ಸಾಧಕರೇ, ಸ್ವಂತ ಆಧ್ಯಾತ್ಮಿಕ ಪ್ರಗತಿಯ ಬಗ್ಗೆ ಯೋಚಿಸದೆ ನಿರಪೇಕ್ಷವಾಗಿ ಸಾಧನೆ ಮಾಡಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಕೆಲವು ಸಾಧಕರಲ್ಲಿ ‘ತಮ್ಮ ಆಧ್ಯಾತ್ಮಿಕ ಪ್ರಗತಿ ಆಗುತ್ತಿದೆಯೇ ಅಥವಾ ಇಲ್ಲವೇ ?’, ಎನ್ನುವ ಪ್ರಶ್ನೆ ಮೂಡುತ್ತದೆ. ಸಾಧಕರು ಪ್ರಗತಿಯ ವಿಚಾರ ಮಾಡದೇ ತಮ್ಮ ಸಾಧನೆಯನ್ನು ಪಟ್ಟು ಹಿಡಿದು ಹಾಗೂ ತಳಮಳದಿಂದ ಮಾಡುತ್ತಿರಬೇಕು; ಏಕೆಂದರೆ ಎಲ್ಲವೂ ಈಶ್ವರನ ಇಚ್ಛೆಯಂತೆ ನಡೆಯುತ್ತಿರುತ್ತದೆ. ಭಗವಾನ್‌ ಕೃಷ್ಣನು, ‘ಕರ್ಮಣ್ಯೆವಾಧಿಕಾರಸ್ತೆ ಮಾ ಫಾಲೇಷು ಕದಾಚನ’ ಎಂದು ಹೇಳಿದ್ದಾನೆ. (ಶ್ರೀಮದ್‌ ಭಗವದ್ಗೀತೆ ಅಧ್ಯಾಯ ೨, ಶ್ಲೋಕ ೪೭) ಅಂದರೆ, ‘ನಿಮಗೆ (ಸಾಧಕನಿಗೆ) ಕೇವಲ ಕರ್ಮ ಮಾಡುವ ಹಕ್ಕಿದೆ. ಅದರ ಫಲದ ಬಗ್ಗೆ ಯಾವುದೇ ಹಕ್ಕಿಲ್ಲ.’ ಭಗವಂತನ ಈ ವಚನದ ಮೇಲೆ ಶ್ರದ್ಧೆಯಿಟ್ಟು ಸಾಧಕರು ಫಲದ ಅಂದರೆ ಆಧ್ಯಾತ್ಮಿಕ ಪ್ರಗತಿಯ ಅಪೇಕ್ಷೆ ಇಟ್ಟುಕೊಳ್ಳದೇ ನಿರಪೇಕ್ಷ ಭಾವದಿಂದ ಸಾಧನೆಯನ್ನು ಮಾಡಬೇಕು ! ಪ್ರತಿಯೊಬ್ಬರಿಗೂ ಯೋಗ್ಯ ಸಮಯದಲ್ಲಿ ಕರ್ಮದ ಫಲ ಸಿಗುತ್ತದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ.