Ramlala Darshan Fraud : ಅಯೋಧ್ಯೆಯ ಶ್ರೀರಾಮ ಮಂದಿರದ ದರ್ಶನಕ್ಕಾಗಿ ಭಕ್ತರಿಂದ ಸುಲಭ ದರ್ಶನಕ್ಕಾಗಿ ಹಣ ವಸೂಲಿ ಮಾಡಲಾಗುತ್ತಿತ್ತು !

  • ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನವರಿಂದಲೇ ಮಾಹಿತಿ ಬಹಿರಂಗ !

  • ಓರ್ವ ಪೊಲೀಸ್ ಪೇದೆ ಅಮಾನತು

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಪ್ರಧಾನ ಕಾರ್ಯದರ್ಶಿ ಚಂಪತ ರಾಯ್

ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿನ ಶ್ರೀರಾಮ ಮಂದಿರದ ಭಗವಾನ್ ಶ್ರೀ ರಾಮಲಲ್ಲಾನ ದರ್ಶನದ ಹೆಸರಿನಲ್ಲಿ ವಂಚನೆ ಮಾಡಲಾಗುತ್ತಿತ್ತು. ಇಲ್ಲಿಗೆ ಬರುವ ಭಕ್ತರಿಗೆ ಸುಲಭ ದರ್ಶನ ಮಾಡಿಸುವುದಾಗಿ ಆಶ್ವಾಸನೆ ನೀಡಿ ಕೆಲವು ಜನರಿಂದ ಹಣ ವಸೂಲಿ ಮಾಡುತ್ತಿದ್ದರು. ಇದರಲ್ಲಿ ಉತ್ತರ ಪ್ರದೇಶದ ಒಬ್ಬ ಪೊಲೀಸ್ ಪೇದೆಯೂ ಭಾಗಿಯಾಗಿದ್ದನು. ಈಗ ಅವನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಯೋಧ್ಯೆಯಲ್ಲಿ ಯಾವುದೇ ದೇವಸ್ಥಾನದಲ್ಲಿ ದರ್ಶನಕ್ಕಾಗಿ ಯಾರಿಂದಲೂ ಹಣವನ್ನು ತೆಗೆದು ಕೊಳ್ಳಲಾಗುವುದಿಲ್ಲವೆಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಪ್ರಧಾನ ಕಾರ್ಯದರ್ಶಿ ಚಂಪತ ರಾಯ್ ಅವರು ತಿಳಿಸಿದ್ದಾರೆ. ದರ್ಶನಕ್ಕಾಗಿ ಜನರಿಂದ ಹಣ ಪಡೆಯುತ್ತಿದ್ದ ಪೊಲೀಸ್ ಪೇದೆ ಉಪೇಂದ್ರನಾಥನನ್ನು ಅಮಾನತು ಮಾಡಲಾಗಿದೆ. ಆತನ ವಿಚಾರಣೆಯನ್ನು ಇಲಾಖೆಯಿಂದ ನಡೆಸಲಾಗುವುದು. ಅವನು ಇಲ್ಲಿನ ರಾಮಭೂಮಿ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದನು.

ಚಂಪತ ರಾಯ್ ಅವರು ಮಾತು ಮುಂದುವರೆಸುತ್ತಾ, ಶ್ರೀ ರಾಮಲಲ್ಲಾನ ಸಂಪೂರ್ಣ ಉಚಿತವಾಗಿದ್ದೂ, ಶ್ರೀ ರಾಮಲಲ್ಲಾನ ದರ್ಶನವು ಅತ್ಯಂತ ಸಹಜವಾಗಿ ಆಗುತ್ತಿದ್ದು ಎಲ್ಲ ರಾಮಭಕ್ತರು ದರ್ಶನಕ್ಕಾಗಿ ಯಾವುದೇ ಆಮಿಷಗಳಿಗೆ ಬಲಿಯಾಗಬಾರದು. ಭಾರತದಲ್ಲಿ ಮತ್ತು ಭಾರತದಿಂದ ಹೊರಗೆ ವಾಸಿಸುವ ಭಕ್ತರಲ್ಲಿ, ಅವರು ಸಾಮಾನ್ಯ ಜನರಂತೆ ಶ್ರೀ ರಾಮಲಲ್ಲಾನ ದರ್ಶನ ಪಡೆಯಲು ಆಗಮಿಸಬೇಕು ಎಂದು ವಿನಂತಿ ಇದೆ. ದೇವಸ್ಥಾನದ ಆವರಣದ ಪ್ರವೇಶದ್ವಾರದಿಂದ ಹಿಡಿದು ದರ್ಶನ ಪಡೆದು ಹೊರಗೆ ಬರಲು ಕೇವಲ 1 ಗಂಟೆ ಮಾತ್ರ ಸಮಯ ತಗಲುತ್ತದೆ ಎಂದು ಹೇಳಿದರು.