ಕೇಜ್ರಿವಾಲರ ಬಂಧನದಿಂದ ಅಮೇರಿಕಾ ಆಕ್ರೋಶ
ವಾಷಿಂಗ್ಟನ್ – ದೆಹಲಿಯ ಮದ್ಯ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರ ಬಂಧನದ ನಂತರ, ಅಮೇರಿಕಾ `ಕೇಜ್ರಿವಾಲರ ಬಂಧನದ ಬಗ್ಗೆ ನಾವು ಸೂಕ್ಷ್ಮವಾಗಿ ಗಮನವಿಟ್ಟಿದ್ದೇವೆ. ನಾವು ಈ ಪ್ರಕರಣದಲ್ಲಿ ನಿಷ್ಪಕ್ಷವಾಗಿ ಮತ್ತು ಪಾರದರ್ಶಕವಾಗಿ ಕಾನೂನು ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ” ಎಂದು ಅಮೇರಿಕಾದ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ. ಕೇಜ್ರಿವಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಅವರು ಈ ಹೇಳಿಕೆಯನ್ನು ನೀಡಿದರು.
1. ಈ ಹಿಂದೆ ಕೇಜ್ರಿವಾಲ ಅವರ ಬಂಧನದ ಪ್ರಕರಣದಲ್ಲಿ ಜರ್ಮನ ಸರಕಾರ ಹೇಳಿಕೆ ನೀಡಿತ್ತು. ಅದಕ್ಕೆ ಭಾರತವು ತಕ್ಕ ಪ್ರತ್ಯುತ್ತರ ನೀಡಿತ್ತು. ಇದರೊಂದಿಗೆ ದೆಹಲಿಯ ಜರ್ಮನಿಯ ರಾಯಭಾರಿ ಜಾರ್ಜ್ ಅಂಜವೀರ ಅವರಿಗೆ ಕರೆ ಮಾಡಿ ತಿಳಿಸಿದ್ದರು. ‘ಜರ್ಮನಿಯು ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು’ ಎಂದು ಅವರಿಗೆ ಹೇಳಲಾಗಿತ್ತು.
2. ಈ ಹಿಂದೆ ಅಮೇರಿಕಾವು ‘ಪೌರತ್ವ ತಿದ್ದುಪಡಿ ಕಾಯ್ದೆ’ (ಸಿಎಎ) ವಿಷಯಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿತ್ತು. ಆ ಸಮಯದಲ್ಲಿ ‘ನಾವು ಸಮಸ್ಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದು ಅಮೇರಿಕಾವು ಹೇಳಿತ್ತು.
ಸಂಪಾದಕೀಯ ನಿಲುವು
|