5 ಲಕ್ಷ ರೂಪಾಯಿ ಮತ್ತು ಸರಕಾರಿ ನೌಕರಿಯ ಆಮಿಷದಿಂದಾಗಿ ಇಸ್ಲಾಂ ಸ್ವೀಕರಿಸಿದ ರಾಜಸ್ಥಾನದಲ್ಲಿನ ಹಿಂದೂ ಮಹಿಳೆ ಹಾಗೂ ಆಕೆಯ ೨ ಮಕ್ಕಳು !

ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ

ಜಯಪುರ (ರಾಜಸ್ಥಾನ) – ರಾಜಸ್ಥಾನದ ಖೈರಥಲ-ತಿಜಾರಾ ಜಿಲ್ಲೆಯಲ್ಲಿ ೫ ಲಕ್ಷ ರೂಪಾಯಿ ಹಾಗೂ ಸರಕಾರಿ ನೌಕರಿಯ ಆಮಿಷಕ್ಕೆ ಬಲಿಯಾಗಿ ಓರ್ವ ಮಹಿಳೆಯು ತನ್ನ ಇಬ್ಬರು ಮಕ್ಕಳೊಂದಿಗೆ ಇಸ್ಲಾಂ ಸ್ವೀಕರಿಸಿರುವ ಘಟನೆಯು ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ದೊರೆಯುತ್ತಲೇ ಮಹಿಳೆಯ ಮಾವ ಪೊಲೀಸರಿಗೆ ದೂರು ನೀಡಿದರು. ಈ ಪ್ರಕರಣದಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.

೧. ತಿಜಾರಿನ ನಂದಲಾಲ ಜಾಟವ ರವರು ಮಾತನಾಡುತ್ತ ನನ್ನ ಮಗ ಕೃಷ್ಣಕುಮಾರ ಮತ್ತು ಅವನ ಪತ್ನಿ ಮಂಜು ಮಸಾಲಾ ಪ್ಯಾಕಿಂಗ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ. ಕೆಲವು ದಿನಗಳ ಹಿಂದೆ ನನ್ನ ಮೊಮ್ಮಗ ಪಿಯುಷನು ನನಗೆ, `ಅಮ್ಮ ಗಂಟೆಗಟ್ಟಲೆ ಮನೆಯಿಂದ ಕಾಣೆಯಾಗಿರುತ್ತಾಳೆ, ಅವಳು ಮಸಾಲೆ ಕಾರ್ಖಾನೆ ನಡೆಸುವ ಇಂತೇಝಾರ ಖಾನನು ನಿಮಗೆ (ಮಕ್ಕಳಿಗೆ) ತಂದೆ ಹಾಗೆ, ಅವನೇ ಮನೆಯ ಎಲ್ಲಾ ಖರ್ಚು ನಿಭಾಯಿಸುತ್ತಾನೆ ಎಂದು ಹೇಳುತ್ತಾಳೆ, ಎಂದು ಹೇಳಿದನು. ಕೆಲವೇ ದಿನಗಳಲ್ಲಿ ಇಂತೇಝಾರನು ಪಿಯುಷನ ಮನೆಗೆ ಬರಲು ಆರಂಭಿಸಿದನು. ಅವನು ಮಂಜುವನ್ನು ದ್ವಿಚಕ್ರದ ಮೇಲೆ ಹೊರಗೆ ಕರೆದುಕೊಂಡು ಹೋಗುತ್ತಿದ್ದನು. ಮಕ್ಕಳು ವಿರೋಧಿಸಿದರೂ ಮಂಜು ಅವರ ಮಾತನ್ನು ಕೇಳುತ್ತಿರಲಿಲ್ಲ. ಒಂದು ದಿನ ಆಕೆ ಇಬ್ಬರು ಮಕ್ಕಳನ್ನು ಕರೆದುಕೊಂಡು ಇಂತಝಾರನ ಮನೆಗೆ ಹೋದಳು ಎಂದು ಮಕ್ಕಳು ಹೇಳಿದರು.

ಮನೆಯಲ್ಲಿ ಮೊದಲೇ ಇಬ್ಬರು ಮೌಲ್ವಿ (ಇಸ್ಲಾಮಿನ ಧಾರ್ಮಿಕ ಮುಖಂಡ) ಉಪಸ್ಥಿತರಿದ್ದರು. ಮೌಲ್ವಿಗಳು ಇಬ್ಬರು ಮಕ್ಕಳಿಗೆ ‘ಇಸ್ಲಾಮಿನ ಶಿಕ್ಷಣ ಪಡೆಯಿರಿ, ‘ಅಧ್ಯಯನ ಮಾಡಿ ಮತ್ತು ಧರ್ಮ ಸ್ವೀಕರಿಸಿ’ ಎಂದು ಹೇಳಿದರು. ಅವರು ಇಬ್ಬರು ಮಕ್ಕಳಿಗೆ ೫ ಲಕ್ಷ ರೂಪಾಯಿ ನೀಡುವ ಹಾಗೂ ಸರಕಾರಿ ಕೆಲಸ ಕೊಡಿಸುವುದಾಗಿ ಆಮಿಷ ತೋರಿಸಿದರು. ಮಂಜು ಇದಕ್ಕೆ ಒಪ್ಪಿಕೊಂಡಳು. ಕೆಲವೇ ದಿನಗಳಲ್ಲಿ ಮಂಜು ತನ್ನ ಮಕ್ಕಳನ್ನು ಬಲವಂತವಾಗಿ ತಿಜಾರದಲ್ಲಿರುವ ಮಸೀದಿಗೆ ಕರೆದುಕೊಂಡು ಹೋದಳು ಮತ್ತು ಇಂತೆಝಾರ ಎಂಬ ವ್ಯಕ್ತಿಗೆ ಒಪ್ಪಿಸಿದಳು. ಆದರೆ ಅವಕಾಶ ನೋಡಿ ಎರಡು ಮಕ್ಕಳು ಅಲ್ಲಿಂದ ಓಡಿ ಬಂದು ಮತ್ತು ನನಗೆ ಸಂಪೂರ್ಣ ಪ್ರಕರಣದ ಮಾಹಿತಿ ನೀಡಿದರು ಎಂದು ಹೇಳಿದರು.

೨. ಈ ಸಂದರ್ಭದಲ್ಲಿ ನಂದಲಾಲ ರವರು ಮಂಜುಳೊಂದಿಗೆ ಮಾತನಾಡಿ ಈ ಸಂಪೂರ್ಣ ಪ್ರಕರಣದ ಬಗ್ಗೆ ವಿಚಾರಿಸಿದರು. ಆದ್ದರಿಂದ ಮಂಜು ಮತ್ತು ಇಂತೆಝಾರರು ನಂದಲಾಲ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ. ನಂದಲಾಲ ರವರ ದೂರಿನ ಆಧಾರದಲ್ಲಿ ಪೊಲೀಸರು ದೂರನ್ನು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ಧರ್ಮಶಿಕ್ಷಣ ಇಲ್ಲದಿರುವುದರಿಂದ ಹಿಂದೂಗಳು ಇಂತಹ ಆಮೀಷಗಳಿಗೆ ಬಲಿಯಾಗಿ ಮತಾಂತರವಾಗುತ್ತಾರೆ. ಇದನ್ನು ಗಮನದಲ್ಲಿಟ್ಟು ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದು ಅವಶ್ಯಕವಾಗಿದೆ !