Pakistan Afghanistan Clash : ಭಯೋತ್ಪಾದನೆ ನಿಗ್ರಹ ಪ್ರಯತ್ನದಲ್ಲಿ ನಾಗರಿಕರಿಗೆ ಹಾನಿ ಆಗಬಾರದು ! – ಅಮೇರಿಕಾ

ಅಮೇರಿಕಾದಿಂದ ಪಾಕಿಸ್ತಾನ ಮತ್ತು ತಾಲಿಬಾನ್ ಗೆ ಕರೆ !

ವಾಷಿಂಗ್ಟನ್ (ಅಮೇರಿಕಾ) – ಪಾಕಿಸ್ತಾನವು ಅಪಘಾನಿಸ್ತಾನದಲ್ಲಿ ನಡೆಸಿರುವ ವೈಮಾನಿಕ ದಾಳಿಯ ಕುರಿತು ಅಮೆರಿಕದಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಮೇರಿಕಾದಿಂದ ತಾಲಿಬಾನಗೆ ‘ಅಪಘಾನಿಸ್ತಾನದ ಭೂಮಿಯಿಂದ ಭಯೋತ್ಪಾದಕ ದಾಳಿ ಮಾಡದಂತೆ ಕಾಳಜಿ ವಹಿಸುವುದು ಮತ್ತು ಪಾಕಿಸ್ತಾನವು ಸಹನೆಯಿಂದ ಇರಲು ಕರೆ ನೀಡಿದೆ. ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ನಾಗರಿಕರಿಗೆ ಹಾನಿ ಆಗಬಾರದೆಂದು ಅಮೇರಿಕಾ ಹೇಳಿದೆ.

ಅಮೇರಿಕಾದ ವಿದೇಶಾಂಗ ಇಲಾಖೆಯ ಮುಖ್ಯ ಉಪವಕ್ತಾರ ವೇದಾಂತ ಪಟೇಲ್ ಇವರು, ‘ಅಪಘಾನಿಸ್ತಾನ ಇದು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಹಾನಿ ಮಾಡಬಯಸುವ ಭಯೋತ್ಪಾದಕರ ಸುರಕ್ಷಿತ ಅಡಗುತಾಣ ಆಗಬಾರದು, ಇದಕ್ಕಾಗಿ ಅಮೇರಿಕಾ ಕಟಿಬದ್ಧವಾಗಿದೆ’, ಎಂದು ಹೇಳಿದರು.

ಅಪಘಾನಿಸ್ತಾನಕ್ಕೆ ಹೊಣೆಗಾರರನ್ನಾಗಿ ಮಾಡದಿರಿ !

ಅಪಘಾನಿಸ್ತಾನದ ವಕ್ತಾರರಾದ ಜಬಿಉಲ್ಲಾಹ ಮುಜಾಹಿದ್ ಇವರು ಮಾತನಾಡಿ, ಪಾಕಿಸ್ತಾನ ಸತತವಾಗಿ ದಾಳಿಯ ಕಾರ್ಯಾಚರಣೆ ನಡೆಸುತ್ತಿದೆ. ಅಪಘಾನಿಸ್ತಾನದ ಗಡಿಯ ಭಾಗದಲ್ಲಿ ಪಾಕಿಸ್ತಾನದ ಸೈನ್ಯ ಉದ್ದೇಶಪೂರ್ವಕವಾಗಿ ನಮ್ಮ ನಾಗರಿಕರ ಮೇಲೆ ದಾಳಿ ನಡೆಸುತ್ತಿದೆ ಎಂದು ಹೇಳಿದರು.

ಎರಡು ದೇಶಗಳಿಂದ ಪರಸ್ಪರರ ಆರೋಪ !

ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು, ಕಳೆದ ೨ ವರ್ಷಗಳಲ್ಲಿ ನಾವು ಭಯೋತ್ಪಾದಕ ಗುಂಪಿನ ಉಪಸ್ಥಿತಿಯ ಬಗ್ಗೆ ಅಪಘಾನ ಸರಕಾರಕ್ಕೆ ಮೇಲಿಂದ ಮೇಲೆ ಗಂಭೀರವಾಗಿ ಕಳವಳ ವ್ಯಕ್ತ ಪಡಿಸಿದೆವು; ಆದರೆ ಅದು ಸ್ವೀಕರಿಸಲಿಲ್ಲ ಮತ್ತು ಸೈನ್ಯದ ನೆಲೆಯ ಮೇಲೆ ದಾಳಿ ನಡೆಸಿತು, ಎಂದು ಹೇಳಿದರು.

ಪಾಕಿಸ್ತಾನ ಸೈನ್ಯವು, ಭಯೋತ್ಪಾದನೆಗೆ ಅಪಘಾನಿಸ್ತಾನದ ಸಂಪೂರ್ಣ ಬೆಂಬಲ ಮತ್ತು ಸಹಾಯವಿದೆ ಎಂದು ಹೇಳಿದೆ.

ತಾಲಿಬಾನದ ರಕ್ಷಣಾ ಸಚಿವಾಲಯವು, ವೈಮಾನಿಕ ದಾಳಿಗೆ ಪ್ರತ್ಯುತ್ತರ ನೀಡುವುದಕ್ಕಾಗಿ ಅವರ ಸುರಕ್ಷಾ ದಳವು ಗಡಿಯಲ್ಲಿನ ಪಾಕಿಸ್ತಾನಿ ಸೈನ್ಯವನ್ನು ಗುರಿ ಮಾಡಿದೆ. ನಾವು ಈ ದಾಳಿಯನ್ನು ಖಂಡಿಸುವುದಕ್ಕಾಗಿ ಪಾಕಿಸ್ತಾನದ ಅಧಿಕಾರಿಗಳನ್ನು ಕರೆಸಿಕೊಂಡೆವು. ಪಾಕಿಸ್ತಾನ ಸ್ವಂತ ತಪ್ಪು ಮರೆಮಾಚುವುದಕ್ಕಾಗಿ ಈ ರೀತಿ ನಡೆದುಕೊಳ್ಳುತ್ತದೆ ಎಂದು ಹೇಳಿದೆ.