ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಚೀನಿ ಅಧಿಕಾರಿಗಳ ಮೇಲೆ ಸತತ ನಡೆಯುತ್ತಿರುವ ದಾಳಿಯ ನಂತರ ಖೈಬರ್ ಪಖ್ಟುನಖ್ವಾದಲ್ಲಿನ ೩ ವಿದ್ಯುತ್ ಯೋಜನೆಗಳ ಕಾರ್ಯವನ್ನು ಚೀನಾದ ಕಂಪನಿಗಳು ಸ್ಥಗಿತಗೊಳಿಸಿದೆ. ಇದಲ್ಲದೆ ಚೀನಾ ತನ್ನ ಸುಮಾರು ೧ ಸಾವಿರದ ೫೦೦ ನಾಗರೀಕರನ್ನು ಆ ಪ್ರದೇಶದಿಂದ ತೆರವುಗೊಳಿಸುತ್ತಿದೆ. ಈ ಮೂರು ಯೋಜನೆಗಳು ೯ ಸಾವಿರದ ೮೬೦ ಮೇಗಾ ವ್ಯಾಟ್ ವಿದ್ಯುತ್ ನಿರ್ಮಾಣ ಮಾಡುಲಿವೆ. ಪಾಕಿಸ್ತಾನದ ಶಾಂಗಲಾ ಜಿಲ್ಲೆಯಲ್ಲಿ ೩ ದಿನಗಳ ಹಿಂದೆ ಚೀನಿ ಇಂಜಿನಿಯರ್ ಬಸ್ಸಿನ ಮೇಲೆ ನಡೆದಿರುವ ಆತ್ಮಾಹುತಿ ದಾಳಿಯಲ್ಲಿ ಚೀನಾದ ೫ ಇಂಜಿನಿಯರ್ ಗಳು ಹತರಾಗಿದ್ದರು. ಸಾವಿನ ನೆರಳಿನಲ್ಲಿ ಈ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅನೇಕ ಕಾರ್ಮಿಕರು ಆತಂಕ ವ್ಯಕ್ತಪಡಿಸಿದ ಬಳಿಕ ಚೀನಾ ಈ ನಿರ್ಣಯ ತೆಗೆದುಕೊಂಡಿದೆ.
ಸಂಪಾದಕೀಯ ನಿಲುವುವಿಶ್ವ ಸಂಸ್ಥೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕರ ಬೆಂಬಲಕ್ಕೆ ನಿಲ್ಲುವ ಚೀನಾಗೆ ತಕ್ಕ ಶಿಕ್ಷೆಯಾಗಿದೆ ! |