ಕೃಣ್ವಂತೋ ವಿಶ್ವಮಾರ್ಯಮ್‌ |’ ಈ ಘೋಷಣೆಯ ಇತಿಹಾಸ

‘ಕೃಣ್ವಂತೋ ವಿಶ್ವಮಾರ್ಯಮ್‌ |’ (ಋಗ್ವೇದ, ಮಂಡಲ ೯, ಸೂಕ್ತ ೬೩, ಋಚಾ ೫) ಅಂದರೆ ಸಂಪೂರ್ಣ ಜಗತ್ತನ್ನು ಆರ್ಯ (ಸುಸಂಕೃತ)ವನ್ನಾಗಿಸೋಣ.’ ಭಾರತ ಎಷ್ಟು ವಿಸ್ತಾರವಾಗಿ ಹರಡಿತ್ತು ಎಂಬುದು ಭೂಗೋಲ ಹಾಗೂ ಇತಿಹಾಸದಿಂದ ತಿಳಿಯುತ್ತದೆ; ಹಾಗೆಯೇ ಸಂಸ್ಕೃತಿ, ಭಾಷೆ, ಧರ್ಮ, ರೂಢಿ ಮತ್ತು ಪರಂಪರೆಯಿಂದ ಇನ್ನಷ್ಟು ಹೆಚ್ಚು ಸ್ಪಷ್ಟವಾಗುತ್ತದೆ. ‘ಕೃಣ್ವಂತೋ ವಿಶ್ವಮಾರ್ಯಮ್‌ |’ ಎಂಬ ಘೋಷಣೆ, ಈ ಘೋಷಣೆಯ ಇತಿಹಾಸವನ್ನು ನೋಡೋಣ.

ಹಿಂದುತ್ವದ ಪುರಾತನ ಅಸ್ತಿತ್ವದ ಜಗತ್ತಿನಾದ್ಯಂತದ ಸಾಕ್ಷಿಯನ್ನು ವಿವಿಧ ದೇಶ, ಧರ್ಮ, ಇತಿಹಾಸಕಾರರು ಹಾಗೂ ಸಂಶೋಧಕರ ಅಭಿಪ್ರಾಯದಿಂದ ನೋಡಿದರೆ, ಜಗತ್ತಿನ ವಿವಿಧ ದೇಶಗಳಿಂದ ಮತ್ತು ದೂರದೂರದ ವರೆಗೆ ಹರಡಿದ ಅನೇಕ ರಾಷ್ಟ್ರಗಳಲ್ಲಿ ಇದಕ್ಕೆ ಸಾಕ್ಷಿಗಳು ಕಂಡುಬರುತ್ತವೆ. ಇವುಗಳನ್ನು ಪತ್ತೆ ಹಚ್ಚಲು ನಾವು ದಕ್ಷಿಣದಿಂದ ಪೂರ್ವಕ್ಕೆ, ಪೂರ್ವದಿಂದ ಉತ್ತರ ಮತ್ತು ಪಶ್ಚಿಮಕ್ಕೆ ಪ್ರಯಾಣಿಸೋಣ.

೧. ಶ್ರೀಲಂಕಾ ಮತ್ತು ಅದಕ್ಕೆ ಹಿಂದೂ ಸಂಸ್ಕೃತಿಯೊಂದಿಗಿದ್ದ ಪುರಾತನ ಸಂಬಂಧ 

ಈ ಹಿಂದಿನ ಸಿಲೋನ್, ಅಂದರೆ ಇಂದಿನ ಶ್ರೀಲಂಕಾ ! ಲಂಕೆ ಹೆಸರಿನ ದೇಶವು ಭಾರತದ ದಕ್ಷಿಣ ನೈಋತ್ಯ ದಿಕ್ಕಿನಲ್ಲಿದೆ. ಶ್ರೀಲಂಕಾ ಮತ್ತು ಭಾರತದ ನಡುವೆ ಸಮುದ್ರದಲ್ಲಿ ಸಣ್ಣ ದ್ವೀಪಗಳ ಮತ್ತು ಕಲ್ಲುಗಳ ಸಾಲು ಕಾಣಿಸುತ್ತದೆ. ಅದಕ್ಕೆ ‘ರಾಮಸೇತು’ ಎನ್ನುತ್ತಾರೆ. ರಾವಣನು ಸೀತೆಯನ್ನು ಅಪಹರಿಸಿ ಅವಳನ್ನು ಲಂಕಾದಲ್ಲಿಟ್ಟಾಗ ಪ್ರಭು ಶ್ರೀರಾಮ ಮತ್ತು ಲಕ್ಷ್ಮಣರು ಸೀತೆಯನ್ನು ಹುಡುಕುವಾಗ ರಾಮಭಕ್ತ ಹನುಮಂತನು ತನ್ನ ಅನೇಕ ಸಹಾಯಕರೊಂದಿಗೆ ಶ್ರೀಲಂಕಾವನ್ನು ಜೋಡಿಸುವ ಈ ರಾಮಸೇತುವನ್ನು ನಿರ್ಮಿಸಿದ್ದನು. ಪುರಾತನ ಹಿಂದೂ ವಾಙ್ಮಯದಲ್ಲಿನ ಭೌತಿಕ ಸಾಕ್ಷಿಗಳು ಇಂದು ಕೂಡ ಪೂರ್ಣ ಜಗತ್ತಿನಾದ್ಯಂತ ಕಂಡುಬರುತ್ತವೆ.

ಅಮೇರಿಕಾದ ‘ನಾಸಾ’ ಈ ಅಂತರಿಕ್ಷ ಸಂಶೋಧನಾ ಕೇಂದ್ರವು ಉಪಗ್ರಹದ ಮೂಲಕ ಈ ಸೇತುವೆಯ ಅನೇಕ ಛಾಯಾಚಿತ್ರಗಳನ್ನು ಪ್ರಸಿದ್ಧ ಪಡಿಸಿದೆ. ಅದರಲ್ಲಿ ಭಾರತದಲ್ಲಿನ ದಕ್ಷಿಣ ಸಾಗರ ತೀರದಿಂದ ಶ್ರೀಲಂಕಾ ವರೆಗೆ ಹೋಗುವ ಸೇತುವೆಯ ವಿಹಂಗಮ ದೃಶ್ಯ ಕಾಣಿಸುತ್ತದೆ. ಇಲ್ಲಿನ ‘ಸಿಂಹಳ’ ಜನರ ಸಂಸ್ಕೃತಿ ಹಿಂದೂ ಸಂಸ್ಕೃತಿಯೊಂದಿಗೆ ಹೊಂದಾಣಿಕೆಯಾಗುತ್ತಿದ್ದು ಅವರ ‘ಸಿಂಹಳಿ’ ಭಾಷೆಯೂ ಸಂಸ್ಕೃತ ಭಾಷೆಯಿಂದಲೇ ಉತ್ಪನ್ನವಾಗಿದೆ.

ಶ್ರೀಲಂಕಾದಲ್ಲಿ ಕೊಲಂಬೋದಿಂದ ಸುಮಾರು ೧೫೦ ಕಿಲೋಮೀಟರ್‌ ದೂರದಲ್ಲಿ ಮಾಣಿಕಗಂಗಾ ನದಿಯ ತೀರದಲ್ಲಿ ಒಂದು ಪುರಾತನ ಗಣೇಶ ಮಂದಿರವಿದೆ. ಅಲ್ಲಿ ಇಂದು ಕೂಡ ‘ಶ್ರೀ ಗಣೇಶ’ನು ವೈದಿಕ ಬೌದ್ಧ ಗೋಪುರಗಳ ರಕ್ಷಕ-ದೇವತೆಯಾಗಿದ್ದು, ಅಲ್ಲಿ ಹಿಂದೂ ವಿಧಿಗನುಸಾರ ಶ್ರೀ ಗಣೇಶನ ಪೂಜೆ ನಡೆಯುತ್ತದೆ. ಶ್ರೀಲಂಕಾದಲ್ಲಿ ಒಂದು ಪರ್ವತದ ಮೇಲೆ ಭವ್ಯ ಹಳೆಯ ಬಂಡೆ ಇದೆ. ಈ ಬಂಡೆಯ ಮೇಲೆ ೨ ಮೀಟರ್‌ ಉದ್ದದ ಹೆಜ್ಜೆಯ ಗುರುತು ಇದೆ. ಇದಕ್ಕೆ ‘ಶಿವಶಂಕರನ ಹೆಜ್ಜೆ’ ಎನ್ನುತ್ತಾರೆ. ಶ್ರೀಲಂಕಾದಲ್ಲಿ ರಾಮಾಯಣದ ತುಂಬಾ ಪ್ರಭಾವವಿದೆ. ಇಲ್ಲಿ ಬೌದ್ಧ ಧರ್ಮ ದೊಡ್ಡ ಪ್ರಮಾಣದಲ್ಲಿದ್ದು ಅದು ಶೇ. ೭೦ ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿದೆ. ಹಿಂದೂಗಳ ಪ್ರಮಾಣ ಶೇ. ೧೩ ರಷ್ಟಿದೆ. ಇಲ್ಲಿ ‘ಶಿವ’ನನ್ನು ಮುಖ್ಯ ದೇವತೆಯೆಂದು ಪೂಜಿಸಲಾಗುತ್ತದೆ. ‘ಮುರುಗನ್’ ಈ ದೇವತೆಯನ್ನೂ ದೊಡ್ಡ ಪ್ರಮಾಣ ದಲ್ಲಿ ಪೂಜಿಸಲಾಗುತ್ತದೆ. ರಾಮಾಯಣ ಕಾಲದ ಅನೇಕ ವಿಷಯಗಳು ಇಲ್ಲಿ ಇಂದೂ ನೋಡಲು ಸಿಗುತ್ತವೆ. ಶ್ರೀಲಂಕಾ ಹಿಂದೂ ದೇಶವೇ ಆಗಿತ್ತು. ಇಲ್ಲಿನ ಕಂದಾಸ್ವಾಮಿ ಮಂದಿರ, ಪಂಚೈಇಶ್ವರಮ್‌ ಹಾಗೂ ಕತಾರಗಾಮ ಮಂದಿರ ಇವು ಪ್ರಸಿದ್ಧವಾಗಿವೆ.

೨. ‘ಹಿಂದೂ ಮಹಾಸಾಗರ’ (ಇಂಡಿಯನ್‌ ಓಶನ್) ಈ ಹೆಸರು ಹೇಗೆ ಬಂತು ?

ಇಂದಿನ ಭೂಗೋಲದಲ್ಲಿಯೂ ಇಂಡೋ-ಚಾಯನಾ, ಇಂಡೋನೇಷ್ಯಾ, ಇಂಡೋ-ಆರ್ಯನ್, ಇಂಡಿಯನ್‌ ಓಶನ್‌ (ಹಿಂದೂ ಮಹಾಸಾಗರ) ಮೊದಲಾದ ಹೆಸರುಗಳು ಪ್ರಾಚೀನ ಹಿಂದೂಸ್ಥಾನದ ಸಾಮ್ರಾಜ್ಯ ಹಾಗೂ ಅದರ ಹೆಸರು ಪೂರ್ಣ ಜಗತ್ತಿನಲ್ಲಿ ಮೆರೆಯುತ್ತಿದ್ದ ಸಾಕ್ಷಿಯನ್ನು ನೀಡುತ್ತವೆ. ಪೃಥ್ವಿಯ ನಕಾಶೆಯಲ್ಲಿ ಅಮೇರಿಕಾದಿಂದ ಆಸ್ಟ್ರೇಲಿಯಾದ ವರೆಗಿನ ವಿಸ್ತಾರವಾದ ಸಾಗರಪಟ್ಟಿಗೆ ‘ಹಿಂದೂ ಮಹಾಸಾಗರ’ (ಇಂಡಿಯನ್‌ ಓಶನ್) ಎಂಬ ಹೆಸರು ಬಂದಿರಬಹುದು ಎಂಬುದು ಇದರಿಂದ ಅರಿವಾಗುತ್ತದೆ. – ಸುಧಾ ಸಾಠ್ಯೆ