ರಾಮರಾಜ್ಯದ (ಹಿಂದೂ ರಾಷ್ಟ್ರದ) ಪ್ರತಿಕೃತಿ ಆಗಿರುವ ಸನಾತನದ ಆಶ್ರಮ !

ಸನಾತನ ಸಂಸ್ಥೆಯ ಆಶ್ರಮ, ರಾಮನಾಥಿ, ಫೋಂಡಾ, ಗೋವಾ.

ಹಿಂದೂ ರಾಷ್ಟ್ರದ ಪ್ರೇರಣಾಸ್ರೋತ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ಮಾರ್ಗದರ್ಶನದಿಂದ ಸಾಕಾರಗೊಂಡಿರುವ ಸನಾತನದ ಆಶ್ರಮದಲ್ಲಿನ ಚೈತನ್ಯ, ಆನಂದ ಮತ್ತು ಶಾಂತಿಯ ಅನುಭೂತಿ ಅನೇಕ ಸಾಧಕರಿಗೆ ಬರುತ್ತದೆ. ಆಶ್ರಮದಲ್ಲಿನ ಸ್ವಯಂಶಿಸ್ತು, ನಿಯೋಜನಬದ್ಧತೆ, ಪ್ರೇಮಭಾವ ಮುಂತಾದವುಗಳಿಂದ ಆಶ್ರಮವು ಭಾವಿ ಹಿಂದೂ ರಾಷ್ಟ್ರದ (ರಾಮ ರಾಜ್ಯದ) ಪ್ರತಿಕೃತಿಯ ಅನುಭವವಾಗುತ್ತದೆ.

ಸಾಧಕರಿಗೆ ಸಾಧನೆಗಾಗಿ ಪೂರಕ ವಾತಾವರಣ ಸಿಗುವುದಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಗುರುಕುಲ ಸಮಾನ ಆಶ್ರಮವನ್ನು ನಿರ್ಮಿಸಿದ್ದಾರೆ. ಅವರ ಪ್ರೇರಣೆಯಿಂದ ರಾಮನಾಥಿ (ಗೋವಾ), ದೇವದ (ಮುಂಬಯಿ), ಮೀರಜ (ಸಾಂಗಲಿ) ಮುಂತಾದ ಸ್ಥಳಗಳಲ್ಲಿರುವ ಆಶ್ರಮಗಳಿಂದ ಸುಮಾರು ೮೦೦ ಸಾಧಕರು ಪೂರ್ಣವೇಳೆ ಸಾಧನೆ ಮಾಡುತ್ತಿದ್ದಾರೆ. ಈ ಆಶ್ರಮಗಳ ವೈಶಿಷ್ಟ್ಯವೆಂದರೆ ಆಶ್ರಮದಲ್ಲಿ ವಾಸಿಸುವ ಎಲ್ಲಾ ಸಾಧಕರು ವಿವಿಧ ಯೋಗಮಾರ್ಗಗಳಿಂದ ಸಾಧನೆ ಮಾಡುವವರು ಮತ್ತು ವಿವಿಧ ಜಾತಿಪಂಥದವರಾಗಿದ್ದರು ಕೂಡ ಆನಂದದಿಂದ ಮತ್ತು ಪ್ರೀತಿಯಿಂದ ಸಹಬಾಳ್ವೆ ನಡೆಸುತ್ತಿದ್ದಾರೆ. ಇಂದು ಭಾರತದಲ್ಲಿ ಹಿಂದೆದೂ ಇಲ್ಲದಷ್ಟು ಜಾತಿದ್ವೇಷ ನಿರ್ಮಾಣವಾಗಿದ್ದರೂ ಸನಾತನದ ಆಶ್ರಮದಲ್ಲಿ ಜಾತಿನಿರಪೇಕ್ಷತೆ ಎದ್ದು ಕಾಣುತ್ತದೆ. ಪ್ರತಿಯೊಬ್ಬರೂ ಇತರ ಸಾಧಕರನ್ನು ‘ಗುರುಬಂಧು ಅಥವಾ ‘ಗುರುಭಗಿನಿ ಎಂಬ ಭಾವದಿಂದ ನೋಡುತ್ತಾರೆ. ಆದ್ದರಿಂದ ಸನಾತನ ಆಶ್ರಮ ಇದು ನೂರಾರು ಸದಸ್ಯರ ಒಂದು ಕುಟುಂಬವಾಗಿದೆ. ಈಶ್ವರಪ್ರಾಪ್ತಿಯ ಧ್ಯೇಯದಿಂದ ಒಂದು ಸಂಘ ಸಮಾಜ ನಿರ್ಮಿಸಬಹುದು ಮತ್ತು ರಾಮರಾಜ್ಯದ ಅನುಭೂತಿ ಪಡೆಯಬಹುದು, ಇದರ ಪ್ರಾತ್ಯಕ್ಷಿಕೆಯನ್ನು ಪರಾತ್ಪರ ಗುರು ಡಾಕ್ಟರರು ಸನಾತನದ ಆಶ್ರಮಗಳ ಮೂಲಕ ತೋರಿಸಿದ್ದಾರೆ. ಸಾಧಕರಿಗೆ ಸಾಧನೆಗಾಗಿ ಪೂರ್ಣ ಸಮಯ ಅನುಕೂಲ ವಾತಾವರಣ ಉಪಲಬ್ಧವಾಗಬೇಕೆಂದು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ಗೋವಾದ ರಾಮನಾಥಿಯಲ್ಲಿ ಸನಾತನ ಆಶ್ರಮವನ್ನು ನಿರ್ಮಿಸಿದರು. ಇಲ್ಲಿ ಸಾಧಕರು ಆನಂದದಿಂದ ಆಶ್ರಮ ಜೀವನದ ಲಾಭ ಪಡೆಯುತ್ತಿದ್ದಾರೆ.

೧. ಸನಾತನದ ವಿವಿಧ ಆಶ್ರಮಗಳಲ್ಲಿ ನಡೆಯುತ್ತಿರುವ ರಾಷ್ಟ್ರ ಮತ್ತು ಧರ್ಮ ಸಂಬಂಧಿತ ಕಾರ್ಯ

ಸನಾತನ ಪ್ರಭಾತ ಪತ್ರಿಕೆಯ ಕಚೇರಿ

ಈ ಆಶ್ರಮದಲ್ಲಿ ‘ಸನಾತನ ಪ್ರಭಾತ ಪತ್ರಿಕಾ ಕಚೇರಿಯಿದೆ. ಇದರ ಸಂಪಾದಕರು, ಪತ್ರಕರ್ತರು, ಪುಟಗಳ ರಚನಾಕಾರರು, ಜಾಹೀರಾತು ತರುವವರು, ಮುದ್ರಣಾಲಯದಲ್ಲಿ ಪತ್ರಿಕೆ ಗಳನ್ನು ಕಟ್ಟುವ ಅಥವಾ ಜಾಹೀರಾತು ಮತ್ತು ಬಾಕಿ ವಸೂಲಿ ಮಾಡುವ ಸಾಧಕರು
ರಾಷ್ಟ್ರ ಮತ್ತು ಧರ್ಮ ಇದರ ವೈಚಾರಿಕ ರಕ್ಷಣೆಗೆ ವೇತನರಹಿತ
ಸಮರ್ಪಣಾ ಭಾವದಿಂದ ಸೇವಾನಿರತರಾಗಿದ್ದಾರೆ.

ಸನಾತನ ಕಲಾಮಂದಿರ

ಇಲ್ಲಿ ಧ್ವನಿಚಿತ್ರೀಕರಣಕ್ಕಾಗಿ ಅತ್ಯಾಧುನಿಕ ಉಪ ಕರಣಗಳಿಂದ ಸುಸಜ್ಜಿತ ೨ ‘ಸ್ಟುಡಿಯೋ ಹಾಗೂ ಧ್ವನಿಚಿತ್ರ ಸಂಕಲನ (ವಿಡಿಯೋ ಎಡಿಟಿಂಗ್) ಕ್ಕಾಗಿ ೧೦ ಕಕ್ಷೆಗಳು ಇವೆ. ‘ಸ್ಟುಡಿಯೋದಲ್ಲಿ ಧಾರ್ಮಿಕ ವಿಧಿ ಮತ್ತು ಆಧ್ಯಾತ್ಮಿಕ ಸಂಶೋಧನ ಕೇಂದ್ರದ ವತಿಯಿಂದ ಮಾಡುವ ಸಂಶೋಧನೆಯ ಚಿತ್ರೀಕರಣ ಮಾಡಲಾಗುತ್ತದೆ.

ಆಧ್ಯಾತ್ಮಿಕ ಸಂವಾದದ ಛಾಯಾಚಿತ್ರೀಕರಣ ಮಾಡುತ್ತಿರುವ ಸಾಧಕರು

ಗ್ರಂಥ ರಚನಾ ವಿಭಾಗ

ಇಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸಂಕಲಿತ ಗ್ರಂಥಗಳ ಮರಾಠಿ, ಹಿಂದಿ, ಆಂಗ್ಲ, ಕನ್ನಡ, ಗುಜರಾತಿ ಮತ್ತು ಬಂಗಾಲಿ ಭಾಷೆಗಳ ಆವೃತ್ತಿಗಳ ರಚನೆಯಾಗುತ್ತದೆ. ಇಲ್ಲಿ ಸಾಧಕ ಕಲಾಕಾರರು ಕಲೆಗೆ ಸಂಬಂಧಿತ ಸೇವೆ ಮಾಡುತ್ತಾರೆ. ಅದನ್ನು ಅವರು ಈಶ್ವರಪ್ರಾಪ್ತಿಗಾಗಿ ಕಲೆ ಎಂಬ ದೃಷ್ಟಿಕೋನವನ್ನಿಟ್ಟು ಗ್ರಂಥಗಳ ಮುಖಪುಟ, ದೇವತೆಗಳ ಸಾತ್ತ್ವಿಕ ಚಿತ್ರ ಮತ್ತು ಮೂರ್ತಿಗಳು ಸಾತ್ತ್ವಿಕ ರಂಗೋಲಿ ನಿರ್ಮಿತಿ ಮಾಡುತ್ತಿದ್ದಾರೆ.

ಜಾಲತಾಣ (ವೆಬ್‌ಸೈಟ್) ವಿಭಾಗ

ಮಾಹಿತಿ ಮತ್ತು ತಂತ್ರ ಜ್ಞಾನ (ಐಟಿ) ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆದ ಹಾಗೂ ವಿವಿಧ ಮಹತ್ವದ ಹುದ್ದೆಗಳಲ್ಲಿ ದೊಡ್ಡ ಮೊತ್ತದ ಸಂಬಳದ ನೌಕರಿಗಳನ್ನು ತ್ಯಜಿಸಿದ ಯುವ ಸಾಧಕರು ಸ್ವಯಂಸ್ಪೂರ್ತಿಯಿಂದ ಹಿಂದೂ ಧರ್ಮದ ಪ್ರಸಾರ ಮಾಡುವ ಸನಾತನದ ಜಾಲತಾಣವನ್ನು ನಡೆಸುತ್ತಿದ್ದಾರೆ. ಧರ್ಮದ ಬಗ್ಗೆ ಇರುವ ಶ್ರದ್ಧೆಯಿಂದ ಅವರು ಜಾಲತಾಣ ಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟದಷ್ಟು ಮಾಡಿದ್ದಾರೆ.

ಆಧ್ಯಾತ್ಮಿಕ ಸಂಗ್ರಹಾಲಯ

ಸೂಕ್ಷ್ಮ ಜಗತ್ತಿನ ಅನುಭವ ನೀಡುವ ಮತ್ತು ಆಧ್ಯಾತ್ಮಿಕ ಮೌಲ್ಯ ಇರುವ ವಸ್ತುಗಳನ್ನು ರಕ್ಷಿಸಿರುವ ಇದು ಜಗತ್ತಿನಲ್ಲಿನ ಏಕೈಕ ಸಂಗ್ರಹಾಲಯವಾಗಿದೆ. ಯೋಗ ವೇದಾಂತ ಸೇವಾ ಸಮಿತಿಯ ಕಾರ್ಯದರ್ಶಿ ಶ್ರೀ. ಮಾನವ ಬುದ್ಧದೇವ ಇವರಂತಹ ಗಣ್ಯರು ಸನಾತನದ ಆಶ್ರಮಕ್ಕೆ ಭೇಟಿ ನೀಡಿ ಈ ಸಂಗ್ರಹಾಲಯವನ್ನು ನೋಡಿ, ‘ಬುದ್ಧಿವಾದಿಗಳೇನಾದರೂ ಸೂಕ್ಷ್ಮ ಜಗತ್ತಿನ ಪ್ರದರ್ಶನ ನೋಡಿದರೆ ಅಧ್ಯಾತ್ಮದ ಬಗ್ಗೆ ಅವರಲ್ಲಿ ಜಿಜ್ಞಾಸೆ ಮೂಡಬಹುದು ಮತ್ತು ಯಾರು ಸಾಧಕ ರಾಗಿದ್ದಾರೆ ಅವರ ಶ್ರದ್ಧೆ ಮತ್ತು ಸಾಧನೆಯಲ್ಲಿನ ತತ್ಪರತೆ ಹೆಚ್ಚಾಗಬಹುದು ಎಂದರು.

ಸನಾತನ ಪುರೋಹಿತ ಪಾಠಶಾಲೆ

ಈ ಪಾಠಶಾಲೆ ಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿ-ಪುರೋಹಿತರು ಸತತ ಸಾಧನೆಯೆಂದು ಧರ್ಮರಕ್ಷಣೆಗಾಗಿ ಧಾರ್ಮಿಕ ವಿಧಿ ಮತ್ತು ಯಜ್ಞಯಾಗಾದಿಗಳನ್ನು ಮಾಡುತ್ತಾರೆ. ಆಶ್ರಮದಲ್ಲಿ ಯಜ್ಞಶಾಲೆ ಇದ್ದು ಅಲ್ಲಿ ಸತತ ಧರ್ಮರಕ್ಷಣೆಗಾಗಿ ಯಜ್ಞಯಾಗಾದಿಗಳನ್ನು ಮಾಡುತ್ತಾರೆ. ಇಲ್ಲಿ ವಿದ್ಯಾರ್ಥಿ-ಪುರೋಹಿತರಿಗೆ ಸಾಧನೆ ಎಂದು ಪೌರೋಹಿತ್ಯ ಮಾಡುವ ಬಗ್ಗೆ ಶಿಕ್ಷಣ ನೀಡಲಾಗುತ್ತದೆ.