ಅಧಿಕೋಶ (ಬ್ಯಾಂಕ್) ದಲ್ಲಿ ಠೇವಣಿ ಅಥವಾ ಪೋಸ್ಟ್ ಆಫೀಸ್‌(ಅಂಚೆ ಕಚೇರಿ) ಖಾತೆಯಿಂದ ಗಳಿಸಿದ ಬಡ್ಡಿಯಿಂದ ‘ಟಿ.ಡಿ.ಎಸ್‌.’ ಕಡಿತಗೊಳಿಸುವುದರಿಂದ ಆಗುವ ಆರ್ಥಿಕ ನಷ್ಟವನ್ನು ತಪ್ಪಿಸಲು ಏಪ್ರಿಲ್‌ ತಿಂಗಳ ಮೊದಲ ವಾರದಲ್ಲಿ 15 G ಅಥವಾ 15 H ಅರ್ಜಿಯನ್ನು ಬ್ಯಾಂಕ್‌ಗೆ ಸಲ್ಲಿಸಿ !

ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಮಹತ್ವದ ಮಾಹಿತಿ

ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದಂತೆ ಆರ್ಥಿಕ ವರ್ಷವನ್ನು ಏಪ್ರಿಲ್‌ ೧ ರಿಂದ ಮಾರ್ಚ್ ೩೧ ರ ವರೆಗೆ ನಿಗದಿಪಡಿಸಲಾಗಿದೆ. (ಮುಂದಿನ ಆರ್ಥಿಕ ವರ್ಷ ೧.೪.೨೦೨೪ ರಿಂದ ೩೧.೩.೨೦೨೫ ಈ ಕಾಲಾವಧಿಯಲ್ಲಿದೆ.)

‘ಟಿ.ಡಿ.ಎಸ್‌.’ (TDS – Tax Deducted At Source) ಕಡಿತ ವಾಗಬಾರದೆಂದು’, ಮುಂದಿನ ಆರ್ಥಿಕ ವರ್ಷಕ್ಕಾಗಿ ೧೫ಉ ಅಥವಾ ೧೫ ಊ ಇವುಗಳ ಪೈಕಿ ಒಂದು ಅರ್ಜಿ(ಫಾರ್ಮ್‌)ತುಂಬಿಸುವ ಬಗ್ಗೆ ಮಹತ್ವದ ಸೂಚನೆಯನ್ನು ಮುಂದೆ ನೀಡಲಾಗಿದೆ.

೧. ಆರ್ಥಿಕ ವರ್ಷದ ಆರಂಭದಲ್ಲಿ ಪ್ರತಿಯೊಬ್ಬರೂ ‘ಬ್ಯಾಂಕ್‌ನಲ್ಲಿ ತಮ್ಮ ಪ್ಯಾನ್‌ ಕಾರ್ಡ್ ಕ್ರಮಾಂಕವನ್ನು ನೋಂದಾಯಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಅದನ್ನು ನೋಂದಾಯಿಸದಿದ್ದರೆ, ‘ಟಿ.ಡಿ.ಎಸ್‌.’ ಎಂದು ಶೇ. ೨೦ ರಷ್ಟು ಮೊತ್ತವನ್ನು ಬಡ್ಡಿಯಿಂದ ಕಡಿತಗೊಳಿಸಲಾಗುತ್ತದೆ.

೨. ೧೫ G ಫಾರ್ಮ್

೬೦ ಕ್ಕಿಂತ ಕಡಿಮೆ ವಯಸ್ಸಿನವರು ಮತ್ತು ತೆರಿಗೆ ವಿನಾಯಿತಿ ಮಿತಿಯ ವರೆಗಿನ ಆರ್ಥಿಕ ವರ್ಷಕ್ಕೆ ಅಂದಾಜು ಒಟ್ಟು ತೆರಿಗೆಯ ಆದಾಯವನ್ನು ಹೊಂದಿರುವವರು ಹಾಗೂ ಸ್ಥಿರ ಠೇವಣಿಯಿಂದ ಸಿಗುವ ಬಡ್ಡಿಯ ಉತ್ಪನ್ನ ೨ ಲಕ್ಷ ೫೦ ಸಾವಿರ ರೂಪಾಯಿಗಳ ತನಕ ಇರುವವರು ಈ ಫಾರ್ಮ್ನ್ನು ತುಂಬಬೇಕು.

೩. ೧೫ H ಫಾರ್ಮ್

೬೦ ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನವರು ಮತ್ತು ತೆರಿಗೆ ವಿನಾಯಿತಿ ಮಿತಿಯ ವರೆಗಿನ ಆರ್ಥಿಕ ವರ್ಷಕ್ಕೆ ಅಂದಾಜು ಒಟ್ಟು ತೆರಿಗೆಯ ಆದಾಯವನ್ನು ಹೊಂದಿರುವವರು, ಈ ಫಾರ್ಮ್ನ್ನು ತುಂಬಬೇಕು.

೪. ಎರಡೂ ಫಾರ್ಮ್‌ಗಳ ಬಗ್ಗೆ ಸಾಮಾನ್ಯ ಮಾಹಿತಿ

ವಿವಿಧ ಬ್ಯಾಂಕ್‌ಗಳಲ್ಲಿ ಶಾಶ್ವತ ಠೇವಣಿಗಳಿದ್ದರೆ, ಪ್ರತಿಯೊಂದು ಬ್ಯಾಂಕ್‌ನಲ್ಲಿ ೧೫ G ಅಥವಾ ೧೫ H ಈ ಫಾರ್ಮ್‌ಗಳನ್ನು ತುಂಬಬೇಕಾಗುತ್ತದೆ. ಬ್ಯಾಂಕ್‌ನ ಒಂದಕ್ಕಿಂತ ಹೆಚ್ಚು ಶಾಖೆಗಳಲ್ಲಿ ಠೇವಣಿಗಳಿದ್ದರೆ ಪ್ರತಿ ಶಾಖೆಯಲ್ಲಿ ಪ್ರತ್ಯೇಕ ಫಾರ್ಮ್ ಅನ್ನು ತುಂಬಿಕೊಡಬೇಕಾಗುತ್ತದೆ.

೧೫ G ಅಥವಾ ೧೫ H ಈ ಎರಡೂ ಫಾರ್ಮ್‌ಗಳು ಬ್ಯಾಂಕ್‌ನಲ್ಲಿ ಅಥವಾ ಪೋಸ್ಟ್‌ನ ಶಾಖೆಯಲ್ಲಿ (ಅಂಚೆ ಕಚೇರಿ) ಲಭ್ಯವಿರುತ್ತವೆ. ಖಾತೆದಾರರು ಪ್ರತಿಯೊಂದು ಫಾರ್ಮ್‌ನ ೨ ಅಥವಾ ೩ ಪ್ರತಿಗಳನ್ನು (ಕಾಪಿಸ್) ತುಂಬಿ ಬ್ಯಾಂಕ್‌ನಲ್ಲಿ ಜಮೆ ಮಾಡಬೇಕಾಗುತ್ತದೆ. ಒಂದು ಪ್ರತಿಯನ್ನು ಬ್ಯಾಂಕ್‌ ಸಲುವಾಗಿ ಇಟ್ಟುಕೊಂಡು ಇನ್ನೊಂದು ಪ್ರತಿಯನ್ನು ಆದಾಯ ತೆರಿಗೆ ವಿಭಾಗಕ್ಕೆ (Income Tax Department) ಕಳುಹಿಸಲಾಗುತ್ತದೆ. ಪ್ರತಿಯೊಂದು ಬ್ಯಾಂಕ್‌ ತನ್ನದೇ ನಿಯಮಗಳ ಪ್ರಕಾರ ಎರಡೂ ಫಾರ್ಮ್‌ಗಳ ವಿನ್ಯಾಸವನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಿ ರುವುದರಿಂದ ಖಾತೆದಾರನು ಖಾತೆ ಇರುವ ಬ್ಯಾಂಕ್‌ನಿಂದ ಫಾರ್ಮ್‌ಗಳನ್ನು ತಂದು ಅವುಗಳನ್ನು ತುಂಬಬೇಕಾಗುತ್ತದೆ.

ಕೆಲವು ಬ್ಯಾಂಕ್‌ಗಳು ಆನ್‌ಲೈನ್‌’ನಲ್ಲಿ ೧೫ H ಅಥವಾ ೧೫ G ಫಾರ್ಮ್‌ಗಳನ್ನು ತುಂಬುವ ಸೌಲಭ್ಯವನ್ನು ಮಾಡಿಕೊಟ್ಟಿವೆ. ಅದಕ್ಕಾಗಿ ಸಂಬಂಧಿಸಿದ ಬ್ಯಾಂಕ್‌ನ ‘ನೆಟ್‌ ಬ್ಯಾಂಕಿಂಗ್’ ಇದ್ದರೆ ಆ ಮೂಲಕ ಈ ಸೌಲಭ್ಯದ ಲಾಭವನ್ನು ಪಡೆಯಬಹುದು. ಹಾಗೆಯೇ ಸಂಬಂಧಿತ ಬ್ಯಾಂಕ್‌ಗಳ ಜಾಲತಾಣದಲ್ಲಿ ಈ ಫಾರ್ಮ್‌ಗಳು ಲಭ್ಯವಿದ್ದರೆ ಅವುಗಳನ್ನು ‘ಡೌನ್‌ಲೋಡ್’ ಮಾಡಿ ಅದರ ‘ಪ್ರಿಂಟ್’ ತೆಗೆದು ಅದರಲ್ಲಿ ಎಲ್ಲ ಮಾಹಿತಿಯನ್ನು ತುಂಬಿ ಅದನ್ನು ಬ್ಯಾಂಕ್‌ನಲ್ಲಿ ಸಲ್ಲಿಸಬಹುದು.

೫. ‘ಟಿ.ಡಿ.ಎಸ್‌.’ ಕಡಿತವಾದರೆ ಮಾಡಬೇಕಾದ ಕೃತಿ

ಕಡಿತಗೊಂಡ ‘ಟಿ.ಡಿ.ಎಸ್‌.’ನ ಮೊತ್ತವು ಖಾತೆದಾರರಿಗೆ ಪುನಃ ಬೇಕಿದ್ದರೆ ಯಾವ ಆರ್ಥಿಕ ವರ್ಷದಲ್ಲಿ ತೆರಿಗೆಯ ಕಡಿತವಾಗಿದೆಯೋ, ಆ ವರ್ಷದ ‘ಆದಾಯ ತೆರಿಗೆ ವಿವರಣಾ ಪತ್ರ’ವನ್ನು ಆದಾಯ ತೆರಿಗೆ ವಿಭಾಗಕ್ಕೆ ಸಲ್ಲಿಸಬೇಕಾಗುತ್ತದೆ. ಆದಾಯ ತೆರಿಗೆ ವಿಭಾಗವು ಖಾತೆದಾರರ ಮಾಹಿತಿಯನ್ನು ಪರಿಶೀಲಿಸುತ್ತದೆ ಮತ್ತು ಕಡಿತಗೊಂಡ ‘ಟಿ.ಡಿ.ಎಸ್‌.’ಅನ್ನು ಬಡ್ಡಿ ಸಮೇತ ಹಿಂದಿರುಗಿಸುತ್ತದೆ. ಈ ಅಂಶಗಳನ್ನು ಗಮನದಲ್ಲಿರಿಸಿ ‘ಟಿ.ಡಿ.ಎಸ್‌.’ ಕಡಿತವಾಗದಂತೆ’, ಏಪ್ರಿಲ್‌ ತಿಂಗಳ ಮೊದಲ ವಾರದಲ್ಲಿ ಮೇಲಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.