ಚೀನಾಗೆ ಅಪ್ರತ್ಯಕ್ಷವಾಗಿ ತಪರಾಕಿ ಹಾಕಿದ ಅಮೇರಿಕಾ !
ವಾಷಿಂಗ್‌ಟನ್ (ಅಮೇರಿಕ) – ಅರುಣಾಚಲ ಪ್ರದೇಶ ಭಾರತದ ಕ್ಷೇತ್ರವಾಗಿದೆ ಎಂದು ಅಮೇರಿಕ ಹೇಳಿಕೆ ನೀಡಿದೆ. ಅಲ್ಲಿ ಯಾವುದೇ ಪ್ರಕಾರದ ನುಸುಳುವಿಕೆ( ಅತಿಕ್ರಮಣ) ತಪ್ಪಾಗಿದ್ದು ಪ್ರತ್ಯಕ್ಷವಾಗಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಸೈನ್ಯ,ನಾಗರೀಕ ನುಸುಳುವಿಕೆ ಅಥವಾ ಅತಿಕ್ರಮಣ ಮಾಡಿ ಯಾವುದೇ ಭೂಪ್ರದೇಶವನ್ನು ತನ್ನದೆಂದು ವಾದ ಮಾಡುವ ಏಕಪಕ್ಷೀಯ ಪ್ರಯತ್ನಗಳನ್ನು ನಾವು ವಿರೋಧಿಸುತ್ತೇವೆ ಎಂದು ಚೀನಾಗೆ ಅಮೇರಿಕ ಪರೋಕ್ಷವಾಗಿ ಕಠೋರವಾಗಿ ಹೇಳಿದೆ. ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿ ಸೆಲಾ ಸುರಂಗಮಾರ್ಗವನ್ನು ಉದ್ಘಾಟಿಸಿದ್ದರು. ಆಗ ಚೀನಾ, ಅರುಣಾಚಲ ಪ್ರದೇಶ ಚೀನಾದ ಭೂಭಾಗವಾಗಿದೆ ಎಂದು ಪುನಃ ಹೇಳಿಕೊಂಡಿತ್ತು, ಇದನ್ನು ಖಂಡಿಸಿ ಅಮೇರಿಕ ಈ ಹೇಳಿಕೆ ನೀಡಿದೆ.
ಸಂಪಾದಕೀಯ ನಿಲುವುಬುದ್ದಿವಂತರಿಗೆ ಮಾತಿನ ಪೆಟ್ಟು ಸಾಕಾಗುತ್ತದೆ; ಆದರೆ ಚೀನಾ ಅತಿ ಬುದ್ಧಿವಂತ ದೇಶವಾಗಿರುವುದರಿಂದ ಅದಕ್ಕೆ ಅದರದೇ ಆದ ಭಾಷೆಯಲ್ಲಿ ಅರ್ಥವಾಗುವಂತೆ ಉತ್ತರಿಸುವುದು ಅವಶ್ಯಕವಾಗಿದೆ! |