾಗಿ ಹಿಂದುಗಳು ಜಾಗೃತರಾಗುವುದು ಆವಶ್ಯಕವಾಗಿದೆ.
ಗೋ ರಕ್ಷಣೆಗಾಗಿ ಹೋರಾಡುವ ಪಕ್ಷಗಳಿಗೆ ಮತ ನೀಡಿ !
ಧರ್ಮಶಾಸ್ತ್ರ ಮತ್ತು ಕಾನೂನಿನ ಪ್ರಕಾರ ಯಾರು ಅಪರಾಧ ಮತ್ತು ಪಾಪ ಮಾಡುತ್ತಾರೆ ಅಂತವರ ಸಮರ್ಥನೆ ಮಾಡುವುದು ಕೂಡ ಪಾಪವೇ ಆಗಿದೆ. ಆದ್ದರಿಂದ ಗೋ ರಕ್ಷಣೆಗಾಗಿ ಹೋರಾಡುವ ಪಕ್ಷಗಳಿಗೆ ಮಾತ್ರ ಮತ ನೀಡಿ ಎಂದು, ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಕರೆ ನೀಡಿದರು.
ಹಾಗಾದರೆ ಗೋರಖಪುರದ ಹೆಸರು ಬದಲಾಯಿಸಬೇಕಾಗಬಹುದು !
ಗೋರಖಪುರದ ಹೆಸರಿನಲ್ಲಿಯೇ ಗೋವು ಸೇರಿದೆ. ಗೋರಖಪುರದಲ್ಲಿಯೇ ಗೋರಕ್ಷಣೆಯ ಕಾರ್ಯ ನಡೆಯದಿದ್ದರೆ, ಗೋರಖಪುರದ ಹೆಸರು ಬದಲಾಯಿಸಬೇಕು; ಕಾರಣ ಯಾವ ಹೆಸರಿನಿಂದ ಉಪಯೋಗವಾಗುವುದಿಲ್ಲವೋ ಅದನ್ನು ಕೂಡ ಬದಲಾಯಿಸಬೇಕು, ಎಂದು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಆಗ್ರಹಿಸಿದರು.