ಋತುಸ್ರಾವ(ಮುಟ್ಟು)ಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ (Ailments related to menses) ಹೊಮಿಯೋಪಥಿ ಔಷಧಿಗಳ ಮಾಹಿತಿ

‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ ಉಪಚಾರ !’ (ಲೇಖನಮಾಲೆ ೨೨) !

ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯ ದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಮಯ ದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ. ಶೀತ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲಬದ್ಧತೆ, ಆಮ್ಲಪಿತ್ತ ಇಂತಹ ವಿವಿಧ ಕಾಯಿಲೆಗಳಿಗಾಗಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಮಾಡಲು ಹೋಮಿಯೋಪತಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ತುಂಬಾ ಉಪಯುಕ್ತವಾಗಿದೆ. ಮನೆಯಲ್ಲಿಯೇ ಈ ಚಿಕಿತ್ಸೆ ಯನ್ನು ಹೇಗೆ ಮಾಡಬಹುದು ? ಹೋಮಿಯೋಪಥಿ ಔಷಧಿಗಳನ್ನು ಯಾವ ರೀತಿ ತಯಾರಿಸಬೇಕು ? ಅವುಗಳನ್ನು ಹೇಗೆ ಸಂಗ್ರಹಿಸಬೇಕು ? ಇಂತಹ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇವೆ.

ಸಂಚಿಕೆ ೨೫/೯ ರಿಂದ ನಾವು ಪ್ರತ್ಯಕ್ಷ ರೋಗಗಳಿಗೆ ಸ್ವಯಂಚಿಕಿತ್ಸೆ ಪದ್ಧತಿಯನ್ನು ತಿಳಿದುಕೊಳ್ಳುತ್ತಿದ್ದೇವೆ. ೨೫/೨೬ ನೇ ಸಂಚಿಕೆಯಲ್ಲಿ ನಾವು ‘ಋತುಸ್ರಾವ(ಮುಟ್ಟಿಗೆ)ಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಔಷಧಿಗಳ ಮಾಹಿತಿಯನ್ನು ನೀಡಿದ್ದೇವು. ಇದರಲ್ಲಿ ‘ಋತುಸ್ರಾವದ ಮೊದಲು ಇರುವ ಸಮಸ್ಯೆ ಮತ್ತು ಋತುಸ್ರಾವ ನಡೆದಿರುವಾಗ ಇರುವ ಸಮಸ್ಯೆ ಇವುಗಳ ಬಗೆಗಿನ ಮಾಹಿತಿಯನ್ನು ಓದಿದೆವು. ಈ ವಾರ ಅದರ ಮುಂದಿನ ಭಾಗವನ್ನು ಕೊಡುತ್ತಿದ್ದೇವೆ.ಕಾಯಿಲೆಗಳಿಗೆ ನೇರವಾಗಿ ಸ್ವಯಂಚಿಕಿತ್ಸೆ ಮಾಡುವ ಮೊದಲು ೨೫/೧, ೨೫/೨ ಮತ್ತು ೨೫/೩ ನೇ ‘ಸನಾತನ ಪ್ರಭಾತ’ ಪತ್ರಿಕೆಯಲ್ಲಿ ಪ್ರಕಾಶಿಸಲಾದ ಲೇಖನಗಳಲ್ಲಿನ ‘ಹೋಮಿಯೋಪತಿ ಸ್ವಯಂಚಿಕಿತ್ಸೆಯ ಬಗ್ಗೆ ಇರುವ ಮಾರ್ಗದರ್ಶನದ ಅಂಶಗಳು ಮತ್ತು ಪ್ರತ್ಯಕ್ಷ ಔಷಧಿಗಳನ್ನು ಹೇಗೆ ಆಯ್ಕೆ ಮಾಡಬೇಕು ?’, ಎಂಬುದರ ಮಾಹಿತಿಯನ್ನು ವಾಚಕರು ಈ ಮೊದಲು ಓದಬೇಕೆಂದು ವಿನಂತಿ !

ಋತುಸ್ರಾವಕ್ಕೆ ಸಂಬಂಧಿಸಿದ ವಿವಿಧ ರೀತಿಯ ಸಮಸ್ಯೆಗಳನ್ನು ಮಹಿಳೆಯರು ಎದುರಿಸಬೇಕಾಗುತ್ತದೆ. ಇದರಲ್ಲಿ ಕೆಲವು ಪ್ರಮುಖ ಸಮಸ್ಯೆಗಳ ಚಿಕಿತ್ಸೆಗೆ ಸಂಬಂಧಿತಮಾಹಿತಿಯನ್ನು ಕೊಟ್ಟಿದ್ದೇವೆ. ಯಾವ ವೈಶಿಷ್ಟ್ಯಪೂರ್ಣ ಲಕ್ಷಣಗಳಿದ್ದರೆ, ಔಷಧಿಗಳನ್ನು ತೆಗೆದು ಕೊಳ್ಳಬೇಕು, ಎಂಬುದನ್ನು ಔಷಧಿಗಳ ಹೆಸರುಗಳ ಮುಂದೆ ಕೊಡಲಾಗಿದೆ.

೪. ಋತುಸ್ರಾವದ ಮೊದಲು ಅಥವಾ ಎರಡು ಋತುಸ್ರಾವಗಳ ನಡುವಿನ ಕಾಲಾವಧಿಯಲ್ಲಿ ಸ್ತ್ರೀಯರ ಹೊಟ್ಟೆಯಲ್ಲಿ ನೋವಾಗುವುದು (Dysmenorrhoea)

ಕೆಲವು ಸ್ತ್ರೀಯರಿಗೆ ಋತುಸ್ರಾವ ಆರಂಭವಾಗುವ ೧-೨ ದಿನ ಮೊದಲು ಹೊಟ್ಟೆ ನೋಯತೊಡಗುತ್ತದೆ ಮತ್ತು ಋತುಸ್ರಾವ ಆರಂಭವಾದ ನಂತರ ೨-೩ ದಿನಗಳ ನಂತರ ಅದು ತಾನಾಗಿಯೇ ನಿಲ್ಲುತ್ತದೆ. ಈ ಕಾಲಾವಧಿಯಲ್ಲಿ ಹೊಟ್ಟೆಯಲ್ಲಿ ಸೆಳೆತ (cramps) ಬರುತ್ತವೆ. ಕೆಲವರಿಗೆ ಹೊಟ್ಟೆ ತೊಳೆಸುವುದು, ಆಯಾಸ ಅಥವಾ ಭೇದಿಯಾಗುತ್ತದೆ. ಋತುಸ್ರಾವದ ಸಮಯದಲ್ಲಿ ಸಾಮಾನ್ಯವಾಗಿ ಕಂಡು ಬರುವ ಹೊಟ್ಟೆ ನೋವು, ಇದು ಯಾವುದೇ ವೈದ್ಯಕೀಯ ಕಾಯಿಲೆಯಿಂದಾಗಿ ಇರುವುದಿಲ್ಲ.

೪ ಅ. ಕಾಲೋಫೈಲಮ್‌ ಥ್ಯಲಿಕಟ್ರಾಯಡೆಸ್‌ (Caulophyllum Thalictroides)

೪ ಅ ೧. ಹೊಟ್ಟೆಯಲ್ಲಿ ನಡುನಡುವೆ ತೀವ್ರ ಶೂಲೆಗಳು ಬರುವುದು
೪ ಅ ೨. ಕರುಳು ಕೆಳಗೆ ಬರುತ್ತಿದೆ, ಎಂದು ಅನಿಸುವುದು
೪ ಅ ೩. ನೋವು ಗರ್ಭಾಶಯದಿಂದ ಸುತ್ತಲಿರುವ ಇತರ ಇಂದ್ರಿಯಗಳ ಕಡೆಗೆ ಹೋಗುವುದು

೪ ಆ. ಕ್ಯಾಮೊಮಿಲ್ಲಾ (Chamomilla)

೪ ಆ ೧. ಬಹಳ ತೀವ್ರ ಪ್ರಸುತಿನೋವಿನ ಸಂವೇದನೆಯಾಗುವುದು
೪ ಆ ೨. ವೇದನೆ ಅಸಹನೀಯವಾಗಿ, ಮರಗಟ್ಟಿದಂತಾಗುವುದು
೪ ಆ ೩. ಹೊಟ್ಟೆಯ ಮೇಲ್ಭಾಗದಲ್ಲಿ ಒತ್ತಡದ ಅರಿವಾಗಿ ಮೈಮೇಲೆ ರಕ್ತದ ಗಂಟುಗಳಾಗುವುದು.

Discharge per vagina ಇದಕ್ಕೆ ಕನ್ನಡದಲ್ಲಿ ‘ಮೈಮೇಲೆ ಹೋಗುವುದು’ ಎಂದು ಹೇಳುತ್ತಾರೆ, ಉದಾಹರಣೆಗೆ ಋತುಸ್ರಾವದ
ಸಮಯದಲ್ಲಿ ಬಹಳ ರಕ್ತಸ್ರಾವ ಆಗುತ್ತಿದ್ದರೆ ‘ಮೈಮೇಲೆ ಬಹಳ ಹೋಗುತ್ತಿದೆ’, ಎಂದು ಹೇಳುತ್ತಾರೆ.
೪ ಆ ೪. ಉಷ್ಣ ಹವಾಮಾನದಲ್ಲಿ ತೊಂದರೆಯಲ್ಲಿ ಹೆಚ್ಚಳವಾಗುವುದು

೪ ಇ. ಪಲ್ಸೆಟಿಲ್ಲಾ ನಿಗ್ರಿಕನ್ಸ್ (Pulsatilla Nigricans)

೪ ಇ ೧. ಶೂಲೆಯು ಕೆಲವೊಮ್ಮೆ ಒಂದು ಭಾಗದಲ್ಲಿ ಮತ್ತು ತಕ್ಷಣ ಇನ್ನೊಂದು ಭಾಗದಲ್ಲಿ ಅರಿವಾಗುವುದು
೪ ಇ ೨. ವೇದನೆಗಳ ಜೊತೆಗೆ ಚಳಿಯಾಗುವುದು; ಎಷ್ಟು ಹೆಚ್ಚು ವೇದನೆಯೋ, ಅಷ್ಟು ಹೆಚ್ಚು ಚಳಿಯಾಗುವುದು
೪ ಇ ೩. ಋತುಸ್ರಾವ ತಡವಾಗಿ ಬರುವುದು ಅಥವಾ ದಬ್ಬ ಲ್ಪಡು ವುದು, ಮುಖ್ಯವಾಗಿ ಕಾಲುಗಳನ್ನು ಒದ್ದೆ ಮಾಡಿಕೊಳ್ಳುವು ದರಿಂದ ರಕ್ತಸ್ರಾವ ನಿಲ್ಲುವುದು.
೪ ಇ ೪. ಋತುಸ್ರಾವದ ಸಮಯದಲ್ಲಿ ವೇದನೆಯಾಗಿ ಸ್ವಲ್ಪ ಮಟ್ಟಿಗೆ ಮೈಮೇಲೆ ಹೋಗುವುದು ಮತ್ತು ಭೇದಿಯಾಗುವುದು
೪ ಇ ೫. ಸ್ತ್ರೀ ‘ಕೋಮಲ, ಸೌಮ್ಯ, ವಿಧೇಯ, ದುಃಖಿ ನಿರಾಶೆ, ಬೇಗನೆ ಅಳುವವಳು, ಪ್ರತಿ ಬಾರಿ ಅಳುವವಳು, ಪ್ರತಿಯೊಂದು ತೊಂದರೆಯನ್ನು ಅಳುತ್ತಾ ಹೇಳುವವಳು’, ಹೀಗೆ ಇರುವಳು
೪ ಇ ೬. ವೇದನೆ, ಚಳಿ, ಶೌಚ ಇತ್ಯಾದಿ ಲಕ್ಷಣಗಳ ಸ್ವರೂಪಗಳಲ್ಲಿ ಸತತ ಬದಲಾವಣೆಯಾಗುವುದು
೪ ಇ ೭. ಇತರರಿಂದ ಸಹಾನುಭೂತಿಯ ಅಪೇಕ್ಷೆಯಾಗುವುದು

೪ ಈ. ಮ್ಯಾಗ್ನೆಶಿಯಮ್‌ ಫಾಸ್ಫೊರಿಕಮ್‌ (Magnesium Phosphoricum)

೪ ಈ ೧. ಋತುಸ್ರಾವದ ಮೊದಲು ನರತಂತುಗಳಲ್ಲಿ (neuralgic) ವೇದನೆಯಾಗುವುದು, ಹಾಗೂ ಸೆಳೆತ (cramps) ಉಂಟಾಗುವುದು
೪ ಈ ೨. ಹೊಟ್ಟೆಯಲ್ಲಿ ಮುಖ್ಯವಾಗಿ ಬಲಬದಿಗೆ ವೇದನೆಯಾಗುವುದು
೪ ಈ ೩. ಶಾಖ ಕೊಟ್ಟರೆ, ಮುಂದೆ ಬಾಗಿದರೆ ಮತ್ತು ಒತ್ತಿದರೆ ಹಿತವಾಗುವುದು, ಚಲನವಲನದಿಂದ ಹೆಚ್ಚು ವೇದನೆಯಾಗುವುದು
೪ ಈ ೪. ಬೇಸರಗೊಂಡ, ಅಶಕ್ತ ಮತ್ತು ದಣಿದ ಮಹಿಳೆಯರಿಗೆ ಮುಟ್ಟಿನ ತೊಂದರೆ ಇದ್ದರೆ ಉಪಯುಕ್ತ

೪ ಉ. ಯಕೋನೈಟ್‌ ನ್ಯಪೆಲಸ್‌ (Aconite Napellus)

೪ ಉ ೧. ದಷ್ಟಪುಷ್ಟ, ಗುಲಾಬಿ ಮುಖದ (plethoric) ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಅಸಹನೀಯ ವೇದನೆಯಾಗುವುದು
೪ ಉ ೨. ಇದ್ದಕ್ಕಿದ್ದಂತೆಯೇ ಹೆದರಿಕೆ, ಅಸ್ವಸ್ಥ, ಕಾಳಜಿ ಅನಿಸುವುದು
೪ ಉ ೩. ಮರಣದ ಭಯ, ಮರಣದ ನಿಖರ ಸಮಯವನ್ನೂ ಹೇಳುವುದು

೪ ಊ. ಕ್ಯಕ್ಟಸ್‌ ಗ್ರಂಡಿಫ್ಲೋರಸ್‌ (Cactus Grandiflorus)

೪ ಊ ೧. ಹೊಟ್ಟೆಯಲ್ಲಿ ಬಹಳ ತೀವ್ರ ನೋವಾಗುವುದು
೪ ಊ ೨. ವೇದನೆಯಿಂದಾಗಿ ರೋಗಿಯು ದೊಡ್ಡದಾಗಿ ಅಳುವುದು
೪ ಊ ೩. ರೋಗಿಗೆ ಬವಳಿ ಬಿದ್ದಂತಾಗುವುದು

೪ ಎ. ಕೊಲೊಸಿಂಥಿಸ್‌ (Colocynthis)

೪ ಎ ೧. ಹೊಟ್ಟೆಯಲ್ಲಿ ತೀವ್ರ ಶೂಲೆ ಬರುವುದು, ಕರುಳು ಕಲ್ಲಿನಿಂದ ಚಚ್ಚಿಹಾಕಿದಂತೆ ಅನಿಸುವುದು
೪ ಎ ೨. ವೇದನೆಗಳಿಂದ ಬಾಗಿದಂತಾಗುವುದು
೪ ಎ ೩. ರೋಗಿಯು ನೋವಿನಿಂದ ನರಳುವುದು
೪ ಎ ೪. ರೋಗಿಗೆ ಹೊಟ್ಟೆಯನ್ನು ಎರಡೂ ಕೈಗಳಿಂದ ಒತ್ತಿ ಹಿಡಿದು ಬಾಗಿದಾಗ ಒಳ್ಳೆಯದೆನಿಸುವುದು

೪ ಏ. ವೈಬರನಮ್‌ ಯಾಪ್ಯೂಲಸ್‌ (Viburnum Opulus)

೪ ಏ ೧. ನಡುನಡುವೆ ಹೊಟ್ಟೆಯಲ್ಲಿ ನೋವು ಬರುವುದು, ಅದರ ಜೊತೆಗೆ ಹೊಟ್ಟೆಯಲ್ಲಿ ಸೆಳೆತ (cramps) ಬರುವುದು
೪ ಏ ೨. ನೋವಿನೊಂದಿಗೆ ಹೊಟ್ಟೆಯಲ್ಲಿ ವಾಯು ಸೇರಿ ದೊಡ್ಡ ತೇಗು ಬರುವುದು

೪ ಐ. ಸೊಪಿಯಾ ಆಫಿಸಿನ್ಯಲಿಸ್‌ (Sepia)

೪ ಐ ೧. ಗರ್ಭಾಶಯ ಕೆಳಗೆ ಎಳೆದಂತೆ ಅನಿಸುವುದು
೪ ಐ ೨. ಎಲ್ಲ ಅವಯವಗಳು ಯೋನಿಯಿಂದ ಹೊರಗೆ ಬರುತ್ತಿವೆಯೋ, ಹೇಗೋ ಎಂದು ಅನಿಸುವುದು ಮತ್ತು ಅದರಿಂದಾಗಿ ಕಾಲಿನ ಮೇಲೆ ಕಾಲು ಹಾಕಿ (ಕತ್ತರಿಯಂತೆ) ಕುಳಿತುಕೊಳ್ಳುವುದು ಅಥವಾ ಆ ಭಾಗವನ್ನು ಹಿಡಿದಿಟ್ಟುಕೊಳ್ಳುವುದು
೪ ಐ ೩. ಋತುಸ್ರಾವ ಬಹಳ ಕಡಿಮೆಯಾಗುವುದು

೪ ಒ. ಬ್ರಾಯೋನಿಯಾ (Bryonia)
೪ ಒ ೧. ಋತುಸ್ರಾವದ ಸಮಯದಲ್ಲಿ ಮಾಸಿಕಸ್ರಾವದ ಬದಲು ಮೂಗಿನಿಂದ ರಕ್ತಸ್ರಾವವಾಗುವುದು (ಮುಂದುವರಿಯುವುದು)

‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ’ ಉಪಾಯ !’ ಈ ಮುಂಬರುವ ಗ್ರಂಥದಲ್ಲಿನ ಆಯ್ದ ಭಾಗಗಳನ್ನು ಪ್ರತಿ ವಾರದ ಸಂಚಿಕೆಯಲ್ಲಿ ಲೇಖನಗಳ ಸ್ವರೂಪದಲ್ಲಿ ಪ್ರಕಟಿಸಲಾಗುತ್ತಿದೆ. ಆದರೂ ಸ್ವಉಪಾಯದ ದೃಷ್ಟಿಯಿಂದ ಸಾಧಕರು, ವಾಚಕರು, ರಾಷ್ಟ್ರ-ಧರ್ಮಪ್ರೇಮಿಗಳು, ಹಿತಚಿಂತಕರು, ಅರ್ಪಣೆದಾರರು ಈ ಲೇಖನಗಳನ್ನು ಆಪತ್ಕಾಲದ ದೃಷ್ಟಿಯಿಂದ ಸಂಗ್ರಹಿಸಿ ಇಡಬೇಕು. ಆಪತ್ಕಾಲದಲ್ಲಿ ಡಾಕ್ಟರರು, ವೈದ್ಯರು ದೊರಕದಿದ್ದರೆ, ಅಂತಹ ಸಮಯದಲ್ಲಿ ಈ ಲೇಖನಗಳನ್ನು ಓದಿ ತಮ್ಮ ಮೇಲೆ ಉಪಾಯ ಮಾಡಿಕೊಳ್ಳಬಹುದು.